Weekend With Ramesh: "ಚಿಪ್ಸ್, ಕುರ್ಕುರೆ ಇಲ್ಲದೆ ಮೊಸರನ್ನನೂ ತಿನ್ನದ ರಮೇಶ್ ಅರವಿಂದ್ ಇವನ್ನೆಲ್ಲ ಬಿಟ್ಟಿದ್ದೇಕೆ?

By ಫಿಲ್ಮಿಬೀಟ್ ಡೆಸ್ಕ್

ಕಿರುತೆರೆಯ ಅಚ್ಚುಮೆಚ್ಚಿನ ಕಾರ್ಯಕ್ರಮ 'ವೀಕೆಂಡ್ ವಿತ್ ರಮೇಶ್'. ಕೋವಿಡ್ ಕಾರಣಗಳಿಂದ ಈ ಜನಪ್ರಿಯ ಶೋ ಅನ್ನೇ ನಿಲ್ಲಿಸಲಾಗಿತ್ತು. ಈಗ ಸೀಸನ್ 5 ಆರಂಭ ಆಗಿದೆ. ಸಾಧಕರ ಸೀಟ್‌ನಲ್ಲಿ ಗಣ್ಯರನ್ನು ನೋಡುವುದಕ್ಕೆ ಅಭಿಮಾನಿಗಳು ತುದಿಗಾಲ್ಲಿ ನಿಂತಿದ್ದಾರೆ.

ಮೋಹಕತಾರೆ ರಮ್ಯಾ, ಇಂಡಿಯನ್ ಮೈಕಲ್‌ ಜಾಕ್ಸನ್ ಪ್ರಭುದೇವ, ವೈದ್ಯ ಡಾ.ಮಂಜುನಾಥ್ ಹಾಗೂ ಹಿರಿಯ ನಟ ದತ್ತಣ್ಣ ಈಗಾಗಲೇ ಸಾಧಕರ ಸೀಟ್‌ನಲ್ಲಿ ಬಂದು ಕೂತಿದ್ದಾರೆ. ತಮ್ಮ ಬದುಕಿನ ಸುಂದರ ಜರ್ನಿಯನ್ನು ವೀಕ್ಷಕರಿಗೆ ತಿಳಿಸಿಕೊಟ್ಟಿದ್ದಾರೆ. ಸದಾ ಪಾಸಿಟಿವ್ ಸಂದೇಶ ನೀಡುವ ರಮೇಶ್ ಅರವಿಂದ್ ಸಾಧಕರ ಮುಂದೆ ಮತ್ತಷ್ಟು ಆಕ್ಟಿವ್ ಆಗಿದ್ದಾರೆ.

Weekend With Ramesh Season 5: Ramesh Aravind Reveals Why He Stopped Eating Chips, Kurkure and Sugar

ಸದಾ ಲವಲವಿಕೆಯಿಂದ ಇರುವ ರಮೇಶ್ ಅರವಿಂದ್ ಎನರ್ಜಿಯ ಗುಟ್ಟೇನು? ಎವರ್‌ಗ್ರೀನ್ ಲುಕ್ ಅನ್ನು ಹಾಗೇ ಉಳಿಸಿಕೊಳ್ಳುವುದಕ್ಕೆ ಏನೇನು ಮಾಡುತ್ತಾರೆ? ಅನ್ನೋ ಸೀಕ್ರೆಟ್‌ ಅನ್ನು ಈಗ ಬಿಟ್ಟುಕೊಟ್ಟಿದ್ದಾರೆ. ಅಷ್ಟಕ್ಕೂ ರಮೇಶ್ ಅರವಿಂದ್ ಪಾಸಿಟಿವ್ ಎನರ್ಜಿಯ ಅಸಲಿ ಗುಟ್ಟೇನು? ತಿಳಿಯಲು ಮುಂದೆ ಓದಿ.

