ಮನೆಯವರಿಂದಾನೇ ಲವ್ ಮಾಡೋಕೆ ಸಿಕ್ತು ಪರ್ಮಿಷನ್: ಅತಿ ಶೀಘ್ರದಲ್ಲಿಯೇ ಎಂದ ಡಾಲಿ!

By ಎಸ್ ಸುಮಂತ್

ವೀಕೆಂಡ್ ವಿತ್ ರಮೇಶ್ ಸೀಸನ್ 5 ಈ ವಾರದ ಕಾರ್ಯಕ್ರಮದಲ್ಲಿ ಎಲ್ಲರಿಗೂ ಸ್ಪೂರ್ತಿ ನೀಡುವಂತಹ ವ್ಯಕ್ತಿತ್ವದ ಡಾಲಿ ಧನಂಜಯ್ ಅತಿಥಿಯಾಗಿ ಬಂದಿದ್ದಾರೆ. ಡಾಲಿ ಅಂದ್ರೇನೆ ಮಾಡೆಲ್. ಹೀಗಾಗಿ ಈ ಬಾರಿಯ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಡಾಲಿ ನೋಡುವುದಕ್ಕೆ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ. ಡಾಲಿ ಧನಂಜಯಗೆ ಜೈಕಾರ ಹಾಕಿದ್ದಾರೆ.

'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದ ಶೈಲಿ ಎಲ್ಲರಿಗೂ ಗೊತ್ತಿದೆ. ಒಬ್ಬ ವ್ಯಕ್ತಿಯನ್ನು ಆ ಸೀಟಿನಲ್ಲಿ ಕೂರಿಸಿದರೆ, ಆ ವ್ಯಕ್ತಿಯ ಎಲ್ಲಾ ವಿಚಾರಗಳು ವೇದಿಕೆ ಮೇಲೆ ಅನಾವರಣವಾಗುತ್ತೆ. ಓದಿದ ಶಾಲೆ, ಜೊತೆಗೆ ಇದ್ದ ಸ್ನೇಹಿತರು, ಅವರಿಗೇ ಏನಿಷ್ಟ, ಏನಿಷ್ಟವಿಲ್ಲ ಹೀಗೆ ಎಲ್ಲಾ ಆಸಕ್ತಿದಾಯಕ ಅಂಶಗಳನ್ನು ತೋರಿಸಲಾಗುತ್ತೆ. ಜೊತೆಗೆ ಅದಕ್ಕೆ ವ್ಯಕ್ತಿಗಳನ್ನು ಕರೆಸಲಾಗುತ್ತದೆ. ಈ ಬಾರಿ ಡಾಲಿಗೆ ಸಂಬಂಧ ಪಟ್ಟಿದ್ದು ಅದೇ ಆಗಿದೆ.

Weekend with Ramesh season-5 Daali Dhananjay Got Permission from Parents

ಡಾಲಿಯ ಅಜ್ಜಿ ಕಂಡು ಕಣ್ಣೀರು

ಡಾಲಿಗೆ ಫ್ಯಾಮಿಲಿ ಅಂದ್ರೆ ತುಂಬಾ ಇಷ್ಟ. ಫ್ಯಾಮಿಲಿಗೆ ತುಂಬಾ ಗೌರವ ಕೊಡುತ್ತಾರೆ. ಇಡೀ ಕುಟುಂಬಸ್ಥರು ಕೂಡ ಡಾಲಿಯ ಗೆಲುವಿಗಾಗಿ ನಿಂತಿದ್ದಾರೆ. ಆದರೆ ಧನಂಜಯ ಫ್ಯಾಮಿಲಿಯಲ್ಲಿ ಗೌರಜ್ಜಿ ಅಂದ್ರೆ ಸಿಕ್ಕಾಪಟ್ಟೆ ಇಷ್ಟ. ಯಾಕಂದ್ರೆ, ಚಿಕ್ಕ ವಯಸ್ಸಿನಿಂದಾನೂ ಡಾಲಿಗೆ ಮುದ್ದು ಮಾಡಿ, ಕದ್ದು ಕದ್ದಾದರೂ ಹಣ ನೀಡುತ್ತಿದ್ದರಂತೆ. ಅಜ್ಜಿಯ ಫೋಟೊ ನೋಡಿದ ಕೂಡಲೇ ಧನಂಜಯ್ ಕಣ್ಣೀರು ಒದ್ದೆಯಾಗಿತ್ತು. ಎಷ್ಟೇ ಕಂಟ್ರೋಲ್ ಮಾಡಿಕೊಂಡರು ಕಡಿಮೆಯಾಗುತ್ತಾ ಇರಲಿಲ್ಲ. ಸಾಕಷ್ಟು ಸುಧಾರಿಸಿಕೊಂಡು ಮಾತನಾಡಿದ್ದಾರೆ. ಗೌರಜ್ಜಿ ಅಂದ್ರೆ, ಧನಂಜಯ್ ಅವರ ಅಮ್ಮನ ಸಾಕು ಅಮ್ಮ.

