ಕುಗ್ರಾಮದಿಂದ ಓಡಿ ಬಂದ ಸುರೇಶ್ ನಿಜಕ್ಕೂ ಕೋಟಿ ಕೋಟಿ ಸಂಪಾದಿಸಿದ್ದು ಹೇಗೆ?
ಇವತ್ತಿನ ಕಾಲದಲ್ಲಿ ಒಂದೊಂದು ರೂಪಾಯಿ ದುಡಿಯುವುದು ಅಷ್ಟು ಸುಲಭವಲ್ಲ. ಆದರೆ ಕೆಲವರು ಇದ್ದಕ್ಕಿದಂತೆ ಶ್ರೀಮಂತರಾಗಿಬಿಡುತ್ತಾರೆ. ಕಠಿಣ ಪರಿಶ್ರಮದಿಂದ ಅದ್ಭುತಗಳನ್ನು ಸಾಧಿಸಿಬಿಡುತ್ತಾರೆ. ಬಿಗ್‌ಬಾಸ್ ಕನ್ನಡ ಸೀಸನ್ 11 ಆರಂಭವಾಗಿದೆ. ಮನೆಯಲ್ಲಿ ಗೋಲ್ಡ್ ಸುರೇಶ್ ಎಲ್ಲರ ಗಮನ ಸೆಳೆಯುತ್ತಿದ್ದಾರೆ.
ಮೈತುಂಬಾ ಚಿನ್ನಾಭರಣ ಹಾಕಿಕೊಂಡು ಸುತ್ತಾಡುವ ಸುರೇಶ್ ಗೋಲ್ಡ್ ಸುರೇಶ್ ಎಂದು ಜನಪ್ರಿಯತೆ ಗಳಿಸಿದ್ದಾರೆ. 32 ವರ್ಷ ವಯಸ್ಸಿನಲ್ಲಿ ಕೋಟಿ ಕೋಟಿ ಸಂಪಾದನೆ ಮಾಡಿರುವುದಾಗಿ ಹೇಳಿಕೊಂಡಿದ್ದಾರೆ. ಉದ್ಯಮ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಕಠಿಣ ಪರಿಶ್ರಮದಿಂದ ಇದೆಲ್ಲಾ ಸಾಧ್ಯವಾಯಿತು ಎಂದಿದ್ದಾರೆ. ತಮಗೆ ಮೋಸ ಮಾಡಿದ್ದವರೆ ಸವಾಲು ಹಾಕಿದ್ದೆ. ನಿಮಗಿಂತಹ ಹೆಚ್ಚು ಚಿನ್ನಾಭರಣ ಹಾಕಿಕೊಂಡು ಓಡಾಡುತ್ತೇನೆ ಎಂದು. ಅದೇ ಕಾರಣಕ್ಕೆ ಹೀಗೆ ಕುತ್ತಿಗೆಯಲ್ಲಿ ಚಿನ್ನದ ಚೈನ್‌ಗಳು, ಕೈಯಲ್ಲಿ ಚಿನ್ನದ ಬ್ರೇಸ್‌ಲೈಟ್, ಉಂಗುರಗಳನ್ನು ಧರಿಸುತ್ತಾರಂತೆ.

ಯಾವುದೇ ಸಭೆ ಸಮಾರಂಭಗಳಿಗೆ ಹೋಗುವಾಗ ಸುರೇಶ್ ಈ ರೀತಿ ಚಿನ್ನಾಭರಣ ಧರಿಸುತ್ತಾರಂತೆ. ಈ ಸಮಯದಲ್ಲಿ ಬಾಡಿಗಾರ್ಡ್ಸ್ ಜೊತೆಗಿರುತ್ತಾರೆ. ಇನ್ನು ಇದೇ ಅವತಾರದಲ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ ವೀಡಿಯೋಗಳನ್ನು ಮಾಡಿ ಗಮನ ಸೆಳೆದಿದ್ದಾರೆ. ಇನ್ನು ದುಬಾರಿ ಕಾರುಗಳು ಗೋಲ್ಡ್ ಸುರೇಶ್ ಬಳಿಯಿದೆ. ಬೆಳಗಾವಿಯ ಅಥಣಿ ತಾಲೂಕಿನ ಸುರೇಶ್ ರೈತನಾಗಿ ಕೆಲಸ ಮಾಡುವುದು ಇಷ್ಟವಿಲ್ಲದೇ ಬೆಂಗಳೂರಿಗೆ ಬಂದರಂತೆ.