"ಮೊಸರನ್ನಕ್ಕೂ ಚಿಪ್ಸ್,ಕುರ್ಕುರೆ ಬೇಕಿತ್ತು"

ರಮೇಶ್ ಅರವಿಂದ್ ವಯಸ್ಸು 58 ವರ್ಷ. ಆದರೆ, ಎಲ್ಲರಿಗೂ ರಮೇಶ್ 60 ರ ಆಸುಪಾಸಿನಲ್ಲಿ ಇದ್ದಾರಾ? ಅನ್ನೋ ಅನುಮಾನ ಬಾರದೆ ಇರುವುದಿಲ್ಲ. ಯಾಕಂದ್ರೆ ಅವರ ಪರ್ಸನಾಲಿಟಿನೇ ಹಾಗಿದೆ. ಇನ್ನೂ ನಲವತ್ತರ ಆಸುಪಾಸಿನಲ್ಲಿ ಇರಬಹುದೇನೋ ಅನ್ನೋ ಭಾವ. ಆ ಮಟ್ಟಿಗೆ ತಮ್ಮ ದೇಹದ ಸೌಂದರ್ಯವನ್ನು ಕಾಪಾಡಿಕೊಂಡು ಬಂದಿದ್ದಾರೆ.

ರಮೇಶ್ ಅರವಿಂದ್‌ಗೆ ಚಿಪ್ಸ್, ಕುರ್ಕುರೆ, ಮಿಕ್ಷರ್ ಅಂದರೆ ಬಲು ಪ್ರೀತಿ. ಮೊದಲಿನಿಂದಲೂ ಊಟಕ್ಕೆ ಚಿಪ್ಸ್, ಮಿಕ್ಷರ್ ಇರಲೇಬೇಕಿತ್ತು. "ಇತ್ತೀಚೆಗೆ ಟ್ರೈ ಮಾಡಿದ್ದು ಅಂದ್ರೆ, ಚಿಪ್ಸ್, ಮಿಕ್ಚರ್, ಕೊರ್ಕೊರೆ ಇಲ್ಲದೆ ನಾನು ತಿನ್ನುತ್ತಲೇ ಇರಲಿಲ್ಲ. ಪ್ರತಿ ಊಟದಲ್ಲೂ, ಅದು ಮೊಸರನ್ನ ಆಗಿದ್ದರೂ ಚಿಪ್ಸ್‌ ಫ್ರೈಡ್ ಐಟಂ ತಿನ್ನುತ್ತಲೇ ಇದ್ದೆ." ಎಂದಿದ್ದಾರೆ. ಆದರೆ, ಇತ್ತೀಚೆಗೆ ಇದೆಲ್ಲದಕ್ಕೂ ಬ್ರೇಕ್ ಕೊಟ್ಟಿದ್ದಾರೆ. ಅಲ್ಲದೆ ಸಕ್ಕರೆ ತಿನ್ನುವುದಕ್ಕೂ ಬ್ರೇಕ್ ಹಾಕಿದ್ದಾಗಿ ಹೇಳಿಕೊಂಡಿದ್ದಾರೆ.

ರಮೇಶ್ ಅರವಿಂದ್‌ಗೆ ಅಣ್ಣನೇ ಸ್ಪೂರ್ತಿ

'ವೀಕೆಂಡ್ ವಿತ್ ರಮೇಶ್' ಆರಂಭಕ್ಕೂ ಮುನ್ನವೇ ರಮೇಶ್ ಅರವಿಂದ್ ಚಿಪ್ಸ್, ಕುರ್ಕುರೆ ತಿನ್ನುವುದನ್ನು ಬಿಟ್ಟಿದ್ದರು. ಈ ನಿರ್ಧಾರಕ್ಕೆ ಕಾರಣ ಮತ್ಯಾರೂ ಅಲ್ಲ ರಮೇಶ್ ಅರವಿಂದ್ ಅವರ ಸ್ವಂತ ಅಣ್ಣ.

