'ಉಗ್ರಂ' ಹೆಸರಿಡುವುದಕ್ಕೂ ಮುಂಚೆ ರಿಜೆಕ್ಟ್ ಆಗಿದ್ದ ಆ ಎರಡು ಟೈಟಲ್ ಯಾವುದು?

Recommended Video

Weekend with Ramesh Season 4: ಉಗ್ರಂ ಸಿನಿಮಾ ಹಿಂದಿನ ಕಥೆಯನ್ನ ಬಿಚ್ಚಿಟ್ಟ ಶ್ರೀಮುರಳಿ

ಶ್ರೀಮುರಳಿ ವೃತ್ತಿ ಜೀವನದಲ್ಲಿ ಅದೃಷ್ಟ ತಂದುಕೊಟ್ಟ ಚಿತ್ರ ಉಗ್ರಂ. ಸತತ ಸೋಲಿನಿಂದ ಕಂಗೆಟ್ಟಿದ್ದ ರೋರಿಂಗ್ ಸ್ಟಾರ್ ಗೆ ಗೆಲುವಿನ ಮಾರ್ಗ ತೋರಿಸಿದ ಸೂಪರ್ ಹಿಟ್ ಚಿತ್ರ. ಪ್ರಶಾಂತ್ ನೀಲ್ ಎಂಬ ಅದ್ಭುತ ನಿರ್ದೇಶಕ ಸ್ಯಾಂಡಲ್ ವುಡ್ ಗೆ ಪರಿಚಯವಾದ ಚಿತ್ರ.

ಹರಿಪ್ರಿಯಾ ಜರ್ನಿಗೆ ಹೊಸ ತಿರುವು ನೀಡಿದ ಸಿನಿಮಾ. ಕನ್ನಡ ಚಿತ್ರರಂಗದಲ್ಲಿ ಹೊಸ ತಂತ್ರಜ್ಞಾನ ಹಾಗೂ ಮೇಕಿಂಗ್ ಮೂಲಕ ಸದ್ದು ಮಾಡಿದ ಹಿಟ್ ಸಿನಿಮಾ. ರವಿಬಸ್ರೂರು ಎಂಬ ಸಂಗೀತ ನಿರ್ದೇಶಕನಿಗೆ ಜೀವನ ಕೊಟ್ಟ ಚಿತ್ರ. ತಿಲಕ್ ಎಂಬ ನಟನ ಹೊಸ ಇನ್ನಿಂಗ್ಸ್ ಗೆ ಜೀವ ನೀಡಿದ ಚಿತ್ರ.

ಹೀಗೆ, ಹಲವು ಕಲಾವಿದರು ಹಾಗೂ ತಂತ್ರಜ್ಞರಿಗೆ ಜೀವ ಮತ್ತು ಜೀವನ ಕೊಟ್ಟ ಚಿತ್ರ ಉಗ್ರಂ. ಈ ಹೆಸರಿಡುವ ಮೊದಲು ಎರಡು ಟೈಟಲ್ ಬದಲಾಗಿತ್ತಂತೆ. ಹಾಗಿದ್ರೆ, ಉಗ್ರಂ ಹೆಸರಿಗೂ ಮುಂಚೆ ಇಟ್ಟಿದ ಆ ಹೆಸರುಗಳೇನು? ಈ ಸಿನಿಮಾ ಹೇಗೆ ಶುರುವಾಯ್ತು? ಮುಂದೆ ಓದಿ....

