'ವೀಕೆಂಡ್ ವಿತ್ ರಮೇಶ್'ನಲ್ಲಿ ಅತಿ ಹೆಚ್ಚು ಟಿ.ಆರ್.ಪಿ ಬಂದಿದ್ದು ಇವರ ಸಂಚಿಕೆಗೆ.!

Recommended Video

Weekend with Ramesh : ವೀಕೆಂಡ್ ವಿಥ್ ರಮೇಶ್ ನಲ್ಲಿ ಯಾವ ಸಂಚಿಕೆಗೆ ಅತಿ ಹೆಚ್ಚಿ ಟಿ.ಆರ್.ಪಿ ಬಂದಿದ್ದು?

ವೀಕೆಂಡ್ ವಿತ್ ರಮೇಶ್ ಮತ್ತೆ ಬರ್ತಿದೆ. ಮೂರು ಸೀಸನ್ ಗಳನ್ನ ಯಶಸ್ವಿಯಾಗಿ ಮುಗಿಸಿದ್ದ ಟಾಕ್ ಶೋ, ಈಗ ನಾಲ್ಕನೇ ಆವೃತ್ತಿ ಮೂಲಕ ವಾಪಸ್ ಆಗ್ತಿದೆ. ಕಳೆದ ಮೂರು ಆವೃತ್ತಿಯಲ್ಲಿ ಒಟ್ಟು 64 ಜನ ಸಾಧಕರನ್ನ ಸಾಧಕರ ಸೀಟಿನಲ್ಲಿ ಕೂರಿಸಿ ಮಾತನಾಡಿಸಿದ್ದಾರೆ.

88 ಎಪಿಸೋಡ್ ಗಳು ಪ್ರಸಾರವಾಗಿದೆ. ಅದರಲ್ಲಿ ಕೆಲವರದ್ದು ಎರಡೆರಡು ಸಂಚಿಕೆ ಟೆಲಿಕಾಸ್ಟ್ ಆಗಿದ್ರೆ ಮತ್ತೆ ಕೆಲವರದ್ದು ಒಂದೇ ಸಂಚಿಕೆಯಲ್ಲಿ ಕಾರ್ಯಕ್ರಮ ಮೂಡಿ ಬಂದಿದೆ. ಹಾಗಿದ್ರೆ, ಕಿರುತೆರೆಯ ಈ ಸೂಪರ್ ಹಿಟ್ ಕಾರ್ಯಕ್ರಮದಲ್ಲಿ ಯಾವ ಎಪಿಸೋಡ್ ಗೆ ಅಥವಾ ಯಾವ ಸಂಚಿಕೆಗೆ ಅತಿ ಹೆಚ್ಚು ಟಿ.ಆರ್.ಪಿ ಬಂದಿರಬಹುದು ಎಂಬ ಕುತೂಹಲ ಸಹಜ.

ಆದ್ರೆ, ಈ ಮಾಹಿತಿಯನ್ನ ಅಧಿಕೃತವಾಗಿ ವೀಕೆಂಡ್ ವಿತ್ ರಮೇಶ್ ತಂಡದವರು ಬಿಟ್ಟುಕೊಡಲ್ಲ. ಹಾಗಿದ್ದರೂ ಸಾಮಾಜಿಕ ಜಾಲತಾಣಗಳಲ್ಲಿ ಹಲವು ಹೆಸರುಗಳು ಚರ್ಚೆಯಾಗಿರುವುದು ಉಂಟು. ಇದೀಗ, ಸ್ವತಃ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ನಿರ್ದೇಶಕ ರಾಘವೇಂದ್ರ ಹುಣುಸೂರ್ ಯಾವ ಎಪಿಸೋಡ್ ಗೆ ಅತಿ ಹೆಚ್ಚು ಟಿ.ಆರ್.ಪಿ ಬಂದಿದೆ ಎಂದು ಖಚಿತಪಡಿಸಿದ್ದಾರೆ. ಮುಂದೆ ಓದಿ.....

ಮೊದಲ ಅತಿಥಿ ಪುನೀತ್ ರಾಜ್ ಕುಮಾರ್

ಮೊದಲ ಅತಿಥಿ ಪುನೀತ್ ರಾಜ್ ಕುಮಾರ್

ವೀಕೆಂಡ್ ವಿತ್ ರಮೇಶ್ ಎಂಬ ಕಾರ್ಯಕ್ರಮ ಆರಂಭವಾಗಿದ್ದೇ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಸಂಚಿಕೆಯಿಂದ. ಎರಡು ದಿನ ಇವರ ಶೋ ಪ್ರಸಾರವಾಗಿತ್ತು. ಮೊದಲ ಸಂಚಿಕೆಯಲ್ಲೇ ಕನ್ನಡ ಕಿರುತೆರೆ ಪ್ರೇಕ್ಷಕರ ಹೃದಯ ಮುಟ್ಟಿತ್ತು ಈ ಅದ್ಭುತವಾದ ಟಾಕ್ ಶೋ.

