Weekend with Ramesh:"ಶಂಕರ್ ನಾಗ್ ಇದ್ದಿದ್ರೆ ಕರ್ನಾಟಕದಲ್ಲಿ ಸ್ಲಂಗಳೇ ಇರುತ್ತಿರಲಿಲ್ಲ" -'ಸಿಹಿಕಹಿ' ಚಂದ್ರು
ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಈ ವಾರ ಸಿಹಿಕಹಿ ಚಂದ್ರು ಅತಿಥಿಯಾಗಿ ಬಂದಿದ್ದಾರೆ. ಸಿಹಿಕಹಿ ಚಂದ್ರು ಅವರ ನೆನಪಿನ ಬುತ್ತಿಯಲ್ಲಿ ಒಂದಿಷ್ಟಲ್ಲ ಬಹಳ ನೆನಪುಗಳು ಇದೆ. ಅದರಲ್ಲೂ ಶಂಕರ್ ನಾಗ್ ಅವರ ಜೊತೆಗೆ ಒಡನಾಟವನ್ನು ಹೊಂದಿದ್ದವರು. ಸದ್ಯ ವೀಕೆಂಡ್ ವಿತಚ ರಮೇಶ್ ಕಾರ್ಯಕ್ರಮದಲ್ಲಿ ಆ ನೆನಪುಗಳನ್ನು ಮೆಲುಕು ಹಾಕಿದ್ದಾರೆ.
ಪ್ರೋಮೋ ಬಿಡುತ್ತಿದ್ದಂತೆ ಅಭಿಮಾನಿಗಳೆಲ್ಲಾ ಖುಷಿಯಾಗಿದ್ದರು. ಶಂಕರ್ ನಾಗ್ ಅವರ ಕನಸು ಎಂತದ್ದು ಎಂಬುದು ಈಗಾಗಲೇ ಎಲ್ಲರಿಗೂ ತಿಳಿದ ವಿಚಾರವೂ ಹೌದು. ಆದರೆ, ಅವರ ಇನ್ನಷ್ಟು ಕನಸುಗಳು ಗೊತ್ತಾದ ಮೇಲೆ ಜನ ಬೇಸರ ಮಾಡಿಕೊಂಡಿದ್ದಾರೆ. ಬದುಕಿದ್ದರೆ ಇನ್ನಷ್ಟು ಒಳ್ಳೆಯದೇ ಆಗುತ್ತಿತ್ತು ಎಂದು ಚಂದ್ರು ಅಭಿಪ್ರಾಯ ಪಟ್ಟಿದ್ದಾರೆ.

ನೋಡಿ ಸ್ವಾಮಿ ನಾವಿರೋದೆ ಹೀಗೆ
ಶಂಕರ್ ನಾಗ್ ಅವರ ಬಗ್ಗೆ ಮಾತನಾಡಿರುವ ಸಿಹಿ ಕಹಿ ಚಂದ್ರು,"ಶಂಕರ್ ನಾಗ್ ಜೊತೆಗೆ ಸಂಕೇತ್ ಶುರು ಮಾಡಿದವರು. ಒಂದು ನಾಟಕ ಮಾಡಿದ್ರು. ಅದು ನೋಡಿ ಸ್ವಾಮಿ ನಾವಿರೋದೆ ಹೀಗೆ. ಆ ನಾಟಕದ ರಿಹರ್ಸಲ್‌ಗೆ ಕರೆದುಕೊಂಡು ಹೋದ್ರು. ನೋಡುದ್ರೆ ಶಂಕರ್ ನಾಗ್ ಇದ್ದಾರೆ. ಅಲ್ಲಿ ಒಂದು ಬಾಂಧವ್ಯ ಬೆಳೆಯಿತು. ಅನಂತ್ ನಾಗ್ ಮತ್ತೆ ಶಂಕರ್ ನಾಗ್ ಅವರನ್ನ ನೋಡಿದ್ರೆ ಏನೋ ಒಂದು ಆನಂದ, ಖುಷಿ. ಅವರು ವರ್ಕ್ ಮಾಡ್ತಾ ಇದ್ದಂತ ಶೈಲಿ. ನಮ್ಗೆಲ್ಲಾ ಅವರೇ ಗುರುಗಳು. ಶಂಕರ್ ನಾಗ್ ಅವರು ಹಾಗೇ ಕ್ಲೋಸ್ ಆಗುವುದಕ್ಕೆ ಶುರು ಮಾಡಿದ್ರು. ಶಂಕರ್ ನಾಗ್ ಜೊತೆಗೆ ಸಿನಿಮಾ ಕೆಲಸವನ್ನು ಒಟ್ಟೊಟ್ಟಿಗೆ ಮಾಡಿದೆವು" ಎಂದು ಶಂಕರ್‌ನಾಗ್ ಅವರನ್ನು ನೆನಪಿಸಿಕೊಂಡಿದ್ದಾರೆ.
ಮಾಲ್ಗುಡಿ ಡೇಸ್ ಆಗಿದ್ದು ಸುಲಭವಲ್ಲ
"ಮಾಲ್ಗುಡಿ ಡೇಸ್‌ನಲ್ಲಿ ಒಟ್ಟಿಗೆ ಕೆಲಸ ಮಾಡಿದೆವು. ಇಂಗ್ಲಿಷ್ ಮತ್ತೆ ಹಿಂದಿ ಡಬ್ ಮಾಡುವುದಕ್ಕೆ ಆಗ ಜಾಸ್ತಿ ಜನ ಇರಲಿಲ್ಲ. ನಾನು ಡಬ್ ಮಾಡ್ತಿದ್ದೆ. ಒಟ್ಟೊಟ್ಟಿಗೆ ಮೂರ್ನಾಲ್ಕು ಜನಕ್ಕೆ ವಾಯ್ಸ್ ಕೊಡ್ತಾ ಇದ್ದೆ. ಆಗ ಸುಮ್ನೆ ತಮಾಷೆಗೆ ಸರ್ ಇದಕ್ಕೆ ವಾಯ್ಸ್ ನಂಬರ್ 32 ಹಾಕ್ಲಾ ಅಂದಿದ್ದೆ. ಹಾಕು ನೋಡೋಣಾ ಅಂದೋರು, ಬೇಡ ಚೇಂಜ್ ಅನ್ನೋರು. ಟಕ್ ಟಕ್ ಅಂತ ಟೇಕ್ ಟೇಕ್ ಅನ್ನೋರು. ಮಾಲ್ಗುಡಿ ಡೇಸ್ ಹಗಲು ರಾತ್ರಿ ಡಬ್ಬಿಂಗ್ ಮಾಡ್ತಾ ಇದ್ವಿ. ಅದರ ಟೈಮ್ ಹೋಗಿದ್ದೆ ಗೊತ್ತಾಗಿಲ್ಲ. ಆಮೇಲೆ ಸಿನಿಮಾದಲ್ಲಿ ಆಕ್ಟ್ ಮಾಡುವುದಕ್ಕೆ ಶುರು ಮಾಡಿದ್ಮೇಲೆ ಇನ್ನಷ್ಟು ಕ್ಲೋಸ್ ಆದ್ವಿ.

