For Quick Alerts
  ALLOW NOTIFICATIONS  
  For Daily Alerts

  ಪುನೀತ್ ಜೊತೆ ಯಾವ ನಟಿ ನಿರೂಪಣೆ ಮಾಡಿದ್ರೆ ಚೆಂದ? ಅಪ್ಪು ಆಯ್ಕೆ ಯಾರು?

  |

  ಕಿರುತೆರೆ ಲೋಕದ ಯಶಸ್ವಿ ಕ್ವಿಜ್ ಎಂಟರ್ ಟೈನ್ಮೆಂಟ್ ಕಾರ್ಯಕ್ರಮ ಕನ್ನಡದ ಕೋಟ್ಯಧಿಪತಿ ನಾಲ್ಕನೇ ಆವೃತ್ತಿ ಮುಗಿದಿದೆ. ಪುನೀತ್ ರಾಜ್ ಕುಮಾರ್ ಈ ಶೋ ನಿರೂಪಣೆ ಮಾಡಲು ಸೂಕ್ತ ನಿರೂಪಕ ಎಂಬ ಮಾತಿದೆ. ಪುನೀತ್ ಅವರನ್ನ ಬಿಟ್ಟು ರಮೇಶ್ ಅರವಿಂದ್ ಒಂದು ಆವೃತ್ತಿ ನಿರೂಪಣೆ ಮಾಡಿದ್ದಾರೆ.

  ಒಂದು ವೇಳೆ ಪುನೀತ್ ರಾಜ್ ಕುಮಾರ್ ಅವರ ಜೊತೆ ಶೋ ನಿರೂಪಣೆ ಮಾಡಲು ನಾಲ್ಕು ನಟಿಯರ ಹೆಸರು ಕೊಟ್ಟರೆ, ಯಾರೊಬ್ಬರನ್ನ ಆಯ್ಕೆ ಮಾಡುತ್ತೀರಾ?

  'ಕನ್ನಡದ ಕೋಟ್ಯಧಿಪತಿ' ತಂಡದ ಈ ನಡೆ ನಿಜಕ್ಕೂ ಮನ'ಕನ್ನಡದ ಕೋಟ್ಯಧಿಪತಿ' ತಂಡದ ಈ ನಡೆ ನಿಜಕ್ಕೂ ಮನ

  ಈ ಪ್ರಶ್ನೆಯನ್ನ ಸ್ವತಃ ಪುನೀತ್ ರಾಜ್ ಕುಮಾರ್ ಅವರಿಗೆ ಕೇಳಲಾಗಿತ್ತು. ರಚಿತಾ ರಾಮ್, ರಮ್ಯಾ, ರಶ್ಮಿಕಾ ಮಂದಣ್ಣ, ರಾಧಿಕಾ ಪಂಡಿತ್ ಆಯ್ಕೆ ಕೊಡಲಾಗಿತ್ತು. ಈ ನಾಲ್ವರಲ್ಲಿ ಪುನೀತ್ ಆಯ್ಕೆ ಮಾಡಿಕೊಂಡ ನಟಿ ಯಾರು? ಮುಂದೆ ಓದಿ....

  ಅಪ್ಪು ಆಯ್ಕೆ ಏನಾಗಿತ್ತು?

  ಅಪ್ಪು ಆಯ್ಕೆ ಏನಾಗಿತ್ತು?

  ರಚಿತಾ ರಾಮ್, ರಮ್ಯಾ, ರಶ್ಮಿಕಾ ಮಂದಣ್ಣ, ರಾಧಿಕಾ ಪಂಡಿತ್ ಈ ನಾಲ್ವರಲ್ಲಿ ಯಾರು ಕನ್ನಡದ ಕೋಟ್ಯಧಿಪತಿ ಶೋ ಪುನೀತ್ ಜೊತೆಯಲ್ಲಿ ನಿರೂಪಣೆ ಮಾಡಬಹುದು. ಈ ಪ್ರಶ್ನೆಗೆ ಪುನೀತ್ ರಾಜ್ ಕುಮಾರ್ ಉತ್ತರವೇ ಕೊಡಲಿಲ್ಲ. ಈ ನಾಲ್ಕು ಜನರ ಜೊತೆ ಆಕ್ಟ್ ಮಾಡಿದ್ದೀನಿ, ಎಲ್ಲರೂ ಎಂದುಬಿಟ್ಟರು.

  ರಮ್ಯಾ ಇರಬೇಕು ಅಂತಾರೆ ರಚ್ಚು

  ರಮ್ಯಾ ಇರಬೇಕು ಅಂತಾರೆ ರಚ್ಚು

  ಕನ್ನಡದ ಕೋಟ್ಯಧಿಪತಿ ಫೈನಲ್ ಎಪಿಸೋಡ್ನಲ್ಲಿ ಪುನೀತ್ ರಾಜ್ ಕುಮಾರ್ ಹಾಟ್ ಸೀಟ್ ನಲ್ಲಿ ಭಾಗವಹಿಸಿದ್ದರು. ಫೈನಲ್ ಸಂಚಿಕೆ ಆದ ಕಾರಣ ರಚಿತಾ ರಾಮ್ ನಿರೂಪಣೆ ಮಾಡಿದ್ದರು. ಪುನೀತ್ ಉತ್ತರ ಕೊಡದ ಪ್ರಶ್ನೆಗೆ ರಚಿತಾ ರಾಮ್ ಉತ್ತರ ಕೊಟ್ಟರು. ರಚ್ಚು ಪ್ರಕಾರ, ಪುನೀತ್ ಜೊತೆಯಲ್ಲಿ ರಮ್ಯಾ ಅವರನ್ನ ನೋಡಬೇಕಂತೆ.

