Weekend with Ramesh: ಪಿಯುಸಿ ಓದಲು ಹಣವಿರಲಿಲ್ಲ: ಅಣ್ಣನಿಗೆ ಸೈಕಲ್ ಕೊಡಿಸಿದ್ದ ತಮ್ಮ
ನಾ ಸೋಮೇಶ್ವರರವರ ಬದುಕು ಜೀವನ ಒಂದು ತೆರೆದ ಪುಸ್ತಕದಂತೆ ಇದೆ. ವೀಕೆಂಡ್ ವಿತ್ ರಮೇಶ್ ಶೋನಲ್ಲಿ ಎಲ್ಲವನ್ನು ವೀಕ್ಷಕರ ಮುಂದೆ ಹಂಚಿಕೊಂಡಿದ್ದಾರೆ. ಮೇಡಂ ಕ್ಯೂರಿ ಅವರ ಬಗ್ಗೆ ಓದಿ ಅವರ ಪ್ರಭಾವಕ್ಕೆ ಅತಿ ಹೆಚ್ಚು ಒಳಗಾದರು. ಅವರೇ ಹಸಿವಿನಿಂದ ಸಾಧನೆಯನ್ನ ಮಾಡಿದ್ದಾರೆ. ನನಗೂ ಸಹ ಹಸಿವು ಅಡ್ಡ ಬಾರದು ಎಂದು ಸಾಧನೆಯನ್ನ ಮಾಡಲು ಹೊರಟರು.
ಶ್ರೀಮಂತ ಕುಟುಂಬದಲ್ಲೇ ಜನಿಸಿದ ನಾ ಸೋಮೇಶ್ವರ ಅವರಿಗೆ ತಂದೆ ತೀರಿಕೊಂಡ ನಂತರ ಬಹಳ ಕಷ್ಟ ಎದುರಾಯಿತು. ಆಸ್ತಿ ಪಾಸ್ತಿ ಸೈಟು ಎಲ್ಲವೂ ಇದ್ದರೂ ಸಹ ಮೂರನೇಯವರು ಬಂದು ತಾಯಿಗೆ ತೊಂದರೆ ಕೊಟ್ಟಾಗ ಏನು ಮಾಡಬೇಕು ಎಂದು ತೋಚದೆ, ಇದ್ದುದ್ದರಲ್ಲೇ ಬದುಕನ್ನ ಕಟ್ಟಿಕೊಂಡವರು. ಇವರ ಜೀವನವೇ ಬಹಳ ಸ್ಪೂರ್ತಿದಾಯಕ. ಸಾಕಷ್ಟು ಕಷ್ಟದ ದಿನಗಳನ್ನು ಎದುರಿಸಿ ಕೊನೆಗೆ ಸಾಧನೆಗೆ ಶಿಖರ ಏರಿದ್ದಾರೆ.

ಎಸ್ಎಸ್‌ಎಲ್‌ಸಿ ಪಾಸಾದ ನಂತರ ಪಿಯುಸಿಗೆ ಸೇರಬೇಕಿತ್ತು. ಈ ವೇಳೆ ನಾ ಸೋಮೇಶ್ವರ ಅವರ ಬಳಿ ಹಣವಿರಲಿಲ್ಲ. ಈ ವೇಳೆ ಗೆಳೆಯರಾದ ಎಸ್.ಎಲ್.ಸ್ವಾಮಿ ಅವರು ಮಕ್ಕಳಿಗೆ ಪಾಠ ಮಾಡಲು ತಿಳಿಸಿದರು. ರಾಜಾಜಿನಗರಕ್ಕೆ ಹೋಗಿ ಪಾಠವನ್ನು ಮಾಡಿ ಪಿಯುಸಿಯನ್ನು ಮುಗಿಸಿದ್ದಾರೆ. ನಂತರ ಪೇಪರ್‌ಗೆ ವ್ಯಂಗ್ಯ ಚಿತ್ರವನ್ನು ಬರೆದುಕೊಟ್ಟು ಸಂಪಾದನೆ ಮಾಡಿದ್ದಾರೆ.
