»   » ಪ್ರಥಮ್ ಜೊತೆ ಕಾರ್ ನಲ್ಲಿ ರಿಷಿಕಾ ಏನ್ಮಾಡ್ತಿದ್ರು? ಇಲ್ಲಿದೆ ನೋಡಿ ವಿಡಿಯೋ

ಪ್ರಥಮ್ ಜೊತೆ ಕಾರ್ ನಲ್ಲಿ ರಿಷಿಕಾ ಏನ್ಮಾಡ್ತಿದ್ರು? ಇಲ್ಲಿದೆ ನೋಡಿ ವಿಡಿಯೋ

By: BK
Subscribe to Filmibeat Kannada

ಪ್ರಥಮ್ ಜೊತೆ ರಿಷಿಕಾ ಕಾರ್ ನಲ್ಲಿ ಏನ್ಮಾಡ್ತಿದ್ರು......? ಇದು ನಮ್ಮ ಪ್ರಶ್ನೆಯಂತೂ ಅಲ್ಲವೇ ಅಲ್ಲ.! ಪ್ರಥಮ್ ಹಾಗೂ ರಿಷಿಕಾ ಏನೋ ಬಡಬಡಿಸಿದ ಮೇಲೆ ಅನೇಕರ ತಲೆಯಲ್ಲಿ ಈ ಒಂದು ಪ್ರಶ್ನೆ ಅಥವಾ ಡೌಟ್ ಕಾಡುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಂತೂ ಇದೇ ಮ್ಯಾಟರ್ ಬಗ್ಗೆ ಭಾರಿ ಚರ್ಚೆಯಾಗುತ್ತಿದೆ.

'ಬಿಗ್ ಬಾಸ್' ಮನೆಯಲ್ಲಿ ಕೊಟ್ಟ ಮಾತಿನಂತೆ ನಟಿ ರಿಷಿಕಾ, ಪ್ರಥಮ್ ಅವರ ಜೊತೆ ನಿನ್ನೆ (ಫೆಬ್ರವರಿ 8) ಕಾರ್ ನಲ್ಲಿ ಲಾಂಗ್ ಡ್ರೈವ್ ಹೋಗಿದ್ದರು. ಈ ವೇಳೆ ಪ್ರಥಮ್ ಹಾಗೂ ರಿಷಿಕಾ ತಮ್ಮ ಫೇಸ್ ಬುಕ್ ನಲ್ಲಿ ಲೈವ್ ಚಾಟ್ ನಡೆಸಿದ್ದರು.[ಮಾತು ತಪ್ಪದ ರಿಷಿಕಾ, ಆಸೆ ಈಡೇರಿಸಿಕೊಂಡ ಪ್ರಥಮ್, ಲಾಂಗ್ ಡ್ರೈವ್ ಎಲ್ಲಿಗೆ?]

ಈ ಲೈವ್ ಚಾಟ್ ನಲ್ಲಿ ರಿಷಿಕಾ ಮತ್ತು ಪ್ರಥಮ್ ಹೇಳಿದ ಒಂದು ಮಾತಿನಿಂದ ಹುಟ್ಟಿಕೊಂಡ ಪ್ರಶ್ನೆಯೇ ''ಪ್ರಥಮ್ ಜೊತೆ ರಿಷಿಕಾ ಕಾರ್ ನಲ್ಲಿ ಏನ್ಮಾಡ್ತಿದ್ರು''.....? ಇದಕ್ಕೆ ಕ್ಲಾರಿಟಿ... ಮುಂದೆ ಓದಿ...

'ಫೇಸ್ ಬುಕ್'ನಲ್ಲಿ ಲೈವ್!

ಪ್ರಥಮ್ ಹಾಕಿದ ಚಾಲೆಂಜ್ ನಲ್ಲಿ ಸೋತು, ಆಡಿದ ಮಾತಿನಂತೆ ಪ್ರಥಮ್ ಜೊತೆ ರಿಷಿಕಾ ಲಾಂಗ್ ಡ್ರೈವ್ ಹೊರಟರು. ಇದೇ ಗ್ಯಾಪ್ ನಲ್ಲಿ ಇಬ್ಬರ ಫೇಸ್ ಬುಕ್ ಲೈವ್ ಶುರು ಆಯ್ತು.

