twitter
    For Quick Alerts
    ALLOW NOTIFICATIONS  
    For Daily Alerts

    ಜೀ-ಕನ್ನಡ ನಂಬರ್-1 ಆಗಲು ಈ ಮೂರು ಧಾರಾವಾಹಿಗಳು ಕಾರಣ

    |

    13 ವರ್ಷಗಳಲ್ಲಿ ಮೊಟ್ಟ ಮೊದಲ ಬಾರಿಗೆ ಜೀ ಕನ್ನಡ ವಾಹಿನಿ ಜನರಲ್ ಎಂಟರ್ ಟೈನ್ಮೆಂಟ್ ಚಾನಲ್ ವಿಭಾಗದಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ. 2019ನೇ ವರ್ಷದ ಮೊದಲ ವಾರದಲ್ಲಿ ಈ ಸಾಧನೆ ಮಾಡಿದ್ದು, ಕಿರುತೆರೆ ವಲಯದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ.

    ಸರಾಸರಿ 415697 ಅಂಕಗಳನ್ನ ಪಡೆದಿರುವ ಜೀ ಕನ್ನಡ, ಕಲರ್ಸ್ ಕನ್ನಡ ವಾಹಿನಿಯನ್ನ ಹಿಂದಿಕ್ಕಿ ಕಿಂಗ್ ಎನಿಸಿಕೊಂಡಿದೆ. ಇದಕ್ಕೆ ಕಾರಣ ಮೂರು ಧಾರಾವಾಹಿಗಳು ಮತ್ತು ನಾನ್ ಫಿಕ್ಷನ್ ಶೋಗಳು ಎನ್ನುವುದು ಗೊತ್ತಿರೋ ವಿಚಾರ. ಆದ್ರೆ, ಯಾವುದು ಆ ಧಾರಾವಾಹಿಗಳು?

    TRP Fight: ದಾಖಲೆ ನಿರ್ಮಿಸಿದ ಜೀ ಕನ್ನಡ, ಕಲರ್ಸ್ ಕನ್ನಡಕ್ಕೆ ಎಚ್ಚರಿಕೆ.! TRP Fight: ದಾಖಲೆ ನಿರ್ಮಿಸಿದ ಜೀ ಕನ್ನಡ, ಕಲರ್ಸ್ ಕನ್ನಡಕ್ಕೆ ಎಚ್ಚರಿಕೆ.!

    ಈ ಬಗ್ಗೆ ಸಂತಸ ಹಂಚಿಕೊಂಡಿರುವ ಜೀ ಕನ್ನಡ ಮುಖ್ಯಸ್ಥ ರಾಘವೇಂದ್ರ ಹುಣುಸೂರ್, ''ಕನ್ನಡ ಜಿಇಸಿ ವಲಯದಲ್ಲಿ ಶ್ರೇಷ್ಠ ಸ್ಥಾನವನ್ನು ಪಡೆಯುವ ನಮ್ಮ ಗುರಿ ಸಾಧಿಸುವ ಮೂಲಕ ಹೊಸವರ್ಷಕ್ಕೆ ಚಾಲನೆ ನೀಡಿರುವುದಕ್ಕೆ ಜೀ ಕುಟುಂಬಕ್ಕೆ ನಾನು ಅಭಿನಂದನೆ ಸಲ್ಲಿಸುತ್ತೇನೆ'' ಎಂದಿದ್ದಾರೆ.

    ಅಂದ್ಹಾಗೆ, ಜೀ ಕನ್ನಡ ವಾಹಿನಿ ಮೊದಲ ಸ್ಥಾನಕ್ಕೇರಲು ಯಾವ ಕಾರ್ಯಕ್ರಮಗಳು ಸಹಾಯವಾಗಿದೆ. ನಗರ ಹಾಗೂ ಗ್ರಾಮೀಣದಲ್ಲಿ ಎಷ್ಟು ಅಂಕ ಪಡೆದಿದೆ ಎಂಬ ಸಂಪೂರ್ಣ ಮಾಹಿತಿ ಮುಂದಿದೆ. ಮುಂದೆ ಓದಿ.....

