Weekend With Ramesh: ಗಂಡನಿಗಾಗಿ ಸರ್ಕಾರಿ ಕೆಲಸ ಬಿಟ್ಟ ಡಾ. ಮಂಜುನಾಥ್ ಪತ್ನಿ ಅನುಸೂಯ

ವೀಕೆಂಡ್ ವಿಥ್ ರಮೇಶ್ ಸೀಸನ್-5ರ ಮೂರನೇ ಅಥಿತಿಯಾಗಿ ಜಯದೇವ ಆಸ್ಪತ್ರೆಯ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ಅವರನ್ನು ಕರೆತರಲಾಗಿತ್ತು. ಮಾಜಿ ಪ್ರಧಾನಿ ದೇವೇಗೌಡರ ಮಗಳಾದ ಅನುಸೂಯ ಅವರನ್ನು ಡಾ. ಸಿ.ಎನ್.ಮಂಜುನಾಥ್ ವಿವಾಹವಾಗಿದ್ದಾರೆ.
ತಮ್ಮ ಅಳಿಯನ ಬಗ್ಗೆ ದೇವೇಗೌಡರು ಮತ್ತು ಚನ್ನಮ್ಮ ಇಬ್ಬರು ಸಹ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ನಾನು ರಾಜಕೀಯ ಹಾಗೂ ಹೋರಾಟದಿಂದ ಏನನ್ನು ಸಂಪಾದಿಸಿಲ್ಲ ಎಂದರೂ ಸಹ ನನ್ನಿಂದ ಏನೂ ಸಹ ಪಡೆಯದೆ ಮಗಳನ್ನು ಮದುವೆಯಾಗಿರುವುದಾಗಿ ಸಿಕ್ರೆಟ್ ರಿವೀಲ್ ಮಾಡಿದರು.
ಮದುವೆಯಾದ ಹೊಸದರಲ್ಲಿ ಡಾ.ಸಿ.ಎನ್ ಮಂಜುನಾಥ್ ಅವರ ಪತ್ನಿ ಅನುಸೂಯಗೆ ಸರ್ಕಾರಿ ನೌಕರಿ ಸಿಕ್ಕಿತು. ಗಂಡನ ಏಳಿಗೆಗಾಗಿ ಸರ್ಕಾರಿ ನೌಕರಿಯನ್ನು ಬಿಟ್ಟು ಗಂಡನ ಏಳಿಗೆಗಾಗಿ ಶ್ರಮಿಸುತ್ತಿದ್ದಾರೆ. ಇದನ್ನು ವೀಕ್ ಎಂಡ್ ವಿಥ್ ರಮೇಶ್ ನಲ್ಲಿ ತಿಳಿಸಿದ್ದಾರೆ.
ಆದರ್ಶ ದಂಪತಿಗಳಾಗಿ ಡಾ.ಸಿ.ಎನ್.ಮಂಜುನಾಥ್ ಬಾಳ್ಮೆ ನಡೆಸುತ್ತಿದ್ದಾರೆ. ನಾನು ಏನೇ ಆಗಿದ್ದರೂ ಸಹ ಇದರಲ್ಲಿ ನನ್ನ ಹೆಂಡತಿಗೆ ಅರ್ಧ ಕ್ರೆಡಿಕ್ ಸಲ್ಲಬೇಕು ಎಂದು ಹೆಂಡತಿಗೆ ಗೌರವವನ್ನು ತಂದುಕೊಟ್ಟರು. ನನ್ನ ಮಕ್ಕಳಿಗೆ ಉತ್ತಮವಾದ ಸಂಸ್ಕಾರವನ್ನು ನನ್ನ ಹೆಂಡತಿ ಕಲಿಸಿಕೊಟ್ಟಿದ್ದಾಳೆ ಎಂದು ಡಾ.ಸಿ.ಎನ್. ಮಂಜುನಾಥ್ ವೇದಿಕೆ ಮೇಲೆ ತಿಳಿಸಿದರು .
ಹೆಣ್ಣು ಮಕ್ಕಳು ತಾಳ್ಮೆಯಿಂದ ಸಂಸಾರವನ್ನು ನಡೆಸಿಕೊಂಡು ಹೋಗಬೇಕು ತವರು ಮನೆಗೆ ಯಾವತ್ತು ಹೊರೆಯಾಗಬಾರದು ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ ಎಂಬಂತೆ ಬಾಳಿ ತೋರಿಸಬೇಕು. ತವರು ಮನೆಯಿಂದ ತಂದು ತಿಂದರೆ ಅದು ತೌಡಿನ ರೀತಿ ಎಂದೆಲ್ಲ ನವ ಜೋಡಿಗೆ ಒಳ್ಳೆಯ ಕಿವಿಮಾತನ್ನು ಹೇಳಿದ್ದಾರೆ.
ವೇದಿಕೆಯ ಮೇಲೆ ರಮೇಶ್ ಅರವಿಂದ್ ಅವರು ರೋಸ್ ತರಲು ಹೇಳಿದ್ದಾರೆ. ರೋಸ್ ಬಂದ ತಕ್ಷಣವೇ ಹೆಂಡತಿಯ ಮುಡಿಗೆ ಮೂಡಿಸುವ ಮೂಲಕ ಪ್ರೀತಿ ಎಂದರೆ ಹೇಗಿರುತ್ತದೆ. ಪರಸ್ಪರ ಪ್ರೀತಿಯ ಬಗ್ಗೆ ಜನರಿಗೆ ತಿಳಿಸುವ ಹಾಗೇ ಮಾಡಲಾಯಿತು.
