twitter
    For Quick Alerts
    ALLOW NOTIFICATIONS  
    For Daily Alerts

    ಶೂಟಿಂಗ್ ನಲ್ಲಿ ಒಂದು ಕಣ್ಣು ಕಳೆದುಕೊಂಡ ಮು.ಚಂದ್ರು

    |

    40 ವರ್ಷಕ್ಕೂ ಹೆಚ್ಚು ಕಾಲ ರಂಗಭೂಮಿಯಲ್ಲಿ ಸೇವೆ ಸಲ್ಲಿಸಿ, 450ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ, ಎರಡು ಬಾರಿ ಶಾಸಕ, ಒಂದು ಬಾರಿ ಎಂಎಲ್ಸಿ ಮತ್ತು ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ರಾಜ್ಯದ 'ಪರ್ಮನೆಂಟ್ 'ಮುಖ್ಯಮಂತ್ರಿ ಎಂದೇ ಹೆಸರಾಗಿರುವ ಮುಖ್ಯಮಂತ್ರಿ ಚಂದ್ರು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

    ರಮೇಶ್ ಅರವಿಂದ್ ನಡೆಸಿಕೊಡುವ ವಾರಾಂತ್ಯದ ಈ ಶೋನ ಭಾನುವಾರದ (ಅ 12) ಎಪಿಸೋಡಿನಲ್ಲಿ ಅತಿಥಿಯಾಗಿ ಭಾಗವಹಿಸಿ, ಎಂದಿನಂತೆ ತನ್ನ ಬಾಲ್ಯದ ಜೀವನ, ಒಡನಾಟದ ನೆನಪನ್ನು ಹಾಸ್ಯದ ಹೊನಲು ಹರಿಸುವ ಮೂಲಕ ಮುಖ್ಯಮಂತ್ರಿ ಚಂದ್ರು ಕಾರ್ಯಕ್ರಮದಲ್ಲಿ ಹಂಚಿಕೊಂಡರು.

    ಕಾರ್ಯಕ್ರಮದುದ್ದಕ್ಕೂ ತನ್ನ ಎಂದಿನ ಶೈಲಿಯ ಮಾತಿನ ಚಟಾಕಿಯಿಂದ ಮನರಂಜಿಸಿದ ಚಂದ್ರು, ತನ್ನ ಕಾಲೇಜು ಮತ್ತು ವೃತ್ತಿ ಜೀವನದಲ್ಲಿನ ಘಟನೆಗಳನ್ನು ಪ್ರೇಕ್ಷಕರು ನಕ್ಕು ನಕ್ಕು ಸುಸ್ತಾಗುವಂತೆ ವರ್ಣಿಸಿದ್ದು ಇದುವರೆಗಿನ ಈ ಕಾರ್ಯಕ್ರಮದ ವೈಶಿಷ್ಟ್ಯ. (ಉಮಾಶ್ರೀ ಹೇಳಿದ ಕಣ್ಣೀರ ಕಥೆ)

    ಸತತ ಹತ್ತು ವರ್ಷ 500ಕ್ಕೂ ಹೆಚ್ಚು ಪ್ರದರ್ಶನ ಕಂಡ 'ಮುಖ್ಯಮಂತ್ರಿ' ನಾಟಕದ ಮೂಲಕ ಜನಜನಿತರಾದ ಮುಖ್ಯಮಂತ್ರಿ ಚಂದ್ರು, ನಾನು ತುಂಬಾ ಒಳ್ಳೆ ಹುಡುಗನಲ್ಲ. ನಾನು ಇಂದು ಈ ಮಟ್ಟಕ್ಕೆ ಬೆಳೆಯಲು ನನ್ನ ಮೂರ್ಖತನ, ದಡ್ಡತನವೂ ಕಾರಣ ಜೊತೆಗೆ ನಾನೊಬ್ಬ ಗಂಭೀರ ವಿದ್ಯಾರ್ಥಿಯಾದವನೇ ಅಲ್ಲ ಎಂದಿದ್ದಾರೆ.

    ಮುಖ್ಯಮಂತ್ರಿ ಚಂದ್ರು ಒಂದು ಕಣ್ಣು ಕಳೆದುಕೊಂಡಿದ್ದ ವಿಚಾರ ಈ ಎಪಿಸೋಡಿನ ಮೂಲಕ ಬಹಳಷ್ಟು ಜನರಿಗೆ ತಿಳಿಯಿತು. ಮುಂದೆ ಓದಿ..

