twitter
    For Quick Alerts
    ALLOW NOTIFICATIONS  
    For Daily Alerts

    ಕಿರುತೆರೆಯಲ್ಲಿ ಸದ್ಯದ ನಂಬರ್ 01 ಕನ್ನಡ ಧಾರಾವಾಹಿ ಯಾವುದು?

    |

    ಕನ್ನಡ ಕಿರುತೆರೆ ಕನ್ನಡ ಚಲನಚಿತ್ರೋದ್ಯಮಕ್ಕಿಂತಲೂ ವ್ಯಾಪ್ತಿಯಲ್ಲಿ ಬಹಳ ದೊಡ್ಡದು. ಸಿನಿಮಾಗಳು ತಲುಪುವ ಮೂರು-ನಾಲ್ಕು ಪಟ್ಟು ಹೆಚ್ಚು ಜನರನ್ನು ಕಿರುತೆರೆ ತಲುಪುತ್ತದೆ.

    ಹಲವು ಕನ್ನಡ ಮನರಂಜನಾ ಚಾನೆಲ್‌ಗಳು ಪ್ರೇಕ್ಷಕರನ್ನು ಮನೊರಂಜಿಸುವಲ್ಲಿ ನಿರತವಾಗಿವೆ. ಮನೊರಂಜನೆ ವಿಷಯದಲ್ಲಿ ಬಹುತೇಕ ಚಾನೆಲ್‌ಗಳು ನೆಚ್ಚಿಕೊಂಡಿರುವುದು ಧಾರಾವಾಹಿಗಳನ್ನು ನಂತರದ ಸ್ಥಾನ ರಿಯಾಲಿಟಿ ಶೋಗಳಿಗೆ. ಅದರ ಬಳಿಕದ ಸ್ಥಾನ ಕಿರುತೆರೆಯಲ್ಲಿ ಪ್ರಸಾರವಾಗುವ ಸಿನಿಮಾಗಳದ್ದು.

    ಸಿನಿಮಾಗಳ ಯಶಸ್ಸು, ವೈಫಲ್ಯ ಅಳೆಯಲು ಬಾಕ್ಸ್ ಆಫೀಸ್ ಮಾನದಂಡ ಆಗಿರುವಂತೆ, ಟಿವಿ ಚಾನೆಲ್‌ಗಳ, ಚಾನೆಲ್‌ಗಳಲ್ಲಿ ಪ್ರಸಾರವಾಗುವ ಜನಪ್ರಿಯತೆನ್ನು ಅಳೆಯಲು ಟಿಆರ್‌ಪಿ ಮಾನದಂಡ. ಪ್ರತಿವಾರವೂ ಟಿಆರ್‌ಪಿ ರೇಟಿಂಗ್ಸ್ ಬಿಡುಗಡೆ ಆಗುತ್ತದೆ. ಯಾವ ಚಾನೆಲ್‌ ಅನ್ನು ಜನ ಹೆಚ್ಚು ನೋಡುತ್ತಿದ್ದಾರೆ. ಯಾವ ಚಾನೆಲ್‌ನ ಯಾವ ಧಾರವಾಹಿಯನ್ನು ಹೆಚ್ಚು ನೋಡಿದ್ದಾರೆ ಎಂಬ ಲೆಕ್ಕಾಚಾರ ಇದರಲ್ಲಿದೆ. ಜನವರಿ ತಿಂಗಳ ಎರಡನೇ ವಾರದ ಟಿಆರ್‌ಪಿ ರೇಟಿಂಗ್ ಇದೀಗ ಬಂದಿದ್ದು ಕನ್ನಡದ ಟಾಪ್ ಐದು ಟಿವಿ ಕಾರ್ಯಕ್ರಮಗಳ ಪಟ್ಟಿ ಇಂತಿದೆ.

