»   » 'ಗಾಂಧಾರಿ' ಕಾವ್ಯ ಗೌಡ ಬಗ್ಗೆ ನಿಮಗೆಷ್ಟು ಗೊತ್ತು.?

'ಗಾಂಧಾರಿ' ಕಾವ್ಯ ಗೌಡ ಬಗ್ಗೆ ನಿಮಗೆಷ್ಟು ಗೊತ್ತು.?

Posted By:
Subscribe to Filmibeat Kannada
Kavya Gowda, Kannada Serial Gandhari Actress Interesting Life Story | Oneindia Kannada

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ಪ್ರಸಿದ್ಧ 'ಗಾಂಧಾರಿ' ಧಾರಾವಾಹಿಯಲ್ಲಿ 'ದೀಪ್ತಿ' ಹಾಗೂ 'ದೃಷ್ಟಿ'ಯಾಗಿ ಡಬಲ್ ಆಕ್ಟಿಂಗ್ ಮಾಡುತ್ತಿರುವ ಪ್ರತಿಭಾವಂತ ನಟಿ ಕಾವ್ಯ ಗೌಡ.

ಸಾಮಾಜಿಕ ಜಾಲತಾಣಗಳಲ್ಲಿ 'ಜೂನಿಯರ್ ರಾಧಿಕಾ ಪಂಡಿತ್' ಅಂತಲೇ ಖ್ಯಾತಿ ಪಡೆದಿರುವ ಕಾವ್ಯ ಗೌಡ ಬಗ್ಗೆ ನಿಮಗೆಷ್ಟು ಗೊತ್ತು.?

ಸೀರಿಯಲ್ ನಲ್ಲಿ ಮಿಂಚುವ ಮೊದಲು ರಿಯಾಲಿಟಿ ಶೋ ಒಂದರಲ್ಲಿ ಕಾವ್ಯ ಗೌಡ ಸ್ಪರ್ಧಿ ಆಗಿದ್ದರು ಅನ್ನೋದು ನಿಮಗೆ ಗೊತ್ತಾ.? ಅಂತಹ ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ. ಓದಿರಿ...

ರಿಯಾಲಿಟಿ ಶೋನಲ್ಲಿ ಕಾವ್ಯ ಗೌಡ

ಕಿರುತೆರೆಯ ಜನಪ್ರಿಯ 'ಪ್ಯಾಟೆ ಮಂದಿ ಕಾಡಿಗ್ ಬಂದ್ರು' ರಿಯಾಲಿಟಿ ಶೋನಲ್ಲಿ ಕಾವ್ಯ ಗೌಡ ಸ್ಪರ್ಧಿ ಆಗಿದ್ದರು. ಈ ಕಾರ್ಯಕ್ರಮದಲ್ಲಿ 'ಜಂಗಲ್ ಕ್ವೀನ್' ಅಂತಲೇ ಕಾವ್ಯ ಗೌಡ ಹೆಸರು ಗಳಿಸಿದ್ದರು.

ಅಥ್ಲೀಟ್ ಕಾವ್ಯ ಗೌಡ

ಕಾವ್ಯ ಗೌಡ ಅಥ್ಲೀಟ್ ಕೂಡ ಹೌದು. ಮಿಂಚಿನ ವೇಗದಲ್ಲಿ 100 ಮೀಟರ್ ಓಡಿ 24 ನ್ಯಾಷನಲ್ ಕಂಪ್ಲೀಟ್ ಮಾಡಿರುವ ಖ್ಯಾತಿ ಕಾವ್ಯ ಗೌಡರವರದ್ದು.

ಕ್ರೀಡೆ ಕೈಬಿಟ್ಟ ಕಾವ್ಯ ಗೌಡ

ತಮ್ಮ ಕಾಲಿಗೆ ಪೆಟ್ಟು ಬಿದ್ಮೇಲೆ, ಕ್ರೀಡೆ ಕಡೆಗೆ ಮುಖ ಮಾಡದ ಕಾವ್ಯ ಗೌಡ ಮಾಡೆಲಿಂಗ್ ಹಾಗೂ ಆಕ್ಟಿಂಗ್ ಕಡೆ ಗಮನ ಹರಿಸಿದರಂತೆ.

ಮಾಡೆಲ್ ಕಾವ್ಯ ಗೌಡ

ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟ ಕಾವ್ಯ ಗೌಡ 182ಕ್ಕೂ ಹೆಚ್ಚು ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ. ಟಾಲಿವುಡ್ ಸ್ಟಾರ್ ಅಕ್ಕಿನೇನಿ ನಾಗಾರ್ಜುನ ಜೊತೆಗೂ ಜಾಹೀರಾತು ಒಂದರಲ್ಲಿ ತೆರೆ ಹಂಚಿಕೊಂಡಿದ್ದಾರೆ ಕಾವ್ಯ ಗೌಡ.

ಕಿರುತೆರೆಯಲ್ಲಿ ಕಾವ್ಯ ಗೌಡ

'ಮೀರಾ ಮಾಧವ', 'ಶುಭ ವಿವಾಹ', 'ಗಾಂಧಾರಿ' ಧಾರಾವಾಹಿಗಳಲ್ಲಿ ಕಾವ್ಯ ಗೌಡ ಪ್ರಮುಖ ಪಾತ್ರ ನಿಭಾಯಿಸಿದ್ದಾರೆ.

ಬೆಳ್ಳಿತೆರೆಗೆ ಕಾವ್ಯ ಗೌಡ

ಕಿರುತೆರೆಯಿಂದ ಜನಪ್ರಿಯತೆ ಪಡೆದಿರುವ ಕಾವ್ಯ ಗೌಡ ಇದೀಗ 'ಬಕಾಸುರ' ಚಿತ್ರದ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟಿದ್ದಾರೆ. ರೋಹಿತ್ ಹಾಗೂ ಕ್ರೇಜಿಸ್ಟಾರ್ ರವಿಚಂದ್ರನ್ 'ಬಕಾಸುರ' ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ.

English summary
All about Serial Actress Kavya Gowda of 'Gandhari' fame.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada