ಮೈಬಣ್ಣದ ಬಗ್ಗೆ ವ್ಯಂಗ್ಯವಾಡಿದ್ದ ರಚ್ಚುಗೆ ಹನುಮಂತನ ತಿರುಗೇಟು ಹೇಗಿತ್ತು ನೋಡಿ
ಜೀ ಕನ್ನಡದಲ್ಲಿ ಭರ್ಜರಿ ಬ್ಯಾಚುಲರ್ ಶೋ ಕೂಡ ವೀಕೆಂಡ್ ಮನರಂಜನೆಯ ಕಾರ್ಯಕ್ರಮವಾಗಿದೆ. ಫಸ್ಟ್ ಸೀಸನ್‌ನಲ್ಲಿ ಹನುಮಂತು ಕೂಡ ಭಾಗಿಯಾಗಿದ್ದರು. ಆಗಷ್ಟೇ ಸರಿಗಮಪ ಮುಗಿಸಿ, ಭರ್ಜರಿ ಬ್ಯಾಚುಲರ್‌ಗೆ ಬಂದಿದ್ದರು. ಹನುಮಂತ ಅಂದ್ರೆನೇ ಮುಗ್ಧತೆಯ ಪ್ರತೀಕ. ಯಾವಾಗಲೂ, ಯಾರೇ ಇರಲಿ ಅವರಿಗೆ ತೋಚಿದಂತೆಯೇ ಮಾತಾಡುವುದು. ಯಶಸ್ಸು, ದುಡ್ಡು ಬಂತು ಅಂತ ಅತಿರೇಕದ, ಅಹಂಕಾರದ ಮಾತುಗಳನ್ನ ಆಡುವುದಿಲ್ಲ.
ಹನುಮಂತ ಅವರನ್ನ ತುಂಬಾ ನೀಟಾಗಿ ಅಬ್ಸರ್ವ್ ಮಾಡಿದ್ರೆ ಇನ್ನು ಒಂದು ಅರ್ಥ ಆಗದೆ ಇರುವುದಿಲ್ಲ. ಸೆಲ್ಫ್ ರೆಸ್ಪೆಕ್ಟ್ ಅನ್ನೋದು ತುಂಬಾ ಇದೆ. ಯಾವುದೇ ಕಾರಣಕ್ಕೂ ಅದಕ್ಕೆ ಧಕ್ಕೆಯಾಗುವುದಕ್ಕೆ ಬಿಡುವುದಿಲ್ಲ ಈ ಹಳ್ಳಿ ಹೈದ. ಆದರೆ ಅದ್ಯಾಕೋ ಈಗ ಹಳೆಯ ವಿಡಿಯೋವೊಂದು ವೈರಲ್ ಆಗಿದೆ.

ಭರ್ಜರಿ ಬ್ಯಾಚುಲರ್ ಹನುಮಂತು
ಅಂದಹಾಗೆ 'ಭರ್ಜರಿ ಬ್ಯಾಚುಲರ್' ಸೀಸನ್ 1ರಲ್ಲಿ ಹನುಮಂತ ಸ್ಪರ್ಧಿಯಾಗಿದ್ದರು. ಒಳ್ಳೆಯ ಮನರಂಜನೆಯನ್ನು ನೀಡಿದ್ದರು. ಹನುಮಂತ ಆ ಮುಗ್ಧತೆಯೇ ಮನರಂಜನೆ ಕೊಡುತ್ತದೆ. ಹನುಮಂತು ನಟಿಸಲ್ಲ, ತಾವಿದ್ದಂತೆಯೇ ಜೀವಿಸುತ್ತಾರೆ. ಈ 'ಭರ್ಜರಿ ಬ್ಯಾಚುಲರ್' ಶೋನಲ್ಲಿ ಹಳ್ಳಿ ಹೈದ ಹನುಮಂತುಗೆ ಸಿಟಿ ಹುಡುಗಿ ಐಶ್ವರ್ಯಾ ಜೋಡಿಯಾಗಿದ್ದರು. ಹಳ್ಳಿ ಮನೆಗೂ ಈ ಜೋಡಿ ಭೇಟಿ ನೀಡಿತ್ತು.
