'ಕನ್ನಡದ ಕೋಟ್ಯಧಿಪತಿ'ಯಲ್ಲಿ ಅತಿ ಹೆಚ್ಚು ಹಣ ಗೆದ್ದಿರುವ 'ಸ್ಟಾರ್' ಯಾರು.?

By Bharath Kumar

Recommended Video

ಸ್ಯಾಂಡಲ್‌ವುಡ್ ಸ್ಟಾರ್ಸ್ ಕನ್ನಡದ ಕೋಟ್ಯಾಧಿಪತಿಯಲ್ಲಿ ಗೆದ್ದ ಹಣ ಎಷ್ಟು ನೋಡಿ..! Filmibeat Kannada

ಕಿರುತೆರೆಯ ಜನಪ್ರಿಯ ಕಾರ್ಯಕ್ರಮ 'ಕನ್ನಡದ ಕೋಟ್ಯಧಿಪತಿ' ಮೂರನೇ ಆವೃತ್ತಿ ನಡೆಯುತ್ತಿದೆ. ನಟ ರಮೇಶ್ ಅರವಿಂದ್ಈ ಕಾರ್ಯಕ್ರಮನ್ನ ನಿರೂಪಣೆ ಮಾಡ್ತಿದ್ದಾರೆ. ಮೂರನೇ ಆವತ್ತಿಯ ಮೊದಲ ಸೆಲೆಬ್ರಿಟಿ ಸ್ಪರ್ಧಿಯಾಗಿ ಗೋಲ್ಡನ್ ಸ್ಟಾರ್ ಗಣೇಶ್ ಆಗಮಿಸಿದ್ದರು.

ಇದಕ್ಕೂ ಮುಂಚೆ ಎರಡು ಆವೃತ್ತಿಗಳು ನಡೆದಿದ್ದವು. ಪುನೀತ್ ರಾಜ್ ಕುಮಾರ್ ಸಾರಥ್ಯದಲ್ಲಿ ಮೂಡಿ ಬಂದಿದ್ದ ಸೀಸನ್ ಒಂದು ಮತ್ತು ಎರಡಲ್ಲಿ ಹಲವು ಸಿನಿ ತಾರೆಯರು ಭಾಗವಹಿಸಿದ್ದರು.

ಕ್ರೇಜಿಸ್ಟಾರ್ ರವಿಚಂದ್ರನ್, ನಟಿ ರಮ್ಯಾ, ಲಕ್ಷ್ಮಿ, ಪ್ರಭುದೇವ, ಅನಿಲ್ ಕುಂಬ್ಳೆ, ಸೃಜನ್ ಲೋಕೇಶ್, ಉಪೇಂದ್ರ, ಜಗ್ಗೇಶ್, ರಾಧಿಕಾ ಪಂಡಿತ್, ಸಿಹಿ ಕಹಿ ಚಂದ್ರು, ಅಕುಲ್ ಬಾಲಾಜಿ, ಸೇರಿದಂತೆ ಹಲವು ಕಿರುತೆರೆ ಕಲಾವಿದರು ಕೂಡ ಹಾಟ್ ಸೀಟ್ ನಲ್ಲಿ ಕೂತಿದ್ದರು. ಹಾಗಿದ್ರೆ, ಇದುವರೆಗೂ ಯಾವ ಸೆಲೆಬ್ರಿಟಿ ಅತಿ ಹೆಚ್ಚು ಹಣ ಗೆದ್ದಿದ್ದಾರೆ.? ಮುಂದೆ ಓದಿ.....

ಮೊದಲ ಸೆಲೆಬ್ರಿಟಿ ರಮ್ಯಾ

ಮೊದಲ ಸೆಲೆಬ್ರಿಟಿ ರಮ್ಯಾ

ಕನ್ನಡದ ಕೋಟ್ಯಧಿಪತಿಯ ಮೊದಲ ಸೆಲೆಬ್ರಿಟಿ ಸ್ಪರ್ಧಿಯಾಗಿ ಭಾಗವಹಿಸಿದ್ದು ಮೋಹಕ ತಾರೆ ನಟಿ ರಮ್ಯಾ. ರಮ್ಯಾ ಈ ಆಟದಲ್ಲಿ 3.20 ಲಕ್ಷ ಗೆಲ್ಲುವ ಮೂಲಕ ಶುಭಾರಂಭ ಮಾಡಿದರು.

