Weekend with Ramesh: ಹಂಸಲೇಖ 4 ಸೀಸನ್‌ನಿಂದ ಯಾಕೆ ಬರ್ತಿಲ್ಲ? ಸಾಧಕರ ಸೀಟ್‌ನಲ್ಲಿ ಕೂರೋದು ಯಾವಾಗ?

ಕನ್ನಡ ಕಿರುತೆರೆಯ ಜನಪ್ರಿಯ ಟಾಕ್ ಶೋ ವೀಕೆಂಡ್ ವಿತ್ ರಮೇಶ್ 5ನೇ ಸೀಸನ್ ಯಶಸ್ವಿಯಾಗಿ ನಡೀತಿದೆ. ಈಗಾಗಲೇ 90ಕ್ಕೂ ಅಧಿಕ ಸಾಧಕರ ಸ್ಫೂರ್ತಿದಾಯಕ ಕಥೆಯನ್ನು ವೀಕ್ಷಕರು ವೀಕೆಂಡ್‌ಗಳಲ್ಲಿ ಕೇಳಿದ್ದಾರೆ. ಸಿನಿಮಾ ಮಾತ್ರವಲ್ಲದೇ ವಿವಿಧ ಕ್ಷೇತ್ರಗಳ ಸಾಧಕರು ಸಾಧಕರ ಸೀಟ್‌ನಲ್ಲಿ ಕೂತಿದ್ದಾರೆ. ಆದರೆ ನಾದಬ್ರಹ್ಮ ಸಂಗೀತ ನಿರ್ದೇಶಕ ಹಂಸಲೇಖ ಮಾತ್ರ ಇನ್ನು ಕಾರ್ಯಕ್ರಮಕ್ಕೆ ಬಂದಿಲ್ಲ.

ಹೌದು ಅಚ್ಚರಿ ಅನ್ನಿಸಿದರೂ ಇದು ನಿಜ. 2014ರಲ್ಲಿ ಪವರ್ ಸ್ಟಾರ್‌ ಪುನೀತ್ ರಾಜ್‌ಕುಮಾರ್ ಅವರ ಸಾಧನೆಯ ಕಥೆಯೊಂದಿಗೆ ಈ ಶೋ ಶುರುವಾಯಿತು. ಇಲ್ಲಿಂದ ಇಲ್ಲಿಯವರೆಗೆ ನೂರಕ್ಕೂ ಅಧಿಕ ಎಪಿಸೋಡ್‌ಗಳಲ್ಲಿ ಸಾಕಷ್ಟು ಸಾಧಕರ ಜೀವನ ಕಥೆಗಳು ಅನಾವರಣವಾಗಿದೆ. ಆದರೆ ಹಂಸಲೇಖ ಮಾತ್ರ ಇನ್ನು ಬಂದಿಲ್ಲ. ಜೀ ಕನ್ನಡ ವಾಹಿಯಲ್ಲಿ ಪ್ರಸಾರವಾಗುವ ಸರಿಗಮಪ ಕಾರ್ಯಕ್ರಮದ ಮಹಾ ಗುರುಗಳಾಗಿ ಹಂಸಲೇಖ ಕಾಣಿಸಿಕೊಂಡಿದ್ದಾರೆ. ಆದರೆ ವೀಕೆಂಡ್‌ ಶೋಗೆ ಮಾತ್ರ ಬಂದಿಲ್ಲ.

Weekend with Ramesh season - 5 : Zee Kannada Planning for Hamsalekhas Specila Episode