ಸೀಸನ್ ಒಂದರಲ್ಲೇ ಬಹುತೇಕರು ಬಂದಿದ್ದರು

ಸೀಸನ್ ಒಂದರಲ್ಲೇ ಬಹುತೇಕರು ಬಂದಿದ್ದರು

ಮೊದಲ ಆವೃತ್ತಿಯಲ್ಲೇ ಬಹುತೇಕ ಸ್ಟಾರ್ ನಟರು ವೀಕೆಂಡ್ ಸಾಧಕರ ಸೀಟಿನಲ್ಲಿ ಕೂತಿದ್ದರು. ರವಿಚಂದ್ರನ್, ಅರ್ಜುನ್ ಸರ್ಜಾ, ಯಶ್, ರಾಧಿಕಾ ಪಂಡಿತ್, ಶಿವರಾಜ್ ಕುಮಾರ್, ಉಪೇಂದ್ರ, ರಮೇಶ್ ಅರವಿಂದ್ ಸೇರಿದಂತೆ ಇನ್ನು ಹಲವರ ಸಂಚಿಕೆ ಮೊದಲ ಆವೃತ್ತಿಯಲ್ಲಿ ಪ್ರಸಾರವಾಗಿತ್ತು.

ಡಿ ಬಾಸ್ ಸಂಚಿಕೆ ಅತಿ ಹೆಚ್ಚು ಟಿ.ಆರ್.ಪಿ

ಡಿ ಬಾಸ್ ಸಂಚಿಕೆ ಅತಿ ಹೆಚ್ಚು ಟಿ.ಆರ್.ಪಿ

ಸ್ವತಃ ವೀಕೆಂಡ್ ವಿತ್ ರಮೇಶ್ ನಿರ್ದೇಶಕ ರಾಘವೇಂದ್ರ ಹುಣುಸೂರ್ ನಿನ್ನೆ ನಡೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದು, ಇದುವರೆಗೂ ದರ್ಶನ್ ಅವರ ಸಂಚಿಕೆ ಅತಿ ಹೆಚ್ಚು ಟಿ.ಆರ್.ಪಿ ತಂದುಕೊಟ್ಟಿದೆಯಂತೆ.

ಅದೇ ಆವೃತ್ತಿಯಲ್ಲಿದ್ದ ಘಟಾನುಘಟಿಗಳು

ಅದೇ ಆವೃತ್ತಿಯಲ್ಲಿದ್ದ ಘಟಾನುಘಟಿಗಳು

ದರ್ಶನ್ ಅವರು ಭಾಗವಹಿಸಿದ್ದ ಆವೃತ್ತಿಯಲ್ಲೇ ಹಲವು ಸ್ಟಾರ್ ಗಳು ಭಾಗಿಯಾಗಿದ್ದರು. ಪ್ರೇಮ್ ದಂಪತಿಯಿಂದ ಆರಂಭಿಸಿ, ಅಂಬರೀಶ್, ವಿಜಯ್ ಪ್ರಕಾಶ್, ದುನಿಯಾ ವಿಜಯ್, ದರ್ಶನ್, ಸುದೀಪ್, ರವಿಶಂಕರ್, ಸೃಜನ್ ಲೋಕೇಶ್, ಅನಂತ್ ನಾಗ್, ಸಾಧುಕೋಕಿಲಾ ಸೇರಿದಂತೆ ಹಲವರು ಇದ್ದರು.

ಕಳೆದ ಆವೃತ್ತಿಯಲ್ಲಿ ಯಾರಿದ್ದರು?

ಕಳೆದ ಆವೃತ್ತಿಯಲ್ಲಿ ಯಾರಿದ್ದರು?

ಇನ್ನು ಮೂರನೇ ಆವೃತ್ತಿಯಲ್ಲಿ ಪ್ರಕಾಶ್ ರಾಜ್, ಜಗ್ಗೇಶ್, ಅರ್ಜುನ್ ಜನ್ಯ, ಭಾರತಿ, ಜಯಂತ್ ಕಾಯ್ಕಿಣಿ, ಹರಿಕೃಷ್ಣ, ಕಾಶಿನಾಥ್, ಎಚ್ ಡಿ ದೇವೇಗೌಡ, ಸಿದ್ದರಾಮಯ್ಯ, ಗಣೇಶ್ ಸೇರಿದಂತೆ ಹಲವರು ಭಾಗವಹಿಸಿದ್ದರು.

ನಾಲ್ಕನೇ ಆವೃತ್ತಿಯಲ್ಲಿ ಯಾರೆಲ್ಲಾ ಬರ್ತಾರೆ

ನಾಲ್ಕನೇ ಆವೃತ್ತಿಯಲ್ಲಿ ಯಾರೆಲ್ಲಾ ಬರ್ತಾರೆ

ಈಗಾಗಲೇ 64 ಜನ ಸಾಧಕರ ಜೊತೆ ಶೋ ಮಾಡಿರುವ ವೀಕೆಂಡ್ ವಿತ್ ರಮೇಶ್ ಈ ಆವೃತ್ತಿಯಲ್ಲಿ ಮತ್ತಷ್ಟು ಸಾಧಕರನ್ನ ಕರೆದುಕೊಂಡು ಬರ್ತಿದೆ. ವೀರೇಂದ್ರ ಹೆಗ್ಗಡೆ, ರಾಘವೇಂದ್ರ ರಾಜ್ ಕುಮಾರ್, ಪ್ರೇಮಾ, ಅರುಂಧತಿ ನಾಗ್, ಪ್ರಕಾಶ್ ಬೆಳವಾಡಿ ಅವರ ಹೆಸರು ಪಟ್ಟಿಯಲ್ಲಿದೆ. ಏಪ್ರಿಲ್ 20ರಿಂದ ಹೊಸ ಸೀಸನ್ ಆರಂಭವಾಗ್ತಿದೆ.

More from Filmibeat

English summary
Zee Kannada Channel's Business Head Raghavendra Hunsur revealed that Challenging Star Darshan's episode of 'Weekend With Ramesh' got highest TRP among all celebrities.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X