ನಿವೇದಿತಾ ಗೌಡ ಹಾಕೋ ಸಿಂಪಲ್ ಅಂಡ್ ಗ್ರ್ಯಾಂಡ್ ಸೀರೆಗಳು ಎಲ್ಲಿ ಸಿಗುತ್ತೆ ಗೊತ್ತಾ?
ಆಲ್ಮೋಸ್ಟ್ ಎಲ್ಲಾ ಮಹಿಳೆಯರಿಗೂ ಸೀರೆಗಳು, ಒಡವೆಗಳ ಮೇಲೆ ವಿಶೇಷವಾದ ಮೋಹ ಇದ್ದೆ ಇರುತ್ತದೆ. ಯಾರೇ ಹೊಸದೊಂದು ಡಿಸೈನ್ ಹಾಕಿದರು, ಅದರ ಮೇಲೆ ಕಣ್ಣು ತಾನಾಗೇ ಹೋಗಿ ಬಿಡುತ್ತದೆ. ಎಷ್ಟು ಬೆಲೆ, ಹೇಗಿದೆ ಎಂಬೆಲ್ಲಾ ವಿಚಾರಗಳ ಮೇಲೆ ಬೆಳಕು ಚೆಲ್ಲುತ್ತಾರೆ.
ತುಂಬಾ ಹೊಸದಾಗಿರುವ ಡಿಸೈನ್ ಕಂಡರೆ ನೆಕ್ಸ್ಟ ಅದನ್ನ ತೆಗೆದುಕೊಳ್ಳುವ ಪ್ಲ್ಯಾನ್‌ನಲ್ಲಿರುತ್ತಾರೆ. ಇನ್ನು ಸೀರೆಗಳ ವಿಚಾರಗಳನ್ನು ಕೇಳುವುದೇ ಬೇಡ. ಆನ್ಲೈನ್‌ನಲ್ಲಿ ಕಣ್ಣಿಗೆ ಬೇಕಾದ ಸೀರೆಗಳೇ ಸಿಗುತ್ತವೆ. ಇಷ್ಟೆಲ್ಲಾ ಹೇಳುವುದಕ್ಕೆ ಕಾರಣ ನಿವೇದಿತಾ ಗೌಡ.

ಬಿಗ್ ಬಾಸ್ ಮೂಲಕ ಖ್ಯಾತಿ ಪಡೆದು, 'ಗಿಚ್ಚಿಗಿಲಿಗಿಲಿ'ಯಲ್ಲಿ ರಂಜಿಸಿದ ನಿವೇದಿತಾ ಗೌಡ ಚಂದನದ ಗೊಂಬೆಯೇ ಸರಿ. ಬಿಗ್ ಬಾಸ್‌ನಲ್ಲೂ ಗೊಂಬೆ ಅಂತಾನೇ ಫೇಮಸ್ ಆದವರು. ಈಗ ಸಿನಿಮಾದಲ್ಲಿ ನಟನೆ ಕೂಡ ಮಾಡುತ್ತಿದ್ದಾರೆ. ಅವರ ಸೋಷಿಯಲ್ ಮೀಡಿಯಾ ಫಾಲೋವರ್ಸ್ ಕೂಡ ಹೆಚ್ಚಾಗ್ತಾ ಇದ್ದಾರೆ. ಇತ್ತಿಚೆಗಂತು ಸೀರೆಯಲ್ಲಿ ನಿವೇದಿತಾ ಬ್ಯೂಟಿ ಇನ್ನಷ್ಟು ಹೆಚ್ಚಾಗಿದೆ.
ಸೀರೆಯಲ್ಲಿ ನಿವೇದಿತಾ ಮಿಂಚಿಂಗ್
ನಿವೇದಿತಾ ಗೌಡ ಗ್ಲಾಮರ್ ಗೊಂಬೆ. ಅದು ಎಲ್ಲರಿಗೂ ಗೊತ್ತು. ಬ್ಯೂಟಿ ಕೂಡ ಅಷ್ಟೇ ಅದ್ಭುತವಾಗಿ ಮೆಂಟೈನ್ ಮಾಡಿದ್ದಾರೆ. ಮಾಡ್ರನ್ ಡ್ರೆಸ್‌ನೊಂದಿಗೆ ಇತ್ತಿಚೆಗೆ ಹೆಚ್ಚು ಸೀರೆಯಲ್ಲಿಯೇ ಕಂಗೊಳಿಸುತ್ತಿದ್ದಾರೆ. ಅದರಲ್ಲೂ ವಿಭಿನ್ನವಾದ ಸೀರೆಗಳು, ವಾವ್ ಎನಿಸುವಂತ ಡಿಸೈನ್ ಸೀರೆಗಳು ಅದಾಗಿವೆ.