ಪ್ರತಿ ಬಾರಿ ಹೊಸ ಸೀಸನ್ ಶುರುವಾದಾಗ ಯಾರೆಲ್ಲಾ ಅತಿಥಿಗಳು ಬರ್ತಾರೆ ಎನ್ನುವ ಚರ್ಚೆ ನಡೆಸುತ್ತದೆ. ವೀಕ್ಷಕರೇ ಕೆಲವರು ಸಾಧಕರನ್ನು ವೀಕೆಂಡ್‌ ಶೋನಲ್ಲಿ ನೋಡಲು ಬಯಸುವುದಾಗಿ ಹೇಳುತ್ತಿರುತ್ತಾರೆ. ಸಲಹೆ ನೀಡುತ್ತಿರುತ್ತಾರೆ. 5 ಸೀಸನ್ ಶುರುವಾದಾಗಲೂ ಇಂತದ್ದೆ ಸಲಹೆ, ಸೂಚನೆಗಳು ಸಿಕ್ಕಿತ್ತು. ಇದೆಲ್ಲದರ ನಡುವೆ ಹಂಸಲೇಖ ಇನ್ನು ಯಾಕೆ ಸಾಧಕರ ಸೀಟ್‌ನಲ್ಲಿ ಕೂತಿಲ್ಲ ಎನ್ನುವ ಅನುಮಾನವೂ ಕೆಲವರನ್ನು ಕಾಡುತ್ತಿದೆ. ಕನ್ನಡ ಸಂಗೀತ ಕ್ಷೇತ್ರಕ್ಕೆ, ಚಿತ್ರರಂಗಕ್ಕೆ ಅವರ ಕೊಡುಗೆ ಮರೆಯಲು ಸಾಧ್ಯವಿಲ್ಲ.

100ನೇ ಸಾಧಕರಾಗಿ ಹಂಸಲೇಖ?

ಈಗಾಗಲೇ 96 ಜನ ಸಾಧಕರು ವೀಕೆಂಡ್‌ ವಿತ್ ರಮೇಶ್ ಕಾರ್ಯಕ್ರಮಕ್ಕೆ ಹಾಜರಾಗಿದ್ದಾರೆ. ಅವರಿಗೆ ತಮ್ಮ ಜೀವನವನ್ನು ರಿವೈಂಡ್ ಮಾಡಿ ತೋರಿಸಲಾಗಿದೆ. ಈ ವಾರ ಚಿತ್ರ ಸಾಹಿತಿ ವಿ. ನಾಗೇಂದ್ರ ಪ್ರಸಾದ್ ಸಾಧಕರ ಸೀಟ್‌ನಲ್ಲಿ ಕೂತಿದ್ದಾರೆ. ಇದೇ ವೇಳೆ ಫೋನ್ ಮಾಡಿ ಹಂಸಲೇಖ ಮಾತನಾಡಿದ್ದಾರೆ. ಈ ವೇಳೆ ತಾವು ಕಾರ್ಯಕ್ರಮಕ್ಕೆ ಬರುವ ಮಾತು ಬಂತು. ರಮೇಶ್ ಬಹಳಷ್ಟು ಬಾರಿ ಕೇಳಿದ್ದಾರೆ ಎಂದು ಹಂಸಲೇಖ ಹೇಳಿದ್ದಾರೆ. ಕೂಡಲೇ ರಮೇಶ್, ಸರ್ ಈ ಬಾರಿ ಬರಬೇಕು, ಎಂದಿದ್ದು ಬಂದೇ ಬರುತ್ತೇನೆ ಎಂದು ನಾದಬ್ರಹ್ಮ ಹೇಳಿದ್ದಾರೆ.

ಹಂಸಲೇಖ ಕುರಿತು ವಿಶೇಷ ಕಾರ್ಯಕ್ರಮ?

ಇನ್ನು ಹತ್ತು ಹಲವು ವಿಶೇಷ ಕಾರ್ಯಕ್ರಮಗಳನ್ನು ಜೀ ಕನ್ನಡ ವಾಹಿನಿ ವೀಕ್ಷಕರಿಗೆ ನೀಡಿದೆ. ಹಂಸಲೇಖ ಸಾಧನೆ ಬಗ್ಗೆ ಎಲ್ಲರಿಗೂ ಗೊತ್ತೇಯಿದೆ. ಕೇವಲ ಒಂದು ಎಪಿಸೋಡ್, ಎರಡು ಎಪಿಸೋಡ್‌ಗೆ ಮುಗಿಯುವಂತದ್ದಲ್ಲ. ಹಂಸಲೇಖ ಅವರನ್ನೇ ಕೇಂದ್ರವಾಗಿಟ್ಟುಕೊಂಡು ವಾಹಿನಿ ವಿಶೇಷ ಕಾರ್ಯಕ್ರಮ ಪ್ಲ್ಯಾನ್ ಮಾಡುತ್ತಿದೆ ಎನ್ನುವ ಗುಸುಗುಸು ಕೂಡ ಕೇಳಿಬಂದಿತ್ತು. ಅದೇ ಕಾರಣಕ್ಕೆ ವೀಕೆಂಡ್ ವಿತ್ ರಮೇಶ್ ಶೋಗೆ ಆಹ್ವಾನಿಸುತ್ತಿಲ್ಲ ಎನ್ನಲಾಗಿತ್ತು.

