"ಎರಡು ವರ್ಷ ಮಕ್ಕಳಿರಲಿಲ್ಲ.. ಹರಕೆ ಮಾಡಿಕೊಂಡ ಬಳಿಕ ಹುಟ್ಟಿದ": ಡಿಕೆ ಶಿವಕುಮಾರ್ ಅಮ್ಮ ಭಾವುಕ

By ಫಿಲ್ಮಿಬೀಟ್ ಡೆಸ್ಕ್

ವೀಕೆಂಡ್ ವಿತ್ ರಮೇಶ್ ಸೀಸನ್ -5ರ 100ನೇ ಅತಿಥಿಯಾಗಿ ಕರ್ನಾಟಕದ ಉಪಮುಖ್ಯಮಂತ್ರಿಯಾದ ಡಿಕೆ ಶಿವಕುಮಾರ್ ಆಗಮಿಸಿ ತಮ್ಮ ರಾಜಕೀಯ ಜೀವನ ಹಾಗೂ ವೈಯಕ್ತಿಕ ಜೀವನ , ಹೋರಾಟ ಅವರು ರಾಜಕೀಯಕ್ಕೆ ಬಂದಂತಹ ಹಿನ್ನಲೆಯ ಬಗ್ಗೆ 'ವೀಕೆಂಡ್ ವಿಥ್ ರಮೇಶ್'ನಲ್ಲಿ ಹಂಚಿಕೊಂಡಿದ್ದಾರೆ.

ಅವರ ಅಭಿಮಾನಿಗಳಿಗೆ 'ವೀಕೆಂಡ್ ವಿತ್ ರಮೇಶ್' ಗೆ ಡಿಕೆ ಶಿವಕುಮಾರ್ ಯಾವಾಗ ಬರ್ತಾರೆ ಎಂಬ ಕಾತುರವಿತ್ತು. ಅದಕ್ಕೆ ತಕ್ಕಂತೆ ಈ ವಾರವೇ ಡಿಕೆ ಶಿವಕುಮಾರ್ ಸಂಚಿಕೆ ಪ್ರಸಾರವಾಗುತ್ತಿದೆ. ಈಗಾಗಲೇ ಎರಡು ಪ್ರೋಮೋ ಬಿಡುಗಡೆಯಾಗಿದ್,ದು ಹಲವಾರು ಕುತೂಹಲವನ್ನು ಹುಟ್ಟಿಹಾಕಿವೆ. ಡಿಕೆ ಶಿವಕುಮಾರ್ ಯಾವ ರೀತಿ ರಾಜಕೀಯಕ್ಕೆ ಬಂದರು ಎಂಬುದನ್ನು ಕಣ್ತುಂಬಿಕೊಳ್ಳಲು ಸಾವಿರಾರು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

ಸದ್ಯಕ್ಕೆ ರಿಲೀಸ್ ಆಗಿರುವ ಎರಡನೇ ಪ್ರೋಮೊದಲ್ಲಿ ಡಿಕೆ ಶಿವಕುಮಾರ್ ತಮ್ಮ ತಂದೆ, ತಾಯಿ ಹಾಗೂ ತನ್ನ ತಮ್ಮನ ಬಗ್ಗೆ ಮನಸ್ಸು ಬಿಚ್ಚಿ ಮಾತಾಡಿದ್ದಾರೆ. ಡಿಕೆ ಸುರೇಶ್ ಯಾವಾಗಲೂ ಡಿಕೆ ಶಿವಕುಮಾರ್ ಬೆನ್ನೆಲುಬಾಗಿ ಯಾವಾಗಲೂ ನಿಂತುಕೊಳ್ಳುತ್ತಾರೆ ಎಂಬುದನ್ನು ಹಲವಾರು ಸಂಕಷ್ಟದ ಸಂದರ್ಭದಲ್ಲಿ ಕರ್ನಾಟಕದ ಜನತೆ ನೋಡಿದ್ದಾರೆ.

weekend with ramesh season 5: DK Shivakumar Born after his mother got god blessings

ತಮ್ಮನಲ್ಲ ನನ್ನ ಮಗ ಎಂದ ಡಿಕೆಶಿ

ಡಿಕೆ ಶಿವಕುಮಾರ್ ಹಾಗೂ ಡಿಕೆ ಸುರೇಶ್ ಇಬ್ಬರನ್ನು ಒಟ್ಟಾಗಿ ನೋಡುವ ಅಭಿಮಾನಿಗಳೇ ಆಗಲಿ ಅಥವಾ ವಿರೋಧ ಪಕ್ಷದವರೇ ಆಗಲಿ ಅವರಿಬ್ಬರನ್ನು ರಾಮ ಲಕ್ಷ್ಮಣ ಎಂದೇ ಕರೆಯುತ್ತಾರೆ. ರಾಮನಿಗೆ ಲಕ್ಷ್ಮಣ ಹೇಗೋ ಡಿಕೆ ಶಿವಕುಮಾರ್‌ಗೆ ಡಿಕೆ ಸುರೇಶ್ ಲಕ್ಷ್ಮಣನ ಹಾಗೇ. ಪ್ರತಿಯೊಂದು ಹೆಜ್ಜೆಯಲ್ಲೂ ಸಹ ಅಣ್ಣನಿಗೆ ಬೆನ್ನೆಲುಬಾಗಿ ನಿಂತು ರಕ್ಷಣೆ ಮಾಡುತ್ತಾ ಇರುತ್ತಾರೆ ಡಿಕೆ ಸುರೇಶ್.

