Weekend with Ramesh: ಇಡ್ಲಿಗೆ ಬಕೆಟ್ ಸಾಂಬಾರ್: ಹಾಡು ಕೇಳಲು ರೇಡಿಯೋ ತಯಾರಿಸಿದ್ದ ಸೋಮೇಶ್ವರ

By ಶೃತಿ ಹರೀಶ್ ಗೌಡ

ಮತ್ತೊಂದು ವಾರ ಕಳೆದಿದೆ. ವೀಕೆಂಡ್‌ ವಿತ್ ರಮೇಶ್ ಶೋನಲ್ಲಿ ಮತ್ತಿಬ್ಬರು ಅಥಿತಿಗಳ ಜೀವನ ಚರಿತ್ರೆ ಅನಾವರಣ ಆಗಿದೆ. ನಾ ಸೋಮಶೇಖರ್ ತಮ್ಮ ಬಾಲ್ಯದ ದಿನಗಳನ್ನು ಮೆಲುಕು ಹಾಕಿದ್ದಾರೆ. ತಾಯಿ ಧಾನ್ಯಗಳನ್ನು ಕ್ಲೀನ್ ಮಾಡುವ ಕೆಲಸ ಮಾಡುತ್ತಿದ್ರು. ಆಕೆ ತರುವ ತಿಂಡಿಗಾಗಿ ಕಾಯುತ್ತಿದ್ದೆ. ಜೊತೆಗೆ ಬಾಲ್ಯದಲ್ಲಿ ಹೋಟೆಲ್‌ಗೆ ಹೋದರೆ ಇಡ್ಲಿಗೆ ಬಕೆಟ್ ಗಟ್ಟಲೆ ಸಂಬಾರನ್ನು ತಿನ್ನುತ್ತಿದ್ದರಂತೆ.

ನನಗೆ ಸಿಹಿ ಎಂದರೆ ಬಹಳ ಇಷ್ಟ. ಅಮ್ಮ ಕೆಲಸದಿಂದ ಬರುವಾಗ ಸಿಹಿಯನ್ನ ತರುತ್ತಿದ್ದರು. ಅದನ್ನು ತಿನ್ನಲು ನಾನು ಕಾಯುತ್ತಿದ್ದೆ ಎಂದು ಬಾಲ್ಯದ ಖುಷಿಯನ್ನ ನೆನಪಿಸಿಕೊಂಡರು. ಮೊದಲಿನಿಂದಲೂ ನಾ ಸೋಮೇಶ್ವರ ಅವರಿಗೆ ಕನ್ನಡ ಸಾಹಿತ್ಯವನ್ನು ಓದುವುದು ಎಂದರೆ ಎಲ್ಲಿಂದ ಪ್ರೀತಿ. ಅದರಲ್ಲೂ ವಿಜ್ಞಾನದ ಲೇಖನಗಳನ್ನು ಓದುವುದು ಎಂದರೆ ಅಚ್ಚುಮೆಚ್ಚು. ಇದಕ್ಕಾಗಿ ಅತಿ ಹೆಚ್ಚು ವಿಜ್ಞಾನದ ಪತ್ರಿಕೆಯನ್ನ ಓದುತ್ತಿದ್ದರು.

na Somashekar opens up about his childwood

ರೇಡಿಯೋದಲ್ಲಿ ಬರುವ ಭಾವಗೀತೆಯನ್ನು ಕೇಳುವುದು ಎಂದರೆ ಇವರಿಗೆ ಪ್ರೀತಿ. ರಾತ್ರಿ 10.30ರ ಸಮಯಕ್ಕೆ ಬರುವ ಭಾವಗೀತೆ ಕೇಳಲು ಇವರು ಬೇರೆಯದ್ದೇ ಪ್ಲಾನ್ ಮಾಡಿದ್ದರು. ಹಿಂದಿಯಲ್ಲಿ ಬರುವ ಹಾಡುಗಳನ್ನು ಅಷ್ಟು ಹೊತ್ತಿನಲ್ಲಿ ಯಾರು ಹಾಕುತ್ತಾರೆ ಎಂದು ಸ್ವತಂತ್ರವಾಗಿ ರೇಡಿಯೋ ತಯಾರಿಯನ್ನು ಮಾಡಿದ್ದರು.

ರೇಡಿಯೋ ತಯಾರಿಸಿದ್ದೆ ರೋಚಕ

ಸೋಮೇಶ್ವರ ಅವರಿಗೆ ಹಿಂದಿ ಹಾಡುಗಳನ್ನು ಹಾಗೂ ಭಾವಗೀತೆಗಳನ್ನು ಕೇಳಲು ರೇಡಿಯೋ ಒಂದು ಬೇಕಿತ್ತು. ಇದಕ್ಕಾಗಿ ಒಂದು ವಿಜ್ಞಾನ ಪತ್ರಿಕೆಯಲ್ಲಿ ಯಾವ ರೀತಿ ರೇಡಿಯೋವನ್ನು ತಯಾರು ಮಾಡಬಹುದು ಎಂಬ ಆರ್ಟಿಕಲ್‌ನ್ನು ಓದಿದ್ದರು. ಅದನ್ನು ಒಂದು ಪೇಪರ್ ಅಲ್ಲಿ ಬರೆದುಕೊಂಡು ಬಂದು ಶಿವಾಜಿನಗರದ ಮಾರ್ಕೆಟ್‌ಗೆ ಹೋಗಿ ಅದಕ್ಕೆ ಬೇಕಾದ ಎಲ್ಲಾ ಸಾಮಾನುಗಳನ್ನು ತಂದಿದ್ದರು.

