Weekend With Ramesh: ಮೊದಲ ಸಿನಿಮಾದಲ್ಲಿಯೇ ಹೀರೊಯಿನ್‌ ಕಾಲು ಮುರಿದುಕೊಂಡಿದ್ಲು.. ಆಮೇಲೆ ಏನಾಯ್ತು?

By ಎಸ್ ಸುಮಂತ್

ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಈ ವಾರದ ಅತಿಥಿಯಾಗಿ ಬಂದಿರುವ ಚಿನ್ನಿ ಪ್ರಕಾಶ್, ಸಿ‌ನಿಮಾ ರಂಗಕ್ಕೆ‌ ಹೊಸಬರೇನು ಅಲ್ಲ. ಬದಲಿಗೆ ಅವರ ತಂದೆ ಕೂಡ ಕೊರಿಯೋಗ್ರಾಫರ್ ಆಗಿದ್ದವರು. ಆದರೆ, ಆ ಹೆಸರು ವರ್ಕ್ ಆಗಲೇ ಇಲ್ಲ. ಚಿನ್ನಿ ಪ್ರಕಾಶ್ ಸ್ವಂತವಾಗಿ ಏನು ಮಾಡುತ್ತಾರೆ ಎಂಬ ಪರೀಕ್ಷೆಯೇ ಎದುರಾಗಿತ್ತು.

ಚಿನ್ನಿ ಪ್ರಕಾಶ್ ಅವರ ತಂದೆ‌ ಕೂಡ ತಾವೇ ಟ್ರೈನಿಂಗ್ ಕೊಡದೆ ತಮ್ಮನ ಬಳಿ ಕಳುಹಿಸಿದ್ದರು. ಅಲ್ಲಿಂದ ಶುರುವಾದ ಬದುಕೇ ಬೇರೆಯಾಗಿತ್ತು. ಚಿನ್ನಿ ಪ್ರಕಾಶ್ ಅಪ್ಪ ಅಮ್ಮನಿಗೆ, ಮಗನನ್ನು ಹೀರೊ‌ ಮಾಡುವ ಕನಸು ಬಂದಿತ್ತು. ತಂದೆಯ ಅನಾರೋಗ್ಯ, ಅವಕಾಶಕ್ಕಾಗಿ ಅಲೆದಾಟ ಎಲ್ಲದನ್ನೂ ಹಂಚಿಕೊಂಡಿದ್ದಾರೆ.

