ದೂರು ಕೊಟ್ಟ ಕವಿತಾ ವಿರುದ್ಧ ಹೊಸ ಬಾಂಬ್ ಸಿಡಿಸಿದ ಆಂಡ್ರ್ಯೂ.!

Recommended Video

Bigg Boss Kannada Season 6: ದೂರು ಕೊಟ್ಟ ಕವಿತಾ ವಿರುದ್ಧ ಹೊಸ ಬಾಂಬ್ ಸಿಡಿಸಿದ ಆಂಡ್ರ್ಯೂ.!|FILMIBEAT KANNADA

ಕವಿತಾ ಮತ್ತು ಆಂಡ್ರ್ಯೂ ನಡುವಿನ ಕಿತ್ತಾಟ ಸದ್ಯಕ್ಕೆ ಮುಗಿಯುವ ಯಾವುದೇ ಲಕ್ಷಣ ಕಾಣಿಸುತ್ತಿಲ್ಲ. 'ಬಿಗ್ ಬಾಸ್' ಮನೆಯಲ್ಲಿ ಇರುವಾಗ ಹಲವು ಬಾರಿ ಜಗಳ ಮಾಡಿಕೊಂಡಿದ್ದ ಆಂಡ್ರ್ಯೂ-ಕವಿತಾ ಇದೀಗ ಕಾರ್ಯಕ್ರಮ ಮುಗಿದ ಮೇಲೂ ಅದನ್ನೇ ಮುಂದುವರೆಸಿದ್ದಾರೆ.

'ಬಿಗ್ ಬಾಸ್' ಮನೆಯಲ್ಲಿ ಆದ ಕೆಲವು ಘಟನೆಗಳನ್ನು ಇಟ್ಟುಕೊಂಡು ಮತ್ತು ಮಜಾ ಟಾಕೀಸ್ ಕಾರ್ಯಕ್ರಮದಲ್ಲಿ ಆಂಡಿ ಕಡೆಯಿಂದ ಪರ್ಸನಲ್ ಅಟ್ಯಾಕ್ ಆಯ್ತು ಎಂದು ಆರೋಪಿಸಿ ಕವಿತಾ ಗೌಡ ಇತ್ತೀಚೆಗಷ್ಟೇ ಮಹಿಳಾ ಆಯೋಗಕ್ಕೆ ದೂರು ಕೊಟ್ಟಿದ್ದರು.

ಕವಿತಾ ರವರ ಈ ನಡೆ ಆಂಡ್ರ್ಯೂಗೆ ಬೇಸರ ಮೂಡಿಸಿದೆ. ''ಮಜಾ ಟಾಕೀಸ್ ಕಾರ್ಯಕ್ರಮದಲ್ಲಿ ಕವಿತಾ ಬಗ್ಗೆ ನಾನು ಕೆಟ್ಟದಾಗಿ ಮಾತನಾಡಿಲ್ಲ'' ಎಂದು ಸ್ಪಷ್ಟ ಪಡಿಸಿರುವ ಆಂಡ್ರ್ಯೂ, ಸಂದರ್ಶನವೊಂದರಲ್ಲಿ ಹೊಸ ಬಾಂಬ್ ಸಿಡಿಸಿದ್ದಾರೆ. ಅದೇನಪ್ಪಾ ಅಂದ್ರೆ, ''ಆಂಡ್ರ್ಯೂ ಕ್ರಿಶ್ಚಿಯನ್ ಎಂಬ ಕಾರಣಕ್ಕೆ ಅವರನ್ನ ಕವಿತಾ ಒಂಥರಾ ನೋಡುತ್ತಿದ್ದರಂತೆ.!''

ಕವಿತಾ ಬಗ್ಗೆ ಆಂಡಿ ಏನೇನೆಲ್ಲಾ ಹೇಳಿದ್ದಾರೆ ಅಂತ ನೀವೇ ಓದಿರಿ ಕೆಳಗಿರುವ ಫೋಟೋ ಸ್ಲೈಡ್ ಗಳಲ್ಲಿ...

ಕವಿತಾಗೆ ಇದ್ಯಾ ಹೊಟ್ಟೆ ಉರಿ.?

ಕವಿತಾಗೆ ಇದ್ಯಾ ಹೊಟ್ಟೆ ಉರಿ.?