ಲೇಖನ ಬರೆದು ಹಣ ಸಂಪಾದನೆ
ವಿಜ್ಞಾನ ಪತ್ರಿಕೆಗಳನ್ನು ಅತಿ ಹೆಚ್ಚಾಗಿ ಓದುತ್ತಿದ್ದ ನಾ. ಸೋಮೇಶ್ವರ ಅವರಿಗೆ ಒಂದು ಐಡಿಯಾ ಬರುತ್ತದೆ. ಅದೇನಪ್ಪ ಅಂದರೆ ಕನ್ನಡಕ್ಕೆ ವಿಜ್ಞಾನ ಲೇಖನಗಳನ್ನು ಅನುವಾದ ಮಾಡಿ ಬರೆದರೆ ಯಾವ ರೀತಿ ಇರುತ್ತದೆ ಎಂದು ಯೋಚನೆ ಮಾಡಿ ಕನ್ನಡ ಪ್ರಭಕ್ಕೆ ಲೇಖನಗಳನ್ನು ಬರೆಯಲು ಶುರು ಮಾಡಿದ್ದರು. ಕಾಲೇಜಿಗೆ ಹಣ ಹೊಂದಿಸಿ ಉಳಿದ ಹಣ ತಾಯಿಗೆ ಕೊಟ್ಟರು.
ಅಣ್ಣನಿಗೆ ಸೈಕಲ್ ಕೊಡಿಸಿದ ತಮ್ಮ
ನಾ ಸೋಮೇಶ್ವರ ಅವರಿಗೆ ಪಿಯುಸಿ ಮುಗಿದ ತಕ್ಷಣ ಹಣ ಇರಲಿಲ್ಲ. ಎಂಬಿಬಿಎಸ್ ಮಾಡಬೇಕು ಎಂದು ಕಾಲೇಜಿಗೆ ಅರ್ಜಿಯನ್ನ ಹಾಕಿದ್ದರು. ಇದೇ ವೇಳೆ ಅವರ ಉಪನ್ಯಾಸಕರಾದ ಶ್ರೀನಿವಾಸ್ ಮೂರ್ತಿ, ವಾಸುಕಿ ಸಾರ್ ಹತ್ತು ಸಾವಿರ ರೂಪಾಯಿಯನ್ನು ಎಸ್‌ಬಿಐ ಬ್ಯಾಂಕ್‌ನಲ್ಲಿ ಸಾಲ ತೆಗೆದುಕೊಟ್ಟು ಶ್ಯೂರಿಟಿ ಹಾಕಿದ್ದರು. ಅದೇ ಹತ್ತು ಸಾವಿರ ರೂಪಾಯಿಗೆ ಎಂಬಿಬಿಎಸ್ ಮುಗಿತು ಎಂದು ನಾ ಸೋಮೇಶ್ವರ ತಿಳಿಸಿದ್ದಾರೆ.

ಅದೇ ಹತ್ತು ಸಾವಿರ ರೂಪಾಯಿಯಲ್ಲಿ ಅಣ್ಣ ಅಂಚೆ ಇಲಾಖೆಗೆ ಕೆಲಸಕ್ಕೆ ಸೇರಿದ್ದರಿಂದ 400 ರೂಪಾಯಿಯನ್ನ ಕೊಟ್ಟು ಒಂದು ಸೈಕಲ್‌ನ್ನು ಅಣ್ಣನಿಗೆ ಕೊಡಿಸಿದ್ದರು. ನಾ ಸೋಮೇಶ್ವರ ಅವರಿಗೆ ಡಾಕ್ಟರ್ ಆಗಿ ಪ್ರಾಕ್ಟೀಸ್ ಮಾಡಿದ್ದಕ್ಕಿಂತ ಹೆಚ್ಚಾಗಿ ಸಂಶೋಧನೆ ಮಾಡುವುದೇ ಅತಿ ಹೆಚ್ಚು ಪ್ರಿಯವಾದ ಕೆಲಸವಾಗಿತ್ತು. ಮನುಷ್ಯನ ಮನಸ್ಸಿನಲ್ಲಿ ಆಗುವ ಪ್ರತಿಯೊಂದು ಬದಲಾವಣೆಗಳ ಬಗ್ಗೆ ಸಂಶೋಧನೆ ಮಾಡಬೇಕು ಎಂಬುದೇ ಅವರ ಮಹದಾಸೆಯಾಗಿತ್ತು.
