'ವೀಕೆಂಡ್ ವಿತ್ ರಮೇಶ್ ಸೀಸನ್ 4' ಪ್ರಸಾರದ ದಿನಾಂಕ ಬಹಿರಂಗ!

ಜೀ ಕನ್ನಡ ವಾಹಿನಿ ಮತ್ತೆ ತನ್ನ ಬ್ರಹ್ಮಾಸ್ತ್ರವನ್ನು ಬಿಟ್ಟಿದೆ. ಕಿರುತೆರೆಯ ಬೆಸ್ಟ್ ಶೋಗಳಲ್ಲಿ ಒಂದಾಗಿರುವ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮ ಮತ್ತೆ ಶುರು ಆಗುತ್ತದೆ

ಸಾಧಕರ ದಾರಿ, ಅವರ ಸ್ಫೂರ್ತಿಧಾಯಕ ಮಾತುಗಳು, ಒಂದಷ್ಟು ತಮಾಷೆ, ಭಾವನಾತ್ಮಕ ಫಟನೆಗಳು ಹೀಗೆ 'ವಿಕೇಂಡ್ ವಿತ್ ರಮೇಶ್' ಮತ್ತೆ ವೀಕ್ಷಕರನ್ನು ರಂಜಿಸಲು ಬಂದಿದೆ.

ಮೂರು ಯಶಸ್ವಿ ಸೀಸನ್ ಗಳ ಬಳಿಕ 'ವೀಕೆಂಡ್ ವಿತ್ ರಮೇಶ್ ಸೀಸನ್ 4' ಪ್ರಾರಂಭ ಆಗುತ್ತಿದೆ. ಈ ಕಾರ್ಯಕ್ರಮದ ಯಾವಗ ಶುರು ಎಂಬ ಕುತೂಹಲಕ್ಕೆ ವಾಹಿನಿ ಉತ್ತರ ನೀಡಿದೆ.

ಇದೇ ತಿಂಗಳು 'ವೀಕೆಂಡ್ ವಿತ್ ರಮೇಶ್ ಸೀಸನ್ 4' ಪ್ರಾರಂಭ ಆಗುತ್ತಿದೆ. ಮುಂದೆ ಓದಿ...

ಏಪ್ರಿಲ್ 20 ರಿಂದ ಪ್ರಾರಂಭ

ಏಪ್ರಿಲ್ 20 ರಿಂದ ಪ್ರಾರಂಭ

'ವೀಕೆಂಡ್ ವಿತ್ ರಮೇಶ್ ಸೀಸನ್ 4' ಕಾರ್ಯಕ್ರಮ ದಿನಾಂಕ ಇದೀಗ ಬಹಿರಂಗವಾಗಿದೆ. ಕಾರ್ಯಕ್ರಮ ಏಪ್ರಿಲ್ 20 ರಿಂದ ಅದ್ದೂರಿಯಾಗಿ ಶುರು ಆಗುತ್ತಿದೆ. ಈ ವಿಷಯವನ್ನು ಜೀ ಕನ್ನಡ ವಾಹಿನಿ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿದೆ. ಇನ್ನು ಕೇವಲ 10 ದಿನಗಳಲ್ಲಿ ಕಾರ್ಯಕ್ರಮ ಶುಭಾರಂಭ ಆಗಲಿದೆ.

ರಾತ್ರಿ 9.30 ಗಂಟೆಗೆ

ರಾತ್ರಿ 9.30 ಗಂಟೆಗೆ

ಈವರೆಗೆ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮ ರಾತ್ರಿ 9 ಗಂಟೆಗೆ ಪ್ರಸಾರ ಆಗುತ್ತಿತ್ತು. ಆದರೆ, ಈ ಬಾರಿ ಕಾರ್ಯಕ್ರಮದ ಸಮಯ ಬದಲಾವಣೆಯಾಗಿದೆ. ಕಾರ್ಯಕ್ರಮ 9.30ಕ್ಕೆ ಶುರುವಾಗಿ 10:30ರ ವರಗೆ ಒಂದು ಗಂಟೆಗಳ ಕಾಲ ಪ್ರಸಾರ ಆಗಲಿದೆ. ಜೀ ಕನ್ನಡ ವಾಹಿನಿಯ ವಾರಾಂತ್ಯದ ಕಾರ್ಯಕ್ರಮಗಳು ಹೆಚ್ಚು ಇದ್ದು, ಸಮಯದ ಬದಲಾವಣೆ ಆಗಿರಬಹುದು.