''ಜನ ನನ್ನನ್ನ ಕ್ಷಮಿಸಿ, ಪ್ರೀತಿ ತೋರಲು ಆರಂಭಿಸಿದ್ದಾರೆ. ನನಗೆ ಕೆಲ ಆಫರ್ ಗಳು ಕೂಡ ಬಂದಿವೆ. ಹೀಗಾಗಿ ಇವನು ಯಾಕೆ ಉದ್ಧಾರ ಆಗಬೇಕು ಅಂತ ಅವರಿಗೆ ಅನಿಸುತ್ತಿರಬೇಕು. ಕವಿತಾ ಮಾತ್ರ ಯಾಕೆ ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ.? ಬೇರೆ ಹುಡುಗಿಯರನ್ನೂ ಕೇಳಿ ನಾನು ಹೇಗೆ ನಡೆದುಕೊಂಡಿದ್ದೇನೆ ಅಂತ'' ಎಂದು ಹೇಳುತ್ತಾರೆ ಆಂಡ್ರ್ಯೂ.

ಕ್ರಿಶ್ಚಿಯನ್ ಎಂಬ ಕಾರಣ.?

ಕ್ರಿಶ್ಚಿಯನ್ ಎಂಬ ಕಾರಣ.?

''ಕವಿತಾಗೆ ಮೊದಲಿನಿಂದಲೂ ನನ್ನ ಕಂಡ್ರೆ ಇಷ್ಟ ಇಲ್ಲ. ಅವರಿಗೆ ನನ್ನ ಹೆಸರು ಇಷ್ಟ ಇಲ್ಲ. ಆಂಡಿ ಅಂದ್ರೆ ನೀವು ಕ್ರಿಶ್ಚಿಯನ್ನಾ ಅಂತೆಲ್ಲಾ ಕೇಳಿದ್ದಾರೆ. ನನ್ನ ಧರ್ಮವನ್ನೇ ಇಟ್ಟುಕೊಂಡು ಅವರು ಒಂಥರಾ ನೋಡಿದ್ದಾರೆ'' ಎಂದಿದ್ದಾರೆ ಆಂಡ್ರ್ಯೂ.

ಕವಿತಾ ಹೀಗೆ ಹೇಳಿದ್ರಾ.?

ಕವಿತಾ ಹೀಗೆ ಹೇಳಿದ್ರಾ.?

''ಸ್ವಿಮ್ಮಿಂಗ್ ಪೂಲ್ ನಲ್ಲಿ ಮೈಕ್ ಇಲ್ಲದೇ ಇರುವಾಗಲೂ, ''ಇಂಥ ಜಾತಿಯವರನ್ನೆಲ್ಲಾ ಒಳಗೆ ಬಿಟ್ಟಿದ್ದಾರೆ'' ಅಂತ ಕವಿತಾ ಮಾತನಾಡಿದ್ದಾರೆ. ಆದರೂ ನಾನು ಈ ವಿಷಯದ ಬಗ್ಗೆ ಎಲ್ಲೂ ಮಾತನಾಡಿಲ್ಲ'' - ಆಂಡ್ರ್ಯೂ

ಕವಿತಾ ಮಾಡಿರುವುದು ಸುಳ್ಳು ಆರೋಪ.!

ಕವಿತಾ ಮಾಡಿರುವುದು ಸುಳ್ಳು ಆರೋಪ.!

''ಮಜಾ ಟಾಕೀಸ್ ಕಾರ್ಯಕ್ರಮದಲ್ಲಿ ಎಲ್ಲರಿಗೂ ಮೈಕ್ ಕೊಟ್ಟಿದ್ದರು. ತುಟಿಕ್ ಪಿಟಿಕ್ ಅಂದರೂ ಕೇಳಿಸುತ್ತೆ. ಅಲ್ಲಿ ಸ್ಟೇಜ್ ಮೇಲೆ ಎಲ್ಲರೂ ಇದ್ದರು. ಹೀಗಿರುವಾಗ ನಾನು ಅಲ್ಲಿ ಕೆಟ್ಟ ಪದ ಬಳಸಿದ್ದರೆ, ಯಾರಿಗಾದರೂ ಕೇಳಿಸದೇ ಇರುತ್ತಾ.? ಆ ಸ್ಟುಡಿಯೋದಲ್ಲಿ ಎಷ್ಟು ಜನ ಇದ್ದರು... ಎಲ್ಲರನ್ನೂ ಕೇಳಿ ನಾನು ಹಾಗೆ ಮಾಡಿದ್ದೀನಾ ಅಂತ. ಕವಿತಾ ಆಡಿರುವ ಈ ಮಾತು ಸುಳ್ಳು. ಆಗದೇ ಇರುವ ವಿಷಯವನ್ನ ಆಗಿದೆ ಅಂತ ಹೇಳುವುದು ತಪ್ಪು. ಇದನ್ನ ನಾನು ಒಪ್ಪಲ್ಲ'' ಅಂತಾರೆ ಆಂಡ್ರ್ಯೂ. (ಕೃಪೆ: ಫಸ್ಟ್ ನ್ಯೂಸ್)

More from Filmibeat

English summary
What happened between Kavitha Gowda and Andrew in Maja Talkies program.?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X