ಮೊದಲ ಬಾರಿಗೆ ಕಾಣಿಸಿಕೊಂಡ ಡಾಲಿ ಅಕ್ಕ : ನನಗೆ ಇಷ್ಟವಿರಲಿಲ್ಲ ಎಂದ ಧನಂಜಯ..!
ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಡಾಲಿ ಧನಂಜಯ್ ಅವರ ಇಡೀ ಫ್ಯಾಮಿಲಿಯನ್ನು ನೋಡುವಂತೆ ಆಯಿತು. ಅಷ್ಟೇ ಅಲ್ಲ ಅರಸಿಕೆರೆಯ ಸ್ಕೂಲು, ಕಾಲೇಜು, ತನ್ನ ಫ್ರೆಂಡ್ಸ್ ಬಗ್ಗೆ ಎಲ್ಲಾ ಹೇಳಿಕೊಂಡಿದ್ದಾರೆ. ಅದರಲ್ಲೂ ಡಾಲಿ ಧನಂಜಯ ಅವರ ಬಾಯಲ್ಲಿ ಹೆಚ್ಚು ತನ್ನ ಊರಿನ ಹೆಸರೇ ಬರುತ್ತಿತ್ತು. ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಮನೆಯವರು, ಊರಿನ ಶಾಲೆಯ ಮಂದಿ ಸೇರಿದಂತೆ ಸ್ನೇಹಿತರು ಬಂದು ಧನಂಜಯಗೆ ಸಪ್ರೈಸ್ ನೀಡಿದ್ದಾರೆ.
ಆದರೆ ಎಲ್ಲದಕ್ಕಿಂತ ಹೆಚ್ಚಾಗಿ ಡಾಲಿಗೆ ಸಪ್ರೈಸ್ ಎನಿಸಿದ್ದು, ತನ್ನ ಅಕ್ಕ ಬಂದಿದ್ದು. ಡಾಲಿಯವರ ತಂದೆ ತಾಯಿಗೆ ನಾಲ್ಕು ಜನ ಮಕ್ಕಳು. ಇದು ಎಲ್ಲರಿಗೂ ಗೊತ್ತಿದ್ದ ಸತ್ಯ. ಆದ್ರೆ, ಒಬ್ಬ ಅಕ್ಕ ವಿಶೇಷ ಚೇತನ ಎಂಬುದು ಗೊತ್ತಿತ್ತು. ಡಾಲಿ ಧನಂಜಯ್ ಕೂಡ ತನ್ನ ಅಪ್ಪ, ಅಮ್ಮ, ಅಕ್ಕ, ಅಣ್ಙನ ಫೋಟೋ ಹಾಕುತ್ತಿದ್ದರು. ಯಾವತ್ತೂ ಆ ವಿಶೇಷ ಅಕ್ಕನ ತೋರಿಸಿರಲಿಲ್ಲ. ಯಾಕೆ ಎಂಬುದನ್ನು ಹೇಳಿದ್ದಾರೆ.

