For Quick Alerts
  ALLOW NOTIFICATIONS  
  For Daily Alerts

  ನಟ ವಿಜಯ್ ಸೂರ್ಯ ಹಾಗೂ ಕಾವ್ಯ ಶೆಟ್ಟಿ ಮಧ್ಯೆ ಅಂಥದ್ದೇನಿದೆ.?

  By Harshitha
  |

  'ಅಗ್ನಿಸಾಕ್ಷಿ' ಧಾರಾವಾಹಿ ಖ್ಯಾತಿಯ ಸಿದ್ಧಾರ್ಥ್ ಅಲಿಯಾಸ್ ವಿಜಯ್ ಸೂರ್ಯ ಹಾಗೂ ನಟಿ ಕಾವ್ಯ ಶೆಟ್ಟಿ ಮಧ್ಯೆ ಕುಚ್ ಕುಚ್ ನಡೆಯುತ್ತಿದ್ಯಾ.? ಹೀಗೊಂದು ಗುಸು ಗುಸು ಕೆಲ ದಿನಗಳ ಹಿಂದೆಯಷ್ಟೇ ಕೇಳಿಬಂದಿತ್ತು. ಅದು ನಟ ವಿಜಯ್ ಸೂರ್ಯ ಜೊತೆ ಕಾವ್ಯ ಶೆಟ್ಟಿ ಕ್ಲಿಕ್ ಮಾಡಿಕೊಂಡ ಒಂದು ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ್ಮೇಲೆ.

  ಈ ಮ್ಯಾಟರ್ ದಿನಪತ್ರಿಕೆಗಳಲ್ಲೂ ಸುದ್ದಿ ಆಯ್ತು. ಈಗ ಇದೇ ವಿಷಯದ ಬಗ್ಗೆ ನಟ ವಿಜಯ್ ಸೂರ್ಯ ಸ್ಪಷ್ಟನೆ ನೀಡಿದ್ದಾರೆ.

  'ಅಗ್ನಿಸಾಕ್ಷಿ' ಸಿದ್ಧಾರ್ಥ್ (ವಿಜಯ್ ಸೂರ್ಯ) ಜೀವನದ ಬಗ್ಗೆ ನೀವು ಕೇಳರಿಯದ ಕಹಿ ಸತ್ಯಗಳು

  ''ನನ್ನ ಹಾಗೂ ಕಾವ್ಯ ಶೆಟ್ಟಿ ಮಧ್ಯೆ ಏನೋ ನಡೆಯುತ್ತಿದೆ ಅಂತ ನ್ಯೂಸ್ ಬಂತು. ನಮ್ಮಿಬ್ಬರ ಮಧ್ಯೆ ಏನೂ ಇಲ್ಲ. ನಾನು ಬ್ಲೂ ಕಲರ್ ಶರ್ಟ್ ಹಾಕಿದ್ದೆ, ಅವರು ಬ್ಲೂ ಕಲರ್ ಡ್ರೆಸ್ ಹಾಕಿದ್ದರು. ಒಂದು ಫೋಟೋ ತೆಗೆದುಕೊಂಡ್ವಿ. ಅದರಿಂದ ಗಾಸಿಪ್ ಶುರು ಆಯ್ತು ಅಷ್ಟೆ'' ಎಂದು ಕಲರ್ಸ್ ಸೂಪರ್ ವಾಹಿನಿಯ 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ ವಿಜಯ್ ಸೂರ್ಯ ಕ್ಲಾರಿಟಿ ಕೊಟ್ಟಿದ್ದಾರೆ.

  ನಿಜ ಜೀವನದಲ್ಲಿ 'ಅಗ್ನಿಸಾಕ್ಷಿ' ಚಂದ್ರಿಕಾಗೆ ವಿಜಯ್ ಸೂರ್ಯ ಮೇಲೆ ಕಣ್ಣು.!

  ಅಂದ್ಹಾಗೆ, ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ 'ಇಷ್ಟಕಾಮ್ಯ' ಚಿತ್ರದಲ್ಲಿ ವಿಜಯ್ ಸೂರ್ಯ ಹಾಗೂ ಕಾವ್ಯ ಶೆಟ್ಟಿ ತೆರೆ ಹಂಚಿಕೊಂಡಿದ್ದರು.

  English summary
  Whats cooking between Vijay Suriya and Kavya Shetty.?

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X