Amruthadhaare: ಮಧ್ಯರಾತ್ರಿ ಬಂತು ಗೌತಮ್‌ಗೆ ಫೋನ್ ಕಾಲ್, ಕೋಟ್ಯಾಧಿಪತಿ ಕ್ಯಾಬ್ ಡ್ರೈವರ್‌ಗೆ ಕರೆ ಮಾಡಿದ್ದು ಯಾರು ?
''ಅಮೃತಧಾರೆ'' ಧಾರಾವಾಹಿಯಲ್ಲಿ ಗೌತಮ್ ಮತ್ತು ಭೂಮಿಕಾ ಒಂದೇ ವಠಾರದಲ್ಲಿದ್ದಾರೆ. ಎದುರು ಬದುರು ಮನೆಯಲ್ಲಿದ್ದಾರೆ. ಆದರೆ.. ಇಬ್ಬರದ್ದು ಪ್ರತ್ಯೇಕ ಮಾರ್ಗ. ಇಬ್ಬರ ಹಾವ ಭಾವ ಕಂಡು ವಠಾರದ ಇನ್ನುಳಿದರಿಗೆ ಅನುಮಾನ ಬಂದಿದೆ. ಆದರೂ ಕೂಡ ಅಪರಿಚಿತರಂತೆ ಇರಲು ಗೌತಮ್ ಮತ್ತು ಭೂಮಿಕಾ ಇಬ್ಬರು ಪ್ರಯತ್ನ ಮಾಡುತ್ತಿದ್ದಾರೆ. ಇನ್ನು ಕುಶಾಲ ನಗರದಲ್ಲಿ ಗೌತಮ್ ಮುಖ ಕಂಡು ಓಡಿ ಬಂದಿದ್ದ....
ಭೂಮಿಕಾ ಮನದಲ್ಲಿ ಈಗ ಇನ್ನೊಮ್ಮೆ ಪ್ರೀತಿ ಚಿಗುರೊಡೆಯುತ್ತಿದೆ. ಗೌತಮ್ ಪ್ರೀತಿಗೆ ಕಲ್ಲಿನಂತಹ ಭೂಮಿಕಾ ಮನಸು ಕರಗಿದೆ. ಇದರ ನಡುವೆ ಗೌತಮ್‌ಗೆ ಸಿಕ್ಕ ಅದೃಷ್ಟ ದೇವತೆ ಮತ್ತು ಗೌತಮ್‌ನ ಮಗ ಆಕಾಶ್ ನಡುವೆ ಹಾವು ಮುಂಗುಸಿಯಂತಹ ಸಂಬಂಧ ಬೆಳೆದಿದ್ದು ಮತ್ತೊಂದು ಕಡೆ ಹಣದ ಅಮಲೇರಿಸಿಕೊಂಡಿರುವ ಜೈದೇವ್ ಕಣ್ಣಿಗೆ ಮಲ್ಲಿ ಬಿದ್ದಿದ್ದಾಳೆ. ಶಕುನಿಯಂತಹ ಮಾವ ಲಕ್ಕಿ ಲಕ್ಮೀಕಾಂತ್ ಸದ್ಯ ಪಾರ್ಟಿ ಬದಲಿಸಿದ್ದು ಶಕುಂತಲಾಗೆ ಖೆಡ್ಡಾ ತೋಡಬೇಕೆನ್ನುವ ನಿರ್ಧಾರ ಮಾಡಿದ್ದಾನೆ.ಗೌತಮ್ ಸಹಾಯಕ್ಕೆ ನಿಂತಿದ್ದಾನೆ.

ಸಂದರ್ಭ ಮತ್ತು ಸನ್ನಿವೇಶ ಹೀಗಿರುವಾಗ ಇದೀಗ ಗೌತಮ್‌ಗೆ ನಿಗೂಢ ಕರೆಯೊಂದು ಬಂದಿದೆ.ಬಂದ ಕರೆಯನ್ನು ನಡುರಾತ್ರಿ ರಿಸೀವ್ ಮಾಡಿರುವ ಗೌತಮ್ ಮನೆಯಾಚೆ ಬಂದಿದ್ದಾನೆ. ಇಷ್ಟೇ ಅಲ್ಲ ತನ್ನ ಕಾರಿನತ್ತ ಧಾವಿಸಿ, ಕಾರ್‌ಲ್ಲಿರುವ ಲ್ಯಾಪ್‌ಟಾಪ್ ಓಪನ್ ಮಾಡಿದ್ದಾನೆ. ಫೋನ್‌ನಲ್ಲಿರುವ ವ್ಯಕ್ತಿಯ ಜೊತೆ ಮಾತನಾಡಿದ್ದಾನೆ.
