Snehith: ಬಿಗ್ ಬಾಸ್ ಮುಗಿದ ಮೇಲೆ ಸ್ನೇಹಿತ್ ಏನ್ ಮಾಡ್ತಿದ್ದಾರೆ? ಒಮ್ಮೆ ನೀವೇ ನೋಡಿ..!
ಬಿಗ್ ಬಾಸ್ ಕನ್ನಡ ಸೀಸನ್ 11ಗೆ ದಿನಗಣನೆ ಶುರುವಾಗಿದೆ. ಈ ಬಾರಿ ಯಾರೆಲ್ಲಾ ದೊಡ್ಮನೆಗೆ ಬರಬಹುದು ಎಂಬ ಕುತೂಹಲವಿದೆ. ಸದ್ಯ ಸಣ್ಣ ಪ್ರೋಮೋ ಒಂದನ್ನು ಮಾತ್ರ ಕಲರ್ಸ್ ಕನ್ನಡದವರು ಬಿಟ್ಟಿದ್ದಾರೆ. ಆ ತುಣಕಲ್ಲೇ ಅಭಿಮಾನಿಗಳು ಖುಷಿ ಪಡುತ್ತಿದ್ದಾರೆ. ಈಗಾಗಲೇ ಸಂಭಾವ್ಯರ ಪಟ್ಟಿ ಕೂಡ ಒಂದು ಅಂದಾಜಿನ ಮೇಲೆ ರೆಡಿಯಾಗಿದೆ. ಆ ಪಟ್ಟಿಯಲ್ಲಿನ ಒಂದಷ್ಟು ಮಂದಿ ಅಂತು ದೊಡ್ಮನೆಗೆ ಹೋಗ್ತಾರೆ.
ಕಳೆದ ಸೀಸನ್ ಸ್ಪರ್ಧಿಗಳು ಈಗ ಏನ್ ಮಾಡ್ತಿದ್ದಾರೆ ಎನ್ನುವ ಪ್ರಶ್ನೆ ಮೂಡುತ್ತದೆ. ಯಾಕಂದ್ರೆ ಒಂದು ವರ್ಷವಾದರೂ ಸೀಸನ್ 10ರ ಸ್ಪರ್ಧಿಗಳ ಕ್ರೇಜ್ ಮಾತ್ರ ಕಡಿಮೆಯಾಗಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ಸದಾ ಆಕ್ಟೀವ್ ಆಗಿದ್ದಾರೆ. ಬಾಂಧವ್ಯವನ್ನು ಹಾಗೇ ಉಳಿಸಿಕೊಂಡು ಬಂದಿದ್ದಾರೆ. ಅದರಲ್ಲೂ ಮೊದಲ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆಯೊಳಗೆ ಹೋಗಿದ್ದ ಸ್ನೇಹಿತ್ ಈಗ ಏನು ಮಾಡ್ತಾ ಇದ್ದಾರೆ ಎಂಬ ಕುತೂಹಲಕ್ಕೆ ಮಾಹಿತಿ ಇಲ್ಲಿದೆ ನೋಡಿ.

