ಡಾಲಿಗೆ ಸಾಲು ಸಾಲು ಪ್ರಶ್ನೆ: ಮದ್ವೆ ಯಾವಾಗ ಎಂದ್ರು‌ ಹ್ಯಾಟ್ರಿಕ್ ಹೀರೋ

By ಶೃತಿ ಹರೀಶ್ ಗೌಡ

ಡಾಲಿ ಧನಂಜಯ ಹೀರೋ ಆಗಿ, ವಿಲನ್ ಆಗಿ ದೊಡ್ಡ ದೊಡ್ಡ ಸ್ಟಾರ್ ನಟರೊಂದಿಗೆ ಸ್ಕ್ರೀನ್ ಶೇರ್ ಮಾಡಿದ್ದಾರೆ.‌ ಎಷ್ಟು ದೊಡ್ಡ ವ್ಯಕ್ತಿತ್ವ ಹೊಂದಿದ್ದರೂ ಸಹ ಡೌನ್ ಟು ಆರ್ಥ್ ಆಗಿರಬೇಕು ಎಂದು ಯೋಚನೆ ಮಾಡುತ್ತಿದ್ದಾರೆ. ನಟ ಶಿವಕುಮಾರ್ ಜೊತೆಗೆ‌ 'ಟಗರು'‌, 'ಬೈರಾಗಿ' ಹಾಗೂ ಪುನೀತ್ ರಾಜ್‌ಕುಮಾರ್ ಜೊತೆ 'ಯುವರತ್ನ' ಚಿತ್ರಗಳಲ್ಲಿ ನಟಿಸಿದ್ದಾರೆ.

ಅಪ್ಪು ಸರ್ ಇದ್ದಿದ್ದರೆ ಇನ್ನೊಮ್ಮೆ ಸ್ಕ್ರೀನ್ ಶೇರ್ ಮಾಡುವ ಅವಕಾಶ ಸಿಗುತ್ತಿತ್ತು ಎಂದು ಡಾಲಿ‌ ಧನಂಜಯ ತಿಳಿಸಿದ್ದಾರೆ. ಧನು ಅವರು ತಮ್ಮ ಬದುಕಿನ ಕಷ್ಟದ ಕಾಲದಲ್ಲಿ ಯಾರು ಯಾರು ಕೈಹಿಡಿದು ನಡೆಸಿದ್ರು ಎಲ್ಲರನ್ನು ವೀಕ್ ಎಂಡ್ ವಿಥ್ ರಮೇಶ್‌ನಲ್ಲಿ ನೆನಪಿಕೊಂಡಿದ್ದಾರೆ. ಅದರಲ್ಲೂ ದೊಡ್ಡಮನೆಯ ಹೀರೋ ಶಿವರಾಜ್ ಕುಮಾರ್ ಹಾಗೂ ಗೀತಾ ಶಿವರಾಜ್ ಕುಮಾರ್ ಬಗ್ಗೆ ಮನಸ್ಸು ಬಿಚ್ಚಿ ಮಾತನಾಡಿದ್ದಾರೆ.

Weekend with Ramesh season 5 ; Dhananjay replies to Shivarajkumar question about Marriage in Weekend Show

ನಮ್ಮ ಡಾಲಿ ಪಿಕ್ಚರ್ಸ್ ಪ್ರೊಡಕ್ಷನ್ ಮೇಲೆ ಯಾವಾಗಲೂ ಗೀತಾ ಶಿವಕುಮಾರ್ ಅವರ ಆಶೀರ್ವಾದ ಇರುತ್ತದೆ ಎಂದಿದ್ದಾರೆ. ಇನ್ನೂ ಶಿವಣ್ಣ, ಡಾಲಿಗೆ ಮದುವೆ ಯಾವಾಗ ಎಂದು ಕೇಳಿ ಕಾಲೆಳೆದಿದ್ದಾರೆ. ಇದಕ್ಕೆ ಧನಂಜಯ್ ನಾನು ಶಿವಣ್ಣನ ಮಾತನ್ನು ತೆಗೆದು ಹಾಕಲ್ಲ. ಹುಡುಗಿ ಸಿಕ್ಕಿದ ಕೂಡಲೇ ಮದುವೆಯಾಗುವುದಾಗಿ‌ ತಿಳಿಸಿದ್ದಾರೆ. ಇದರಿಂದಾಗಿ ಮನೆಯವರು ಹಾಗೂ ಅವರ ಅಭಿಮಾನಿಗಳು ಖುಷಿಯಾಗಿದ್ದಾರೆ.