    ಬಾರ್ಕ್ ರೇಟಿಂಗ್ ಪ್ರಕಾರ

    ಬಾರ್ಕ್ ರೇಟಿಂಗ್ ಪ್ರಕಾರ

    ಇತ್ತೀಚೆಗೆ ಬಿಡುಗಡೆ ಮಾಡಲಾದ 2019ರ ಮೊದಲ ವಾರದ ಬಾರ್ಕ್ ವೀಕ್ಲಿ ಡೇಟಾ ಪ್ರಕಾರ(ನಗರ+ಗ್ರಾಮೀಣ)ಜೀ ಕನ್ನಡ, ಕನ್ನಡ ಮಾರುಕಟ್ಟೆಯಲ್ಲಿ ಒಟ್ಟು 415697 ಇಂಪ್ರೆಷನ್ಸ್ ‘000s ಮೂಲಕ ಕನ್ನಡ ಮಾರುಕಟ್ಟೆಯಲ್ಲಿ ಶ್ರೇಷ್ಠ ಸ್ಥಾನವನ್ನು ಪಡೆದಿದೆ. ನಗರ ಮಾರುಕಟ್ಟೆಯಲ್ಲಿ 171167 ಇಂಪ್ರೆಷನ್ಸ್ ‘000s ಇದ್ದು, ಗ್ರಾಮೀಣ ಮಾರುಕಟ್ಟೆಯಲ್ಲಿ 244530 ಹೊಂದಿದ್ದು ಪ್ರೈಮ್ ಫಿಕ್ಷನ್ ಶೋಗಳ ಸದೃಢ ಬೆಳವಣಿಗೆ ಹೊಂದಿದೆ.

    ಕನ್ನಡ ಕಿರುತೆರೆಯ TRP ಇತಿಹಾಸದಲ್ಲಿಯೇ ಹೊಸ ದಾಖಲೆ ಸೃಷ್ಟಿಸಿದ ಪುನೀತ್.! ಕನ್ನಡ ಕಿರುತೆರೆಯ TRP ಇತಿಹಾಸದಲ್ಲಿಯೇ ಹೊಸ ದಾಖಲೆ ಸೃಷ್ಟಿಸಿದ ಪುನೀತ್.!

    ನಗರದಲ್ಲಿ ಜೀ ಕನ್ನಡ 'ಕಿಂಗ್'

    ನಗರದಲ್ಲಿ ಜೀ ಕನ್ನಡ 'ಕಿಂಗ್'

    ನಗರ ಮಾರುಕಟ್ಟೆಯಲ್ಲಿ ಕಳೆದ 12 ವರ್ಷಗಳಿಂದ ನಾಯಕತ್ವ ಸ್ಥಾನವನ್ನು ಮುಂದುವರೆಸಿರುವ ಜೀ ಕನ್ನಡ ಕಳೆದ 13 ವರ್ಷಗಳಲ್ಲಿ ಮೊಟ್ಟ ಮೊದಲ ಬಾರಿಗೆ ನಾಯಕತ್ವ ಸ್ಥಾನದ ಗೌರವಕ್ಕೆ ಪಾತ್ರವಾಗಿದೆ.

    'ಜಿ.ಆರ್.ಪಿ'ಯಲ್ಲಿ ಜೀ ಕನ್ನಡ ಏಕ್ದಂ ಜಿಗಿತ: ಎಲ್ಲಾ 'ಕಾಮಿಡಿ ಕಿಲಾಡಿಗಳ' ಕರಾಮತ್ತು.! 'ಜಿ.ಆರ್.ಪಿ'ಯಲ್ಲಿ ಜೀ ಕನ್ನಡ ಏಕ್ದಂ ಜಿಗಿತ: ಎಲ್ಲಾ 'ಕಾಮಿಡಿ ಕಿಲಾಡಿಗಳ' ಕರಾಮತ್ತು.!