ಸರ್ಪ್ರೈಸ್ ನೀಡಿದ್ದ ಪ್ರಶಾಂತ್ ನೀಲ್

ಸರ್ಪ್ರೈಸ್ ನೀಡಿದ್ದ ಪ್ರಶಾಂತ್ ನೀಲ್

ಕಾಲೇಜಿನಲ್ಲಿ ಓದುತ್ತಿರುವಾಗ ನಿರ್ದೇಶಕ ಪ್ರಶಾಂತ್ ನೀಲ್ ಅವರ ತಂಗಿಯನ್ನ ನಟ ಶ್ರೀಮುರಳಿ ಪ್ರೀತಿಸುತ್ತಿದ್ದರಂತೆ. ಈ ವಿಷ್ಯದಲ್ಲಿ ಪ್ರಶಾಂತ್, ಶ್ರೀಮುರಳಿಗೆ ವಾರ್ನ್ ಕೂಡ ಮಾಡಿದ್ದರಂತೆ. ಹೀಗೆ ಒಂದು ದಿನ ಶ್ರೀಮುರಳಿ ಕಚೇರಿಗೆ ಬಂದ ಪ್ರಶಾಂತ್ ರೋರಿಂಗ್ ಸ್ಟಾರ್ ಗೆ ಸರ್ಪ್ರೈಸ್ ನೀಡಿದರಂತೆ.

ನಿನ್ನ ಸ್ಟಾರ್ ಮಾಡ್ತೀನಿ

ನಿನ್ನ ಸ್ಟಾರ್ ಮಾಡ್ತೀನಿ

ತಂಗಿ ವಿಚಾರಕ್ಕೆ ಬಂದಿರಬಹುದು ಎಂದುಕೊಂಡಿದ್ದ ಶ್ರೀಮುರಳಿಗೆ ಸರ್ಪ್ರೈಸ್ ನೀಡಿದ ಪ್ರಶಾಂತ್, ನಿನಗೊಂದು ಸಿನಿಮಾ ಮಾಡಬೇಕೆಂದುಕೊಂಡಿದ್ದೀನಿ, ಮಾಡೋಣ್ವಾ ಎಂದು ಕೇಳಿದ್ರಂತೆ. ಇದನ್ನ ಕೇಳಿ ಅಚ್ಚರಿಗೊಂಡು ಶ್ರೀಮುರಳಿ 'ಎಷ್ಟು ಬಜೆಟ್, ಹೇಗೆ ಮಾಡಬೇಕು ಅಂದುಕೊಂಡಿದ್ದೀರಾ' ಅಂದ್ರೆ, ಎಷ್ಟಾದರೂ ಆಗಲಿ, ಫ್ಲೈಟ್ ಬೇಕಾದರೆ ತರಿಸ್ತೀನಿ' ಎಂದು ಹೇಳ್ತಿದ್ದರಂತೆ.

ಬೇಡ ಎಂದು ನಿರಾಕರಿಸಿದರಂತೆ ಶ್ರೀಮುರಳಿ

ಬೇಡ ಎಂದು ನಿರಾಕರಿಸಿದರಂತೆ ಶ್ರೀಮುರಳಿ

ಪ್ರಶಾಂತ್ ಸಿನಿಮಾ ಮಾಡಬೇಕು ಎಂದು ಹೋದಾಗ, ಸರಿ ನನ್ನ ಜೊತೆ ಬೇಡ ನನಗೆ ಸಮಯ ಸರಿಯಿಲ್ಲ. ಬೇರೆ ಯಾರನ್ನಾದರೂ ಹೀರೋ ಮಾಡೋಣ. ನಾನು ಮಾತಾಡಿ ಡೇಟ್ ಕೊಡಿಸುತ್ತೇನೆ ಎಂದು ಹೇಳಿದರಂತೆ. ಆದ್ರೆ, ಅದನ್ನ ಒಪ್ಪದ ಪ್ರಶಾಂತ್ 'ಈ ಸಿನಿಮಾ ಮಾಡೋದೇ ನಿಮಗಾಗಿ. ನಿಮಗೆ ಒಳ್ಳೆಯದಾಗಲಿ ಅಂತ. ನಿನ್ನ ಸ್ಟಾರ್ ಮಾಡ್ತೀನಿ' ಎಂದು ಧೈರ್ಯ ತುಂಬಿದರಂತೆ.