ಬೆಂಗಳೂರಿಗೆ ಬಂದ ಬಳಿಕ ಸಣ್ಣಪುಟ್ಟ ಕೆಲಸಗಳನ್ನು ಮಾಡಿಕೊಂಡಿದ್ದರು. ಬಳಿಕ ಕ್ರಿಯೇಟಿವ್ ಇಂಟೀರಿಯರ್ ಎಂಬ ಸಂಸ್ಥೆ ಸ್ಥಾಪಿಸಿದರು. ಬಳಿಕ ಹಂತ ಹಂತವಾಗಿ ಬೆಳೆದು ಬಂದರು. ಸದ್ಯ ಅವರ ಕಂಪನಿಯಲ್ಲಿ 150 ಜನ ಕೆಲಸ ಮಾಡುತ್ತಿದ್ದಾರೆ. ಬಿಗ್‌ಬಾಸ್ ಮನೆಗೆ ಹೋಗುವ ಮುನ್ನ ಕೆಲ ಯೂಟ್ಯೂಬ್ ಚಾನಲ್‌ಗಳಿಗೆ ಸುರೇಶ್ ಸಂದರ್ಶನ ಕೊಟ್ಟು ಹೋಗಿದ್ದಾರೆ. ತಮ್ಮ ಜೀವನದ ಏಳುಬೀಳಿನ ಕಥೆಯನ್ನು ಹಂಚಿಕೊಂಡಿದ್ದಾರೆ.

ಗೋಲ್ಡ್ ಸುರೇಶ್ ಮಿ. ಡಿ ಪಿಕ್ಚರ್ಸ್ ಎಂಬ ಯೂಟ್ಯೂಬ್ ಚಾನಲ್‌ನಲ್ಲಿ ತಮ್ಮ ಕಥೆಯನ್ನು ಬಿಚ್ಚಿಟ್ಟಿದ್ದಾರೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿ ಬರತ್ನಳ್ಳಿ ಎಂಬ ಕುಗ್ರಾಮ ನಮ್ಮದು. ರೈತಾಪಿ ಕುಟುಂಬದಲ್ಲಿ ಹುಟ್ಟಿದವನು. ಚಿಕ್ಕಂದಿನಲ್ಲಿ ಬಹಳ ಉಡಾಳ ಎನ್ನುವ ಕಾರಣಕ್ಕೆ ಮೈಸೂರಿನ ಹಾಸ್ಟೆಲ್‌ನಲ್ಲಿ ಓದುವಂತಾಯಿತು. ಮತ್ತೆ ಊರಿಗೆ ಹೀಗಿ 10ನೇ ತರಗತಿವರೆಗೂ ಓದಿದ್ದೆ. ಬಳಿಕ ಜಮೀನನಲ್ಲಿ ಕೆಲಸ ಮಾಡಲ್ಲ ಎಂದು ಬೆಂಗಳೂರಿನಲ್ಲಿ ಕೆಲಸ ಹುಡುಕಿ ಬಂದೆ.
ಮನೆ ಬಿಟ್ಟು ಬೆಂಗಳೂರಿಗೆ ಓಡಿ ಬಂದೆ. ನಾನು ಇಷ್ಟು ಸಾಧಿಸುತ್ತೇನೆ ಎಂದು ನನಗೆ ಗೊತ್ತಿರಲಿಲ್ಲ. ನನಗೆ ಸಿಕ್ಕ ಸ್ನೇಹಿತರಿಂದ ನಾನು ಇಷ್ಟೆಲ್ಲಾ ಸಾಧಿಸಿದ್ದೀನಿ. ಆರಂಭದ ದಿನಗಳಲ್ಲಿ ನನಗೆ ಒಳ್ಳೆ ಸ್ನೇಹಿತರು ಸಿಕ್ಕರು. ಬೆಂಗಳೂರಿಗೆ ಬಂದಾಗ ಮೊದಲ ಒಂದು ವಾರ ರೈಲು ನಿಲ್ದಾಣದಲ್ಲೇ ಮಲಗಿದ್ದೆ. ಮೊದಲಿಗೆ ಒಂದು ಖಾಸಗಿ ಸಂಸ್ಥೆಗೆ ಸೇರಿದೆ. ಅಲ್ಲಿ 3,000 ಸಂಬಳ ಸಿಗುತ್ತಿತ್ತು. 3 ತಿಂಗಳ ಬಳಿಕ 29 ಸಾವಿರಕ್ಕೆ ಬೇರೆ ಕಡೆ ಕೆಲಸಕ್ಕೆ ಸೇರಿದೆ ಎಂದು ಸುರೇಶ್ ಹೇಳಿಕೊಂಡಿದ್ದಾರೆ.