"ನಮ್ಮ ಅಣ್ಣ ಹೇಳಿದ ಒಂದು ಸಲ. ಅವನು ಚಿಪ್ಸ್ ಬಿಟ್ಟುಬಿಟ್ಟಿದ್ದಾನೆ. ಶುಗರ್ ಬಿಟ್ಟುಬಿಟ್ಟಿದ್ದಾನೆ ಅಂತ. ಎಲ್ಲಾ ರೀತಿಯಲ್ಲೂ ಆರೋಗ್ಯ ಚೆನ್ನಾಗಿದೆ ಅಂತ ಹೇಳಿದ. ಕಳೆದ ಒಂದೂವರೆ ತಿಂಗಳಿಂದ ನಾನೇ ಟ್ರೈ ಮಾಡಿದ್ದೇನೆ. ನನ್ನ ಆರೋಗ್ಯದಲ್ಲಿ ಬಹಳ ಒಳ್ಳೆಯ ಸುಧಾರಣೆ ಕಂಡಿದೆ. ಸ್ವಲ್ಪ ತೂಕ ಕಡಿಮೆ ಆದಂತಿತ್ತು. ಅದಕ್ಕೆ ಮತ್ತೆ ಚಿಪ್ಸ್ ತಿನ್ನಲು ಆರಂಭಿಸಿದ್ದೇನೆ. ನಾನು ಆತರ ಟ್ರೈ ಮಾಡುತ್ತಲೇ ಇರುತ್ತೇನೆ." ಎಂದು ತಮ್ಮ ಸೀಕ್ರೆಟ್ ಬಿಟ್ಟುಕೊಟ್ಟಿದ್ದಾರೆ.

ಸ್ಕೈ ಡೈವಿಂಗ್ ಥ್ರಿಲ್ಲಿಂಗ್ ಅನುಭವ

ರಮೇಶ್ ಅರವಿಂದ್ ಯಾವಾಗಲೂ ಆಕ್ಟಿವ್ ಆಗಿ ಇರುತ್ತಾರೆ. ಏನಾದರೂ ಒಂದು ಮಾಡುತ್ತಲೇ ಇರುತ್ತಾರೆ. ಇತ್ತೀಚೆಗೆ ರಮೇಶ್ ಅರವಿಂದ್ 15 ಸಾವಿರ ಅಡಿಯಿಂದ ಜಿಗಿದಿದ್ದರು. ಇದು ಅವರ ಬದುಕಿನ ಥ್ರಿಲ್ಲಿಂಗ್ ಅನುಭವ ಎಂದು ಹೇಳಿಕೊಂಡಿದ್ದಾರೆ.

"ನಾನು ನನ್ನ ಶ್ರೀಮತಿಯವರು ನ್ಯೂಜಿಲ್ಯಾಂಡ್‌ಗೆ ಹೋಗಿದ್ದೆವು. ನಾನು ಸ್ಕೈ ಡೈವಿಂಗ್ ಮಾಡಿರಲಿಲ್ಲ. 15 ಸಾವಿರ ಅಡಿಯಿಂದ, ಏರೋಪ್ಲೇನ್‌ನಿಂದ ಧುಮುಕಿದ್ದು ಒಳ್ಳೆ ಅನುಭವ. ಮೊದಲಿಗೆ ಫ್ರೀ ಫಾಲ್ ಅಂತ ಮಾಡುತ್ತಾರೆ. ಪ್ಯಾರಾಚ್ಯೂಟ್ ಓಪನ್ ಆಗಿರುವುದಿಲ್ಲ. ಸುಮ್ಮನೆ ಬೀಳುತ್ತಿರುತ್ತೇವೆ ಕೆಳಗಡೆ. ಅದು ಬಹಳ ಬಹಳ ಥ್ರಿಲ್ಲಿಂಗ್ ಅಂತ ಅನಿಸಿತ್ತು. ಅದನ್ನು ಮಾಡುವಂತೆ ಎಲ್ಲರಿಗೂ ಸಲಹೆ ನೀಡುತ್ತೇನೆ. ಅಂತಹದ್ದೊಂದು ಅನುಭವ ನನ್ನ ಲೈಫ್‌ನಲ್ಲಿ ಆಗೇ ಇಲ್ಲ." ಎಂದಿದ್ದಾರೆ ರಮೇಶ್ ಅರವಿಂದ್.

More from Filmibeat

English summary
Weekend With Ramesh Season 5: Ramesh Aravind Reveals Why He Stopped Eating Chips, Kurkure and Sugar, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X