    ಈ ಸಾಧನೆಗೆ ಕಾರಣವಾದ ಶೋ-ಧಾರಾವಾಹಿಗಳು

    ಈ ಸಾಧನೆಗೆ ಕಾರಣವಾದ ಶೋ-ಧಾರಾವಾಹಿಗಳು

    ಮಾರುಕಟ್ಟೆಯ ನಾಯಕ ಸ್ಥಾನವನ್ನು ತಲುಪುವ ಸವಾಲನ್ನು ಸ್ವೀಕರಿಸಿದ ಜೀ ಕನ್ನಡ ಪ್ರೈಮ್-ಟೈಮ್ ಬ್ಯಾಂಡ್‍ನಲ್ಲಿ 260314 ಇಂಪ್ರೆಷನ್ಸ್ ‘000s ಹೊಂದಿದ್ದು ಯಾರೇ ನೀ ಮೋಹಿನಿ, ಪಾರು ಮತ್ತು ಬ್ರಹ್ಮಗಂಟು ಮುಂಚೂಣಿಯ ಧಾರಾವಾಹಿಗಳಿಂದ ಈ ಸ್ಥಾನ ತಲುಪಿದೆ. ಈ ಚಾನೆಲ್ ವಾರಾಂತ್ಯಗಳಲ್ಲಿ ನಾನ್-ಫಿಕ್ಷನ್ ಶೋಗಳಾದ ಸ ರೆ ಗ ಮ ಪ ಸೀಸನ್ 15 ಮತ್ತು ಡ್ರಾಮಾ ಜೂನಿಯರ್ಸ್ ಸೀಸನ್ 3ರ ಮೂಲಕ ಪ್ರೈಮ್ ಸ್ಲಾಟ್‍ಗಳಲ್ಲಿ ನಾಯಕತ್ವ ಸ್ಥಾನ ಪಡೆದಿದೆ.

    ರಾಘವೇಂದ್ರ ಹುಣಸೂರು ಸಂತಸ

    ರಾಘವೇಂದ್ರ ಹುಣಸೂರು ಸಂತಸ

    ''ಕನ್ನಡ ಜಿಇಸಿ ವಲಯದಲ್ಲಿ ಶ್ರೇಷ್ಠ ಸ್ಥಾನವನ್ನು ಪಡೆಯುವ ನಮ್ಮ ಗುರಿ ಸಾಧಿಸುವ ಮೂಲಕ ಹೊಸವರ್ಷಕ್ಕೆ ಚಾಲನೆ ನೀಡಿರುವುದಕ್ಕೆ ಜೀ ಕುಟುಂಬಕ್ಕೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಚಾನೆಲ್‍ನ ಇತ್ತೀಚಿನ ನವೀಕೃತ ಬ್ರಾಂಡ್ ಇಮೇಜ್‍ನೊಂದಿಗೆ ಜೀ ಕನ್ನಡ ಆಸಕ್ತಿದಾಯಕ ಪರಿಕಲ್ಪನೆಗಳು, ಕಥಾವಸ್ತುಗಳ ಮೂಲಕ ಅಪಾರ ಪ್ರಗತಿ ಸಾಧಿಸಿದೆ ಮತ್ತು ನಮ್ಮ ಯಶಸ್ಸು ನಮ್ಮ ವೀಕ್ಷಕರೊಂದಿಗೆ ಸತತವಾಗಿ ಸದೃಢಗೊಳ್ಳುತ್ತಿರುವ ಬಾಂಧವ್ಯಕ್ಕೆ ಪುರಾವೆಯಾಗಿದೆ. ಮೊಟ್ಟಮೊದಲ ಬಾರಿಗೆ ಕಳೆದ 13 ವರ್ಷಗಳಲ್ಲಿ ನಂಬರ್ ಒನ್ ಕನ್ನಡ ಜನರಲ್ ಎಂಟರ್‍ ಟೈನ್ ‍ಮೆಂಟ್ ಚಾನೆಲ್ ಆಗಿರುವುದಕ್ಕೆ ಥ್ರಿಲ್ ಆಗಿದ್ದೇವೆ ಮತ್ತು ನಮ್ಮ ಪಾಲುದಾರರು ಹಾಗೂ ನಮ್ಮ ಅಕ್ಕರೆಯ ವೀಕ್ಷಕರ ಬೆಂಬಲದಿಂದ ವಿನೀತರಾಗಿದ್ದೇವೆ'' - ರಾಘವೇಂದ್ರ ಹುಣಸೂರು, ಜೀ ಕನ್ನಡ ಬ್ಯುಸಿನೆಸ್ ಹೆಡ್

    English summary
    Zee Kannada emerges a leader - a first-for the channel in 13 years. Zee kannada business head raghavendra hunusr congratulate to the Zee kannada team.
    Friday, January 11, 2019, 13:56
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X