ಯಶಸ್ಸಿನಲ್ಲಿರುವಾಗಲೇ ಸೀರಿಯಲ್ ಬಿಟ್ಟು ಹೋದ ಸ್ಟಾರ್ ಕಲಾವಿದರಿವರು.!

ಕಿರುತೆರೆಯಲ್ಲಿ ಧಾರಾವಾಹಿಗಳಿಗೆ ಸಖತ್ ಡಿಮ್ಯಾಂಡ್ ಇದೆ. ಅದರಲ್ಲೂ ಅಗ್ನಿಸಾಕ್ಷಿ, ರಾಧರಮಣ, ಮಗಳು ಜಾನಕಿ, ಪಾರು, ಪುಟ್ಟಗೌರಿ ಮದುವೆ ಅಂತ ಮೆಗಾ ಸೀರಿಯಲ್ ಗಳಿಗೆ ಅತಿ ಹೆಚ್ಚು ಟಿ.ಆರ್.ಪಿ ಇದೆ. ಈ ಧಾರಾವಾಹಿಯ ಕೆಲವು ಪಾತ್ರಗಳನ್ನ ಜನರು ಬಹಳ ಅಚ್ಚುಕೊಂಡಿದ್ದಾರೆ.

ತಮ್ಮದೇ ಮಗ, ತಮ್ಮನೆ ಸೊಸೆ, ತಮ್ಮನೆ ಮಗಳು ಎಂಬ ರೀತಿ ಫೀಲ್ ಆಗ್ತಾರೆ. ಹೀಗಿರುವಾಗ, ದಿಢೀರ್ ಅಂತ ಆ ಪಾತ್ರಕ್ಕೆ ಕಲಾವಿದರು ಬದಲಾಗುತ್ತಿದ್ದಾರೆ ಎಂಬ ಸೂಚನೆ ಸಿಗುತ್ತಿದ್ದಂತೆ ಆ ಸೀರಿಯಲ್ ಅಭಿಮಾನಿಗಳು ಬೇಸರವಾಗ್ತಾರೆ. ಧಾರಾವಾಹಿಯನ್ನ ನೋಡುವುದನ್ನೆ ಬಿಟ್ಟಿರುವ ಉದಾಹರಣೆಗಳು ಕೂಡ ಸಿಗುತ್ತೆ.

ಧಾರಾವಾಹಿ ಲೋಕಕ್ಕೆ ಹೊಸ ಹೊಸ ಕಲಾವಿದರು ಬರ್ತಿದ್ದಾರೆ. ಅದೇ ರೀತಿ ನಾಲ್ಕೈದು ವರ್ಷ ಒಂದೇ ಧಾರಾವಾಹಿಯಲ್ಲಿ, ಒಂದೇ ಪಾತ್ರದಲ್ಲಿ ನಟಿಸಿದ ಕಲಾವಿದರು ಬಿಟ್ಟು ಹೋಗ್ತಿದ್ದಾರೆ. ಬಹುದೊಡ್ಡ ಅಭಿಮಾನಿ ಬಳಗ ಹೊಂದಿದ ಕಲಾವಿದರೇ ಸೀರಿಯಲ್ ಬಿಟ್ಟು ಹೋಗಿದ್ದಾರೆ. ಅಂತಹ ನಾಲ್ಕು ಕಲಾವಿದರ ಪಟ್ಟಿ ಇಲ್ಲಿದೆ. ಮುಂದೆ ಓದಿ.....

ಹೊಸ ಸೇರ್ಪಡೆ ವಿಜಯ್ ಸೂರ್ಯ

ಹೊಸ ಸೇರ್ಪಡೆ ವಿಜಯ್ ಸೂರ್ಯ

2013ರಲ್ಲಿ ಆರಂಭವಾದ ಅಗ್ನಿಸಾಕ್ಷಿ ಧಾರಾವಾಹಿ ಸುಮಾರು ಆರು ವರ್ಷಗಳಿಂದ ಪ್ರಸಾರವಾಗ್ತಿದೆ. ಆಗಿನಿಂದಲೂ ಧಾರಾವಾಹಿಯ ಮುಖ್ಯ ಪಾತ್ರ ಸಿದ್ಧಾರ್ಥ್ ಪಾತ್ರದಲ್ಲಿ ವಿಜಯ್ ಸೂರ್ಯ ಅವರೇ ನಟಿಸುತ್ತಾ ಬಂದಿದ್ದಾರೆ. ಸಿನಿಮಾಗಳಲ್ಲಿ ನಟಿಸಿದರೂ ಕೂಡ ಸಿದ್ಧಾರ್ಥ್ ಪಾತ್ರವನ್ನ ಮಾತ್ರ ಬಿಟ್ಟಿಲ್ಲ. ಇದೀಗ, ಸತತ ಐದಾರು ವರ್ಷದ ಬಳಿಕ ಅಗ್ನಿಸಾಕ್ಷಿ ಧಾರಾವಾಹಿಗೆ ಗುಡ್ ಬೈ ಹೇಳಲು ನಿರ್ಧರಿಸಿದ್ದಾರೆ. ಹೌದು, ಐದು ವರ್ಷದ ಅಗ್ರಿಮೆಂಟ್ ಮುಗಿದ ಕಾರಣ ವಿಜಯ್ ಸೂರ್ಯ ಅಗ್ನಿಸಾಕ್ಷಿ ಧಾರಾವಾಹಿಗೆ ವಿದಾಯ ಹೇಳುತ್ತಿದ್ದಾರೆ. ಹೀಗಾಗಿ, ಮುಂದಿನ ಎಪಿಸೋಡ್ ಗಳಲ್ಲಿ ವಿಜಯ್ ಸೂರ್ಯ ಕಾಣಿಸಿಲ್ಲ.

