ವಿಶೇಷ ಚೇತನ ಹುಡುಗಿ ಮದುವೆಯಾಗಲು ನಿರ್ಧರಿಸಿದ್ದ ಪ್ರೇಮ್.. ಆ ಘಟನೆ ನೆನೆದು ಕಣ್ಣೀರು ಹಾಕಿದ್ದೇಕೆ?
ವೀಕೆಂಡ್ ವಿತ್ ರಮೇಶ್ ಸೀಸನ್ 5ನಲ್ಲಿ ಅತಿಥಿಯಾಗಿ ನೆನಪಿರಲಿ ಪ್ರೇಮ್ ಬಂದಿದ್ದಾರೆ. ಅವರ ನೆನಪಿನಾಳದ ಸುಮಧುರ ನೆನಪು, ಬದುಕು, ಮುಖ್ಯವಾದ ವ್ಯಕ್ತಿಗಳು ಪರಿಚಯಿಸುವ ಕೆಲಸ ಈ ಮೂಲಕ ಸಾಗಿದೆ. ಇದೇ ವೇದಿಕೆ ಮೇಲೆ ಅವರ ಬದುಕಿಗೆ ಹತ್ತಿರವಾದಂತ ವ್ಯಕ್ತಿಗಳನ್ನು ಕರೆತಂದು ಒಂದಷ್ಟು ಹಳೆಯ ನೆನಪುಗಳನ್ನು ತರಿಸಿದ್ದಾರೆ ರಮೇಶ್.
ಪ್ರೇಮ್ ಜೂನಿಯರ್ ಆರ್ಟಿಸ್ಟ್ ಆಗಿ ಚಿತ್ರರಂಗಕ್ಕೆ ಕಾಲಿಟ್ಟವರು. ಸದ್ಯ ನೆನಪಿರಲಿ ಪ್ರೇಮ್ ಎಂದೇ ಖ್ಯಾತರಾಗಿದ್ದಾರೆ. ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಸದ್ಯ ಅವರ ಮೊದಲ ಸಿನಿಮಾಗೆ ಅವಕಾಶ ಸಿಕ್ಕಿದ್ದೇಗೆ..? ಪ್ರೀತಿ ಒಪ್ಪಿದ್ದೇಗೆ..? ಎಲ್ಲವೂ ಅನಾವರಣವಾಗಿದೆ.

ತಪ್ಪನ್ನು ಕಂಡು ಹಿಡಿದಿದ್ದ ಜ್ಯೋತಿ
ಲವ್ಲಿ ಸ್ಟಾರ್ ಪ್ರೇಮ್ ಮತ್ತು ಜ್ಯೋತಿ ಅವರದ್ದು ಲವ್ ಮ್ಯಾರೇಜ್ ಅನ್ನೋದು ಎಲ್ಲರಿಗೂ ಗೊತ್ತು. ಲವ್ ಮಾಡುವಾಗ ಆಗಿನ ಕಾಲದಲ್ಲಿ ಫೋನ್, ಮೆಸೇಜ್ ಇರಲಿಲ್ಲ. ಇದ್ದರೂ ಇವತ್ತಿನ ಲೆವೆಲ್‌ಗೆ ಇದ್ದಷ್ಟು ದೊಡ್ಡಮಟ್ಟಕ್ಕೆ ಇರಲಿಲ್ಲ. ಪ್ರೇಮ ಪತ್ರ ಕೊಡುವ ರೂಢಿ ಇತ್ತು. ಪ್ರೇಮ ಪತ್ರದಲ್ಲಿಯೇ ಹುಡುಗಿಯನ್ನು ಇಂಪ್ರೆಸ್ ಮಾಡಬೇಕು. ನಟ ಪ್ರೇಮ್ ಕೂಡ ಜ್ಯೋತಿಯವರನ್ನು ಇಂಪ್ರೆಸ್ ಮಾಡಲೆಂದೇ ಲವ್ ಲೆಟರ್‌ನ ಇಂಗ್ಲಿಷ್‌ನಲ್ಲಿ ಬರೆದಿದ್ದರಂತೆ. ಅದರಲ್ಲಿ ಹೆಚ್ಚು ಕಡಿಮೆ ಜಾಸ್ತಿಯೇ ತಪ್ಪುಗಳಿತ್ತಂತೆ. ಅದನ್ನು ಜ್ಯೋತಿಯವರು ರಿವೀಲ್ ಮಾಡಿದ್ದಾರೆ.
ತಂಗಿಯರ ಜವಾಬ್ದಾರಿ ಇತ್ತು
ಪ್ರೇಮ್ ಅವರಿಗೆ ತನ್ನ ತಂಗಿಯಂದಿರು, ಮನೆಯ ಜವಾಬ್ದಾರಿ ಹೆಚ್ಚಾಗಿತ್ತು. ಆ ಸಮಯದಲ್ಲಿ ಸಿಕ್ಕಂತ ಹುಡುಗಿಯೇ ಜ್ಯೋತಿ. ಮೊದಲಿಗೆ ಸಿಕ್ಕಾಪಟ್ಟೆ ಕಂಡೀಷನ್ ಹಾಕಿದ್ದರಂತೆ ಪ್ರೇಮ್ "ನನಗೆ ತಂಗಿಯರ ಜವಾಬ್ದಾರಿ ಇದೆ. ಅವರಿಗೆ ಮದುವೆ ಮಾಡಬೇಕು. ಈಗ ಲವ್ ಎಲ್ಲಾ ಬೇಡ. ಮೊದಲು ಒಂದೆರೆಡು ವರ್ಷ ಫ್ರೆಂಡ್ಸ್ ಆಗಿ ಇರೋಣಾ. ಆಮೇಲೆ ಮನೆಯವರನ್ನೆಲ್ಲಾ ಒಪ್ಪಿಸಿ ನೋಡೋಣಾ" ಎಂದಿದ್ದರು ಅಂತ ಜ್ಯೋತಿಯವರು ಹೇಳಿದ್ದಾರೆ.