ಡಲ್ ಮೇಕಪ್ ಬಗ್ಗೆ ಅಭಿಪ್ರಾಯ
ಹನುಮಂತ ಸದ್ಯಕ್ಕೆ ಬಿಗ್ ಬಾಸ್ ಗೆದ್ದ ಖುಷಿಯಲ್ಲಿದ್ದಾರೆ. 'ಬಾಯ್ಸ್ ವರ್ಸಸ್ ಗರ್ಲ್ಸ್' ಶೋನಲ್ಲಿ ಮತ್ತಷ್ಟು ನಗಿಸುತ್ತಿದ್ದಾರೆ. ಇದರ ನಡುವೆ ಹಳೆಯ ವಿಡಿಯೋವೊಂದು ಈಗ ವೈರಲ್ ಆಗಿದೆ. ಒಂದು ಟಾಸ್ಕ್‌ನಲ್ಲಿ ಹನುಮಂತ ಹಾಗೂ ಐಶ್ವರ್ಯಾ ಭಾಗಿಯಾಗಿದ್ದರು. ಐಶ್ವರ್ಯಾ ಅವರಿಗೂ ಮೇಕಪ್ ಡಲ್ ಮಾಡಲಾಗಿತ್ತು. ಇದರ ಬಗ್ಗೆ ರಚಿತಾ ರಾಮ್ ಕೊಟ್ಟ ಅಭಿಪ್ರಾಯದ ವಿಡಿಯೋ ಅದಾಗಿದೆ. ಹನುಮಂತ ಬಣ್ಣದ ಬಗ್ಗೆ ಮಾತಾಡಿದ್ದ ವಿಡಿಯೋ ಈಗ ಇದ್ದಕ್ಕಿದ್ದ ಹಾಗೇ ಟ್ವಿಟ್ಟರ್‌ನಲ್ಲಿ ಟ್ರೆಂಡ್ ಆಗ್ತಾ ಇದೆ.
ಹನುಮಂತಗೆ ಮೇಕಪ್ ಪಾಠ
'ಯು ಲುಕ್ಕಿಂಗ್ ಡಾರ್ಕ್ ಐಶು. ಮೇ ಬಿ ನಮ್ಮ ಹನುಮಂತ ಕಲರ್‌ಗೆ ಮ್ಯಾಚ್ ಮಾಡೋದಕ್ಕೇನಾದರೂ ಈ ರೀತಿ ಮೇಕಪ್ ಮಾಡಿರಬಹುದು. ಅವ್ನಿಗೆ ಪ್ರತಿ ಟಾಸ್ಸ್‌ನಲ್ಲೂ ಪೇಮೆಂಟ್ ಇದ್ರೆ ಸೀರಿಯಸ್ ಆಗಿ ಮಾಡ್ತಾನೆ ಅನ್ಸುತ್ತೆ. ಒಂದು ಮೇಕಪ್ ಮಾಡೋದಕ್ಕೆ ಆಗಲ್ವಾ ಸೀರಿಯಸ್ ಆಗಿ, ಏನೋ ಒಂದು ಹೇಳ್ತಾ ಇರ್ತೀಯಾ ಯಾವಾಗ್ಲೂ ನೀನು' ಎಂದಿದ್ದಾರೆ.
ರಚ್ಚುಗೆ ಹಳ್ಳಿ ಹೈದ ಕೌಂಟರ್
'ಪೇಮೆಂಟ್ ಇದೆ ಅಕ್ಕ ಆದರೆ ಬರೀ ಸೋಲುವ ಟಾಸ್ಕ್ ಅನ್ನೇ ಕೊಡುತ್ತಿದ್ದಾರೆ. ಏನೋ ಒಂದು ಹೇಳದಕ್ಕ ಕರ್ಕೊಂಡು ಬಂದಾರಾ ಅಕ್ಕ ನನ್ನ' ಅಂತ ತಮಾಷೆಯಾಗಿಯೇ ತಿರುಗೇಟು ಕೊಟ್ಟಿದ್ದಾನೆ ಹನುಮಂತ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಹನುಮಂತ ಪರವಾಗಿ ಕಮೆಂಟ್ ಹರಿದು ಬರುತ್ತಿವೆ. ಹೆಂಗೆ ನಮ್ಮ ಹನುಮಂತ, ಅಲ್ಲೇ ಪೂಜೆ, ಅಲ್ಲೆ ಪ್ರಸಾದ ಅಂತೆಲ್ಲ ಹೊಗಳುತ್ತಿದ್ದಾರೆ. ಅಲ್ಲಿ ನಡೆದದ್ದು ತಮಾಷೆಯೂ ಇರಬಹುದು. ಆದರೆ ಈ ವಿಡಿಯೋ ನೋಡಿದ ಹನುಮಂತ ಫ್ಯಾನ್ಸ್ ರಾಕ್, ರಚಿತಾ ರಾಮ್ ಫ್ಯಾನ್ಸ್ ಶಾಕ್ ಆಗಿದ್ದಾರೆ.


Click it and Unblock the Notifications