ಡಾ.ಸಿ.ಎನ್.ಮಂಜುನಾಥ್ ಅವರ ಇಬ್ಬರು ಮಕ್ಕಳು ಸಹ ಡಾಕ್ಟರ್ ಆಗಿ ತಮ್ಮ ಸೇವೆಯನ್ನು ನೀಡುತ್ತಿದ್ದಾರೆ. ಮಗ ಅಪ್ಪನಂತೆಯೇ ಹೃದ್ರೋಗ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮಗಳು ಡರ್ಮಾಡಲಾಜಿಸ್ಟ್ ಆಗಿ ಕೆಲಸ ಮಾಡುತ್ತಿದ್ದಾರೆ. ವೈದ್ಯೋ ನಾರಾಯಣ ಹರಿ ಎಂಬ ವಾಕ್ಯಕ್ಕೆ ಸರಿ ಹೊಂದುವಂತಹ ಕುಟುಂಬವನ್ನು ಡಾ.ಸಿ.ಎನ್.ಮಂಜುನಾಥ್ ಹೊಂದಿದ್ದಾರೆ.
ಮಾವ ಪ್ರಧಾನಿಯಾದಾಗ,ಸಿಎಂ ಆಗಿ ಕೆಲಸ ನಿರ್ವಹಿಸಿದಾಗ ತಾವೇ ಒಂದು ದೊಡ್ಡ ಆಸ್ಪತ್ರೆಯನ್ನು ಕಟ್ಟಿಸಿ ಲಕ್ಷಾಂತರ ರೂಪಾಯಿ ಸಂಪಾದನೆಯನ್ನು ಮಾಡಬಹುದಾಗಿತ್ತು. ಅದ್ಯಾವುದಕ್ಕೂ ಸಹ ಡಾ.ಮಂಜುನಾಥ್ ಆಸೆ ಪಟ್ಟವರಲ್ಲ ಬಡವರ ಸೇವೆ ಮಾಡಿ ಅವರಿಗೆ ಉತ್ತಮವಾದ ಆರೋಗ್ಯ ಕಲ್ಪಿಸುವ ಗುರಿಯನ್ನು ಹೊಂದಿದರು.
ಕೊರೊನಾದಂತಹ ಸಮಯದಲ್ಲಿ ಆಸ್ಪತ್ರೆಗೆ ಬಂದ ರೋಗಿಗಳಿಗೆ ನೆರವಾದರು. ಆತ್ಮವಿಶ್ವಾಸ ಕಳೆದುಕೊಂಡ ರೋಗಿಗಳಿಗೆ ಆತ್ಮವಿಶ್ವಾಸ ತುಂಬಿದರು. ಉತ್ತಮ ರೀತಿಯ ವ್ಯವಸ್ಥೆ , ಶುಚಿಯಾದ ವಾರ್ಡ್‌ಗಳು, ಏಮರ್ಜೆನ್ಸಿ ವಾರ್ಡ್ , ಕ್ಯಾಂಟೀನ್, ಲ್ಯಾಬ್ ಹೀಗೆ ಜಯದೇವ ಆಸ್ಪತ್ರೆಯನ್ನು ಉನ್ನತಮಟ್ಟಕ್ಕೆ ತಗೆದುಕೊಂಡು ಹೋದ ಹೆಗ್ಗಳಿಕೆ ಅದು ಡಾ.ಮಂಜುನಾಥ್ ಅವರಿಗೆ ಸಲ್ಲುತ್ತದೆ .
ಬೇರೆ ದೇಶದವರು ಸಹ ಇಲ್ಲಿನ ಆಸ್ಪತ್ರೆಯ ಪದ್ಧತಿಯನ್ನು ಅಳವಡಿಸಿಕೊಳ್ಳುವಂತೆ ಮಾಡಿ ಅಮೇರಿಕಾದ ಅಂದಿನ ಅಧ್ಯಕ್ಷರಾಗಿದ್ದ ಬರಾಕ್ ಒಬಾಮ ಅವರಿಂದ ಪತ್ರವನ್ನು ಪಡೆದು ನೀವು ನೀಡಿದ ಸೂಚನೆಯನ್ನು ಅನುಸರಿಸುತ್ತೇವೆ ಎಂದು ಅನಿಸಿಕೊಂಡವರೇ ನಮ್ಮ ಹೆಮ್ಮೆಯ ಡಾ. ಸಿ.ಎನ್.ಮಂಜುನಾಥ್. ಹೀಗೆ ಜಯದೇವ ನಿರ್ದೇಶಕರಾಗಿ ಮತ್ತಷ್ಟು ಬಡಜನರ ಪ್ರಾಣ ಉಳಿಸಲಿ ಎಂಬುದೇ ನಮ್ಮ ಹಾರೈಕೆ.


Click it and Unblock the Notifications











