ಯಾರಾಗಲಿದ್ದಾರೆ 'ಬಿಗ್ ಬಾಸ್ 2' ವಿನ್ನರ್, ರನ್ನರ್?

By Rajendra

ಸುವರ್ಣ ವಾಹಿನಿಯ ರಿಯಾಲಿಟಿ ಶೋ 'ಬಿಗ್ ಬಾಸ್ ಸೀಸನ್ 2'ಗೆ ತೆರೆ ಬೀಳುವ ಸಮಯ ಬಂದೇ ಬಿಟ್ಟಿದೆ. ಇದೇ ಭಾನುವಾರ (ಅ.5) ಸಂಜೆ 6ರಿಂದ ಆರಂಭವಾಗುವ ಗ್ರ್ಯಾಂಡ್ ಫಿನಾಲೆ ಕಾರ್ಯಕ್ರಮ ಮುಗಿಯುವುದು ರಾತ್ರಿ 11 ಗಂಟೆಗೆ.

ಅಂತಿಮ ಹಂತದ ಹಣಾಹಣಿಯಲ್ಲಿ ನಾಲ್ಕು ಮಂದಿ ಮಾತ್ರ ಇದ್ದಾರೆ. ಸೃಜನ್ ಲೋಕೇಶ್, ಅಕುಲ್ ಬಾಲಾಜಿ, ಶ್ವೇತಾ ಚೆಂಗಪ್ಪ ಹಾಗೂ ದೀಪಿಕಾ ಕಾಮಯ್ಯ. ಈ ನಾಲ್ಕು ಮಂದಿಯಲ್ಲಿ ಯಾರ ಕೊರಳಿಗೆ ವಿಜಯದ ಮಾಲೆ ಬೀಳದೆ ಎಂಬುದು ಗೊತ್ತಾಗಬೇಕಾದರೆ ಭಾನುವಾರದ ತನಕ ಕಾಯಲೇಬೇಕು.

ಇದಕ್ಕೂ ಮುನ್ನ ಮನೆಯಲ್ಲಿ ಕೆಲವು ಅನಿರೀಕ್ಷಿತ ಘಟನೆಗಳು ನಡೆದವು. 'ಗೃಹಪ್ರವೇಶ' ಕಾಂಟೆಸ್ಟ್ ವಿನ್ನರ್ ಮೈಸೂರಿನ ವಿಶಾಲ್ ಹೆಗಡೆ ಎಂಬುವವರಿಗೆ ಬಿಗ್ ಬಾಸ್ ಸ್ಪರ್ಧಿಗಳ ಜೊತೆಯಲ್ಲಿ ಕೆಲ ಸಮಯ ಕಳೆಯಲು ಅವಕಾಶ ಮಾಡಿಕೊಡಲಾಯಿತು. ಮನೆಯಲ್ಲಿ ಅವರು ಇದ್ದಷ್ಟು ಹೊತ್ತೂ ಸ್ಪರ್ಧಿಗಳಿಗೆ ಹೊಸ ಸ್ಫೂರ್ತಿ ತುಂಬಿದರು.

ಬಿಗ್ ಬಾಸ್ ಮನೆಯಲ್ಲಿ ಆದಿ ಲೋಕೇಶ್ ಪ್ರತ್ಯಕ್ಷ

ಬಿಗ್ ಬಾಸ್ ಮನೆಯಲ್ಲಿ ಆದಿ ಲೋಕೇಶ್ ಪ್ರತ್ಯಕ್ಷ

ಇದರ ನಡುವೆ ಆದಿ ಲೋಕೇಶ್ ಅವರು ಶಿಕಾರಿಯಾಗಿ ಮನೆಗೆ ಭೇಟಿ ನೀಡಿದರು. ಅವರ ಭೇಟಿಯಿಂದ ಮನೆಯಲ್ಲಿ ಮಿಂಚಿನ ಸಂಚಾರ ಉಂಟಾಯಿತು. ಮನೆಯ ಸದಸ್ಯರು ಕೆಲವು ಸೌಲಭ್ಯಗಳಿಂದ ವಂಚಿತರಾಗಿದ್ದರೂ ಇವರಿಬ್ಬರ ಭೇಟಿ ಹೊಸ ಎನರ್ಜಿಯನ್ನು ಅವರಿಗೆ ತಂದುಕೊಟ್ಟಿದೆ.

ರು.50,00,000 ಯಾರ ಕೈ ಸೇರಲಿದೆ?

ರು.50,00,000 ಯಾರ ಕೈ ಸೇರಲಿದೆ?

ಸುವರ್ಣ ವಾಹಿನಿಯ ಎಲ್ಲ ವೀಕ್ಷಕರ ಒಂದೇ ಪ್ರಶ್ನೆ ಎಂದರೆ ಈ ಬಾರಿ ಯಾರು ವಿನ್ನರ್ ಆಗಲಿದ್ದಾರೆ ಎಂಬುದು. ಯಾರ ಕೈಗೆ ರು.50,00,000 ಬೆಲೆಬಾಳುವ ಅಪಾರ್ಟ್ ಮೆಂಟ್ ಕೀ ಸಿಗುತ್ತದೆ. ಯಾರಾಗಲಿದ್ದಾರೆ ರನ್ನರ್ ಎಂಬ ಪ್ರಶ್ನೆಗಳು.

ಸೃಜನ್ ಕೊರಳಿಗೆ ಬೀಳತ್ತಾ ವಿಜಯ ಮಾಲೆ?