ಎಲ್ಲರ ಜೊತೆ ಮಾತುಕತೆ

ಲಾಂಗ್ ಡ್ರೈವ್ ಜರ್ನಿಯ ಮಧ್ಯೆ ಲೈವ್ ಚಾಟ್ ಮಾಡುತ್ತಿದ್ದ ಪ್ರಥಮ್ ಹಾಗೂ ರಿಷಿಕಾ ಅವರಿಗೆ ಪ್ರಶ್ನೆಗಳನ್ನ ಕೇಳಿದ್ದಾರೆ. ಅದಕ್ಕೆ ಉತ್ತರ ಕೊಡುವಾಗ...

ಆಗಲೇ ಹುಟ್ಟಿದ್ದು ಈ ಪ್ರಶ್ನೆ!

ಈ ಕಾಮೆಂಟ್ ಮಧ್ಯೆ ಯಾರೋ ಒಬ್ಬರು ಏನೋ ಕೇಳಿದ್ದಾರೆ. ಅವರು ಏನೂ ಕೇಳಿದರು ಎಂಬುದು ಸ್ಪಷ್ಟವಾಗಿ ತಿಳಿದುಬಂದಿಲ್ಲ. ಆದ್ರೆ, ಆ ಕಾಮೆಂಟ್ ನೋಡಿ ಪ್ರಥಮ್ ಹಾಗೂ ರಿಷಿಕಾ ಕೊಟ್ಟ ಉತ್ತರ ಮಾತ್ರ ಈಗ ಚರ್ಚೆಗೆ ಗ್ರಾಸವಾಗಿದೆ.

ರಿಷಿಕಾ ಕೊಟ್ಟ ಉತ್ತರವೇನು!

''ಓ ಮೈ ಗಾಡ್..ನಾವಿಬ್ಬರು ಒಂದೇ ಜ್ಯೂಸ್ ಕುಡಿತಾ ಇದ್ವಿ. ನಾನು ಕುಡಿದು ಅವರಿಗೆ ಕೊಟ್ಟಾಗ, ಅಂಟಿಕೊಂಡಿರಬಹುದು. ನೋ...ನೋ...ನಾವಿಬ್ಬರು ಜ್ಯೂಸ್ ಕುಡಿತಾ ಇದ್ವಿ'' ಅಂತ ರಿಷಿಕಾ ಹೇಳಿದರು. ಅದಕ್ಕೆ ಪ್ರಥಮ್ ಅವರು ಕೂಡ ಹೌದು, ''ದೇವ್ರಾಣೆ ಇದು ನಿಜಾ...'' ಎಂದು ಉತ್ತರ ಕೊಟ್ಟು ಟಾಪಿಕ್ ಚೇಂಜ್ ಮಾಡಿದ್ದಾರೆ.

ಈ ಉತ್ತರವೇ ಈಗ ಅನುಮಾನ ಮೂಡಿಸಿದೆ.!

ರಿಷಿಕಾ ಅವರು ಕೊಟ್ಟ ಈ ಉತ್ತರವೇ ಈಗ ಅನೇಕರ ತಲೆಗೆ ಹುಳ ಬಿಟ್ಟಹಾಗಾಗಿದೆ. ತಲೆಯಲ್ಲಿ ಏನಿಟ್ಟುಕೊಂಡು ಯಾರು ಪ್ರಶ್ನೆ ಕೇಳಿದ್ರೋ, ಅದಕ್ಕೆ ಇವರಿಬ್ಬರು ಕೊಟ್ಟಿರುವ ಉತ್ತರ ಈಗ ಸೋಷಿಯಲ್ ಮೀಡಿಯಾದಲ್ಲಿ ಏನೇನೋ ಆಗಿದೆ.

ಆಗಿರೋದು ಇಷ್ಟೇ ಗುರು!

ಪ್ರಥಮ್ ಹಾಗೂ ರಿಷಿಕಾ ಲಾಂಗ್ ಡ್ರೈವ್ ಹೋಗುವಾಗ ಕಾರ್ ನಲ್ಲಿ ನಡೆಸಿರುವ ಫೇಸ್ ಬುಕ್ ಲೈವ್ ವಿಡಿಯೋ ಇಲ್ಲಿದೆ. ಈ ಲಿಂಕ್ ಕ್ಲಿಕ್ ಮಾಡಿ...

English summary
What Happened During in Pratham and Rishika Longdrive. Watch Video.....
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada