ಹೆಂಡತಿಗೆ ರೇಷ್ಮೆ ಸೀರೆ ಇಲ್ಲ, ರೂಪಾಯಿ ಖರ್ಚಿಲ್ಲ, ಬರೀ ಕೈಯಲ್ಲಿ ಹೋಗಿ ಮದುವೆ
ಈ ವಾರದ ವೀಕೆಂಡ್ ವಿತ್ ರಮೇಶ್ ಸೀಸನ್ -5 ರ ಸಾಧಕ ಸೀಟ್‌ನಲ್ಲಿ ನಾ ಸೋಮೇಶ್ವರರವರು ಅತಿಥಿಯಾಗಿ ಆಗಮಿಸಿದ್ದಾರೆ. ಅವರು ತಮ್ಮ ಜೀವನದ ಅಮೂಲ್ಯ ಕ್ಷಣಗಳನ್ನು ಮೆಲುಕು ಹಾಕಿದ್ದಾರೆ. ಬೆಂಗಳೂರಿನ ಮಲ್ಲೇಶ್ವರಂನಲ್ಲಿ ಜನಿಸಿದ ನಾ ಸೋಮೇಶ್ವರ ರವರು, ಮಲ್ಲೇಶ್ವರಂ ಯಾವ ರೀತಿಯಲ್ಲಿ ಇತ್ತು ಎಂಬುದನ್ನು ವೀಕೆಂಡ್ ವಿತ್ ರಮೇಶ್ ಶೋನಲ್ಲಿ ಹಂಚಿಕೊಂಡಿದ್ದಾರೆ.
ತಮ್ಮ ಬಾಲ್ಯದ ಜೊತೆಗೆ ಮದುವೆ ಆಗಿದ್ದ ಸನ್ನಿವೇಶವನ್ನು ನೆನಪಿಸಿಕೊಂಡಿದ್ದಾರೆ. ತಾವು ಯಾವ ರೀತಿ ಮದುವೆಯಾದವು ಎಂಬುದನ್ನು ಸಹ ವೀಕೆಂಡ್ ಶೋನಲ್ಲಿ ಸೋಮಶೇಖರ್ ಅವರು ಹೇಳಿದ್ದಾರೆ. ಸರಳ ಜೀವಿಯಾಗಿರುವ ನಾ. ಸೋಮಶೇಖರ್ ರವರು ಸಾಹಿತ್ಯ ಲೋಕಕ್ಕೆ ನೀಡಿರುವ ಕೊಡುಗೆ ಅಪಾರವಾಗಿದೆ.

ನಾ ಸೋಮೇಶ್ವರ ಅವರು 'ಥಟ್ ಅಂತ ಹೇಳಿ' ಕಾರ್ಯಕ್ರಮವನ್ನು ನಡೆಸಿ ಕೊಡುತ್ತಾರೆ. ಅವರು ಆ ಕಾರ್ಯಕ್ರಮ ನಡೆಸಿಕೊಡುವ ಶೈಲಿಯೇ ಬಹಳ ವಿಭಿನ್ನವಾಗಿದೆ. ಇನ್ನೂ ಅವರ ಕನ್ನಡವನ್ನು ಕೇಳುವುದು ಕಿವಿಗೆ ಇಂಪಾಗಿದೆ. ಅಷ್ಟು ಸ್ಪಷ್ಟವಾಗಿ ಕನ್ನಡವನ್ನು ಮಾತನಾಡುತ್ತಾರೆ. ಇವರ ಜೀವನವು ಸಹ ಕನ್ನಡ ಮಾತನಾಡುವಂತೆ ಸೊಗಸಾಗಿ ಸರಳವಾಗಿ ಇದೆ.
ಲವ್ ಮ್ಯಾರೇಜ್, ಮದುವೆಗೆ ಖರ್ಚಿಲ್ಲ
ನಾ.ಸೋಮೇಶ್ವರ ಅವರದ್ದು ಪ್ರೇಮ ವಿವಾಹ. ಯಾರಿಗೂ ಸಹ ಕಷ್ಟವಾಗಬಾರದು ಎಂದು ದಂಪತಿ ಮಾತನಾಡಿಕೊಂಡು ಪ್ರೇಮ ವಿವಾಹವನ್ನು ಮಾಡಿಕೊಂಡರು. ಅದು ಸಹ ಯಾವುದೇ ಆಡಂಬರವಿಲ್ಲದ ಸರಳ ವಿವಾಹ. ಇದಕ್ಕೆ ಅವರ ನಾಲ್ವರು ಸ್ನೇಹಿತರು ಸಾಕ್ಷಿಯಾಗಿದ್ದರು.
ನಾ ಸೋಮೇಶ್ವರವರು ತಮ್ಮ ಹೆಂಡತಿಗೂ ಸಹ ಯಾವುದೇ ರೇಷ್ಮೆ ಸೀರೆಯನ್ನ ಕೊಡಿಸದೇ ಸಿಂಪಲ್ ಆಗಿ ಮದುವೆ ಆಗಿ ಇಷ್ಟು ವರ್ಷಗಳ ಕಾಲ ಜೀವನವನ್ನು ನಡೆಸಿಕೊಂಡು ಬಂದಿದ್ದಾರೆ. ಇತರರಿಗೂ ಸಹ ಮಾದರಿಯಾಗಿ ನಿಂತಿದ್ದಾರೆ. ಸೋಮೇಶ್ವರ ಅವರ ಪತ್ನಿ ಮದುವೆಯ ದಿನವನ್ನು ನೆನಪಿಸಿಕೊಂಡಿದ್ದಾರೆ. ಸದ್ಯ ಪ್ರೋಮೊ ರಿಲೀಸ್ ಆಗಿದ್ದ ಎಪಿಸೋಡ್ ಭಾನುವಾರ ಪ್ರಸಾರವಾಗಲಿದೆ.

