Bhagyalakshmi: ಗೌತಮಿ ಗೌಡ ಪಾತ್ರ ಮಾಡೋದ್ಯಾರು? ಬದಲಾದ ಮುಖ ಒಪ್ಪುತ್ತಾರಾ ವೀಕ್ಷಕರು?

By ಎಸ್ ಸುಮಂತ್

ಧಾರಾವಾಹಿಯಲ್ಲಿಯೇ ಆಗಲಿ, ಸಿನಿಮಾದಲ್ಲಿಯೇ ಆಗಲಿ ನೆಗೆಟಿವ್ ಶೇಡ್‌ಗೆ ಸಾಕಷ್ಟು ಕ್ರೇಜ್ ಇದೆ. ಅದರಲ್ಲೂ ಸಂಸಾರದಲ್ಲಿ ಒಂದಷ್ಟು ಮನಸ್ತಾಪಕ್ಕೆ ಕಾರಣವಾಗಲು, ಕಥೆಗೆ ಟ್ವಿಸ್ಟ್ ಸಿಗಲೂ ಈ ನೆಗೆಟಿವ್ ಪಾತ್ರಗಳಿದ್ದರೇನೆ ಒಂದು ತೂಕ. ಈಗ 'ಭಾಗ್ಯಲಕ್ಷ್ಮೀ' ಧಾರಾವಾಹಿಯಲ್ಲಿ ಶ್ರೇಷ್ಠಾಳ ಪಾತ್ರವು ಅಂತದ್ದೇ. ಭಾಗ್ಯಾಳ ಸಂಸಾರದಲ್ಲಿ ಮೂಗು ತೂರಿಸುವ ಪಾತ್ರವದು. ಭಾಗ್ಯಾಳ ಗಂಡನನ್ನು ದೂರ ಮಾಡಿ ತನ್ನ ಸ್ವಂತ ಮಾಡಿಕೊಳ್ಳುವ ಪಾತ್ರವದು.

ಸದ್ಯ ಶ್ರೇಷ್ಠಾಳ ಬಲೆಗೆ ಬಿದ್ದಿರುವ ತಾಂಡವ್ ಭಾಗ್ಯಾಳನ್ನು ಮತ್ತಷ್ಟು ತಾತ್ಸಾರದಿಂದಲೇ ನೋಡುತ್ತಿದ್ದ. ಆದರೆ ಕುಸುಮಾ ಇರುವ ತನಕ ಸಂಸಾರದ ನೊಗ ಯಾವ ಕಡೆಗೂ ಹೋಗಲ್ಲ. ಒಂದೇ ದಿಕ್ಕಿನಲ್ಲಿಯೇ ಸಾಗುತ್ತದೆ. ಕುಸುಮಾಳ ಭಯಕ್ಕೇನೆ ತಾಂಡವ್ ಶ್ರೇಷ್ಠಾಳನ್ನು ಮನೆಗೆ ಕರೆ ತಂದಿಲ್ಲ. ಆದರೆ ಈಗ ಶ್ರೇಷ್ಠಾಳ ಪಾತ್ರ ಬದಲಾಗಿದೆ.