ಗೋಲ್ಡನ್ ಸ್ಟಾರ್ ಗೆದ್ದಿದ್ದೆಷ್ಟು.?

ಗೋಲ್ಡನ್ ಸ್ಟಾರ್ ಗೆದ್ದಿದ್ದೆಷ್ಟು.?

ಕನ್ನಡದ ಕೋಟ್ಯಧಿಪತಿಯ ಮೂರನೇ ಆವೃತ್ತಿಯ ಮೊದಲ ಸ್ಪರ್ಧಿಯಾಗಿದ್ದ ಗಣೇಶ್ ಅವರು ತಮ್ಮ ಚಾಣಕ್ಷತನದಿಂದ 12.50 ಲಕ್ಷ ಗೆದ್ದಿದ್ದಾರೆ. 25 ಲಕ್ಷದ ಪ್ರಶ್ನೆಗೆ ಆಟವನ್ನ ಕ್ವಿಟ್ ಮಾಡಿದ ಗಣೇಶ್ ಈ ಆವೃತ್ತಿಯ ಮೊದಲ ಸೆಲೆಬ್ರಿಟಿ ಸ್ಪರ್ಧಿ.

ಪ್ರಭುದೇವ 25 ಲಕ್ಷ

ಪ್ರಭುದೇವ 25 ಲಕ್ಷ

ಬಹುಭಾಷಾ ನಟ, ನೃತ್ಯ ನಿರ್ದೇಶಕ ಪ್ರಭುದೇವ ಕನ್ನಡದ ಕೋಟ್ಯಧಿಪತಿಯಲ್ಲಿ ಭಾಗವಹಿಸಿದ್ದರು. ದಾಖಲೆಗಳ ಪ್ರಕಾರ ಪ್ರಭುದೇವ 25 ಲಕ್ಷ ಹಣವನ್ನ ಗೆದ್ದಿದ್ದರು. ಈ ಹಣವನ್ನ ಚಾರಿಟಿಯೊಂದಕ್ಕೆ ನೀಡಿ ಸಹಾಯ ಮಾಡಿದ್ದರು.

ಅನಿಲ್ ಕುಂಬ್ಳೆ 25 ಲಕ್ಷ

ಅನಿಲ್ ಕುಂಬ್ಳೆ 25 ಲಕ್ಷ

ಭಾರತದ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ವಿಶ್ವ ಕಂಡ ಶ್ರೇಷ್ಠ ಶ್ಪಿನ್ ಬೌಲರ್ ಕನ್ನಡಿಗ ಅನಿಲ್ ಕುಂಬ್ಳೆ ಕೂಡ ಕನ್ನಡದ ಕೋಟ್ಯಧಿಪತಿಯ ಹಾಟ್ ಸೀಟ್ ನಲ್ಲಿ ಕೂತಿದ್ದರು. 25 ಲಕ್ಷ ಬಹುಮಾನ ಗೆದ್ದಿದ್ದ ಅನಿಲ್ ಕುಂಬ್ಳೆ ಈ ಹಣವನ್ನ ಕ್ಯಾನ್ಸರ್ ಪೀಡಿತರಿಗಾಗಿ ನೀಡಿದರು.

12.5 ಲಕ್ಷದ ಗೆದ್ದ ರವಿಚಂದ್ರನ್

12.5 ಲಕ್ಷದ ಗೆದ್ದ ರವಿಚಂದ್ರನ್

ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಕೂಡ ಕನ್ನಡದ ಕೋಟ್ಯಧಿಪತಿಯಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದರು. ಇದು ಕನ್ನಡದ ಕೋಟ್ಯಧಿಪತಿಯ 50 ನೇ ಎಪಿಸೋಡ್ ಆಗಿತ್ತು. ಈ ಕಾರ್ಯಕ್ರಮದಿಂದ ಬಂದ ಹಣವನ್ನ ಸಮಾಜಿಕ ಕೆಲಸಕ್ಕಾಗಿ ಬಳಸಲಾಯಿತು.

ಉಪೇಂದ್ರ ಗೆದ್ದಿದ್ದು 6.40 ಲಕ್ಷ

ಉಪೇಂದ್ರ ಗೆದ್ದಿದ್ದು 6.40 ಲಕ್ಷ

ನಟ ಉಪೇಂದ್ರ ಅವರು ಕನ್ನಡದ ಕೋಟ್ಯಧಿಪತಿಯ ಹಾಟ್ ಸೀಟ್ ನಲ್ಲಿ ಭಾಗವಹಿಸಿದ್ದರು. ಉಪ್ಪಿಯ ಬುದ್ದಿವಂತಿಕೆ ಗೆದ್ದಿದ್ದು 6.40 ಲಕ್ಷ ಹಣ. ಈ ಬಹುಮಾನವನ್ನ ಶಾಲೆಯ ಅಭಿವೃದ್ದಿ ಕೆಲಸಕ್ಕಾಗಿ ನೀಡಿದರು.

