Weekend with Ramesh season 5: ಈ ವಾರ ಸಾಧಕರ ಸೀಟ್‌ನಲ್ಲಿ ಕೂರುವ ಇಬ್ಬರು ಸಾಧಕರು ಯಾರು?

ವೀಕೆಂಡ್ ವಿತ್ ರಮೇಶ್ ಸೀಸನ್-5 ಯಶಸ್ವಿಯಾಗಿ ಪ್ರಸಾರವಾಗುತ್ತಿದೆ. ಪ್ರತಿವಾರ ವಿವಿಧ ಕ್ಷೇತ್ರಗಳ ಸಾಧಕರನ್ನು ಆಹ್ವಾನಿಸಿ ಅವರ ಸಾಧನೆಯ ಜೀವನವನ್ನು ವೀಕೆಂಡ್ ಟೆಂಟ್‌ನಲ್ಲಿ ನಟ ರಮೇಶ್ ಅರವಿಂದ್ ರಿವೈಂಡ್ ಮಾಡಿ ತೋರಿಸುತ್ತಿದ್ದಾರೆ. ಕಳೆದ ವಾರ ನಟ ಪ್ರೇಮ್ ಲೈಫ್ ಸ್ಟೋರಿ ರಿವೀಲ್ ಮಾಡಲಾಗಿತ್ತು. ಈ ವಾರದ ಅತಿಥಿ ಯಾರು ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿದೆ.

ಪ್ರೋಮೊ ಸಮೇತ ಈ ವಾರದ ಇಬ್ಬರು ಅತಿಥಿಗಳನ್ನು ಜೀ ಕನ್ನಡ ವಾಹಿನಿ ಪರಿಚಯಿಸಿದೆ. ಸದ್ಯ ಪ್ರೋಮೊ ವೈರಲ್ ಆಗಿದ್ದು ಸಖತ್ ಸದ್ದು ಮಾಡ್ತಿದೆ. ಶನಿವಾರ ಖ್ಯಾತ ನೃತ್ಯ ಸಂಯೋಜಕ ಚಿನ್ನಿಪ್ರಕಾಶ್ ಮಾಸ್ಟರ್ ಸಾಧಕ ಸೀಟ್‌ನಲ್ಲಿ ಕೂರಲಿದ್ದಾರೆ. ಭಾನುವಾರ ನಡೆದಾಡುವ ಗ್ರಂಥಾಲಯ ಎಂದೇ ಖ್ಯಾತರಾಗಿದರುವ ಡಾ. ನಾ. ಸೋಮೇಶ್ವರ್ ಅವರ ಜೀವನ ಚರಿತ್ರೆ ಅನಾವರಣವಾಗಲಿದೆ. ಬಹಳ ದಿನಗಳಿಂದ ವೀಕ್ಷಕರು ನಾ. ಸೋಮೇಶ್ವರ್ ಅವರನ್ನು ಸಾಧಕರ ಸೀಟ್‌ನಲ್ಲಿ ನೋಡಲು ಬಯಸಿದ್ದರು.

Weekend with ramesh season 5: Chinni Prakash Master and N. Someswara this week guests

ಒಟ್ನಲ್ಲಿ ಈ ವಾರ ವೀಕೆಂಡ್‌ನಲ್ಲಿ ಸಾಧಕರ ಸೀಟ್‌ನಲ್ಲಿ ಕೂರುತ್ತಿರುವ ಇಬ್ಬರು ಸಾಧಕರ ಬಗ್ಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸ್ತಿದ್ದಾರೆ. ನಾ. ಸೋಮೇಶ್ವರ್ ಅವರ ಬಗ್ಗೆ ಎರಡು ಎಪಿಸೋಡ್ ತೋರಿಸಿದ್ದರೆ ಚೆನ್ನಾಗಿತ್ತು ಎಂದು ಕೂಡ ಹೇಳುತ್ತಿದ್ದಾರೆ. ಇನ್ನು ಜೀ ಕನ್ನಡದ 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ಶೋ ತೀರ್ಪುಗಾರರು ಆಗಿರುವ ಚಿನ್ನಿ ಪ್ರಕಾಶ್ ಮಾಸ್ಟರ್ ಬಗ್ಗೆ ಬಿಗ್‌ಬಿ ಅಮಿತಾಬ್ ಬಚ್ಚನ್ ಕೂಡ ಮಾತನಾಡಿದ್ದಾರೆ. ಆ ವಿಡಿಯೋ ಬೈಟ್‌ ಅನ್ನು ಪ್ರದರ್ಶಿಸಲಾಗಿದೆ.