 Who will play Gowthami Gowdas character after she quits Bhagyalakshmi serial

ಶ್ರೇಷ್ಠಾಳಾಗಿ ಬಂದಿದ್ದ ಗೌತಮಿ ಗೌಡ

ಭಾಗ್ಯಾಳ ಸಂಸಾರ ಒಂದು ಪುಟ್ಟ ಸಂಸಾರ. ಸುಖ, ಶಾಂತಿ, ನೆಮ್ಮದಿ ಎಲ್ಲವೂ ಇತ್ತು. ಆದರೆ ತಾಂಡವ್ ಆಫೀಸಲ್ಲಿ ಶ್ರೇಷ್ಠಾಳ ಎಂಟ್ರಿಯಾಗಿದ್ದೇ ತಡ. ತಾಂಡವ್ ಮತ್ತಷ್ಟು ಬದಲಾವಣೆಗೆ ಕಾರಣವಾಗಿತ್ತು. ಹೆಂಡತಿಯನ್ನು ಬಿಟ್ಟು ನೀನೆ ಎಲ್ಲಾ ಎನ್ನುವಷ್ಟರ ಮಟ್ಟಿಗೆ ತಾಂಡವ್, ಶ್ರೇಷ್ಠಾಳನ್ನು ಇಷ್ಟಪಡುವುದಕ್ಕೆ ಶುರು ಮಾಡಿದ್ದ. ಆ ಶ್ರೇಷ್ಠಾಳ ಪಾತ್ರ ಮಾಡಿದ್ದೆ, ಗೌತಮಿ. ಒಂದಷ್ಟು ಗ್ಯಾಪ್ ಬಳಿಕ ನೆಗೆಟಿವ್ ಶೇಡ್‌ನಲ್ಲಿ ಬಣ್ಣ ಹಚ್ಚಿದ್ದರು.

ಕೆಲವೊಮ್ಮೆ ಧಾರಾವಾಹಿಗಳು ಹಾಗೂ ಸಿನಿಮಾಗಳ ಪಾತ್ರಗಳು ನಮ್ಮ‌ ಮೇಲೆ ಪ್ರಭಾವ ಬೀರುತ್ತವೆ. 'ಭಾಗ್ಯಲಕ್ಷ್ಮೀ' ಧಾರಾವಾಹಿಯ ಶ್ರೇಷ್ಠಾ ಪಾತ್ರ ಕೂಡ ಅಂತದ್ದೇ ಪ್ರಭಾವ ಬೀರಿತ್ತು. ಒಬ್ಬರ ಸಂಸಾರದಲ್ಲಿ ಮೂಗು ತೂರಿಸುವುದು ತಪ್ಪೇ. ಆದರೆ, ಈಗಿನ ಪೀಳಿಗೆಯ ಜೀವನ ಶೈಲಿ ಹೇಗಿದೆ ಎಂಬುದು ಆ ಪಾತ್ರದಿಂದ ತಿಳಿಯುತ್ತಾ ಇತ್ತು. ಎಷ್ಟೋ ಹುಡುಗಿಯರು ಶ್ರೇಷ್ಠಾಳ ಜೀವನ ಶೈಲಿಗೆ ಫಿದಾ ಆಗಿದ್ದರು. ಜೀವನ ಹೀಗೆ ಆರಾಮಾಗಿ ಸಾಗಬೇಕು ಎಂದು ಬಯಸಿದ್ದರು. ಅಷ್ಟು ಪ್ರಭಾವ ಬೀರಿತ್ತು ಆ ಪಾತ್ರ.

 Who will play Gowthami Gowdas character after she quits Bhagyalakshmi serial

ಮಿಸ್ ಯೂ ಎಂದ ತಾಂಡವ್

ಧಾರಾವಾಹಿಯಲ್ಲಿ ಶ್ರೇಷ್ಠಾ ಹಾಗೂ ತಾಂಡವ್‌ದೇ ಅದ್ಭುತ ಕಥೆ. ಯಾಕಂದ್ರೆ, ತಾಂಡವ್‌ನನ್ನು ಮದುವೆಯಾಗಲೇಬೇಕೆಂದು ಶ್ರೇಷ್ಠಾ ಬಯಸುತ್ತಿದ್ದಾಳೆ. ಅದಕ್ಕೆ ಅವರ ಮನೆಗೆ ಬರೋದು, ಕೆಲವು ಶಾಸ್ತ್ರ ಮಾಡೋದು, ಸಂಪ್ರದಾಯ ತಿಳಿಯುವ ಕೆಲಸಗಳನ್ನು ಮಾಡುತ್ತಿದ್ದಾಳೆ. ಇಷ್ಟು ದಿನ ತಾಂಡವ್‌ಗೆ ಒಳ್ಳೆ ಪಾಟ್ನರ್ ಆಗಿದ್ದಂತಹ ಗೌತಮಿ ತಂಡ ಬಿಡುತ್ತಿದ್ದಾರೆ. ಹೀಗಾಗಿ ಸೋಶಿಯಲ್ ಮೀಡಿಯಾ ಪೋಸ್ಟ್ ಗೆ ಇಡೀ ಧಾರಾವಾಹಿ ತಂಡ ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತೆ ಎಂದು ಹಾಕಿದ್ದಾರೆ. ಅದಕ್ಕೆ ಗೌತಮಿ ಕೂಡ ಪ್ರತಿಕ್ರಿಯೆ ನೀಡಿದ್ದಾರೆ.