ಮೊದಲ ಟೈಟಲ್ 'ನಂದೇ'

ಮೊದಲ ಟೈಟಲ್ 'ನಂದೇ'

'ಸಿನಿಮಾ ಮಾಡಬೇಕು ಎಂದು ಫಿಕ್ಸ್ ಆದ್ವಿ. ಆಗ ಆ ಚಿತ್ರಕ್ಕೆ 'ನಂದೇ' ಅಂತ ಟೈಟಲ್ ಕೂಡ ಇಟ್ಟರು. ಅದರಲ್ಲೇ ಪ್ರಚಾರ ಕೂಡ ಆರಂಭವಾಯಿತು. ಬಟ್, ನಮ್ಮ ಸುತ್ತಮುತ್ತಲಿನವರು ಕೆಲವರು ಈ ಟೈಟಲ್ ಬಗ್ಗೆ ಅಸಡ್ಡೆ ತೋರಿದರು. ಯಾಕೋ ಮನಸ್ಸಲ್ಲಿ ಗೊಂದಲ. ಟೈಟಲ್ ಬದಲಾಯಿಸೋಣ ಅಂತ ನಿರ್ಧಾರ ಮಾಡಿದ್ವಿ''

ಪ್ರಶಾಂತ್ ಬೇಡ ಅಂದ್ರು

ಪ್ರಶಾಂತ್ ಬೇಡ ಅಂದ್ರು

'ನಂದೇ' ಟೈಟಲ್ ಅಷ್ಟಾಗಿ ನಮಗೆ ಆಗ್ತಿಲ್ಲ. ಬೇರೇ ಏನಾದರೂ ಬದಲಾಯಿಸೋಣ ಅಂತ ಪ್ರಶಾಂತ್ ಗೆ ಹೇಳಿದೆ. ಆದ್ರೆ, ಪ್ರಶಾಂತ್ ಯಾಕೆ, ಆಗಲ್ಲ ಅಂದ್ರು. ಆಮೇಲೆ ಸೂಕ್ಷ್ಮವಾಗಿ ಪರಿಸ್ಥಿತಿ ಹೇಳಿದಾಗ ಸರಿ ಬೇರೆ ಟೈಟಲ್ ಇಡೋಣ ಅಂತ ಡಿಸೈಡ್ ಆದರು. ಆಗ ಉಗ್ರಂ ವೀರಂ ಅಂತ ಬಂದ್ರು. ವೀರಂ ತೆಗೆದು ಉಗ್ರಂ ಸೌಂಡ್ ಚೆನ್ನಾಗಿದೆ. ಅದನ್ನೇ ಇಡೋಣ ಅಂತ ಫಿಕ್ಸ್ ಆದ್ವಿ.

5 ವರ್ಷ ಆಯಿತು

5 ವರ್ಷ ಆಯಿತು

ಫೆಬ್ರವರಿ 21, 2014ರಲ್ಲಿ ಉಗ್ರಂ ಸಿನಿಮಾ ತೆರೆಕಂಡಿತ್ತು. ತೂಗುದೀಪ ಪ್ರೊಡಕ್ಷನ್ ಈ ಚಿತ್ರ ವಿತರಣೆ ಮಾಡಿತ್ತು. ಶ್ರೀಮುರಳಿ, ಹರಿಪ್ರಿಯಾ, ತಿಲಕ್ ಈ ಸಿನಿಮಾದಲ್ಲಿ ನಟಿಸಿದ್ದರು. ಶತದಿನ ಆಚರಿಸಿ ಬ್ಲಾಕ್ ಬಸ್ಟರ್ ಹಿಟ್ ಆಗಿತ್ತು. ಈಗ ಉಗ್ರಂ ಸಿನಿಮಾಗೆ ಐದು ವರ್ಷ ಕಳೆದಿದೆ.

More from Filmibeat

English summary
What is the first title of super hit ugramm movie. the movie has released at 2014. directed by Prashanth neel. starring srimurali and haripriya.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X