    ನಾನೊಬ್ಬನೇ ಗಂಡು ಮಗ ಮತ್ತು ತುಪ್ಪ

    ನಾನೊಬ್ಬನೇ ಗಂಡು ಮಗ ಮತ್ತು ತುಪ್ಪ

    ನನಗೆ ತುಪ್ಪ ಅಂದರೆ ತುಂಬಾ ಇಷ್ಟ. ಒಬ್ಬನೇ ಮಗನಾಗಿದ್ದರಿಂದ ಗುಂಡು ಗುಂಡು ಆಗುತ್ತೇನೆಂದು ತುಪ್ಪ ತಿನ್ನೋಕೆ ಮನೆಯಲ್ಲಿ ಬಿಡುತ್ತಿರಲಿಲ್ಲ. ಹೇಗೋ ಮನೆಯಲ್ಲಿ ಕಣ್ಣು ತಪ್ಪಿಸಿ ಗಟ್ಟಿ ತುಪ್ಪವನ್ನು ಜೇಬಿನೊಳಗೆ ಹಾಕಿಕೊಂಡು ಶಾಲೆ ಹೋಗುತ್ತಿದ್ದ ಬಾಲ್ಯದ ಜೀವನವನ್ನು ಕಾರ್ಯಕ್ರಮದಲ್ಲಿ ಚಂದ್ರು ಸ್ಮರಿಸಿಕೊಂಡರು.

    ವಿದ್ಯಾರ್ಥಿ ಸಂಘದ ನಾಯಕನಾಗಿದ್ದೆ

    ವಿದ್ಯಾರ್ಥಿ ಸಂಘದ ನಾಯಕನಾಗಿದ್ದೆ

    ನಾನು ಕಾಲೇಜಿನಲ್ಲಿ ಓದುತ್ತಿರ ಬೇಕಾದರೆ ವಿದ್ಯಾರ್ಥಿ ಸಂಘದ ನಾಯಕನಾಗಿದ್ದೆ. ಯಾರ ಕೈಯಲ್ಲೂ ಪರಿಹಾರ ಸಿಗದ ಕೆಲಸವನ್ನು ನಾನು ಮಾಡಿಸುತ್ತಿದ್ದೆ. ಇದರಿಂದ ಲೀಡರ್ ಪಟ್ಟ ಅದಾಗೇ ನನಗೆ ಒಲಿದು ಬಂದಿತ್ತು. ಕಾಲೇಜಿನಲ್ಲಿ ಕ್ಲಾಸಿಗೆ ಹಾಜರಾಗಿದ್ದ ಉದಾಹರಣೆ ಬಹಳ ಕಮ್ಮಿ.

    ಪರೀಕ್ಷೆಯ ಸಮಯದಲ್ಲಿ ನಡೆದ ಒಂದು ಘಟನೆ

    ಪರೀಕ್ಷೆಯ ಸಮಯದಲ್ಲಿ ನಡೆದ ಒಂದು ಘಟನೆ

    ಒಂದು ಬಾರಿ ಪರೀಕ್ಷೆಯಲ್ಲಿ ಸಿಲಬಸ್ಸಿನಲ್ಲಿ ಇಲ್ಲದೇ ಇದ್ದ ಪ್ರಶ್ನೆಗಳನ್ನು ಪರೀಕ್ಷಾ ಮಂಡಳಿ ನೀಡಿತ್ತು. ಇದು ನಮ್ಮೆಲ್ಲರ ಸಿಟ್ಟಿಗೆ ಕಾರಣವಾಗಿತ್ತು, ಇದು ಉಪಕುಲಪತಿಗಳ ಗಮನಕ್ಕೂ ಬಂತು. ಆಗಿರುವ ಅಚಾತುರ್ಯಕ್ಕೆ ಎರಡು ಗಂಟೆ ಹೆಚ್ಚುವರಿ ಸಮಯದ ಜೊತೆ, text book ನೀಡಿ ಪರೀಕ್ಷೆ ಬರೆಯಲು ಉಪಕುಲಪತಿಗಳು ಆದೇಶ ನೀಡಿದ್ದರು. ಒಂದೊಂದು text book 500-600 ಪೇಜ್ ಇದ್ದವು. ಪುಸ್ತಕದಲ್ಲಿದ್ದ index ಓದಲು ನಮಗೆ ಮುಕ್ಕಾಲು ಗಂಟೆ ಬೇಕಾಯಿತು. ಹೆಚ್ಚುವರಿ ಸಮಯ, ಪುಸ್ತಕ ನೀಡಿಯೂ ನಾನು ಪಾಸಾಗಲಿಲ್ಲ.