ರಾಷ್ಟ್ರೀಯ ಸ್ವಯಂ ಸೇವಕ ಸಂಘದಲ್ಲಿ ಗುರ್ತಿಸಿಕೊಂಡೆ. ಅಲ್ಲಿ ನಾಲ್ಕು ವರ್ಷ ದುಡಿದೆ. ಅಲ್ಲಿ ಸಿಕ್ಕ ಸ್ನೇಹಿತರು ನಿನ್ನ ಕ್ರಿಯೇಟಿವ್ ಮೈಂಡ್ ಚೆನ್ನಾಗಿದೆ. ಏನಾದರೂ ಸಾಧಿಸು ಎಂದು ಸ್ನೇಹಿತರೊಬ್ಬರು ಹೇಳಿದರು. ಅವರ ಮಾರ್ಗದರ್ಶನದಲ್ಲೇ ನಾನು ದೆಹಲಿಗೆ ಹೋಗಿ ಒಂದು ಕೋರ್ಸ್ ಮಾಡಿಕೊಂಡು ಬಂದೆ. ಅಲ್ಲಿಂದ ಬಂದ ಬಳಿಕ ಕ್ರಿಯೇಟಿವ್ ಇಂಟೀರಿಯರ್ ಸಂಸ್ಥೆ ಹುಟ್ಟು ಹಾಕಿದೆ. ಮೊದಲಿಗೆ ಒಬ್ಬನೇ ಕೆಲಸ ಮಾಡಲು ಆರಂಭಿಸಿದ್ದೆ.
ಇವತ್ತು 150 ಜನ ಕೆಲಸಗಾರರು ನನ್ನ ಬಳಿ ಕೆಲಸ ಮಾಡುತ್ತಾರೆ. ಇಂಟೀರಿಯರ್ ಡಿಸೈನ್ ಜೊತೆಗೆ ಕನ್‌ಸ್ಟ್ರಕ್ಷನ್ ಶುರು ಮಾಡುತ್ತಿದ್ದೀನಿ. ಸ್ನೇಹಿತರ ಜೊತೆ ಸೇರಿ ಎಫ್‌ಎಂ ಹಾಗೂ ನ್ಯೂಸ್ ಚಾನಲ್ ಮಾಡಿದ್ದೆ. ಆದರೆ ಅದು ಚೆನ್ನಾಗಿ ಆಗಲಿಲ್ಲ ಎಂದು ಕೈಬಿಟ್ಟೆ. ಹೋಟೆಲ್ ಬ್ಯುಸಿನೆಸ್ ಶುರು ಮಾಡುತ್ತಿದ್ದೀನಿ. ಬೆಂಗಳೂರಿನಲ್ಲಿ ಎರಡ್ಮೂರು ಕಡೆ ಹೋಟೆಲ್ ಶುರುವಾಗುತ್ತದೆ. ಇನ್ನು ನಾಲ್ಕೈದು ವರ್ಷದಲ್ಲಿ 2000 ಜನಕ್ಕೆ ಕೆಲಸ ಕೊಡಬೇಕು ಎನ್ನುವ ಕನಸಿದೆ ಎಂದಿದ್ದಾರೆ.
ನನಗೆ ನನ್ನ ಸ್ನೇಹಿತರೇ ಮೋಸ ಮಾಡಿದ್ದಾಗ ಸನ್ಯಾಸಿ ಆಗಿಬಿಡೋಣ ಎಂದುಕೊಂಡಿದ್ದೆ. ಕೊನೆಗೆ ಗುರುಗಳ ಮಾರ್ಗದರ್ಶನದಂತೆ ಮತ್ತೆ ಉದ್ಯಮ ಕ್ಷೇತ್ರದಲ್ಲಿ ತೊಡಗಿಸಿಕೊಂಡೆ ಎಂದು ಗೋಲ್ಡ್ ಸುರೇಶ್ ವಿವರಿಸಿದ್ದಾರೆ. ಇನ್ನು ತಮ್ಮ ಬಳಿ ಒಟ್ಟು ಎಷ್ಟು ಆಸ್ತಿ, ಕಾರ್ ಇದೆ ಎನ್ನುವ ಪ್ರಶ್ನೆಗೆ ತಕ್ಕಮಟ್ಟಿಗೆ ಸಂಪಾದಿಸಿದ್ದೀನಿ. ನಾನು ಹಾಕಿರುವ ಚಿನ್ನ ನಕಲಿ ಅಲ್ಲ, ಎಲ್ಲದಕ್ಕೂ ತೆರಿಗೆ ಕಟ್ಟಿದ್ದೀನಿ ಎಂದು ಸುರೇಶ್ ಬಿಚ್ಚಿಟ್ಟಿದ್ದಾರೆ. ಅಂದಾಜು 2 ಕೋಟಿ ರೂ. ಮೌಲ್ಯದ ಚಿನ್ನಾಭರಣ ಅವರು ಧರಿಸುತ್ತಾರೆ ಎನ್ನಲಾಗ್ತಿದೆ.


Click it and Unblock the Notifications