ಮದುವೆಗೆ ಮಾಡಿಲ್ಲ ಖರ್ಚು
ನಾ ಸೋಮೇಶ್ವರರವರು ವೀಕೆಂಡ್ ವಿತ್ ರಮೇಶ್ ನಲ್ಲಿ ತಾವು ಯಾವ ರೀತಿ ಮದುವೆಯಾಗಿದ್ದೇವೆ ಎಂಬುವುದನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಅವರ ಮಡದಿ ನಾವು ಮದುವೆಗೆ ಒಂದು ರೂಪಾಯಿ ಖರ್ಚು ಮಾಡಿಲ್ಲ. ನಾಲ್ವರು ಸ್ನೇಹಿತರು ನಮಗೆ ಬಹಳಷ್ಟು ಪ್ರೀತಿಯನ್ನ ಕೊಟ್ಟಿದ್ದಾರೆ. ಇದರ ಜೊತೆಗೆ ಸಹಾಯವನ್ನ ಮಾಡಿದ್ದಾರೆ ಎಂದು ನಾ. ಸೋಮೇಶ್ವರರವರ ಸ್ನೇಹಿತರ ಬಗ್ಗೆ ಮಾತನಾಡಿದ್ದಾರೆ.
ನಾನು ಹೆಂಡತಿಗೆ ಯಾಕೆ ರೇಷ್ಮೆ ಸೀರೆ ಎಂದು ಸೀರೆಯನ್ನು ಕೊಡಿಸಲೇ ಇಲ್ಲ. ರೇಷ್ಮೆ ಸೀರೆ ಉಟ್ಟುಕೊಂಡೇ ಮದುವೆಯಾಗಬೇಕಾಗಿ ಎಂದು ಪ್ರಶ್ನೆಯನ್ನು ಮಾಡಿದೆ ಎಂದು ನೆನಪಿಸಿಕೊಂಡಿದ್ದಾರೆ. ಹೆಚ್ಚು ಖರ್ಚು ಮಾಡದೇ ನಾವಿಬ್ಬರೂ ಮದುವೆ ಮಾಡಿಕೊಂಡೆವು. ಯಾರಿಗೂ ಸಹ ತೊಂದರೆಯನ್ನು ಕೊಟ್ಟಿಲ್ಲ ಎಂದು ವೀಕೆಂಡ್ ವಿತ್ ರಮೇಶ್ ಶೋನಲ್ಲಿ ತಿಳಿಸಿದ್ದಾರೆ.
ಮಾತು ಸರಳ ಜೀವನವು ಸರಳ
ಎಷ್ಟು ಸರಳವಾಗಿ ಕನ್ನಡವನ್ನು ಮಾತನಾಡುತ್ತಾರೋ ಅಷ್ಟೇ ಸರಳವಾಗಿ ತಮ್ಮ ಜೀವನವನ್ನು ನಡೆಸ್ತಿದ್ದಾರೆ. ಇವರ ಜೀವನ ಶೈಲಿ ಇತರರಿಗೆ ಮಾದರಿಯಾಗುತ್ತದೆ. ಯಾವುದೇ ಆಡಂಬರವಿಲ್ಲದೆ ತಮ್ಮ ಜೀವನವನ್ನು ನಡೆಸಿಕೊಂಡು ಹೋಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ಮದುವೆ ಅಂದ್ರೆ ಲಕ್ಷಾಂತರ ರೂಪಾಯಿ ಖರ್ಚು ಮಾಡುತ್ತಾರೆ. ಅಂತಹವರಿಗೆ ಸೋಮೇಶ್ವರ ಅವರ ಜೀವನ ಮಾದರಿಯಾಗಿದೆ.


Click it and Unblock the Notifications