ಹೊಸ ಪ್ರೊಮೊ ನೋಡಿ

'ವೀಕೆಂಡ್ ವಿತ್ ರಮೇಶ್ ಸೀಸನ್ 4' ಕಾರ್ಯಕ್ರಮದ ಸಣ್ಣ ಸಣ್ಣ ಪ್ರೋಮೋಗಳು ಈಗಾಗಲೇ ಹೊರಬಂದಿವೆ. ಆದರೆ, ಈಗ ಮತ್ತೊಂದು ಹೊಸ ಪ್ರೋಮೋ ಮೂಲಕ ಕಾರ್ಯಕ್ರಮದ ಪ್ರಸಾರದ ದಿನಾಂಕವನ್ನು ಬಹಿರಂಗ ಪಡಿಸಲಾಗಿದೆ. ಹೊಸದಾಗಿ ಬಂದ ಈ ಪ್ರೋಮೋ ಗಮನ ಸೆಳೆಯುತ್ತಿದೆ. ಶನಿವಾರ ಮತ್ತು ಭಾನುವಾರ ಕಾರ್ಯಕ್ರಮ ಪ್ರಸಾರ ಆಗಲಿದೆ.

ಮೊದಲ ಅತಿಥಿ ಯಾರು?

ಮೊದಲ ಅತಿಥಿ ಯಾರು?

ಕಾರ್ಯಕ್ರಮ ಪ್ರಸಾರದ ದಿನಾಂಕ ಹೊರಬಂದಿದೆ, ಹಾಗಾದರೆ ಮೊದಲ ಅತಿಥಿ ಯಾರು ಎನ್ನುವ ನಿರೀಕ್ಷೆ ಇದೆ. ಮೂಲಗಳ ಪ್ರಕಾರ, ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ವೀರೇಂದ್ರ ಹೆಗ್ಡೆಯವರು ಕಾರ್ಯಕ್ರಮದ ಮೊದಲ ಅತಿಥಿಗಳು ಆಗುತ್ತಾರೆ ಎಂದು ಹೇಳಲಾಗುತ್ತಿದೆ. ಆದರೆ, ಮೊದಲ ಅತಿಥಿಯ ಹೆಸರನ್ನು ಇನ್ನು ವಾಹಿನಿ ರಿವೀಲ್ ಮಾಡಿಲ್ಲ.

ಶುಭಾಶಯ ತಿಳಿಸಿದ ಪುನೀತ್

ಶುಭಾಶಯ ತಿಳಿಸಿದ ಪುನೀತ್

'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದ ಬಗ್ಗೆ ಮಾತನಾಡಿರುವ ಪುನೀತ್ ''ನಾನು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ 90 ರಷ್ಟು ಕಾರ್ಯಕ್ರಮವನ್ನು ನೋಡಿದ್ದೇನೆ. ನನಗೆ ಈ ಕಾರ್ಯಕ್ರಮಕ್ಕೆ ಕರೆದಾಗ ತುಂಬ ಖುಷಿ ಆಯ್ತು. ಎಲ್ಲ ಕಲಾವಿದರನ್ನು ರಮೇಶ್ ಸರ್ ಮಾತನಾಡಿಸುವ ರೀತಿ ತುಂಬ ಇಷ್ಟ ಆಗುತ್ತದೆ.'' ಎಂದಿದ್ದಾರೆ.

More from Filmibeat

English summary
Zee Kannada channel popular shows 'Weekend With Ramesh season 4' will be telecasting from april 20th.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X