ರಾಧಾ ಮಿಸ್ ಹೋದರು

ರಾಧಾ ಮಿಸ್ ಹೋದರು

ಸುಮಾರು ಎರಡು ವರ್ಷದಿಂದ ಪ್ರಸಾರವಾಗುತ್ತಿರುವ ರಾಧಾರಮಣ ಧಾರಾವಾಹಿಯಲ್ಲೂ ದೊಡ್ಡ ಬದಲಾವಣೆ ಕಂಡಿದೆ. ರಾಧಾ ಮಿಸ್ ಪಾತ್ರದಲ್ಲಿ ಶ್ವೇತಾ ಪ್ರಸಾದ್ ನಟಿಸುತ್ತಿದ್ದಾರೆ. ಶ್ವೇತಾ ಅವರ ನಟನೆಗೆ ಪ್ರೇಕ್ಷಕರು ಫಿದಾ ಆಗಿದ್ದರು. ಇದೀಗ, ಶ್ವೇತಾ ರಾಧಾರಮಣ ಧಾರಾವಾಹಿಯಿಂದ ಹಿಂದೆ ಸರಿದಿದ್ದಾರೆ. ಅವರ ಜಾಗಕ್ಕೆ ಕಾವ್ಯ ಗೌಡ ಬಂದಿದ್ದಾರೆ. ಯಶಸ್ಸಿನಲ್ಲಿರುವಾಗಲೇ ಧಾರಾವಾಹಿ ಬಿಟ್ಟಿದ್ದು ಬಹಳ ಚರ್ಚೆಗೆ ಕಾರಣವಾಗಿತ್ತು.

ರಂಜನಿ ರಾಘವನ್

ರಂಜನಿ ರಾಘವನ್

ಕಿರುತೆರೆಯ ಮತ್ತೊಂದು ಮೆಗಾ ಧಾರಾವಾಹಿ ಪುಟ್ಟಗೌರು ಮದುವೆ. ಸುಮಾರು ಏಂಟು ವರ್ಷದಿಂದ ಪ್ರಸಾರವಾಗುತ್ತಿದ್ದ ಈ ಧಾರಾವಾಹಿ ಈಗ ಮಂಗಳ ಗೌರಿ ಮದುವೆ ಎಂದು ಹೆಸರು ಬದಲಿಸಿಕೊಂಡಿದೆ. ಕಥೆ ಬದಲಿಸಿದ ಕಾರಣನಾ ಅಥವಾ ರಂಜನಿ ರಾಘವನ್ ನಟಿಸಿಲ್ಲ ಎಂದರೋ ಕಥೆಯೂ ಬದಲಿಸಿ ಅದೇ ಸಮಯದಲ್ಲಿ ಮುಂದುವರಿಸಿದ್ದಾರೆ. ರಂಜನಿ ರಾಘವನ್ ಗೂ ದೊಡ್ಡ ಫಾಲೋವರ್ಸ್ ಇದ್ದರೂ ಧಾರಾವಾಹಿಯಿಂದ ಹಿಂದೆ ಸರಿದಿದ್ದು ಬೇಸರದ ಸಂಗತಿ.

ಮಗಳು ಜಾನಕಿ ಬಿಟ್ಟು ಹೋದ ಐಶ್ವರ್ಯ

ಮಗಳು ಜಾನಕಿ ಬಿಟ್ಟು ಹೋದ ಐಶ್ವರ್ಯ

ಮಗಳು ಜಾನಕಿ ಧಾರಾವಾಹಿಯಲ್ಲಿ ಭಾರ್ಗಿಯ ಎರಡನೇ ಮಗಳು ಚಂಚಲ ಪಾತ್ರಧಾರಿ ಐಶ್ವರ್ಯ ತನ್ನ ಪಾತ್ರವನ್ನ ಅರ್ಧಕ್ಕೆ ಬಿಟ್ಟು ಹೋದರು. ಟಿ.ಎನ್ ಸೀತರಾಂ ನಿರ್ದೇಶನದ ಈ ಧಾರಾವಾಹಿ ಹೊಸದಾಗಿ ಆರಂಭವಾಗಿತ್ತು ಮತ್ತು ಬಹಳ ಖ್ಯಾತಿ ಪಡೆದುಕೊಂಡಿದ್ದರು. ಹೀಗಿರುವಾಗಲೇ ಈ ಧಾರಾವಾಹಿಯನ್ನ ಬಿಟ್ಟು ಹೋಗಿದ್ದು ಅಚ್ಚರಿ ನೀಡಿತ್ತು.

More from Filmibeat

English summary
Vijay surya from agnisakshi, shwetha prasad from radha ramana, ranjani raghavan from puttagowri maduve and magalu janaki chanchala fame aishwarya told good bye to serials.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X