ಸೃಜನ್ ಕೊರಳಿಗೆ ಬೀಳತ್ತಾ ವಿಜಯ ಮಾಲೆ?

ಈ ಬಾರಿ ವಿನ್ನರ್ ಆಗುವ ಎಲ್ಲಾ ಸಾಧ್ಯತೆಗಳು ಸೃಜನ್ ಅವರಿಗೆ ಇದೇ ಎಂದೇ ಎಲ್ಲರೂ ಭಾವಿಸಿದ್ದಾರೆ. ಮನೆಯಲ್ಲಿದ್ದಷ್ಟು ದಿನವೂ ಒಳ್ಳೆಯ ನಡತೆ, ಗುಣ ಹಾಗೂ ಗೆಳೆತನವನ್ನು ಪ್ರದರ್ಶಿಸಿದ ಸ್ಪರ್ಧಿ ಸೃಜನ್ ಎನ್ನಬಹುದು. ಬಹುಶಃ ಗೆಲುವು ಅವರಿಗೇ ಇರುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ.

ಅಕುಲ್ ಬಾಲಾಜಿ ವಿನ್ನರ್ ಆಗ್ತಾರಾ?

ಅಕುಲ್ ಬಾಲಾಜಿ ವಿನ್ನರ್ ಆಗ್ತಾರಾ?

ಈ ಬಾರಿ ವಿನ್ನರ್ ಆಗುವ ಎಲ್ಲಾ ಸಾಧ್ಯತೆಗಳು ಇರುವಂತಹ ಇನ್ನೊಬ್ಬ ಸ್ಪರ್ಧಿ ಎಂದರೆ ಅಕುಲ್ ಬಾಲಾಜಿ. ಎಲ್ಲರನ್ನೂ ರಂಜಿಸುತ್ತಾ, ಮನೆಯಲ್ಲಿ ಲವಲವಿಕೆಯಿಂದಿದ್ದ ಸ್ಪರ್ಧಿ ಎಂದರೆ ಅಕುಲ್. ವಿನ್ನರ್ ಆಗುವ ಎಲ್ಲಾ ಅರ್ಹತೆಗಳು ಇರುವಂತಹ ಸ್ಪರ್ಧಿ.

ಮಹಿಳಾ ಸ್ಪರ್ಧಿಗೂ ಚಾನ್ಸ್ ಉಂಟು

ಮಹಿಳಾ ಸ್ಪರ್ಧಿಗೂ ಚಾನ್ಸ್ ಉಂಟು

ಈ ಬಾರಿ ಬಿಗ್ ಬಾಸ್ ಇನ್ನೊಂದು ತೀರ್ಮಾನಕ್ಕೂ ಬರಬಹುದು. ಈ ಸಲ ಯಾಕೆ ಮಹಿಳಾ ಸ್ಪರ್ಧಿಯನ್ನು ಆಯ್ಕೆ ಮಾಡಬಾರದು? ಮನೆಯಲ್ಲಿರುವ ಇಬ್ಬರು ಮಹಿಳಾ ಸ್ಪರ್ಧಿಗಳ ಪೈಕಿ ಒಬ್ಬರನ್ನು ವಿನ್ನರ್ ಆಗಿ ಘೋಷಿಸಲೂ ಬಹುದು. ದೀಪಿಕಾ ಹಾಗೂ ಶ್ವೇತಾ ಇಬ್ಬರಲ್ಲಿ ಒಬ್ಬರು ವಿನ್ನರ್ ಆಗುವ ಸಾಧ್ಯತೆಗಳನ್ನೂ ತಳ್ಳಿಹಾಕುವಂತಿಲ್ಲ.

ಬಿಗ್ ಬಾಸ್ 2 ಅಧಿಪತಿ ಯಾರು?

ಬಿಗ್ ಬಾಸ್ 2 ಅಧಿಪತಿ ಯಾರು?

ಸುದೀಪ್ ಅವರು ಈಗಾಗಲೆ ಹೇಳಿದಂತೆ, ಮುಂದಿನ ಸಂಡೆ ಪ್ರತಿವಾರದಂತೆ ಸಖತ್ ಆಗಿ ಇರಲ್ಲ, ಸಿಕ್ಕಾಪಟ್ಟೆ ಸಖತ್ ಆಗಿರುತ್ತದೆ. ಮುಂದಿನ ವಾರ ಇರೋದು ಮಜಾ ಅಲ್ಲಾ 'ಬಿಗ್ ಬಾಸ್ 2' ನ ಗ್ರ್ಯಾಂಡ್ ಫಿನಾಲೆ. ಹದಿನಾಲ್ಕು ವಾರಗಳ ನಂತರ ಕೊನೆಯದಾಗಿ ಬಿಗ್ ಬಾಸ್ 2 ಅಧಿಪತಿ ಯಾರು. ಅಕ್ಟೋಬರ್ 5ಕ್ಕೆ ಸಂಜೆ 6 ಗಂಟೆಗೆ 11 ಗಂಟೆಯವರೆಗೂ ಫಿನಾಲೆ ನಡೆಯಲಿದೆ ನೋಡಿ ಆನಂದಿಸಿ.

More from Filmibeat

English summary
Who will be the Bigg Boss Kannada 2 winner? Only one day to go for The Grand Finale of Biggest show of Karnataka. Srujan Lokesh, Akul Balaji, Deepika Kamaiah and Shwetha Chengappa are in final. Simply tune to Suvarna channel on 5th October at 6 pm to 11 pm.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X