ಧಾರಾವಾಹಿಯ ಒಳಗೆ ಶ್ರೇಷ್ಠಾ, ಭಾಗ್ಯಾಳ ಸಂಸಾರ ಹಾಳು ಮಾಡುತ್ತಾಳೆ. ಆದರೆ ಶೂಟಿಂಗ್ ಗ್ಯಾಪ್ ಕೊಟ್ಟ ಕೂಡಲೇ ಎಲ್ಲರೊಟ್ಟಿಗೂ ಗೌತಮಿ ತುಂಬಾ ಆತ್ಮೀಯವಾಗಿ ಬೆರೆಯುತ್ತಾರೆ. ಅದಕ್ಕೆ ಸಾಕ್ಷಿ ಅವರು ಹಂಚಿಕೊಂಡಿರುವ ಫೋಟೋ. ತಂಡದಿಂದ ಕೂಡ ಖುಷಿ ಖುಷಿಯಾಗಿ ಹೋಗಿರುವುದಕ್ಕೆ ಎಲ್ಲರೂ ಆತ್ಮೀಯವಾಗಿ ಕಳುಹಿಸಿಕೊಟ್ಟಿರುವುದೇ ಸಾಕ್ಷಿ. ಧಾರಾವಾಹಿ ತಂಡದ ಎಲ್ಲರ ಜೊತೆಗೂ ಫೋಟೋ ಹಂಚಿಕೊಂಡು ಧನ್ಯವಾದ ತಿಳಿಸಿದ್ದಾರೆ ಗೌತಮಿ.

ಧಾರಾವಾಹಿಯ ಕಥೆ ಜನರಿಗೆ ಇಷ್ಟವಾದಾಗ ಪಾತ್ರಗಳು ನೆಗೆಟಿವ್ ಆಗಲಿ, ಪಾಸಿಟಿವ್ ಆಗಲಿ ಮೊದಲು ಅಭಿನಯಿಸಿದವರೇ ಆ ಪಾತ್ರದ ಮೂಲಕ ಮನಸ್ಸಲ್ಲಿ ಕೂತು ಬಿಡುತ್ತಾರೆ. ಕಾರಣಾಂತರಗಳಿಂದ ಬದಲಾವಣೆಯಾದರೆ ನೋಡುಗರಿಗೆ ಹೊಸ ಮುಖ ಇಷ್ಟವಾಗುವುದು ಕಷ್ಟ. ಈಗ ಶ್ರೇಷ್ಠಾ ಪಾತ್ರ ಕೂಡ ಜನರನ್ನು ಅಷ್ಟೇ ಹಿಡಿದಿಟ್ಟಿತ್ತು. ಆದ್ರೆ, ಕಥೆ ಅದ್ಭುತವಾಗಿ ಸಾಗುತ್ತಿರುವ ಕಾರಣ ಅದೇನು ಅಷ್ಟಾಗಿ‌ ಪರಿಣಾಮ ಬೀರದೆ ಇರಬಹುದು.

More from Filmibeat

English summary
Who will play Gowthami Gowda's character after she quits Colors Kannada Bhagyalakshmi serial. Here is the details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X