ವಿಡಿಯೋ : ಮತ್ತೆ ಸ್ಫೂರ್ತಿ ನೀಡಲು ಬರ್ತಿದೆ 'ವೀಕೆಂಡ್ ವಿತ್ ರಮೇಶ್ 4'
ಇತ್ತೀಚಿನ ದಿನಗಳಲ್ಲಿ ಕಿರುತೆರೆಯಲ್ಲಿ ದೊಡ್ಡ ಜನಪ್ರಿಯತೆ ಪಡೆದುಕೊಂಡಿರುವ ಕಾರ್ಯಕ್ರಮಗಳಲ್ಲಿ ಪ್ರಮುಖ ಸ್ಥಾನದಲ್ಲಿ ಇರುವುದು 'ವೀಕೆಂಡ್ ವಿತ್ ರಮೇಶ್'. ವೀಕ್ಷಕರಿಗೆ ಮನರಂಜನೆಯ ಜೊತೆಗೆ ಸ್ಫೂರ್ತಿಯನ್ನು ನೀಡುವ ಈ ಕಾರ್ಯಕ್ರಮ ಮತ್ತೆ ಬರುತ್ತಿದೆ.
'ವೀಕೆಂಡ್ ವಿತ್ ರಮೇಶ್ ಸೀಸನ್ 4' ಸದ್ಯದಲ್ಲಿಯೇ ಶುರು ಆಗುತ್ತಿದೆ. ಈ ವಿಶೇಷವಾಗಿ ಜೀ ಕನ್ನಡ ವಾಹಿನಿ ಫೇಸ್ ಬುಕ್ ಖಾತೆಯಲ್ಲಿ ಪ್ರೋಮೋ ಹಾಕಿ ಅಧಿಕೃತವಾಗಿ ಕಾರ್ಯಕ್ರಮದ ಬರುವಿಕೆಯ ಬಗ್ಗೆ ಮಾಹಿತಿ ನೀಡಿದೆ.
'ವೀಕೆಂಡ್ ವಿತ್ ರಮೇಶ್' ಮೂರು ಯಶಸ್ವಿ ಸೀಸನ್ ಅನ್ನು ಪೂರ್ಣ ಮಾಡಿ ಈಗ ಮತ್ತೊಂದು ಹೆಜ್ಜೆ ಇಟ್ಟಿದೆ. ಸಾಧರನ್ನು ಕರೆಸಿ ಅವರ ಪಯಣದ ಮೂಲಕ ವೀಕ್ಷಕರಿಗೆ ಸ್ಫೂರ್ತಿ ನೀಡುವ ಅದ್ಭುತ ಕಾರ್ಯಕ್ರಮ ಇದಾಗಿದೆ.

ಸಿನಿಮಾ, ರಾಜಕೀಯ ಮಾತ್ರವಲ್ಲದೆ ಬೇರೆ ಬೇರೆ ಕ್ಷೇತ್ರದ ಸಾಧಕರನ್ನು ಈ ಬಾರಿ ವೇದಿಕೆಗೆ ಕರೆಸಿ ಎನ್ನುವುದು ಹಲವು ವೀಕ್ಷಕರ ಕೋರಿಕೆಯಾಗಿದೆ.
ಸದ್ಯದಲ್ಲಿಯೇ ಕಾರ್ಯಕ್ರಮದ ಪ್ರಸಾರದ ದಿನಾಂಕ ಹಾಗೂ ಸಮಯವನ್ನು ಜೀ ವಾಹಿನಿಯ ಘೋಷಣೆ ಮಾಡಲಿದೆ.
More from Filmibeat
English summary
Zee Kannada channel popular shows 'Weekend With Ramesh season 4' will be telecasting soon.


Click it and Unblock the Notifications