weekend with Ramesh season-5 Chinni Prakash

ಹೀರೊ ಆಗಲು ಹೋಗಿ ಲಾಸ್ ಆದ ಫ್ಯಾಮಿಲಿ

"ನಮ್ಮ ಅಪ್ಪ ಹೇಳಿದ್ರು ನಾನು ಟೀಚ್ ಮಾಡಿದ್ರೆ ಸರಿ ಆಗಲ್ಲ, ನನ್ನ ತಮ್ಮನ ಬಳಿ ಹೋಗು ಅಂತ ಕಳುಹಿಸಿದ್ರು. ಬೆಲ್ ಬಾಟಂ ಪ್ಯಾಂಟ್ ಹಾಕೊಂಡು ಹೋಗಿದ್ದೆ. ಕಾಲು ಕಾಣಿಸ್ತಾ ಇಲ್ಲ ಅಂತ ಪ್ಯಾಂಟ್ ಕಟ್ ಮಾಡಿಯೇ ಬಿಟ್ರು. ಅಪ್ಪನಿಗೆ ಅಸಿಸ್ಟೆಂಟ್ ಕೊರಿಯೋಗ್ರಾಫರ್ ಆಗಿ ಎಂಟು ವರ್ಷ ಮಾಡಿದ್ದೀನಿ. ನಮ್ಮ ಫಾದರ್ ಹೇಳಿದ್ರು ಹೊಸ ಹುಡುಗನಿಗೆ ಹುಡುಕ್ತಾ ಇದ್ದಾರೆ ಒಮ್ಮೆ ಟ್ರೈ ಮಾಡು ಅಂತ. ಆಗ ಹೇರ್ ಎಲ್ಲಾ ಬಿಟ್ಕೊಂಡು ಚೆನ್ನಾಗಿದ್ದೆ. ಆದರೆ, ನಂಗೆ ಕನ್ನಡ ಬರಲ್ಲ ಅಂತ ಫಲಿತಾಂಶ ಸಿನಿಮಾ ಸಿಗಲಿಲ್ಲ. ಆದ್ರೆ, ನಮ್ಮ ಅಮ್ಮನಿಗೆ ನಾನು ಹೀರೊ ಆಗ್ಬೇಕು ಎಂಬ ಆಸೆ. ಹೀಗಾಗಿ, ತಂದೆ ಬಂಡವಾಳ ಹಾಕಿ ರಹಸ್ಯ ರಾತ್ರಿ ಮಾಡಿದ್ರು. ಆ ಸಿನಿಮಾ ಪ್ಲಾಫ್ ಆಯ್ತು. ಹಣ ಕಳೆದುಕೊಂಡು ಮತ್ತೆ ಡ್ಯಾನ್ಸ್ ಮಾಡುವುದಕ್ಕೆ ಶುರು ಮಾಡಿದೆ. ಆಗ ಮತ್ತೊಂದು ಸಿನಿಮಾ ಅವಕಾಶ ಬಂತು. ಅದರಲ್ಲಿ ನಾನು ಎಲ್ಲಾ‌ ಮಾಡಿದೆ".

ಕೊರಿಯೋಗ್ರಾಫ್ ಮಾಡಿದ ಮೊದಲ ಸಿನಿಮಾದಲ್ಲೇ ಯಡವಟ್ಟು

"ನನ್ನ ಲೈಫ್‌ನಲ್ಲಿ ಒಂದು ಸಿನಿಮಾಗೆ ಕೊರಿಯೋಗ್ರಾಫ್ ಮಾಡುವ ಅವಕಾಶ ಸಿಕ್ತು. ಫಸ್ಟ್ ಶಾಟ್. ನಟಿ ಮೇಲಿಂದ ಕೆಳಗೆ ಬೀಳಬೇಕು. ಬಿದ್ದ ನಟಿ ಮೇಲೆ ಏಳಲೇ ಇಲ್ಲ. ನಟಿ ಕಾಲು ಮುರಿದು ಕೊಂಡು ಬಿದ್ದಿದ್ದರು. ಆಮೇಲೆ ನಂಗೆ ಕೆಲಸಾನೇ ಸಿಗಲಿಲ್ಲ. ಶೂಟ್ ಮಾಡುವುದಕ್ಕೆ ಬಂದಿದ್ದಾನಾ..? ಫೈಟ್ ಮಾಡುವುದಕ್ಕೆ ಬಂದಿದ್ದಾನಾ ಅಂತಿದ್ರು. ನಂಗೆ ಏನಾದ್ರೂ ಸ್ಪೆಷಲ್ ಆಗಿ‌ ಮಾಡಬೇಕು ಎಂಬ ಆಸೆ. ದಿನ ಬೆಳಗ್ಗೆ ಹೋಗೋದು, ಸರ್ ಅವಕಾಶ ಕೊಡಿ ಅವಕಾಶ ಕೊಡಿ ಅಂತ ಬೇಡುತ್ತಾ ಇದ್ದದ್ದು. ಆದ್ರೂ ಒಂದು ಅವಕಾಶ ಸಿಗೋದಕ್ಕೆ ಆರು ತಿಂಗಳು ಬೇಕಾಯ್ತು" ಎಂದು ರಿವೀಲ್ ಮಾಡಿದ್ದಾರೆ.