ಸೂರ್ಯನ ಬೆಳಕಲ್ಲಿ ಹೆಚ್ಚಾದ ಹೊಳಪು
ಬ್ಲೂ ಕಲರ್ ಸೀರೆ ಉಟ್ಟು ನಿವೇದಿತಾ ಪೋಸ್ ಕೊಟ್ಟಿದ್ದಾರೆ. ಆ ಸೀರೆ ಸಿಂಪಲ್ ಆಗಿದ್ರು ಗ್ರ್ಯಾಂಡ್ ಆಗಿ ಕಾಣಿಸುತ್ತಿದೆ. ಬ್ಲೂ ಪ್ಲೈನ್ ಸೀರೆಗೆ ಗೋಲ್ಡನ್ ಕಲರ್ ಬಾರ್ಡರ್ ಎಣೆಯಲಾಗಿದೆ. ಬ್ಲೌಸ್‌ಗೆ ಮಾತ್ರ ಒಂದಷ್ಟು ಡಿಸೈನ್ ಮಾಡಲಾಗಿದೆ. ಈ ಬ್ಲೂ ಕಲರ್ ಸೀರೆಯುಟ್ಟು ನಿವೇದಿತಾ ಟೆರೆಸ್ ಮೇಲೆ ಪೋಸ್ ನೀಡಿದ್ದಾರೆ. ಮುಸ್ಸಂಜೆಯ ಸೂರ್ಯನ ಕಿರಣಗಳ ನಡುವೆ ಪೋಸ್ ನೀಡಿದ್ದು, ಬ್ಯೂಟಿ ಇನ್ನಷ್ಟು ಹೆಚ್ಚಾಗಿದೆ.
ಕೆಂಪು ಸೀರೆ.. ನಿವೇದಿತಾ ತಂಪು
ಇತ್ತಿಚೆಗಷ್ಟೇ ರೆಡ್ ಕಲರ್ ಸೀರೆಯುಟ್ಟು, ಮಿರರ್ ಮುಂದೆ ಪೋಸ್ ನೀಡಿದ್ದರು. ಅದಕ್ಕೆ ರೆಡ್ ಅಂತ ಬರೆದು ಲವ್ ಸಿಂಬಲ್ ಹಾಕಿದ್ದಾರೆ. ಈ ಸೀರೆ ಕೂಡ ಅಷ್ಟೇ ಪ್ಲೈನ್ ಆಗಿದ್ದರೂ ಸೊಗಸಾಗಿದೆ. ಬಾರ್ಡರ್ ಮರೂನ್ ಕಲರ್ ಫ್ಲವರ್‌ನಿಂದ ಡಿಸೈನ್ ಮಾಡಲಾಗಿದೆ. ಪಾರ್ಟಿಗಳಿಗೆ ಹಾಕುವುದಕ್ಕೆ ಸಖತ್ತಾಗಿ ಕಾಣಲಿದೆ. ನಿವೇದಿತಾ ಗೌಡ ಆ ಸೀರೆಮ್ಯಾಚ್ ಆಗುವಂತ ಜ್ಯುವೆಲ್ಲರಿ ಕೂಡ ಧರಿಸಿದ್ದಾರೆ. ಪಾಚಿ ಹಸಿರು ಬಣ್ಣದ ಮಣಿಗಳ ಚೋಕರ್ ಧರಿಸಿದ್ದಾರೆ.
ಮಾಯಾ ಡಿಸೈನರಿ ಕಡೆಯಿಂದ ಸೀರೆ ಗಿಫ್ಟ್
ಇತ್ತಿಚೆಗೆ ನಿವೇದಿತಾ ಗೌಡ ಒಂದಷ್ಟು ಸೀರೆಗಳನ್ನು ಹಾಕಿ ಪೋಸ್ ನೀಡಿದ್ದಾರೆ. ಅದರಲ್ಲಿ ಒಂದಕ್ಕಿಂತ ಒಂದು ಭಿನ್ನವಾಗಿವೆ. ಬ್ಲೂ, ರೆಡ್, ಫ್ಲವರ್ ಸೀರೆ, ಟಿಶ್ಯೂ ಡಿಸೈನ್ ಲೆಹೆಂಗಾ ಹೀಗೆ ವಿಭಿನ್ನ ಸೀರೆಗಳನ್ನ ಹಾಕಿದ್ದಾರೆ. ಇಷ್ಟು ಡಿಫ್ರೆಂಟ್ ಸೀರೆಗಳು ಸಿಗುವುದು ಮಾಯಾ ಡಿಸೈನರ್ ಎಂಬ ಬೂಟಿಕ್‌ನಲ್ಲಿ. ಸಾಕಷ್ಟು ಸೆಲೆಬ್ರೆಟಿಗಳು ಇದರ ಪ್ರಮೋಷನ್ ಮಾಡಿದ್ದಾರೆ. ಹಾಗೇ ನಿವೇದಿತಾ ಕೂಡ ಈ ಬೂಟಿಕ್‌ನ ಸೀರೆಗಳಲ್ಲಿ ಗೊಂಬೆಯಂತೆ ಕಾಣುತ್ತಿದ್ದಾರೆ. ಮೋಹಕ ನೋಟ ಬೀರುತ್ತಾ, ಇನ್ನಷ್ಟು ಹುಡುಗರ ಹಾರ್ಟ್ ಕದಿಯುತ್ತಿದ್ದಾರೆ.


Click it and Unblock the Notifications