ಶಂಕರ್ ನಾಗ್ ಮನೆ ಹೇಗಿತ್ತು..?
"ಒಂದಿನ ನರಸಿಂಹ ಅಂತ ಸಿನಿಮಾ ಮಾಡ್ತಾ ಇದ್ವಿ. ಆಗ ಒಂದು ಗಂಟೆ ಆದ್ಮೇಲೆ ಇಬ್ಬರಿಗೂ ಕೆಲಸ ಇರ್ಲಿಲ್ಲ. ಅವ್ರ ಒಂದು ಮೆಡೋರ್ ಗಾಡಿಗೆ ಕರೆದುಕೊಂಡು ಹೋದ್ರು. ನಾನು ಒಂದು ಮನೆ ಕಟ್ಟಿದ್ದೀನಿ ಬಾ ತೋರಿಸ್ತೀನಿ ಅಂದ್ರು. ನಾನು ಅಂದುಕೊಂಡೆ ದೊಡ್ಡ ಬಂಗಲೆ ಕಟ್ಟಿರ್ತಾರೆ ಅಂತ. ಆದ್ರೆ ಅಲ್ಲಿ ಹೋಗಿ ನೋಡಿದ್ರೆ ಒಂದು ಪುಟಾಣಿ ಒಂದು ಬೆಡ್ ರೂಮ್ ಹೌಸ್. ಆ ಟೆಕ್ನಾಲಕಜಿ ಬಂದು ಜರ್ಮನ್‌ರದ್ದು. ಇಲ್ಲಿ ತಂದ್ದಂತಹ ಒಂದು ಮಾಡೆಲ್ ಹೌಸ್ ಕಟ್ಟಿದ್ರು. ನಂಗೆ ಕೇಳುದ್ರು ಹೇಗಿದೆ ಮನೆ ಅಂತ".
ಶಂಕರ್ ನಾಗ್ ಇದ್ದಿದ್ರೆ ಸ್ಲಂ ಇರ್ತಾ ಇರ್ಲಿಲ್ಲ
"ಆ ಮನೆ ಕಟ್ಟೋಕೆ ಆಗಿದ್ದು ಕೇವಲ ಎರಡು ದಿನ. ಒಂದು ಮನೆಗೆ ಹದಿನೈದು ಸಾವಿರ ಆಗುತ್ತದೆ. ನನ್ನ ಗುರಿ ಏನು ಅಂದ್ರೆ, ಕರ್ನಾಟಕದ ಸ್ಲಂಗಳಲ್ಲಿರುವ ಗುಡಿಸಲುಗಳನ್ನೆಲ್ಲಾ ತೆಗೆದು ಈ ರೀತಿಯ ಮನೆ ಕಟ್ಟಿಕೊಡಬೇಕು. ಸರ್ಕಾರದಿಂದ ಹತ್ತು ಸಾವಿರ ಸಬ್ಸಿಡಿಗೆ ಓಡಾಡ್ತಾ ಇದ್ದೀನಿ. ಅದು ಆಗಿಬಿಟ್ರೆ ಕರ್ನಾಟಕದಲ್ಲಿ ಸ್ಲಂಗಳು ಇರಲ್ಲ ಅಂತ ಹೇಳಿದ್ದರು" ಎಂದು ಶಂಕರ್‌ನಾಗ್ ಅವರನ್ನು ನೆನಪಿಸಿಕೊಂಡಿದ್ದಾರೆ.


Click it and Unblock the Notifications