weekend with Ramesh season-5 Chinni Prakash

ಪ್ರೇಮಲೋಕದ ಕೊರಿಯೋಗ್ರಾಫರ್ ಇವರೇ

"ಪ್ರೇಮಲೋಕ ಟರ್ನಿಂಗ್ ಪಾಯಿಂಟ್. ಹತ್ತು ಸಾಂಗ್ ಗೆ ಟೈಟಲ್ ಕಾರ್ಡ್ ಬರೋದು ಅಂದ್ರೆ ಸುಮ್ನೆ ಅಲ್ಲ. ಹಂಸಲೇಖ ಅವರ ಮ್ಯೂಸಿಕ್, ಒಂದೊಂದು ಹಾಡು ಕೂಡ ಅದ್ಭುತ. ನಿಂಗೆ 100 ಬಾಯ್ಸ್, 100 ಗರ್ಲ್ಸ್ ಕೊಡ್ತೀನಿ ಅಂದ್ರು. ಡ್ಯಾನ್ಸ್‌ಗೆ 10 ಮೆಂಬರ್ಸ್ ಕೊಡಲ್ಲ. ಆದ್ರೆ ಇಷ್ಟೊಂದು ಅಂದಾಗ ನಾನು ಬಾತ್ ರೂಮಿಗೆ ಹೋಗಿ ಅಳ್ತಾ ಇದ್ದೆ. ರಣಧೀರ, ಶಾಂತಿ ಕ್ರಾಂತಿ ಎಲ್ಲಾ ಅದ್ಭುತ. ಇನ್ನು ವಿಷ್ಣುವರ್ಧನ್ ಅವರು ರಾಕಿ ಅಂತಾನೆ ಕರೆಯೋರು" ಅವರ ಸಿನಿಮಾಗಳ ಬಗ್ಗೆಯೂ ನೆನೆದಿದ್ದಾರೆ.

ಚಿನ್ನಿ ಪ್ರಕಾಶ್ ಬಗ್ಗೆ ಖುಷ್ಬೂ ಹೇಳಿದ್ದೇನು..

ಈ ಶೋನಲ್ಲಿ ನಟಿ ಖುಷ್ಬೂ ಮಾತನಾಡಿದ್ದು, "ಕನ್ನಡಿಗರು ನನ್ನ ಗುರುತಿಸಿದ್ದಕ್ಕೆ ನೀವೂ ಕಾರಣ. ಈ ಹುಡುಗಿ ಚೆನ್ನಾಗಿ ಡ್ಯಾನ್ಸ್ ಮಾಡುತ್ತಾ ಇದೆ ನೋಡಿ ಅಂದ್ರಿ. ಪ್ರೇಮಲೋಕವನ್ನು ನೀವೂ ಸೃಷ್ಟಿ ಮಾಡಿದ್ದೀರಿ" ಎಂದರು. ಆಗ ಚಿನ್ನಿ ಪ್ರಕಾಶ್ "ಪ್ಯೂರ್ ಹಾರ್ಟೆಡ್ ಗರ್ಲ್ ಸರ್. ಅಲ್ಲಿಗೆ ಜಂಪ್ ಮಾಡಬೇಕು ಅಂತ ಖುಷ್ಬೂಗೆ ಹೇಳಿದಾಗ ನೋ ಪ್ರಾಬ್ಲಮ್ ನಾನು ಮಾಡ್ತೇನೆ ಅಂತ ಧುಮುಕಿ ಬಿಟ್ಲು. ಆದರೆ, ಕ್ಯಾಮೆರಾ ಆನ್ ಆಗಿಲ್ಲ ಅಂತ ಆಗ ಹೇಳ್ತಾನೆ. ಖುಷ್ಬೂ ಬಳಿ ಮತ್ತೊಮ್ಮೆ ಬೇಕು ಅಂದಾಗ ತುಂಬಾ ಕಣ್ಣೀರು ಹಾಕಿದ್ಲು. ಯಾಕಂದ್ರೆ ಧುಮುಕುವುದಕ್ಕೂ ಮುನ್ನಅದರ ರಿಸ್ಕ್ ಏನು ಅಂತ ಗೊತ್ತಿರಲಿಲ್ಲ. " ಎಂದಿದ್ದಾರೆ.

More from Filmibeat

English summary
weekend with Ramesh season-5 Chinni Prakash remembered his first shot as choreographer, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X