    Which On Is Number 01 Kannada Serial According To TRP Report

    ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಉಮಾಶ್ರೀ ನಟನೆಯ 'ಪುಟ್ಟಕ್ಕನ ಮಕ್ಕಳು' ಸದ್ಯದ ಕನ್ನಡದ ನಂಬರ್ 1 ಧಾರಾವಾಹಿ. ಇತರೆ ಚಾನೆಲ್‌ಗಳ ಪ್ರತಿಸ್ಪರ್ಧಿ ಧಾರಾವಾಹಿಗಳಿಗೆ ಹೋಲಿಸಿದರೆ ಈ ಧಾರಾವಾಹಿಯನ್ನು ಬಹಳ ಹೆಚ್ಚು ಮಂದಿ ಟಿವಿಯಲ್ಲಿ ವೀಕ್ಷಿಸಿದ್ದಾರೆ ಎನ್ನುತ್ತಿದೆ ಜನವರಿ ಎರಡನೇ ವಾರದ ಟಿಆರ್‌ಪಿ ಅಂಕಿ-ಸಂಖ್ಯೆ.

    ಕರ್ನಾಟಕ, ಬೆಂಗಳೂರು, ಕರ್ನಾಟಕ ಗ್ರಾಮಾಂತರ, ಕರ್ನಾಟಕ ನಗರ ಎಲ್ಲ ಭಾಗಗಳಲ್ಲಿಯೂ 'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯೇ ನಂಬರ್ 1 ಸ್ಥಾನದಲ್ಲಿದೆ. ಎರಡನೇ ಸ್ಥಾನದಲ್ಲಿ ಜೀ ಕನ್ನಡದಲ್ಲಿಯೇ ಪ್ರಸಾರವಾಗುತ್ತಿರುವ 'ಗಟ್ಟಿಮೇಳ' ಧಾರಾವಾಹಿ ಇದೆ.

    ಕಳೆದ ವಾರದ ಅಂಕಿ-ಸಂಖ್ಯೆಯ ಪ್ರಕಾರ ಕನ್ನಡದ ಟಾಪ್ ಐದು ಧಾರಾವಾಹಿಗಳೆಲ್ಲವೂ ಜೀ ಕನ್ನಡ ಚಾನೆಲ್‌ನವೇ ಆಗಿವೆ. 'ಪುಟ್ಟಕ್ಕನ ಮಕ್ಕಳು', 'ಗಟ್ಟಿಮೇಳ', 'ಹಿಟ್ಲರ್ ಕಲ್ಯಾಣ', ರಿಯಾಲಿಟಿ ಶೋ 'ಸರಿಗಮಪ ಚಾಂಪಿಯನ್', 'ನಂಬರ್ 1 ಸೊಸೆ' ಈ ಐದೂ ಶೋಗಳು ಹೆಚ್ಚು ಟಿ.ಆರ್‌.ಪಿ ಗಳಿಸಿವೆ. ಈ ಐದೂ ಶೋಗಳು ಜೀ ಕನ್ನಡದಲ್ಲಿಯೇ ಪ್ರಸಾರವಾಗುತ್ತಿವೆ.

    ಜೀ ಕನ್ನಡದಲ್ಲಿಯೇ ಪ್ರಸಾರವಾಗುವ 'ಸತ್ಯ' ಹಾಗೂ 'ಜೊತೆ ಜೊತೆಯಲಿ' ಧಾರಾವಾಹಿ ಏಳು ಮತ್ತು ಎಂಟನೇ ಸ್ಥಾನದಲ್ಲಿವೆ. ಹೆಚ್ಚು ಟಿಆರ್‌ಪಿ ರೇಟಿಂಗ್ ಪಡೆದ ಮನರಂಜನಾ ಚಾನೆಲ್‌ ಪಟ್ಟಿಯಲ್ಲಿ ಸಹ ಜೀ ಕನ್ನಡ ಮೊದಲ ಸ್ಥಾನದಲ್ಲಿದೆ.

    English summary
    January second week TRP data is out. Here is the top five Kannada Tv serials and programs which gain highest TRP.
    Saturday, January 22, 2022, 17:59
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X