ಅಪ್ಪು ಜೊತೆ ಒಡ‌ನಾಟ

ಸಂತೋಷ್ ಆನಂದ್‌ರಾಮ್ ನಿರ್ದೇಶನದ 'ಯುವರತ್ನ' ಚಿತ್ರದಲ್ಲಿ ಧನು ನೆಗೆಟಿವ್ ರೋಲ್‌ನಲ್ಲಿ ಅಬ್ಬರಿಸಿದ್ದರು. ಆ ಸಿನಿಮಾದಲ್ಲಿ ನಟ ಪುನೀತ್ ರಾಜ್ ಕುಮಾರ್ ಅವರ ಜೊತೆ ಸ್ಕ್ರೀನ್‌ ಶೇರ್ ಮಾಡದೇ ಇದ್ದಿದ್ದರೆ ತುಂಬಾ ದೊಡ್ಡ ಲಾಸ್ ಆಗುತ್ತಿತ್ತು. ಅಪ್ಪು ಅವರೊಟ್ಟಿಗೆ ಉತ್ತಮವಾದ ಒಡನಾಟ ಹಾಗೂ ನೆನಪು ನನ್ನಿಂದ ಶಾಶ್ವತವಾಗಿ ದೂರವಾಗುತ್ತಿತ್ತು ಎಂದು ಡಾಲಿ ಧನಂಜಯ್ ತಿಳಿಸಿದ್ದಾರೆ.

Weekend with Ramesh season 5 ; Dhananjay replies to Shivarajkumar question about Marriage in Weekend Show

ನಿರ್ಮಾಪಕರಾಗಿದ್ದು ಹೇಗೆ ಧನಂಜಯ್?

ಡಾಲಿ ಧನಂಜಯ್ ನಾನು ಯಾಕೆ ಡಾಲಿ ಪಿಕ್ಚರ್ಸ್‌ ಬ್ಯಾನರ್‌ನಡಿ ನಿರ್ಮಾಪಕನಾದೇ ಎಂಬ ಬಗ್ಗೆ ತಿಳಿಸಿದ್ದಾರೆ. ‌ಶಂಕರ್ ಎಂಬ ಅವರ ಗೆಳೆಯ ಒಂದು ಕಥೆ ಸಿದ್ದಪಡಿಸಿಕೊಂಡಿದ್ದರು. ಆ ಕಥೆಯನ್ನು ಡಾಲಿಗೆ ಓದಲು ಕೊಟ್ಟಿದ್ದರು. ಸ್ಕ್ರಿಪ್ಟ್ ಓದುತ್ತಾ ಇದ್ದ ಡಾಲಿ ಧನಂಜಯ್ ಅವರಿಗೆ ಈ ಪಿಕ್ಚರ್ ಮಾಡಬೇಕು ಎಂದು ಅಂದುಕೊಂಡು ಡಾಲಿ ಪಿಕ್ಚರ್ ಪ್ರೊಡಕ್ಷನ್ ಶುರುವಾಯಿತು ಎಂದು ವಿವರಿಸಿದ್ದಾರೆ. ತಮ್ಮ ಬ್ಯಾನರ್‌ನಲ್ಲಿ ಸಾಕಷ್ಟು ಹೊಸ ಕಲಾವಿದರಿಗೆ, ತಂತ್ರಜ್ಞರಿಗೆ ಅವಕಾಶ ಕೊಡುವ ಆಸೆ ಇಟ್ಟುಕೊಂಡಿದ್ದಾರೆ.

'ಬಡವ ರಾಸ್ಕಲ್' ರಿಲೀಸ್ ವೇಳೆ ಭಯ

ಹೀರೊ ಆಗಿ ಸಕ್ಸಸ್ ಕಂಡ ಡಾಲಿ ಮುಂದೆ ನಿರ್ಮಾಪಕರಾದರು. 'ಬಡವ ರಾಸ್ಕಲ್' ಪಿಕ್ಚರ್ ಮಾಡಿದಾಗ ನನ್ನ ಅಕೌಂಟ್‌ನಲ್ಲಿ 27,000 ರೂ. ಹಣ ಮಾತ್ರ ಇತ್ತು. 'ಬಡವ ರಾಸ್ಕಲ್' ಸಿನಿಮಾ ಕೈಕೊಟ್ಟಿದ್ದರೆ ಮುಂದೆ ಯಾವುದೇ ಸಿನಿಮಾ ನಿರ್ಮಾಣ ಮಾಡಲು ಸಾಧ್ಯವಾಗುತ್ತಿರಲಿಲ್ಲ ಎಂದು ಡಾಲಿ ಅವರೇ ಹೇಳಿದ್ದಾರೆ. 'ಬಡವ ರಾಸ್ಕಲ್' ಕೈ ಹಿಡಿದು ಡಾಲಿಯನ್ನು ನಡೆಸಿದೆ. ಸಿನಿಮಾ ರಿಲೀಸ್ ಆದಾಗ ಏನಾಗುತ್ತೋ ಎನ್ನುವ ಭಯದಲ್ಲಿ ಡಾಲಿ ಇದ್ದರಂತೆ. ಅದನ್ನು ವೀಕೆಂಡ್ ಶೋನಲ್ಲಿ ಬಿಚ್ಚಿಟ್ಟಿದ್ದಾರೆ.