ಸದ್ಯ ಗೌತಮ್‌ನ ಈ ನಡೆ ಕುತೂಹಲ ಕೆರಳಿಸಿದ್ದು, ಗೌತಮ್‌ಗೆ ಅಷ್ಟೊತ್ತಲ್ಲಿ ಫೋನ್ ಮಾಡಿದ್ದು ಯಾರು..? ಗೌತಮ್ ಅಷ್ಟೊಂದು ಗುಟ್ಟಾಗಿ ಆ ವ್ಯಕ್ತಿಯ ಜೊತೆ ಮಾತನಾಡಿದ್ದಾದರೂ ಏನು..? ಕರೆ ಮಾಡಿದ ವ್ಯಕ್ತಿ ಯಾರು..? ಗೌತಮ್ ಮತ್ತು ಭೂಮಿಕಾ ಒಂದಾಗಲಿ ಎಂದು ಎಲ್ಲರೂ ಬಯಸುತ್ತಿದ್ದಾರೆ. ಆದರೆ ಗೌತಮ್‌ಗೆ ಬಂದ ಈ ಫೋನ್ ಕಾಲ್ ಯಾರದ್ದು..? ಲ್ಯಾಪ್‌ಟಾಪ್ ತೆರೆದಿದ್ದು ಯಾಕೆ..? ಹೀಗೆ ಹಲವು ಪ್ರಶ್ನೆಗಳು ಸದ್ಯ ''ಅಮೃತಧಾರೆ''ಯ ಅಪ್ಪಟ ಅಭಿಮಾನಿಗಳನ್ನು ಕಾಡುತ್ತಿವೆ. ''ಜೀ ಕನ್ನಡ'' ಇನ್‌ಸ್ಟಾಗ್ರಾಮ್ ಪೇಜ್‌ನಲ್ಲಿ ಈ ಕುರಿತು ಚರ್ಚೆ ಕೂಡ ನಡೆಯುತ್ತಿದೆ.
ಇಷ್ಟೇ ಅಲ್ಲ ತನ್ನೆಲ್ಲಾ ಆಸ್ತಿಯನ್ನು ಶಕುಂತಲಾ ಮತ್ತು ಜೈದೇವ್‌ಗೆ ನೀಡಿದಂತೆ ಮಾಡಿರುವ ಗೌತಮ್ ತೆರೆಮರೆಯಲ್ಲಿಯೇ ನಿಂತು ಆಟ ಆಡುತ್ತಿದ್ದಾನೆ. ಶಕುಂತಲಾ ಮತ್ತು ಜೈದೇವ್‌ಗಿಂತ ಒಂದು ಹೆಜ್ಜೆ ಮುಂದೆ ಯೋಚನೆ ಮಾಡಿ ಇಬ್ಬರ ಪರದಾಟವನ್ನು ನೋಡಿ ದೂರದಿಂದಲೇ ಖುಷಿ ಪಡುತ್ತಿದ್ದಾನೆ ಎನ್ನುವ ಅಭಿಪ್ರಾಯ ಕೂಡ ಸದ್ಯ ವ್ಯಕ್ತವಾಗುತ್ತಿದೆ. ಇದೆಲ್ಲವೂ ಗೌತಮ್ ಪ್ಲ್ಯಾನ್ ಎಂದು ಕೂಡ ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ.