ಡಿಕೆ ಶಿವಕುಮಾರ್ ತಮ್ಮನ ಬಗ್ಗೆ ಮನ ಬಿಚ್ಚಿ ಮಾತನಾಡಿದ್ದಾರೆ. ಅವನು ನನ್ನ ತಮ್ಮನಲ್ಲ ನನಗೆ ಮಗ ಇದ್ದಂತೆ ಎಂದು ತಮ್ಮನ ಬಗ್ಗೆ ಮೊದಲ ಬಾರಿಗೆ ಸಾರ್ವಜನಿಕವಾಗಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಡಿ ಹೊಗಳಿದ್ದಾರೆ. ವೀಕೆಂಡ್ ವಿತ್ ರಮೇಶ್‌ನಲ್ಲಿ ತಮ್ಮನ ಬಗ್ಗೆ ಡಿಕೆ ಶಿವಕುಮಾರ್ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.

ಹರಕೆ ಬಳಿಕ ಹುಟ್ಟಿದ ಡಿಕೆ ಶಿವಕುಮಾರ್

ಡಿಕೆ ಶಿವಕುಮಾರ್ ಅವರ ತಾಯಿ ಗೌರಮ್ಮ 'ವೀಕೆಂಡ್ ವಿತ್ ರಮೇಶ್'ಗೆ ಆಗಮಿಸಿ ಮಗನ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. ನನಗೆ ಎರಡು ವರ್ಷ ಮಕ್ಕಳಿರಲಿಲ್ಲ. ನಂತರ ದೇವರಿಗೆ ಹರಕೆ ಮಾಡಿಕೊಂಡಿದ್ದೆ. ಈ ವೇಳೆ ಎರಡು ವರ್ಷಗಳ ನಂತರ ದೇವರಿಗೆ ಹರಕೆ ಹೊತ್ತುಕೊಂಡ ಮೇಲೆ ಡಿಕೆ ಶಿವಕುಮಾರ್ ನನ್ನ ಹೊಟ್ಟೆಯಲ್ಲಿ ಜನಿಸಿದ ಎಂದು ಡಿಕೆ ಶಿವಕುಮಾರ್ ತಾಯಿ ಗೌರಮ್ಮನವರು ಭಾವುಕರಾದರು.

ನನ್ನ ತಂದೆ ತಾಯಿಗೆ ನನ್ನನ್ನ ಓದಿಸಬೇಕು ಎಂಬ ಕನಸು ಹೆಚ್ಚಾಗಿ ಇತ್ತು. ಆದರೆ, ನಾನು ಹೆಚ್ಚಾಗಿ ಓದಲಿಲ್ಲ ಎಂದು ಡಿಕೆ ಶಿವಕುಮಾರ್ ಅವರು ಇದೇ ಸಂದರ್ಭದಲ್ಲಿ ತಿಳಿಸಿದರು. ನಾವು ಮೂವರು ಸೇರಿ ಒಟ್ಟಾಗಿ ಜಾಸ್ತಿ ಇರಲಿಲ್ಲ ಎಂದು ಡಿ.ಕೆ.ಶಿವಕುಮಾರ್ ಹೇಳಿದರು. ನನ್ನ ಅಂತರಾತ್ಮ ಇನ್ನೂ ಕೆಲವರಿಗೆ ಗೊತ್ತಿಲ್ಲ ಎಂದು ಡಿಕೆ ಶಿವಕುಮಾರ್ ರವರು ವೇದಿಕೆಯ ಮೇಲೆ ಭಾವುಕರಾದರು. ಡಿಕೆ ಸುರೇಶ್‌ಗೆ ಡಿಕೆ ಶಿವಕುಮಾರ್ ತಮ್ಮ ಹೃದಯದಲ್ಲಿ ಎಂತಹ ಸ್ಥಾನವನ್ನು ಕೊಟ್ಟಿದ್ದಾರೆ ಎಂಬುದು ಸಾರ್ವಜನಿಕವಾಗಿ ಹೇಳಿಕೊಂಡಿದ್ದಾರೆ.

More from Filmibeat

English summary
weekend with ramesh season 5: DK Shivakumar Born after his mother got god blessings, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X