Weekend with Ramesh season - 5 : Zee Kannada Planning for Hamsalekhas Specila Episode

ಕೆಲವರನ್ನು ಕರೆಸಲು ಸಾಧ್ಯವಾಗುತ್ತಿಲ್ಲ

ಕ್ರಿಕೆಟಿಗ ರಾಹುಲ್ ದ್ರಾವಿಡ್ ಸೇರಿದಂತೆ ಹಲವು ಸಾಧಕರನ್ನು ವೀಕೆಂಡ್ ಶೋಗೆ ಕರೆಸುವ ಪ್ರಯತ್ನ ನಡೆಯುತ್ತಲೇ ಇದೆ. ಒಂದು ಸಾಧಕರು ಕಾರ್ಯಕ್ರಮಕ್ಕೆ ಬರಲು ಒಪ್ಪಬೇಕು, ಒಂದಿಡೀ ದಿನ ಸಮಯ ಕೊಡಬೇಕು. ಅದೇ ದಿನ ಅವರ ಕುಟುಂಬಸ್ಥರು, ಆಪ್ತರು ಚಿತ್ರೀಕರಣಕ್ಕೆ ಬರಬೇಕು, ಅದಕ್ಕೂ ಮುನ್ನ ಅವರ ಬಗ್ಗೆ ರಿಸರ್ಚ್ ಟೀಂ ಮಾಹಿತಿ ಕಲೆ ಹಾಕಬೇಕು. ಇದೆಲ್ಲವೂ ಒಟ್ಟುಗೂಡಿದ ನಂತರವೇ ಸಾಧಕರನ್ನು ಶೋನಲ್ಲಿ ನೋಡಲು ಸಾಧ್ಯ. ರಾಹುಲ್ ದ್ರಾವಿಡ್ ಸೇರಿದಂತೆ ಸಾಕಷ್ಟು ಸಾಧಕರನ್ನು ಕರೆಸಲು ಜೀ ವಾಹಿನಿ ಪ್ರಯತ್ನಿಸುತ್ತಲೇ ಇದೆ. ಆದರೆ ಅನಿವಾರ್ಯ ಕಾರಣಗಳಿಂದ ಸಾಧ್ಯವಾಗುತ್ತಿಲ್ಲ.

ಹಂಸಲೇಖ ಎಪಿಸೋಡ್‌ಗಾಗಿ ಕಾತರ

ಒಟ್ನಲ್ಲಿ ಕನ್ನಡ ವೀಕ್ಷಕರು ನಾದಬ್ರಹ್ಮ ಹಂಸಲೇಖ ಅವರ ಎಪಿಸೋಡ್‌ಗಾಗಿ ಕಾಯುತ್ತಿದ್ದಾರೆ. ಈ ಬಾರಿ ಬರ್ತೀನಿ ಎಂದು ಅವರು ಹೇಳಿದ್ದಾರೆ. ಕಾರ್ಯಕ್ರಮಕ್ಕೆ 100ನೇ ಅತಿಥಿಯಾಗಿ ನಾದಬ್ರಹ್ಮ ಬರುವ ಸಾಧ್ಯತೆ ದಟ್ಟವಾಗಿದೆ. ಕಾದು ನೋಡಬೇಕಿದೆ.

More from Filmibeat

English summary
Weekend with Ramesh season - 5 : Zee Kannada Planning for Hamsalekha's Specila Episode. he could attend 100th guest in Show. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X