ಡಾಕ್ಟರ್ ಆದ ಮೇಲೆ ಕ್ಲಿನಿಕ್ ಓಪನ್
ನಾ ಸೋಮೇಶ್ವರ ಅವರು ಡಾಕ್ಟರ್ ಆದ ಮೇಲೆ ಬೆಂಗಳೂರಿನಲ್ಲಿ ಒಂದು ಸಣ್ಣ ಕ್ಲಿನಿಕ್ ಓಪನ್ ಮಾಡಿದ್ದರು. ಆದರೆ ಅದನ್ನು ತಿಂಗಳಿನಲ್ಲೇ ಬಂದ್ ಮಾಡುವ ಪರಿಸ್ಥಿತಿ ಉಂಟಾಯಿತು. ಯಾಕೆಂದರೆ ನಾ ಸೋಮೇಶ್ವರ ಅವರ ಬಳಿಗೆ ಬರುತ್ತಿದ್ದವರು ಸರಿಯಾದ ರೀತಿಯಲ್ಲಿ ಫೀಸ್ ಕೊಡುತ್ತಿರಲಿಲ್ಲ. ಸಾಲವನ್ನು ಬರೆಸಿ ಹೋಗುತ್ತಿದ್ದರು. ಸಾಲದ ಮೊತ್ತ ಹೆಚ್ಚಾದ ಕಾರಣ ಬ್ಯಾಂಕ್‌ನಿಂದ ಪಡೆದಿದ್ದ 5000 ಸಾಲವನ್ನು ತೀರಿಸಲು ಆಗದೆ ಕ್ಲಿನಿಕ್ ಕ್ಲೋಸ್ ಮಾಡಿದರು.
ಸ್ನೇಹಿತರ ಸಹಾಯ ನೆನೆದ ಸೋಮೇಶ್ವರ
ಕಾಲೇಜು ದಿನಗಳಲ್ಲಿ ಸ್ನೇಹಿತರು ಮಾಡಿದ ಸಹಾಯವನ್ನ ನಾ ಸೋಮೇಶ್ವರ ವೀಕೆಂಡ್ ವಿತ್ ರಮೇಶ್ ಶೋನಲ್ಲಿ ಮೆಲುಕು ಹಾಕಿದ್ದಾರೆ. ಡಾ. ಇಂದಿರಾ , ಪುರುಷೋತ್ತಮ್ , ಚಂದ್ರಮೌಳಿ, ನಟರಾಜು ಮಾಡಿರುವ ಸಹಾಯವನ್ನು ತಿಳಿಸಿದ್ದಾರೆ. ಇದರ ಜೊತೆಗೆ ಅವರ ಉಪನ್ಯಾಸಕರು ಶಿಕ್ಷಕರು ಮಾಡಿದ ಸಹಾಯಕ್ಕೆ ಮನಸ್ಸು ಪೂರ್ವಕವಾಗಿ ಧನ್ಯವಾದಗಳನ್ನು ತಿಳಿಸಿದ್ದಾರೆ. ನನಗೆ ದುಡ್ಡನ್ನು ಕೊಟ್ಟವರಿಗೆ ನಾನು ಈಗ ವಾಪಸ್ ಕೊಡಲು ಆಗುತ್ತದಾ ಎಂದು ಹೇಳುವ ಮೂಲಕ ಧನ್ಯವಾದ ತಿಳಿಸಿದ್ದಾರೆ.


Click it and Unblock the Notifications











