ಮಾತಿನ ಮಲ್ಲಿ ಅನುಶ್ರೀ ಮದುವೆಯಾಗದಿರಲು ಅರುಣ್ ಸಾಗರ್ ಕಾರಣ ; ಅದ್ಹೇಗೆ ಅಂತೀರಾ ?

ಸಾಮಾನ್ಯಕ್ಕೆ ವಯಸ್ಸಿಗೆ ಬಂದ ಯುವಕ ಯುವತಿಯರು ಎಲ್ಲಿಯೇ ಹೋಗಲಿ ಅಲ್ಲಿ ಮೊದಲು ಎದುರಾಗುವುದು ಮದುವೆಯ ಕುರಿತ ಪ್ರಶ್ನೆಯೇ. ಇನ್ನು ಸೆಲೆಬ್ರೆಟಿಗಳ ಪಾಡಂತೂ ಇದಕ್ಕಿಂತ ಭಿನ್ನ. ಯಾವ ಸಿನಿಮಾ ಕಾರ್ಯಕ್ರಮಕ್ಕೆ ಹೋಗಲಿ, ಸಭೆ-ಸಮಾರಂಭಕ್ಕೆ ತೆರಳಲಿ, ಪಾರ್ಟಿಗೆ ಹೋಗಲಿ.. ಸಿಕ್ಕ-ಸಿಕ್ಕಲ್ಲಿ ಮದುವೆಯ ಪ್ರಶ್ನೆಯನ್ನ ಕೇಳಿ ಕೊಡಬಾರದ ಟಾರ್ಚರ್ ಕೊಡ್ತಾರೆ. ಕನ್ನಡ ಕಿರುತೆರೆಯ ಸ್ಟಾರ್ ನಿರೂಪಕಿ ಅನುಶ್ರೀ ಅವರಿಗೆ ಈ ತರಹದ ಅನುಭವ ಅನೇಕ ಬಾರಿಯಾಗಿದೆ.

ಇಷ್ಟೇ ಯಾಕೆ.. ವಯಸ್ಸು ಮೂವತ್ತು ಪ್ಲಸ್ ಆದರೂ, ಅನುಶ್ರೀ ಮದುವೆಯಾಗದೇ ಇರುವುದಕ್ಕೆ ಬೇಸತ್ತ ಅನೇಕರು ಸಾಮಾಜಿಕ ಜಾಲತಾಣದಲ್ಲಿ ಇವರ ಮದುವೆಯನ್ನು ಮಾಡಿಸಿದ ಉದಾಹರಣೆ ಇದೆ. ಹೀಗಾಗಿಯೇ ಮದುವೆ ಬಗ್ಗೆ ಗಂಭೀರವಾಗಿ ಆಲೋಚನೆ ಮಾಡುವುದನ್ನೇ ಬಿಟ್ಟಿರುವ ಅನುಶ್ರೀ, ಸದ್ಯಕ್ಕೆ .. ತಾವು ಮದುವೆಯಾಗದೇ ಇರಲು ಸ್ಯಾಂಡಲ್‌ವುಡ್‌ನ ಬಹುಮುಖ ಪ್ರತಿಭೆ ಅರುಣ್‌ ಸಾಗರ್‌ ಕಾರಣ ಅಂದಿದ್ದಾರೆ. ಅಚ್ಚರಿ ಎನಸಿದರೂ ಇದು ಸತ್ಯ. ಯಾಕೆಂದರೆ ನಿರಂತರವಾದ ಮದುವೆಯ ಪ್ರಶ್ನೆಗಳಿಂದ ಬೇಸರಗೊಂಡಿರುವ ಅನುಶ್ರೀ ಹಿಂದೊಮ್ಮೆ ಮದುವೆಯ ಬಗ್ಗೆ ಮಾತನಾಡಿದ್ದರು. ಆ ವಿಡಿಯೋ ಈಗ ಇನ್ನೊಮ್ಮೆ ವೈರಲ್ ಆಗುತ್ತಿದೆ.

what-did-sandalwoods-versatile-talent-arun-sagar-say-to-anushree-regarding-marriage

ಹೌದು, ಇಲ್ಲಿಯವರೆಗೆ ಸಾವಿರಾರು ಸೆಲೆಬ್ರಿಟಿಗಳ ಇಂಟರ್ ವ್ಯೂವ್ ಮಾಡಿರುವ ಅನುಶ್ರೀ ಅವರಿಗೆ ಹಿಂದೆ ಸಂದರ್ಶನವೊಂದರಲ್ಲಿ ಮದುವೆಯ ಕುರಿತು ಪ್ರಶ್ನೆಯನ್ನ ಕೇಳಲಾಗಿತ್ತು. ಇದಕ್ಕೆ
ನಿಜಕ್ಕೂ ನನಗೆ ಮದುವೆಯಾಗಲು ಇಷ್ಟ ಇಲ್ಲ ಎಂದು ಖಂಡ ತುಂಡವಾಗಿ ಹೇಳಿದ್ದ ಅನುಶ್ರೀ, ಮದುವೆಗೆ ಹೇಳಿ ಮಾಡಿಸಿದ ಹುಡುಗಿ ನಾನಲ್ಲ ಎಂದಿದ್ದರು. ಅರುಣ್ ಸಾಗರ್ ಅವರಿಂದನೇ ನನಗೆ ಈ ಜ್ಞಾನೋದಯವಾಯಿತು ಎಂದು ಹೇಳಿದ್ದರು.