  ರಶ್ಮಿಕಾ ಪರ ರಚಿತಾ ವಾದ: ಟ್ರೋಲಿಗರ ವಿರುದ್ಧ ಗುಡುಗಿದ ಗುಳಿಕೆನ್ನೆ ಚೆಲುವೆರಶ್ಮಿಕಾ ಪರ ರಚಿತಾ ವಾದ: ಟ್ರೋಲಿಗರ ವಿರುದ್ಧ ಗುಡುಗಿದ ಗುಳಿಕೆನ್ನೆ ಚೆಲುವೆ

  ರಮ್ಯಾ ಅಂದ್ರೆ ರಚಿತಾಗೆ ತುಂಬಾ ಇಷ್ಟ

  ರಮ್ಯಾ ಅಂದ್ರೆ ರಚಿತಾಗೆ ತುಂಬಾ ಇಷ್ಟ

  ರಮ್ಯಾ ಅವರಂದ್ರೆ ವೈಯಕ್ತಿಕವಾಗಿ ರಚಿರಾ ರಾಮ್ ಅವರಿಗೆ ಬಹಳ ಇಷ್ಟ. ಹಲವು ಬಾರಿ ರಮ್ಯಾ ಅವರ ಕುರಿತು ರಚ್ಚು ಮಾತನಾಡಿದ್ದಾರೆ. 'ನಾನು ಅವರ ಅಭಿಮಾನಿ' ಎಂದು ಕೂಡ ಹೇಳಿದ್ದಾರೆ. ರಮ್ಯಾ ಸಿನಿಮಾ ಇಂಡಸ್ಟ್ರಿಗೆ ಕಂಬ್ಯಾಕ್ ಆದರೆ ಖುಷಿ ಪಡುವವರಲ್ಲಿ ರಚ್ಚು ಕೂಡ ಇದ್ದಾರೆ.

  ದರ್ಶನ್ 'ಗಂಡುಗಲಿ ಮದಕರಿ ನಾಯಕ' ಚಿತ್ರಕ್ಕಾಗಿ ರಮ್ಯಾ ವಾಪಸ್?ದರ್ಶನ್ 'ಗಂಡುಗಲಿ ಮದಕರಿ ನಾಯಕ' ಚಿತ್ರಕ್ಕಾಗಿ ರಮ್ಯಾ ವಾಪಸ್?

  ಪುನೀತ್-ರಮ್ಯಾ ಅತ್ಯುತ್ತಮ ಜೋಡಿ

  ಪುನೀತ್-ರಮ್ಯಾ ಅತ್ಯುತ್ತಮ ಜೋಡಿ

  ಪುನೀತ್ ರಾಜ್ ಕುಮಾರ್ ಜೊತೆ ನಟಿಸಿದ ನಾಯಕಿಯರ ಪೈಕಿ ರಮ್ಯಾ ಅತ್ಯುತ್ತಮ ಜೋಡಿ ಎಂಬ ಮಾತಿದೆ. ಅಭಿ ಸಿನಿಮಾದಲ್ಲಿ ಅಪ್ಪು ಜೊತೆ ನಾಯಕಿಯಾಗಿ ರಮ್ಯಾ, ಆಕಾಶ್ ಮತ್ತು ಅರಸು ಚಿತ್ರಗಳನ್ನ ಮಾಡಿದ್ದರು. ಈ ಮೂರು ಚಿತ್ರಗಳು ಸೂಪರ್ ಹಿಟ್ ಆಗಿದೆ.

  ಕಂಬ್ಯಾಕ್ ಆಗ್ತಾರಾ ಪದ್ಮಾವತಿ?

  ಕಂಬ್ಯಾಕ್ ಆಗ್ತಾರಾ ಪದ್ಮಾವತಿ?

  ಮೋಹಕತಾರೆ ರಮ್ಯಾ ಅವರು ಬಹಳ ಯಶಸ್ಸಿನಲ್ಲಿರುವಾಗಲೇ ಚಿತ್ರರಂಗದಿಂದ ಬ್ರೇಕ್ ತೆಗೆದುಕೊಂಡಿದ್ದರು. ರಾಜಕೀಯವಾಗಿ ತೊಡಗಿಕೊಂಡ ಕಾರಣ, ಮತ್ತೆ ಸ್ಯಾಂಡಲ್ ವುಡ್ ಕಡೆ ಕಾಣಿಸಿಕೊಳ್ಳಲಿಲ್ಲ. ಈಗ, ರಮ್ಯಾ ಅವರು ಮತ್ತೆ ಚಂದನವನಕ್ಕೆ ವಾಪಸ್ ಆಗ್ತಾರೆ ಎಂಬ ಮಾತುಗಳು ಚಾಲ್ತಿಯಲ್ಲಿದೆ. ಬಟ್

  English summary
  Who is best co-host for Puneeth Rajkumar in Kannadada Kotyadhipathi in this four actresses?

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X