na Somashekar opens up about his childwood

ನಂತರ ಒಂದೊಂದನ್ನೇ ಜೋಡಿಸಿ ಪುಟ್ಟ ರೇಡಿಯೋವನ್ನ ಮಾಡಿದ್ದರು. ಸ್ಪೀಕರ್ ಜೋರಾಗಿ ಬಾರದ ವೇಳೆ ಅದರ ಮೇಲೆ ಲೋಟವನ್ನು ದಬಾಕಿ ಮನೆ ಮಂದಿ ಎಲ್ಲರೂ ಸಹ ಹಾಡು ಕೇಳುವಂತೆ ಮಾಡುತ್ತಿದ್ದರು. ಇದು ನಾ ಸೋಮೇಶ್ವರ ಅವರಿಗೆ ಇದ್ದಂತಹ ಬುದ್ಧಿವಂತಿಕೆಗೆ ಒಂದು ಸಾಕ್ಷಿಯಾಗಿದೆ. ಚಿಕ್ಕಂದಿನಿಂದಲೂ ಸಹ ಬುದ್ದಿವಂತರಾಗಿ ಕೆಲಸವನ್ನು ನಿಭಾಯಿಸಿದ್ದು ಇಂದು ಇಷ್ಟಮಟ್ಟಿಗೆ ಕೀರ್ತಿ ಗಳಿಸಲು ಸಹಾಯವಾಗಿದೆ.

ಕಾರ್ಮಿಕರಿಗೆ ಬೆನ್ನೆಲುಬಾಗಿದ್ದ ಸೋಮೇಶ್ವರ್

ಸೋಮೇಶ್ವರವರು ಕನ್ನಡ ಸಾಹಿತ್ಯ ಲೋಕಕ್ಕೆ ತಮ್ಮದೇ ಆದಂತಹ ಕೊಡುಗೆಯನ್ನ ನೀಡಿದ್ದಾರೆ ಇವರಿಗೆ ಹಲವಾರು ಪ್ರಶಸ್ತಿಗಳು ಸಹ ಅರಸಿ ಬಂದಿವೆ. ಸಾಧನೆ ಪ್ರಶಸ್ತಿಯನ್ನ ಪಡೆದುಕೊಂಡಿದ್ದಾರೆ ಹಲವಾರು ಲೇಖನ ಹಾಗೂ ಪುಸ್ತಕಗಳನ್ನ ಬರೆದಿದ್ದಾರೆ. ಸಂದರ್ಭದಲ್ಲಿ ಕಾರ್ಮಿಕರಿಗೆ ಬೆನ್ನೆಲುಬಾಗಿ ನಿಂತಿದ್ದರು. ಅವರ ಆರೋಗ್ಯ ಸರಿ ಇಲ್ಲದ ಇದ್ದಾಗ ಅವರಿಗೆ ಸರಿಯಾದ ಚಿಕಿತ್ಸೆಯನ್ನು ನೀಡಿ ಮಾರ್ಗದರ್ಶನವನ್ನು ನೀಡುತ್ತಿದ್ದರು.

ಪುಸ್ತಕ ಓದಲು ಮನವಿ

ಸಾಧ್ಯವಾದಷ್ಟು ಪುಸ್ತಕಗಳನ್ನು ಓದಬೇಕು ಎಂದು ವೀಕ್ಷಕರಿಗೆ ನಾ ಸೋಮೇಶ್ವರ ಅವರು ಸಲಹೆ ನೀಡಿದರು. ನನಗೆ ಪುಸ್ತಕ ಓದುವುದು ಎಂದರೆ ಅಪಾರ ಪ್ರೀತಿ. ಇದಕ್ಕಾಗಿ ನಾವು ಥಟ್ ಅಂತಾ ಹೇಳಿ ಕಾರ್ಯಕ್ರಮದಲ್ಲಿ ಪುಸ್ತಕ ಹಂಚುವ ಕೆಲಸವನ್ನು ಮಾಡುತ್ತಿದ್ದೇವೆ ಎಂದು ತಿಳಿಸಿದರು. ಕಾರ್ಯಕ್ರಮದ ರೂವಾರಿಯಾದ ಆರತಿ ಅವರಿಗೆ ಪುಸ್ತಕವನ್ನು ಕೊಡುವ ಯೋಚನೆ ಬಂದಿತ್ತು.

ಅದನ್ನ ನಾವು 21 ವರ್ಷಗಳಿಂದಲೂ ಮಾಡುತ್ತಾ ಬಂದಿದ್ದೇವೆ ಎಂದು ತಿಳಿಸಿದರು. ನಡೆದಾಡುವ ವಿಶ್ವಕೋಶ ಎಂದು ಖ್ಯಾತಿಗಳಿಸಿರುವ ನಾ ಸೋಮೇಶ್ವರ ಅವರ ಕನ್ನಡ ಭಾಷೆ ಕೇಳಿದ ಪ್ರೇಕ್ಷಕರು ಫಿದಾ ಆಗಿದ್ದಾರೆ.‌ ಥಟ್ ಅಂತ ಹೇಳಿ ಕಾರ್ಯಕ್ರಮದ ಮೂಲಕ ಮನೆ ಮಾತಾಗಿದ್ದಾರೆ. ಇಂತಹ ಸಾಧಕರ ಕುರಿತು ಮತ್ತೊಂದು ಎಪಿಸೋಡ್ ಮಾಡಬೇಕಿತ್ತು ಎಂದು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

More from Filmibeat

English summary
weekend with ramesh season -5: na Somashekar opens up about his childwood. this week na Somashekar life story revealed in Weekend show.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X