ನನ್ನ ಹುಟ್ಟುಹಬ್ಬಕ್ಕೆ ಶುಭಾಶಯವನ್ನ ಕೋರಲು, ಅರುಣ್ ಅಣ್ಣ ನನಗೆ ಒಮ್ಮೆ ಕರೆ ಮಾಡಿದ್ದರು. ಹುಟ್ಟು ಹಬ್ಬದ ಶುಭಾಶಯಗಳು ಪುಟ್ಟಿ, ನಿನ್ನ ಜೀವನದ ಎಲ್ಲಾ ಕನಸುಗಳು ನನಸಾಗಲಿ. ಬೇಗ ಮದುವೆಯಾಗಿ ಒಂದು ಒಳ್ಳೆಯ ಜೀವನವನ್ನು ಕಂಡುಕೋ ಎಂದು ಹೇಳಿದರು. ಆದರೆ ಇದೇ ಸಮಯದಲ್ಲಿ ಮಾತು ಮೊಟಕುಗೊಳಿಸುವ ಮುನ್ನ ಇಷ್ಟವಿದ್ದರೆ ಮಾತ್ರ ಎಂದು ಪಂಚ್ ಲೈನ್ ಸೇರಿಸಿದರು ಎಂದಿರುವ ಅನುಶ್ರೀ, ಅರುಣ್ ಸಾಗರ್ ಅವರ ಈ ಮಾತುಗಳಿಂದ ನನಗೆ ಮದುವೆಯ ಅರ್ಥ ಗೊತ್ತಾಯಿತು ಎಂಬ ಅರ್ಥದಲ್ಲಿ ಅನುಶ್ರೀ ಮಾತನಾಡಿದ್ದರು

what-did-sandalwoods-versatile-talent-arun-sagar-say-to-anushree-regarding-marriage

ಇನ್ನೂ ಅವತ್ತು ಮಾತು ಮುಂದುವರೆಸಿ, ನೀನು ಎಲ್ಲರ ಹಾಗಲ್ಲ, ಸ್ವಲ್ಪ ನನ್ನ ಹಾಗೆ. ಅಂದರೆ ಎಲ್ಲಾ ಕಡೆ ಇರ್ತಿಯಾ. ನಿನ್ನಂಥ ಹುಡುಗಿಗೆ ಮದುವೆಯಾಗಲು ಒಬ್ಬ ಗಂಡು, ಗಂಡ, ಬಾಯ್​ಫ್ರೆಂಡ್​ ಅಥವಾ ಪ್ರೇಮಿ ಇವರು ಯಾರು ಆಗಿರಬಾರದು ಬದಲಿಗೆ ನಿನಗೆ ಒಬ್ಬ ಗೆಳೆಯ ಸಿಗಬೇಕು ಮದುವೆಯಾಗೋಕೆ ಎಂದು ಅರುಣ್ ಸಾಗರ್ ಹೇಳಿದ್ದರು ಎಂದು ಆ ದಿನವನ್ನ ನೆನಪಿಸಿಕೊಂಡಿದ್ದರು ಮಾತಿನ ಮಲ್ಲಿ ಅನುಶ್ರೀ.

ಅರುಣ್ ಸಾಗರ್ ಅವರು ಆಡಿದ ಈ ಮಾತುಗಳಿಂದ ನನ್ನ ತಲೆಯ ಹಿಂದೆ ಸನ್​ಲೈಟ್​ ಓಪನ್​ ಆಯ್ತು ಎಂದು ಕೂಡ ಹೇಳಿದ್ದ ಅನುಶ್ರೀ, ಅರುಣ್ ಸಾಗರ್ ಅವರು ಹೇಳಿದಂತೆ ಜೀವನದಲ್ಲಿ ಮದುವೆಯಾಗಬೇಕೆಂದರೆ ಖುಷಿಯಾಗಿರಬೇಕು ಎಂದರೆ ಒಬ್ಬ ಒಳ್ಳೆಯ ಗೆಳೆಯ ಸಿಗಬೇಕು. ಗೆಳೆಯ ಈಗಿನ ಕಾಲದಲ್ಲಿ ಎಲ್ಲಿ ಸಿಗ್ತಾರೆ ಎಂದು ಅನುಶ್ರೀ ರಾಗ ಎಳೆದಿದ್ದರು.

ಅನುಶ್ರೀ ಅವತ್ತು ಆಡಿದ್ದ ಮಾತು ಈಗ ಮತ್ತೊಮ್ಮೆ ಸಾಮಾಜಿಕ ಜಾಲತಾಣದಲ್ಲಿ ಮಾರ್ದನಿಸುತ್ತಿದೆ. ವಿಡಿಯೋ ವೈರಲ್ ಆಗುತ್ತಿದೆ. ಇದಕ್ಕೆ ಕೈಗನ್ನಡಿ ಎಂಬಂತೆ 55.000ಕ್ಕೂ ಅಧಿಕ ಜನ ಈ ವಿಡಿಯೋ ಮೆಚ್ಚಿಕೊಂಡಿದ್ದಾರೆ. ಅನುಶ್ರೀ ಅವರ ಈ ಅಂತರಂಗದ ಮಾತುಗಳನ್ನ ಕೇಳಿ 135ಕ್ಕೂ ಹೆಚ್ಚು ಜನ ತಮ್ಮ ಅಭಿಪ್ರಾಯವನ್ನೂ ವ್ಯಕ್ತಪಡಿಸಿದ್ದಾರೆ

More from Filmibeat

English summary
Don't get married until you find a good friend," advised Arun Sagar, Sandalwood's versatile talent, to star anchor Anushree.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X