ಈ ವಾರ 'ವೀಕೆಂಡ್ ವಿತ್ ರಮೇಶ್' ಪ್ರಸಾರ ಆಗೋಲ್ಲ
Recommended Video
ಪ್ರತಿ ವಾರಾಂತ್ಯ ಪ್ರಸಾರ ಆಗುವ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮ ಈ ವಾರ ಪ್ರಸಾರ ಆಗುವುದಿಲ್ಲ. ಯಾಕೆ, ಏನು ಎನ್ನುವ ಕುತೂಹಲ ಇದ್ದರೆ ಹಾಗೆ ಮುಂದೆ ಓದಿ..
'ವೀಕೆಂಡ್ ವಿತ್ ರಮೇಶ್' ಶನಿವಾರ ಹಾಗೂ ಭಾನುವಾರ ರಾತ್ರಿ 9.30ಕ್ಕೆ ಪ್ರಸಾರ ಆಗುತ್ತಿತ್ತು. ಆದರೆ, ಈ ವಾರ ಈ ಕಾರ್ಯಕ್ರಮಕ್ಕೆ ರಜೆ ನೀಡಲಾಗಿದೆ. ಈ ಸಮಯದಲ್ಲಿ ಬೇರೆ ಬೇರೆ ಕಾರ್ಯಕ್ರಮಗಳು ಪ್ರಸಾರ ಆಗಲಿದೆ.
ಶನಿವಾರ 'ಸರಿಗಮಪ ಸೀಸನ್ 16' ಕಾರ್ಯಕ್ರಮದ ಮಹಾ ಸಂಚಿಕೆ ಪ್ರಸಾರ ಆಗುತ್ತಿದೆ. ಇನ್ನು ಭಾನುವಾರ ಪುನೀತ್ ರಾಜ್ ಕುಮಾರ್ ನಟನೆಯ 'ನಟ ಸಾರ್ವಭೌಮ' ಸಿನಿಮಾ ಪ್ರಸಾರ ಮಾಡಲಾಗುತ್ತಿದೆ.

'ನಟ ಸಾರ್ವಭೌಮ' ಸಿನಿಮಾ ಭಾನುವಾರ 7 ಗಂಟೆಗೆ ಶುರು ಆಗಲಿದೆ. ಮೊದಲ ಬಾರಿಗೆ ಸಿನಿಮಾ ಪ್ರಸಾರ ಆಗುತ್ತಿದ್ದು, ಜಾಹಿರಾತುಗಳ ಜೊತೆಗೆ ಸಿನಿಮಾ ಮುಗಿಯಲು ಸುಮಾರು 10 ಗಂಟೆ ಆಗಬಹುದು.
ಸೋ, ಈ ಕಾರಣಗಳಿಂದ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮವನ್ನು ಈ ವಾರ ಪ್ರಸಾರ ಮಾಡುತ್ತಿಲ್ಲ. ಆದರೆ, ಮುಂದಿನ ವಾರ ಇನ್ಫೋಸಿಸ್ ಸಂಸ್ಥಾಪಕರಾದ ಶ್ರೀ ನಾರಾಯಣ ಮೂರ್ತಿ ಹಾಗೂ ಸುಧಾಮೂರ್ತಿ ದಂಪತಿ ಕಾರ್ಯಕ್ರಮದ ಅತಿಥಿಯಾಗಿದ್ದಾರೆ.


Click it and Unblock the Notifications