6.40 ಲಕ್ಷ ಗೆದ್ದ ಸೃಜನ್ ಲೋಕೇಶ್

6.40 ಲಕ್ಷ ಗೆದ್ದ ಸೃಜನ್ ಲೋಕೇಶ್

ಮಜಾ ಟಾಕೀಸ್ ಖ್ಯಾತಿಯ ನಟ ಸೃಜನ್ ಲೋಕೇಶ್ ಕೂಡ ಕನ್ನಡದ ಕೋಟ್ಯಧಿಪತಿಯಲ್ಲಿ ಸ್ಪರ್ಧಿಯಾಗಿದ್ದರು. ಈ ಆಟದಲ್ಲಿ ಸೃಜನ್ ಗೆದ್ದಿದ್ದು 6.40 ಲಕ್ಷ. ಈ ಹಣವನ್ನ ಬ್ರಹ್ಮ ಚಾರಿಟಿ ಟ್ರಸ್ಟ್ ಗೆ ನೀಡಲಾಯಿತು.

ರಾಧಿಕಾ ಗೆದ್ದಿದ್ದೆಷ್ಟು.?

ರಾಧಿಕಾ ಗೆದ್ದಿದ್ದೆಷ್ಟು.?

ಸ್ಯಾಂಡಲ್ ವುಡ್ ನಟಿ ರಾಧಿಕಾ ಪಂಡಿತ್ ಕೂಡ ಕನ್ನಡದ ಕೋಟ್ಯಧಿಪತಿಯ ಹಾಟ್ ಸೀಟ್ ನಲ್ಲಿ ಕೂತಿದ್ದರು. ರಾಧಿಕಾ ಈ ಆಟದಲ್ಲಿ 3.20 ಲಕ್ಷ ಬಹುಮಾನವನ್ನ ಗೆದ್ದು, ಟ್ರಸ್ಟ್ ವೊಂದಕ್ಕೆ ಸಹಾಯ ಮಾಡಿದರು.

ಜಗ್ಗೇಶ್ ಕೂಡ ಇದ್ದರು

ಜಗ್ಗೇಶ್ ಕೂಡ ಇದ್ದರು

ನವರಸ ನಾಯಕ ಜಗ್ಗೇಶ್ ಅವರು ಕೂಡ ಪುನೀತ್ ರಾಜ್ ಕುಮಾರ್ ಶೋನಲ್ಲಿ ಭಾಗವಹಿಸಿದ್ದರು. ಜಗ್ಗೇಶ್ ಗೆದ್ದಿದ್ದು 3.20 ಲಕ್ಷ. ಶಿಕ್ಷಣ ಸಂಸ್ಥೆಗೆ ಈ ಹಣವನ್ನ ನೀಡಲಾಯಿತು.

ಲಕ್ಷ್ಮಿ, ಅಕುಲ್, ಚಂದ್ರು...?

ಲಕ್ಷ್ಮಿ, ಅಕುಲ್, ಚಂದ್ರು...?

ಇನ್ನು ಹಿರಿಯ ನಟಿ ಲಕ್ಷ್ಮಿ ಅವರು 1.60 ಲಕ್ಷ, ಸಿಹಿ ಕಹಿ ಚಂದ್ರು ಅವರು 3.20 ಲಕ್ಷ ಹಾಗೂ ಅಕುಲ್ ಬಾಲಾಜಿ ಅವರು 1.60 ಲಕ್ಷ ಹಣವನ್ನ ಈ ಶೋನಿಂದ ಗೆದ್ದಿದ್ದಾರೆ. ಎಲ್ಲರೂ ಒಂದೊಂದು ಒಳ್ಳೆ ಕೆಲಸಕ್ಕೆ ಈ ಹಣವನ್ನ ನೀಡಿ ಹೃದಯ ಗೆದ್ದಿದ್ದಾರೆ.

More from Filmibeat

English summary
Which celebrity won the highest amount in the history of kannadada kotyadipathi.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X