Weekend with Ramesh season 5 ; Dhananjay replies to Shivarajkumar question about Marriage in Weekend Show

ಸೆಕ್ಯೂರಿಟಿ ಗಾರ್ಡ್‌ಗೆ ಹೊಡೆದ ಗಿಲ್ಟ್

ಹಾಸ್ಟೆಲ್‌ನಲ್ಲಿ ಡಾಲಿ ಧನಂಜಯ್‌ ಉಳಿದುಕೊಂಡಿದ್ದಾಗ ಅಲ್ಲಿದ್ದ ಸೆಕ್ಯೂರಿಟಿ ಗಾರ್ಡ್‌ ಹತ್ತಿರ ಜಗಳ ಮಾಡಿದ್ದರಂತೆ. ಈ ವೇಳೆ ಗೇಟ್‌ಗೆ ತಲೆಯನ್ನು ಹೊಡೆಸಿ ಬಿಟ್ಟಿದ್ದರಂತೆ. ಅಂದು ಅವರು ಹಾಸ್ಟೆಲ್ ಒಳಗೆ ಹೋಗಲು ಬಿಡಲಿಲ್ಲ ಎಂಬ ಕಾರಣಕ್ಕೆ ಈ ರೀತಿ ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ. ನನಗೆ ಸೀನಿಯರ್ ಸಿಟಿಜನ್ ಮೇಲೆ ಕೈ ಮಾಡಿದ ಪಾಪ ಪ್ರಜ್ಞೆ ಮಾತ್ರ ಎದ್ದು ಕಾಣುತ್ತಿದೆ. ಅವರು ಎಲ್ಲೇ ಇದ್ದರೂ ಸಹ ನಾನು ಇಲ್ಲಿಂದಲೇ ಕ್ಷಮೆ ಯಾಚಿಸುತ್ತೇನೆ ಎಂದು ಧನಂಜಯ್ ತಿಳಿಸಿದ್ದಾರೆ.

ಕುಟುಂಬ ಸದಸ್ಯರಲ್ಲಿ ಕ್ಷಮೆ

ಕುಟುಂಬದವರಿಗೆ ಸಮಯ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಡಾಲಿ ಬೇಸರ ಮಾಡಿಕೊಂಡಿದ್ದಾರೆ. ನಾನು ನನ್ನ ಕುಟುಂಬ ಸದಸ್ಯರಲ್ಲಿ ಇವಾಗ ಕ್ಷಮೆ ಯಾಚಿಸುತ್ತೇನೆ ಎಂದು ಧನಂಜಯ್ ತಿಳಿಸಿದ್ದಾರೆ. ನನ್ನೆಲ್ಲ ತಪ್ಪುಗಳನ್ನು ಅಭಿಮಾನಿ ದೇವರುಗಳು , ಅಭಿಮಾನಿ ದೊರೆಗಳು ಕ್ಷಮಿಸಿ ಮತ್ತಷ್ಟು ನಮ್ಮನ್ನು ಪ್ರೀತಿಸಿ ಎಂದು ತಿಳಿಸಿದ್ದಾರೆ. ಶಿವಣ್ಣ ಮದುವೆಯಾಗು ಎಂದಿದ್ದಕ್ಕೆ ಹೆಣ್ಣು ಸಿಕ್ಕಿದ ಕೂಡಲೇ ಈ ಬಗ್ಗೆ ಗಮನ ಹರಿಸುತ್ತೇನೆ ಎಂದು ಡಾಲಿ ಧನಂಜಯ್ ತಿಳಿಸಿದ್ದಾರೆ.

More from Filmibeat

English summary
Weekend with Ramesh season 5 ; Dhananjay replies to Shivarajkumar question about Marriage in Weekend Show. Is Tagaru Actor planning to get married soon?. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X