ಅಂದಿನ ಬಾಂಧವ್ಯ ಇಂದು ಉಳಿದಿದೆ
ಬಿಗ್ ಬಾಸ್ ಸೀಸನ್ 10 ಮುಗಿದ ಮೇಲೆ ಶೋನಲ್ಲಿದ್ದವರು ಎಲ್ಲರೂ ಅದೇ ಬಾಂಧವ್ಯ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಸ್ಪೆಷಲ್ ಸಭೆ ಸಮಾರಂಭಗಳಲ್ಲಿ ಭೇಟಿಯಾಗುತ್ತಾರೆ, ಫ್ಯಾಮಿಲಿ ಕಾರ್ಯಕ್ರಮದಲ್ಲಿ ಒಟ್ಟುಗೂಡುತ್ತಾರೆ. ಹೀಗೆ ದೊಡ್ಮನೆಯಲ್ಲಿ ಬೆಸೆದ ಬಂಧ ಈಗಲೂ ಹಾಗೇ ಮುಂದುವರೆದಿದೆ. ಎಲ್ಲರೂ ಒಂದೊಳ್ಳೆ ಫ್ರೆಂಡ್ಶಿಪ್ ಅನ್ನು ಬಿಟ್ಟುಕೊಡದೇ ಮುಂದುವರೆಸಿಕೊಂಡು ಬಂದಿದ್ದಾರೆ. ಸ್ನೇಹಿತ್ ಕೂಡ ತನಗೆ ಆತ್ಮೀಯರಾದವರ ಜೊತೆಗೆ ಆತ್ಮೀಯತೆಯನ್ನು ಮುಂದುವರೆಸಿದ್ದಾರೆ.
ಸ್ನೇಹಿತ್ ರಿಯಾಲಿಟಿ ಶೋನಲ್ಲಿ ಭಾಗಿ
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಒಂದಷ್ಟು ವಿಭಿನ್ನವಾದ ರಿಯಾಲಿಟಿ ಶೋಗಳನ್ನು ಪರಿಚಯಿಸಿದ್ದಾರೆ. ಅದರಲ್ಲಿ 'ಹೂ ಅಂತೀಯಾ.. ಊಹು ಅಂತೀಯಾ' ಅನ್ನೋ ಶೋ ಕೂಡ ಒಂದು. ಈ ಶೋನಲ್ಲಿ ಕಲರ್ಸ್ ಕನ್ನಡದ ಬಿಗ್ ಬಾಸ್‌ನಲ್ಲಿದ್ದವರೇ ಸ್ಟಾರ್ ಸುವರ್ಣದ ಕಾರ್ಯಕ್ರಮಕ್ಕೂ ಬಂದಿದ್ದಾರೆ. ಇದರಲ್ಲಿಯೇ ಸ್ನೇಹಿತ್ ಕೂಡ ಭಾಗವಹಿಸಿದ್ದಾರೆ.
ಪ್ರಮೋಷನ್ ಕೆಲಸಗಳಲ್ಲಿ ಬ್ಯುಸಿ
ರಿಯಾಲಿಟಿ ಶೋನಲ್ಲಿ ಭಾಗವಹಿಸಿವುದನ್ನು ಹೊರತುಪಡಿಸಿದರೆ ಪರ್ಸನಲ್ ಪ್ರಮೋಷನ್‌ಗಳಲ್ಲಿಯೇ ಬ್ಯುಸಿಯಾಗಿದ್ದಾರೆ. ಅಂದ್ರೆ ಸ್ವಲ್ಪ ಫೇಮಸ್ ಆದವರಿಗೆ ಹೊಸ ಶಾಪ್ ಉದ್ಘಾಟನೆ, ಪ್ರಾಡೆಕ್ಟ್‌ಗಳ ಪ್ರಮೋಷನ್ ಅವಕಾಶ ಬರುವುದು ಸಾಮಾನ್ಯ. ಈಗ ಸ್ನೇಹಿತ್ ಅವರಿಗೆ ಕೂಡ, ಆ ರೀತಿಯ ಪ್ರಾಡೆಕ್ಟ್‌ಗಳ ಪ್ರಮೋಷನ್ ಬರುತ್ತಿದೆ. ತಮ್ಮ ಸೋಷಿಯಲ್ ಮೀಡಿಯಾದಲ್ಲೂ ಪ್ರಚಾರ ಮಾಡಿಕೊಡುತ್ತಿದ್ದಾರೆ.

ವಿನಯ್ ಜೊತೆ ಜಿಮ್‌ನಲ್ಲಿ ವರ್ಕೌಟ್
ದೊಡ್ಮನೆಯಲ್ಲಿದ್ದಾಗಲೂ ವಿನಯ್ ಅವರನ್ನು ಅಣ್ಣ ಅಂತಾನೇ ಕರೆಯುತ್ತಿದ್ದರು. ಒಮ್ಮೆ ಆಟದಲ್ಲಿಯೂ ಅಣ್ಣನ ಪರವಾಗಿ ನಿಂತಿದ್ದರು. ಈಗಲೂ ಆ ಅಣ್ಣ ತಮ್ಮನ ಬಾಂಡಿಂಗ್ ಕಡಿಮೆ ಆಗಿಲ್ಲ. ಒಂದೇ ಕಡೆ ಜಿಮ್ ಗೆ ಹೋಗುತ್ತಾರೆ. ಫಿಟ್ನೆಸ್ ಮೆಂಟೈನ್ ಮಾಡುವಾಗಲೂ ಜೊತೆ ಜೊತೆಗೆ ಸಲಹೆ ಸೂಚನೆಗಳನ್ನು ನೀಡುತ್ತಾರೆ. ಇನ್ನು ಮೈಕೆಲ್ ಕೂಡ ಇಬ್ಬರ ಜೊತೆಗೆ ಒಳ್ಳೆ ಫ್ರೆಂಡ್ಶಿಪ್ ಉಳಿಸಿಕೊಂಡಿದ್ದರು. ವಿನಯ್, ಸ್ನೇಹಿತ್ ಹಾಗೂ ಮೈಕೆಲ್ ಒಳ್ಳೆ ಫ್ರೆಂಡ್ಸ್ ಆಗಿದ್ರು. ಮೈಕೆಲ್ ಜೊತೆಗೆ ಹೆಲ್ಮೆಟ್ ಹಾಕದೆ ಬೈಕ್ ರೈಡ್ ಮಾಡಿದ್ದಾರೆ ಸ್ನೇಹಿತ್. ಇಬ್ಬರು ಜೊತೆಜೊತೆಗೆ ರೀಲ್ಸ್ ಮಾಡುತ್ತಾ ಎಂಜಾಯ್ ಮಾಡುತ್ತಿದ್ದಾರೆ.


Click it and Unblock the Notifications











