»   » 'ಬಿಗ್ ಬಾಸ್ ಕನ್ನಡ-5': ಈ ಬಾರಿ ಹೊಸದೇನಿದೆ.?

'ಬಿಗ್ ಬಾಸ್ ಕನ್ನಡ-5': ಈ ಬಾರಿ ಹೊಸದೇನಿದೆ.?

Posted By:
Subscribe to Filmibeat Kannada

'ಬಿಗ್ ಬಾಸ್ ಕನ್ನಡ-5' ಆರಂಭಕ್ಕೆ ಕೇವಲ ಎರಡು ದಿನಗಳಷ್ಟೇ ಬಾಕಿ ಇದೆ. ಅಕ್ಟೋಬರ್ 15 ರಂದು ಭಾನುವಾರ ಸಂಜೆ 6 ಗಂಟೆಗೆ ಕಲರ್ಸ್ ಸೂಪರ್ ವಾಹಿನಿಯಲ್ಲಿ 'ಬಿಗ್ ಬಾಸ್' ಕಾರ್ಯಕ್ರಮದ ಓಪನ್ನಿಂಗ್ ಪ್ರಸಾರ ಆಗಲಿದೆ.

ಅಷ್ಟಕ್ಕೂ, 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದ ವಿಶೇಷತೆಗಳೇನು.? ಕಳೆದ ನಾಲ್ಕು ಸೀಸನ್ ಗಳಿಗೆ ಹೋಲಿಸಿದರೆ ಈ ಬಾರಿ ಏನಾದರೂ ಹೊಸದು ಇದೆಯಾ.? ಈ ಪ್ರಶ್ನೆಗಳಿಗೆ ಸ್ವತಃ 'ಬಿಗ್ ಬಾಸ್' ನಿರ್ದೇಶಕ ಪರಮೇಶ್ವರ್ ಗುಂಡ್ಕಲ್ ಉತ್ತರ ನೀಡಿದ್ದಾರೆ. ಮುಂದೆ ಓದಿರಿ...

ಈ ಬಾರಿ ಎಲ್ಲವೂ ಹೊಸದು

''ಈ ಬಾರಿಯ 'ಬಿಗ್ ಬಾಸ್'ನಲ್ಲಿ ಎಲ್ಲವೂ ಹೊಸದಿದೆ. ಮನೆಯ ವಿನ್ಯಾಸ ಹೊಸದು. ಮನೆಗೆ ಬರುವ ವ್ಯಕ್ತಿತ್ವಗಳು, ಅವರ ಆಲೋಚನೆಗಳು ಹೊಸದು. ಅಲ್ಲಾಗುವ ಚರ್ಚೆ, ತಿಕ್ಕಾಟ ಕೂಡ ಹೊಸದು'' ಎಂದಿದ್ದಾರೆ 'ಬಿಗ್ ಬಾಸ್' ಡೈರೆಕ್ಟರ್ ಪರಮೇಶ್ವರ್ ಗುಂಡ್ಕಲ್

ಮಾಳವಿಕಾ ಜೊತೆಗಿನ ವಿಡಿಯೋ: 'ಬಿಗ್ ಬಾಸ್' ಡೈರೆಕ್ಟರ್ ಕೊಟ್ಟ ಸ್ಪಷ್ಟನೆ

ಹೊಸ ಸಮಯ

ಈ ಬಾರಿ 'ಬಿಗ್ ಬಾಸ್' ಕಾರ್ಯಕ್ರಮ ಪ್ರಸಾರ ಆಗುತ್ತಿರುವ ಸಮಯ ಕೂಡ ಹೊಸದು. ಹಿಂದಿನ ನಾಲ್ಕು ಸೀಸನ್ ಗಳು ಒಂಬತ್ತು ಗಂಟೆಗೆ ಪ್ರಸಾರ ಆಗಿತ್ತು. ಆದ್ರೀಗ, ಒಂಬತ್ತು ಗಂಟೆ ಬದಲು ಎಂಟು ಗಂಟೆಗೆ 'ಬಿಗ್ ಬಾಸ್ ಕನ್ನಡ-5' ಪ್ರಸಾರ ಆಗಲಿದೆ.

ಮಾಳವಿಕಾ-ಪರಮೇಶ್ವರ್ ಗುಂಡ್ಕಲ್ ವಿಡಿಯೋ ಲೀಕ್ : ಸುದೀಪ್ ಪ್ರತಿಕ್ರಿಯೆ ಹೇಗಿತ್ತು.?

ಹೊಸ ಚಾನೆಲ್

ಕಲರ್ಸ್ ನೆಟ್ ವರ್ಕ್ ನ ಹೊಸ ಚಾನೆಲ್ 'ಕಲರ್ಸ್ ಸೂಪರ್' ವಾಹಿನಿಯಲ್ಲಿ ಈ ಬಾರಿ 'ಬಿಗ್ ಬಾಸ್' ಕಾರ್ಯಕ್ರಮ ಪ್ರಸಾರ ಆಗಲಿದೆ.

'ಬಿಗ್ ಬಾಸ್' ಶೋ ಕಲರ್ಸ್ ಸೂಪರ್ ಗೆ ಶಿಫ್ಟ್ ಆಗಲು 2 ಬಲವಾದ ಕಾರಣ

ಹೊಸ ಗೆಟಪ್ ನಲ್ಲಿ ಸುದೀಪ್

'ದಿ ವಿಲನ್' ಚಿತ್ರಕ್ಕಾಗಿ ಹೊಸ ಗೆಟಪ್ ನಲ್ಲಿ ಇರುವ ಸುದೀಪ್, 'ಬಿಗ್ ಬಾಸ್' ವೇದಿಕೆ ಮೇಲೆ ಈ ಬಾರಿ ಸೂಪರ್ ಸ್ಟೈಲಿಶ್ ಆಗಿ ಕಾಣುವುದರಲ್ಲಿ ಅನುಮಾನವೇ ಇಲ್ಲ.

English summary
Read this article to know what's new in Bigg Boss Kannada 5.?

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada