'ವೀಕೆಂಡ್ ವಿತ್ ರಮೇಶ್ 4' ಮೊದಲ ಪ್ರೊಮೋದಲ್ಲೇ ಬೌಂಡರಿ ಬಾರಿಸಿದ ಜೀ

'ವೀಕೆಂಡ್ ವಿತ್ ರಮೇಶ್ 4' ಕಾರ್ಯಕ್ರಮ ಇದೇ ಶನಿವಾರದಿಂದ ಮತ್ತೆ ಪ್ರಾರಂಭ ಆಗುತ್ತಿದೆ. ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಈ ಸೀಸನ್ ನ ಮೊದಲ ಅತಿಥಿ ಆಗಿದ್ದಾರೆ.

ಶ್ರೀಗಳ ಮೂಲಕ ಈ ಸೀಸನ್ ಶುಭಾರಂಭ ಆಗುತ್ತಿದೆ. ನಿನ್ನೆ ಕಾರ್ಯಕ್ರಮದ ಮೊದಲ ಪ್ರೊಮೋ ಹೊರಬಂದಿದೆ. ಮೊದಲ ಪ್ರೊಮೋದಲ್ಲಿಯೇ ಜೀ ವಾಹಿನಿ ಬೌಂಡರಿ ಬಾರಿಸಿದೆ. ಪ್ರೊಮೋ ಅದ್ಬುತವಾಗಿ ಮೂಡಿ ಬಂದಿದ್ದು, ಕಾರ್ಯಕ್ರಮದ ಮೇಲೆ ಇದ್ದ ಕುತೂಹಲ ಮತ್ತಷ್ಟು ಜಾಸ್ತಿಯಾಗಿದೆ.

Weekend with ramesh season 4 first episode promo out

ವೀರೇಂದ್ರ ಹೆಗ್ಗಡೆ ರವರ ಜೀವನ, ಕುಟುಂಬ, ಸ್ನೇಹಿತರು, ಮೊಮ್ಮಕ್ಕಳು, ಶಟಲ್ ಆಡುವುದು, ಕಾರ್ ಓಡಿಸುವುದು ಹೀಗೆ ಎಲ್ಲವೂ, ಎಲ್ಲರೂ ಸೇರಿ ಕಾರ್ಯಕ್ರಮ ಫುಲ್ ಮನರಂಜನೆ ನೀಡುವ ಸೂಚನೆ ನೀಡಿದ್ದಾರೆ. ಎಂದಿನಂತೆ ಕೆಲವು ಭಾವನಾತ್ಮಕ ಘಟನೆಗಳು ಸಹ ಕಾರ್ಯಕ್ರಮದಲ್ಲಿ ನಡೆದಿವೆ.

ಇದೇ ಶನಿವಾರ ಹಾಗೂ ಭಾನುವಾರ ಎರಡು ಸಂಚಿಕೆಗಳು ರಾತ್ರಿ 9.30ಕ್ಕೆ ಪ್ರಸಾರ ಆಗಲಿದೆ. ಎರಡನೇ ವಾರ ರಾಘವೇಂದ್ರ ರಾಜ್ ಕುಮಾರ್ ಹಾಗೂ ಪ್ರೇಮ ಅತಿಥಿಗಳಾಗಿದ್ದಾರೆ.

More from Filmibeat

English summary
Weekend With Ramesh first episode of fourth session promo out. Dharmasthala dharmadhikari dr veerendra heggade is the first guest for ramesh show.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X