'ಪ್ರೇಮಲೋಕ'ದಲ್ಲಿ ವಿಜಯ್ ಸೂರ್ಯಗೆ ನಾಯಕಿ ಯಾರು?
Recommended Video
ಸಾವಿರಾರು ಹುಡುಗಿಯರ ಹೃದಯ ಕದ್ದಿರುವ ಗುಳಿಕೆನ್ನೆ ಚೆಲುವ ವಿಜಯ್ ಸೂರ್ಯ ಈಗ ಪ್ರೇಮಲೋಕಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿರುವ 'ಪ್ರೇಮಲೋಕ' ಧಾರಾವಾಹಿಯ ಮೊದಲ ಪ್ರೋಮೋ ಈಗಾಗಲೇ ಗಮನ ಸೆಳೆದಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಈ ಪ್ರೋಮೋ ಕುರಿತು ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ. ಗಿಟಾರ್ ಹಿಡಿದು, ಅಭಿಮಾನಿಗಳನ್ನು ರಂಜಿಸುತ್ತಿರುವ ವಿಜಯ್ ಸೂರ್ಯ ಅವರ ಲುಕ್ ಯುವ ಮನಸ್ಸುಗಳನ್ನು ಆಕರ್ಷಿಸುತ್ತಿದ್ದು ಧಾರಾವಾಹಿಯಲ್ಲಿ ಮತ್ತಷ್ಟು ಸರ್ಪ್ರೈಸ್ ನೀಡಲಿದ್ದಾರಂತೆ ವಿಜಯ್ ಸೂರ್ಯ.
ಹಾಗಾದ್ರೆ ವಿಜಯ್ ಗೆ ನಾಯಕಿ ಯಾರು? ಈ ಪ್ರಶ್ನೆ ಹಲವರಲ್ಲಿ ಮೂಡಿದ್ದು ಮುದ್ದು ಮುಖದ ಚೆಲುವೆಯೊಬ್ಬಳು ಅದಾಗಲೇ ವಿಜಯ್ ಗೆ ಜೋಡಿಯಾಗಿದ್ದಾರಂತೆ. ಆದರೆ, ಯಾರೂ ಎಂಬುದರ ಬಗ್ಗೆ ಪಕ್ಕಾ ಮಾಹಿತಿ ಬಿಟ್ಟುಕೊಟ್ಟಿಲ್ಲ.

ಪ್ರೇಮಲೋಕದಲ್ಲಿ ವಿಜಯ್ ಗೆ ನಾಯಕಿ ಯಾರಾಗಬಹುದು ಎಂಬ ಕುತೂಹಲ ಕಾಡುತ್ತಿರುವಾಗಲೇ, ನಾಯಕಿಯ ಪ್ರೋಮೋ ರಿಲೀಸ್ ಮಾಡುವುದಾಗಿ ಸುವರ್ಣ ವಾಹಿನಿ ಸುಳಿವು ನೀಡಿದೆ.
ಇನ್ನುಳಿದಂತೆ 'ಪ್ರೇಮಲೋಕ' ಹಿಂದಿ ಧಾರಾವಾಹಿಯ ರೀಮೇಕ್. ಹಿಂದಿಯ ಜನಪ್ರಿಯ ಧಾರಾವಾಹಿಯಾದ 'ಕಸೂತಿ ಜಿಂದಗಿ ಕೇ' ಧಾರಾವಾಹಿಯ ರೀಮೇಕ್. ಈ ಧಾರಾವಾಹಿಯ ಅನುರಾಗ್ ಪಾತ್ರ ತುಂಬನೆ ಖ್ಯಾತಿಗಳಿಸಿದೆ. ಅನುರಾಗ್ ಪಾತ್ರದಲ್ಲಿ ವಿಜಯ್ ಸೂರ್ಯ ಕಾಣಿಸಿಕೊಳ್ಳಲಿದ್ದಾರೆ. ಧಾರಾವಾಹಿಗೆ ಸಹಿ ಮಾಡಿದ ನಂತರ ಹಿಂದಿಯ 'ಕಸೂತಿ ಜಿಂದಗಿ ಕೇ' ಧಾರಾವಾಹಿಯ ಒಂದಿಷ್ಟು ಭಾಗಗಳನ್ನು ವೀಕ್ಷಿಸಿದ್ದಾರಂತೆ.


Click it and Unblock the Notifications