    ಕಣ್ಣುಹೋದ ಘಟನೆ

    ಕಣ್ಣುಹೋದ ಘಟನೆ

    ಬೆಂಗಳೂರು ಅರಮನೆ ಮೈದಾನದಲ್ಲಿ 'ಸೆಂಟ್ರಲ್ ರೌಡಿ' ಚಿತ್ರದ ಶೂಟಿಂಗ್ ನಡೆಯುತ್ತಿತ್ತು. ಟೈಗರ್ ಪ್ರಭಾಕರ್ ಜೊತೆಗಿನ ಹೊಡೆದಾಟದ ಸನ್ನಿವೇಶದಲ್ಲಿ ಅಚಾನಕ್ ಆಗಿ ಗುಂಡು ನನ್ನ ಬಲಗಣ್ಣಿಗೆ ತಾಗಿತು. ಕಣ್ಣು ಸರಿಪಡಿಸ ಬೇಕಾದರೆ ನನ್ನ ಮುಖದ ಶೇಪ್ ಚೇಂಜ್ ಆಗುತ್ತೆ ಎಂದು ವೈದ್ಯರು ಹೇಳಿದರು. ನನ್ನ ಸಿನಿಮಾ ಜೀವನಕ್ಕೆ ಮುಖ ಚೆನ್ನಾಗಿರ ಬೇಕಾಗಿರುವುದರಿಂದ ನಾನು ಅದಕ್ಕೆ ಆದ್ಯತೆ ಕೊಡಲಿಲ್ಲ. ನನಗೆ ಬಲಗಣ್ಣು ಕಾಣಿಸುವುದಿಲ್ಲ ಎಂದು ಚಂದ್ರು ಶೋನಲ್ಲಿ ಹೇಳಿದ್ದಾರೆ.

    ರಾಜಕೀಯಕ್ಕೆ ಬಂದಿದ್ದು

    ರಾಜಕೀಯಕ್ಕೆ ಬಂದಿದ್ದು

    ನಾನು ರಾಜಕೀಯಕ್ಕೆ ಬಂದಿದ್ದು ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರ ಮೂಲಕ. ಅವರ ಆಸರೆಯಲ್ಲಿ ನಾನು ರಾಜಕೀಯದಲ್ಲಿ ಬೆಳೆದೆ, ರಂಗಭೂಮಿಯಲ್ಲಿ ಸಾಧನೆ ಮಾಡಿದವರು ಪಕ್ಷಕ್ಕೆ ಬೇಕು ಎನ್ನುವಾಗ ಅವರ ಕಣ್ಣಿಗೆ ನಾನು ಬಿದ್ದೆ. ನಂತರ ಶಾಸಕನೂ ಆದೆ, ಎಂಎಲ್ಸಿನೂ ಆದೆ.

    ಮಾನಭಂಗದ ಸನ್ನಿವೇಶ

    ಮಾನಭಂಗದ ಸನ್ನಿವೇಶ

    ಸಿನಿಮಾದಲ್ಲಿ ಒಮ್ಮೆ ಮಾನಭಂಗ ಮಾಡುವ ಸನ್ನಿವೇಶವನ್ನು ನಾನು ಎಂದಿಗೂ ಮರೆಯಲಾರೆ. ಕೈತುತ್ತು ನೀಡಿ, ಅವರ ಆಸರೆಯಲ್ಲಿ ಬೆಳೆದವರ ಮೇಲೆ (ಭಾರ್ಗವಿ ನಾರಾಯಣ್) ಮಾನಭಂಗ ಮಾಡಬೇಕಾದ ಸನ್ನಿವೇಶವಿತ್ತು. ಅದಕ್ಕೆ ನಾನು ಸುತರಾಂ ಒಪ್ಪಿರಲಿಲ್ಲ, ನಂತರ ನಿರ್ದೇಶಕರ ಮತ್ತು ನನಗೆ ಕೈತುತ್ತು ನೀಡಿದವರ ಒತ್ತಾಯದ ಮೇರೆಗೆ ಮನಸ್ಸಿಲ್ಲದೇ ನಟಿಸಿದ್ದೆ.

    English summary
    Weekend with Ramesh TV show in Zee Kannada with Mukhyamantri Chandru. This popular show with Chandrashekhar popularly known as Mukhyamantri Chandru aired on Sunday, Oct 12.
    Tuesday, October 14, 2014, 14:33
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X