ಚಿನ್ನಿಪ್ರಕಾಶ್ ಮಾಸ್ಟರ್ ಹಿನ್ನೆಲೆ

ಚಿಕ್ಕಂದಿನಿಂದಲೂ ಚಿತ್ರರಂಗಕ್ಕೆ ಹೋಗುವ ಕನಸು ಕಂಡಿದ್ದ ಚಿನ್ನಿ ಪ್ರಕಾಶ್ ಮುಂಬೈಗೆ ತೆರಳಿ ಸಿನಿಮಾಗಳಲ್ಲಿ ಕೆಲಸ ಮಾಡಲು ಆರಂಭಿಸಿದರು. ಸಾಕಷ್ಟು ಕೊರಿಯೋಗ್ರಫರ್‌ಗಳಿಗೆ ಸಹಾಯಕರಾಗಿ ಕರಿಯರ್ ಆರಂಭಿಸಿದ ಚಿನ್ನಿ ಪ್ರಕಾಶ್ ಮುಂದೆ 1962ರಲ್ಲಿ 'ರಾಕಿ' ಸಿನಿಮಾ ಮೂಲಕ ಸ್ವತಂತ್ರ ಕೊರಿಯೋಗ್ರಫರ್ ಆದರು. ಅಲ್ಲಿಂದ ಮುಂದೆ ಸಾಲು ಸಾಲು ಸಿನಿಮಾಗಳಲ್ಲಿ ಡ್ಯಾನ್ಸ್ ಮಾಸ್ಟರ್ ಆಗಿ ಕೆಲಸ ಮಾಡಿದರು. ಬಾಲಿವುಡ್, ಟಾಲಿವುಡ್, ಕಾಲಿವುಡ್, ಮಾಲಿವುಡ್ ಸೂಪರ್ ಸ್ಟಾರ್‌ಗಳನ್ನು ಕುಣಿಸಿದರು.

ಚಿನ್ನಿ ಪ್ರಕಾಶ್ ಅವರ ಪತ್ನಿ ರೇಖಾ ಚಿನ್ನಿ ಪ್ರಕಾಶ್ ಕೂಡ ಕೊರಿಯೋಗ್ರಫರ್ ಆಗಿ ಗುರ್ತಿಸಿಕೊಂಡಿದ್ದಾರೆ. ವೀಕೆಂಡ್‌ ವಿತ್ ರಮೇಶ್‌ ಶೋಗೆ ಬಂದಿದ್ದ ರೇಖಾ ಅವರು 'ಸಾಜನ್' ಚಿತ್ರದ ಸೂಪರ್ ಹಿಟ್ ಸಾಂಗ್‌ಗೆ ಡ್ಯಾನ್ಸ್ ಮಾಡಿ ರಂಗೇರಿಸಿದರು. ಚಿನ್ನಿ ಪ್ರಕಾಶ್ ಮಾಸ್ಟರ್ ಕನ್ನಡದಲ್ಲಿ ಹೆಚ್ಚು ಕ್ರೇಜಿಸ್ಟಾರ್ ರವಿಚಂದ್ರನ್‌ ಅವರ ಸಿನಿಮಾಗಳಿಗೆ ಕೆಲಸ ಮಾಡಿದ್ದಾರೆ. ಕೆಲ ಸಿನಿಮಾಗಳಲ್ಲಿ ಬಣ್ಣ ಹಚ್ಚಿರುವ ಮಾಸ್ಟರ್ ಒಂದು ಚಿತ್ರಕ್ಕೆ ಆಕ್ಷನ್ ಕಟ್ ಕೂಡ ಹೇಳಿದ್ದಾರೆ.

Weekend with ramesh season 5: Chinni Prakash Master and N. Someswara this week guests

ಡಾ. ನಾ. ಸೋಮೇಶ್ವರ್ ಜೀವನಗಾಥೆ

'ಥಟ್ ಅಂತ ಹೇಳಿ' ಕಿರುತೆರೆ ಕಾರ್ಯಕ್ರಮದಿಂದ ಮನೆ ಮಾತಾದವರು ಡಾ. ನಾ. ಸೋಮೇಶ್ವರ್. ಈವರೆಗೆ 4000ಕ್ಕೂ ಅಧಿಕ ಎಪಿಸೋಡ್‌ಗಳನ್ನು ಅವರು ನಡೆಸಿಕೊಟ್ಟಿದ್ದಾರೆ. ತಮ್ಮ ಸ್ವಚ್ಛ ಕನ್ನಡದ ಭಾಷೆಯಿಂದ ಕನ್ನಡಿಗರ ಮನಗೆದ್ದಿದ್ದಾರೆ. ಮೂಲತಃ ವೈದ್ಯರಾಗಿರುವ ಸೋಮೇಶ್ವರ್ ಪುಸ್ತಕಗಳನ್ನು ಕೂಡ ಬರೆದಿದ್ದಾರೆ. ವೀಕೆಂಡ್‌ ಶೋನಲ್ಲಿ 'ಥಟ್ ಅಂತ ಹೇಳಿ' ಕಾರ್ಯಕ್ರಮದ ಝಲಕ್ ಅನ್ನು ಮಾಡಿ ತೋರಿಸಲಾಯಿತು. ಕನ್ನಡ ಭಾಷೆಯನ್ನು ಬಳಸಿ ಉಳಿಸಬೇಕು ಎಂದು ಕಿವಿ ಮಾತು ಹೇಳಿದ್ದಾರೆ.

More from Filmibeat

English summary
Weekend with ramesh season 5: Chinni Prakash Master and N. Someswara this week guests. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X