ವಿಶೇಷ ಚೇತನ ಹುಡುಗಿ ಮದುವೆಯಾಗ್ಬೇಕಿದ್ದ ಪ್ರೇಮ್
ಇದೇ ವೇದಿಕೆಯಲ್ಲಿ ಹೊಸ ವಿಷಯ ಹಂಚಿಕೊಂಡ ಪ್ರೇಮ್, "ಮೊದಲು ನನ್ನ ಕುಟುಂಬವನ್ನು ಒಂದು ದಡ ಸೇರಿಸಬೇಕೆಂಬ ಆಸೆ ಸರ್. ಆಮೇಲೆ ಯಾವುದಾದರೂ ವಿಶೇಷ ಚೇತನ ಹುಡುಗಿ ನೋಡಿ ಮದುವೆಯಾಗೋಣಾ ಅಂತ ಇದ್ದೆ. ಜ್ಯೋತಿ ನನ್ನ ಬಾಳಲ್ಲಿ ಬಂದಿದ್ದು ನನ್ನ ಅದೃಷ್ಟ. ಒಂದು ಸಲ ಹಣದ ಅವಶ್ಯಕತೆ ಇತ್ತು. ಪೇಪರ್‌ನಲ್ಲಿ ಏನನ್ನೋ ಸುತ್ತಿಕೊಂಡು ಬಂದು ನನ್ನ ಕೈಗಿಟ್ಟಳು. ತೆಗೆದು ನೋಡಿದರೆ ಮಾಂಗಲ್ಯ ಸರ. ಅವತ್ತೆ ನಾನು ಬದುಕಿರಬಾರದು ಅನಿಸಿಬಿಡ್ತು" ಎಂದು ಕಣ್ಣೀರು ಹಾಕಿದ್ದಾರೆ.
ಜ್ಯೋತಿಗಾಗಿ ಹಾಡುವ ಹಾಡು ಇದು
ಪ್ರೇಮ್ ಯಾವಾಗಲೂ ಜ್ಯೋತಿಯವರ ಬಗ್ಗೆ ಹೆಮ್ಮೆ ಪಡುತ್ತಾರೆ. ಮನೆ, ಸಂಸಾರ, ಮಕ್ಕಳು, ತನ್ನ ಬಗೆಗಿನ ಕಾಳಜಿವಹಿಸುವುದಕ್ಕೆ. ಸದ್ಯ ಪ್ರೇಮ್ ಮತ್ತು ಜ್ಯೋತಿ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಇಬ್ಬರು ಈಗಾಗಲೇ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡಿದ್ದಾರೆ. ಮಗಳು ಸಂತಸ ತಂದುಕೊಟ್ಟರೆ ಮಗ ಐಶ್ವರ್ಯಾ ತಂದುಕೊಟ್ಟ ಎಂಬ ಖುಷಿಯಲ್ಲಿದ್ದಾರೆ ಪ್ರೇಮ್. ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲೂ ಅದನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಹೆಂಡತಿಗೆ ಯಾವಾಗಲೂ ಹಾಡುವ "ನೂರು ಜನ್ಮಕೂ ನೂರಾರು ಜನ್ಮಕೂ" ಹಾಡನ್ನು ವೇದಿಕೆ ಮೇಲೆ ಮತ್ತೊಮ್ಮೆ ಹಾಡಿದ್ದಾರೆ.


Click it and Unblock the Notifications