ಮಲ್ಲಮ್ಮನಿಂದ ಬಂತು ಮದುವೆಯ ಹಾಡು

ಇನ್ನು ಡಾಲಿಗೆ ಮತ್ತೊಬ್ಬರು ಅಜ್ಜಿ ಇದ್ದಾರೆ ಅವರೇ ಮಲ್ಲಮ್ಮ. ಮಲ್ಲಮ್ಮ ಸದ್ಯ ಅವರ ಇನ್ನೊಬ್ಬರು ಅಕ್ಕನ ಜೊತೆಗೆ ಇದ್ದಾರೆ. ಅಕ್ಕನನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ. ಈಗ ಮಲ್ಲಮ್ಮ ಅವರಿಂದ ಬೈಟ್ ತರಿಸಲಾಗಿತ್ತು. ಆ ಬೈಟ್‌ನಲ್ಲಿ ಸೋಬಾನೆ ಸಾಲುಗಳನ್ನು ಹಾಡಿ ಎಲ್ಲರ ಗಮನ ಸೆಳೆದಿದ್ದಾರೆ.

ಅನಲಕ್ಷ್ಮೀಯನ್ನು ಕಂಡು ಕಣ್ಣೀರಾದ ಡಾಲಿ

ಡಾಲಿ ಧನಂಜಯ್‌ಗೆ ಈ ಶೋ ಆರಂಭದಿಂದಾನೆ ಕಣ್ಣೀರಿಗೆ ಕಾರಣವಾಗಿತ್ತು. ಗೌರಜ್ಜಿ ಫೋಟೋ ನೋಡಿದ ಕೂಡಲೇ ಡಾಲಿ ಕಣ್ಣೀರು ಹಾಕಿದರು. ಅಕ್ಕನನ್ನು ಕಂಡು ಭಾವುಕರಾಗಿದ್ದರು. ಬಳಿಕ ಧನಂಜಯ್ ತುಂಬಾ ಇಷ್ಟಪಡುವ ಟೀಚರ್. ಅರಸೀಕೆರೆಯಲ್ಲಿ ಆಗ ಮಹಿಳೆ ಗಟ್ಟಿಯಾಗಿ ನಿಂತು ಶಾರದಾ ಎಂಬ ಶಾಲೆಯನ್ನು ಆರಂಭಿಸಿದ್ದರು. ಆ ಶಾಲೆಯಲ್ಲಿ ಓದಿದ್ದೇ ಧನಂಜಯ್. ಡಾಲಿ ಬಗ್ಗೆ ಅನಲಕ್ಷ್ಮೀ ಟೀಚರ್ ಮಾತನಾಡಿದ್ರು. ಆದರೆ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಬರುವ ಮುನ್ನವೇ ತೀರಿಕೊಂಡರು. ಇದು ಡಾಲಿ ಧನಂಜಯ್‌ಗೆ ತುಂಬಾ ದುಃಖ ತರಿಸಿತ್ತು.

Weekend with Ramesh season-5 Daali Dhananjay Got Permission from Parents

ಎಲ್ಲರಿಂದಾನೂ ಮದುವೆಯದ್ದೇ ಡಿಮ್ಯಾಂಡ್

ಡಾಲಿ ಧನಂಜಯ ಮದುವೆ ಇದೀಗ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲೂ ಮತ್ತೆ ಸದ್ದು ಮಾಡಿದೆ. ಅವರ ಕುಟುಂಬಸ್ಥರ ಆಸೆಯೂ ಅದೇ ಆಗಿದೆ. ಇಷ್ಟು ದಿನ ಅಭಿಮಾನಿಗಳು ಹಾಗೂ ಮಾಧ್ಯಮದವರು ಕೇಳ್ತಾ ಇದ್ರು. ಈಗ ಮನೆಯವರ ಡಿಮ್ಯಾಂಡ್ ಕೂಡ ಅದೆ ಅಗಿದೆ. ಮಲ್ಲಮ್ಮಜ್ಜಿ ಈಗ ಸೋಬಾನೆ ಹಾಡಿನಲ್ಲಿಯೇ ಡಿಮ್ಯಾಂಡ್ ಇಟ್ಟಿದ್ದಾರೆ. ಅಷ್ಟೇ ಅಲ್ಲ ದೊಡ್ಡಪ್ಪ ಕೂಡ ಬೇಗ ಮದುವೆ ಮಾಡಿಕೊಳ್ಳಪ್ಪ ಎಂದಿದ್ದಾರೆ. ಮಲ್ಲಮ್ಮಜ್ಜಿ ಅಂತು ಪ್ರೀತಿ ಮಾಡುವುದಕ್ಕೆ ಅನುಮತಿ ನೀಡಿದ್ದಾರೆ. "ನಾವೂ ನೋಡೊದ ಹುಡಿಗಿಯನ್ನ ಅವನ್ನೆಲ್ಲಿ ಒಪ್ಪುತ್ತಾನೆ. ಅವನೇ ಯಾರನ್ನಾದರೂ ಒಪ್ಪಿದ್ದರೆ ಹೇಳಲಿ" ಎಂದಿದ್ದಾರೆ.

More from Filmibeat

English summary
zee kannada Reality show weekend with Ramesh season-5 Written Update on April 15th episode. Here is the details about Dolly Dhananjay marriage story.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X