ಡಾಲಿಯನ್ನು ಬೇಡವೆಂದುಕೊಂಡಿದ್ದ ಅಪ್ಪ ಅಮ್ಮ
ಧನಂಜಯ್ ಅವರ ಅಪ್ಪ ಅಮ್ಮನಿಗೆ ನಾಲ್ಕು ಜನ ಮಕ್ಕಳು. ಆದರೆ ಡಾಲಿಯನ್ನು ಭ್ರೂಣವಿದ್ದಾಗಲೇ ತೆಗೆಸಬೇಕೆಂದು ನಿರ್ಧರಿಸಿದ್ದರು. ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಅವರ ತಂದೆ ಹೇಳಿಕೊಂಡಿದ್ದು ಹೀಗೆ "ಮೂರು ಜನ ಆದ್ಮೇಲೆ ಮಕ್ಕಳು ಸಾಕು ಅಂತ ಇದ್ವಿ. ನಾಲ್ಕನೇ ಮಗು ಬೇಡ ಅಂತ ಅಬಾಷನ್ ಮಾಡಿಸುವುದಕ್ಕೆ ನಾನೇ ಬಲವಂತವಾಗಿ ಕಳುಹಿಸಿದ್ದೆ. ನಾಲ್ಕು ತಿಂಗಳು ಆಗೋಗಿದೆ. ಬೇಡ ಅಂದಿದ್ರು. ಬೇಡ ಅಂದ್ರು ಹುಟ್ಟಿ ಬಂದಿದ್ದಾನೆ. ಮಣಿಕರ್ಣಿಕಾ ಅಂತ ಡಾಕ್ಟರ್ ಉಳಿಸಿದ್ರು" ಎಂದಿದ್ದಾರೆ.
ಅಕ್ಕನನ್ನು ಮಗು ಎನ್ನುವ ಡಾಲಿ
ಡಾಲಿ ದ್ನಂಜಯ್ ಅವರ ಇನ್ನೊಬ್ಬ ಅಕ್ಕನಿಗೆ ಕಣ್ಣು ಕಾಣಲ್ಲ. ಮನೆಯವರೆಲ್ಲಾ ಅಲ್ಲ ಇಡೀ ಊರಿನ ಜನ ಅವರನ್ನು ಮಗುವಿನಂತೆ ನೋಡಿಕೊಳ್ಳುತ್ತಾರೆ. ಈ ಕಾರ್ಯಕ್ರಮದಲ್ಲಿ ಅವರನ್ನು ಕರೆತಂದಿದ್ದನ್ನು ಕಂಡು ಒಂದು ಕಡೆ ಖುಷಿಯಾಗಿದ್ದಾರೆ. ಮತ್ತೊಂದು ಕಡೆ ದುಃಖಿತರಾಗಿದ್ದಾರೆ. ಆದರೆ ಮಾತನಾಡುವಾಗ "ಇವಳನ್ನ ಎಲ್ಲಿಯೂ ತೋರಿಸಲು ಇಷ್ಟವಿರಲಿಲ್ಲ. ಇವಳು ನಂಗೆ ಅಕ್ಕ ಅಲ್ಲ ನಮ್ಮ ಮನೆ ಮಗು. ನನ್ನ ಮಗಳು" ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.
ಡಾಲಿ ಅಕ್ಕನಿಗೆ 'ಹೊಯ್ಸಳ' ಅಂದ್ರೆ ಇಷ್ಟ
ರಾಣಿ ಅವರಿಗೆ ಕಣ್ಣು ಕಾಣಿಸಲ್ಲ.ಆದರೆ ಮಾತು ಮಗುವಿನಂತೆ ಆಡುತ್ತಾರೆ. ಮಲ್ಲಮ್ಮಜ್ಜಿ ಏನು ಹೇಳುತ್ತಾರೆ ಅದನ್ನೇ ಹೇಳುತ್ತಾರೆ. ಈಗ ಡಾಲಿ ಸಿನಿಮಾದ ವಿಚಾರಕ್ಕೆ ಬಂದರೆ ರಾಣಿಗೆ ಹೊಯ್ಸಳ ಇಷ್ಟವಂತೆ. ಅದನ್ನು ಮಲ್ಲಮ್ಮಜ್ಜಿ ಹೇಳಿಕೊಟ್ಟಿದ್ದಾರೆ. ಯಾವುದೇ ಭಯವಿಲ್ಲದೆ ವೇದಿಕೆ ಮೇಲೆ ಪುಟ್ಟ ಮಗುವಿನಂತೆ ಮಾತನಾಡಿದ್ದಾರೆ. ಮೈಕ್ ಕೊಟ್ಟಾಗಲು ಇದು ಮೈಕ್ ಎಂದೇ ಹೇಳಿದ್ದಾರೆ.

ಡಾಲಿ ಅಕ್ಕನಿಗೆ ಬಳೆ ಎಂದರೆ ಇಷ್ಟ
ಅಕ್ಕನ ಬಗ್ಗೆ ಮುಂದುವರೆದು ಮಾತನಾಡಿದ ಡಾಲಿ "ಚಿಕ್ಕ ಹುಡುಗ ಇದ್ದಾಗ ಅಕ್ಕನಿಗೆ ಕಣ್ಣು ಕೊಡು ಅಂತ ಕೇಳ್ತಾ ಇದ್ದೆ. ಆದರೆ ಈಗ ದೇವರನ್ನ ಕೇಳಿಕೊಳ್ಳಲ್ಲ. ಪ್ರಾಬ್ಲಮ್ ಗೊತ್ತು. ಅಜ್ಜಿ ತಾತ ಕೇಳ್ತಾ ಇದ್ರು ನಾವೂ ಹೋದ ಮೇಲೆ ಹೇಗೆ ನೋಡಿಕೊಳ್ಳುತ್ತಾ ಇದ್ರಿ ಅನ್ನೋರು. ಅವಳಿಗೆ ಬಳೆ ಅಂದ್ರೆ ಇಷ್ಟ. ಒಡೆದು ಹಾಕಿಕೊಳ್ಳುತ್ತಾನೆ ಇರುತ್ತಾಳೆ. ಆದರೂ ಅವಳಿಗೆ ಹಾಕಿಕೊಳ್ಳುತ್ತಿದ್ದಳು. ನಾವೂ ಕೂಡ ಬಳೆಯನ್ನ ಯಾವಾಗಲೂ ತೊಡಿಸುತ್ತೀವಿ. ಹಾಗೆ ಕಾಯಿನ್ ಇಷ್ಟ. ಸೌಂಡ್ ಮಾಡುತ್ತಾ ಕೂರುತ್ತಾಳೆ. ಕಾಯಿನ್ ಕೇಳಿದರೆ ಯಾರಿಗೂ ಕೊಡಲ್ಲ" ಅಂದ್ರು. ಆದ್ರೆ ಅದೇನೋ ರಮೇಶ್ ಅರವಿಂದ್ ಅವರಿಗೆ ಕೊಟ್ಟೆ ಬಿಟ್ಟರು.


Click it and Unblock the Notifications