ಇನ್ನು ಸದ್ಯ ಕಾರ್‌ನಲ್ಲಿ ಕುಳಿತು ಗೌಪ್ಯವಾಗಿ ಮಾತನಾಡಿ ಬಂದಿರುವ ಗೌತಮ್, ಮರಳಿ ಮನೆ ಕಡೆ ಬಂದಿದ್ದು, ಭೂಮಿಕಾ ಮನೆಯನ್ನು ನೋಡಿ ನೀವು ನೆಮ್ಮದಿಯಿಂದ ನಿದ್ದೆ ಮಾಡ್ತಿಲ್ಲ ಎನ್ನುವುದು ನನಗೆ ಗೊತ್ತು ಭೂಮಿಕಾ, ನಿಮ್ಮ ಮನಸ್ಥಿತಿ ಏನು ಅಂತ ನನಗೆ ಚೆನ್ನಾಗಿ ಗೊತ್ತು, ಸ್ವಲ್ಪ ನನ್ನ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಿ, ನನ್ನ ಉದ್ದೇಶ ಒಂದೇ, ಕಳೆದು ಹೋಗಿರುವ ಮಗುನ ಆದಷ್ಟು ಬೇಗ ಹುಡುಕಿ, ನಿಮ್ಮನ್ನು ಪಡೆದುಕೊಳ್ಳುವುದು ಎಂದು ಮನದಲ್ಲಿಯೇ ಕೊರಗುತ್ತಾನೆ. ಇದರಲ್ಲಿ ನಾನು ಯಶಸ್ವಿಯಾಗುತ್ತೇನೆ ಎನ್ನುವ ನಂಬಿಕೆ ನನಗೆ ಇದೆ ಎಂದುಕೊಳ್ಳುತ್ತಾನೆ. ನೊಂದುಕೊಳ್ಳುತ್ತಾನೆ. ಮನೆ ಒಳಗಡೆ ಹೋಗುತ್ತಾನೆ.
ಆ ಕಡೆ ನೀರು ಕುಡಿಯಲು ನಡುರಾತ್ರಿ ಎದ್ದಿರುವ ಭೂಮಿಕಾ ನಾವು ಇಷ್ಟು ಹತ್ತಿರ ಇದ್ದರೂ ಕೂಡ ಜೊತೆಯಲ್ಲಿ ಇರಲು ಆಗದಂತಹ ಸ್ಥಿತಿಯಲ್ಲಿ ಇದ್ದೀವಿ, ನಾನೇನೇ ಮಾಡಿದರೂ ಅದರಲ್ಲಿ ನಿಮ್ಮ ಹಿತ ಇರುತ್ತೆ, ನೀವು ಚೆನ್ನಾಗಿರಬೇಕು, ನಮ್ಮವರೆಲ್ಲ ಚೆನ್ನಾಗಿರಬೇಕು, ನನ್ನ ಈ ನಿರ್ಧಾರದಿಂದ ನಿಮಗೆ ಎಷ್ಟು ನೋವಾಗಿದೆ ಎಂದು ನನಗೆ ಗೊತ್ತು, ದಯವಿಟ್ಟು ನನ್ನ ಕ್ಷಮಿಸಿ ಗೌತಮ್ ಅವರೇ ಎಂದು ಭಾವುಕಳಾಗುತ್ತಾಳೆ.
ಸದ್ಯ ''ಅಮೃತಧಾರೆ''ಯ ಇಂದಿನ (ನವೆಂಬರ್ 3) ಎಪಿಸೋಡ್ ಕುತೂಹಲ ಕೆರಳಿಸಿದ್ದು, ಗೌತಮ್‌ಗೆ ನಡುರಾತ್ರಿ ಕರೆ ಮಾಡಿದ್ದು ಯಾರು..? ಕಳೆದು ಹೋದ ಮಗಳು ಗೌತಮ್‌ಗೆ ಸಿಗ್ತಾಳಾ..? ಗೌತಮ್ ಮನೆಯಲ್ಲಿರುವ ಮಿಂಚುನೇ ಗೌತಮ್ ಮಗಳಾ..? ಭೂಮಿಕಾ ಮತ್ತು ಗೌತಮ್ ಒಂದಾಗುವುದು ಯಾವಾಗ..? ಜೈದೇವ್ ಮತ್ತು ಶಕುಂತಲಾ ಕಥೆ ಏನಾಗುತ್ತೆ..? ಎನ್ನುವ ಪ್ರಶ್ನೆಗಳಿಗೆಲ್ಲಾ ಉತ್ತರ ಮುಂದಿನ ದಿನಗಳಲ್ಲಿ ಸಿಗಲಿದೆ.


Click it and Unblock the Notifications











