Karan: 'ಅರಸಿ' ಬಳಿಕ ರಚಿತಾ ಗೆದ್ರು; ಆದ್ರೆ ಹೀರೋ ಕರಣ್ ಕಣ್ಮರೆ ಆಗಿದ್ದೇಕೆ?
'ಅಮೃತಧಾರೆ' ಧಾರಾವಾಹಿಯನ್ನ ಈಗಂತು ಆಲ್ಮೋಸ್ಟ್ ಎಲ್ಲರೂ ನೋಡ್ತಾರೆ. ಆ ಧಾರಾವಾಹಿ ಫ್ಯಾಮಿಲಿ, ಪ್ರೀತಿ, ಬುಸಿನೆಸ್ ಎಲ್ಲಾ ವರ್ಗದವರಿಗೂ ರಿಲೇಟ್ ಆಗುವಂತ ಎಪಿಸೋಡ್ ಗಳನ್ನೇ ನೀಡುತ್ತಿದೆ. ಹೀಗಾಗಿ ಎಲ್ಲರ ಫೇವರಿಟ್ ಧಾರಾವಾಹಿಯಾಗಿದೆ. ಅದರಲ್ಲಿ ಪಾರ್ಥ ಪಾತ್ರ ಎಲ್ಲರ ಮನಸ್ಸು ಗೆದ್ದಿದೆ.
ಪಾರ್ಥ ಬಹಳ ಹಿಂದಿನಿಂದಾನೆ ಧಾರಾವಾಹಿಗಳನ್ನ ಮಾಡಿಕೊಂಡು ಬಂದವರು. ಈಗ ಅಮೃತಧಾರೆಯಲ್ಲಿ ಗೌತಮ್ ದಿವಾನ್ ತಮ್ಮನಾಗಿ, ಚಾಕ್ಲೇಟ್ ಹೀರೋ ಆಗಿ ಕಾಣಿಸಿಕೊಂಡಿದ್ದಾರೆ. ಆದ್ರೆ ಈ ಹಿಂದೆ ರಚಿತಾ ರಾಮ್ ಜೊತೆಗೆ ಅರಸಿಯಲ್ಲಿ ಹೀರೋ ಆಗಿದ್ರು. ಅಂದು ವಿಲನ್ ಆದ ರಚಿತಾ ರಾಮ್ ಇಂದು ಸ್ಟಾರ್ ನಟಿಯಾಗಿದ್ರೆ, ಕರಣ್ ಈಗಲೂ ಸಪೋರ್ಟಿಂಗ್ ಕ್ಯಾರೆಕ್ಟರ್ ಮಾಡ್ತಾ ಇದಾರೆ. ಆ ಸಮಯದಲ್ಲಿ ಗ್ಯಾಪ್ ತೆಗೆದುಕೊಳ್ಳುವುದಕ್ಕೆ ಕಾರಣವೇನು ಎಂಬುದನ್ನು ಪಂಚಮಿ ಟಾಕ್ಸ್‌ನಲ್ಲಿ ಅವರೇ ಹೇಳಿದ್ದಾರೆ.

ಸಕಲೇಶಪುರದ ಹೀರೋ
ನಮ್ಮೂರು ಸಕಲೇಶಪುರ. ಕುಂಬೈಡಿ ಎಂಬ ಹಳ್ಳಿ ನಮ್ಮೂರು. ನಮ್ಮ ಪೋಷಕರೆಲ್ಲ ಅಲ್ಲಿಯೇ ಇರೋದು. ನಮ್ಮದು ಕಾಫಿ ಎಸ್ಟೇಟ್ ಇದೆ. ನಟನೆಗೆ ಬರ್ತೀನಿ ಅಂದಾಗ ನಮ್ಮ ಡ್ಯಾಡಿ ಒಪ್ಪಲೇ ಇಲ್ಲ. ಆಮೇಲೆ ಹೇಗೋ ಡ್ಯಾಡಿಯನ್ನ ಒಪ್ಪಿಸಿ, ಬಾಂಬೆಗೆ ಟ್ರೈನಿಂಗ್ ಹೋದೆ. ಅಲ್ಲಿಂದ ವಾಪಾಸ್ ಬಂದು ಡಿಗ್ರಿ ಮಾಡ್ತಾ ಇದ್ದೆ. ಆಗ ಪೇಪರ್ ನಲ್ಲಿ ಆಡ್ ನೋಡಿ ನಮ್ಮ ಅಮ್ಮ ಸಿಂಧೂರ ಆಡಿಷನ್ ಗೆ ಕರೆದುಕೊಂಡು ಹೋದ್ರು. ಆ ಸೀರಿಯಲ್‌ಗೆ ಸೆಲೆಕ್ಟ್ ಆಗಿದ್ದೆ. 'ಸಿಂಧೂರ' ಎಂಬ ಸೀರಿಯಲ್‌ನಲ್ಲಿ ನಾನು ನನ್ನ ಆಕ್ಟಿಂಗ್ ಶುರು ಮಾಡಿದೆ.
ಸೀರಿಯಲ್ ಬಿಟ್ಟಿದ್ದೇಕೆ?
ನಾನೇ ಒಂದಷ್ಟು ಪ್ರಾಜೆಕ್ಟ್‌ಗಳನ್ನ ಬಿಡುತ್ತಾ ಬಂದೆ. ಮತ್ತೆ ಊರಿಗೆ ಹೋದೆ. ಒಂದು ದಿನ ಡೈರೆಕ್ಟರ್ ಅರವಿಂದ್ ಕೌಶಿಕ್ ಟೀಂನಿಂದ ಕಾಲ್ ಬಂತು. 'ಅರಸಿ' ಧಾರಾವಾಹಿಗೆ ಆಕ್ಟ್ ಮಾಡ್ತೀರ ಅಂತ ಕೇಳಿದ್ರು. ನಾನು ಇಲ್ಲ ಅಂದೆ. ಮತ್ತೆ ಅಮ್ಮನಿಂದಾಗಿ ಮತ್ತೆ ಬಂದೆ. ಆ ಧಾರಾವಾಹಿಯಲ್ಲಿ ರಚಿತಾ ರಾಮ್, ನಾವೂ ಬಿಂದ್ಯಾ ಅಂತಾನೇ ಕರೀತಾ ಇದ್ವಿ. ಅವ್ರು ನೆಗೆಟಿವ್ ರೋಲ್ ಮಾಡ್ತಾ ಇದ್ರು. ನಾನು ಅದರಲ್ಲಿ ಹೀರೋ ಆಗಿದ್ದೆ. ಚೆನ್ನಾಗಿ ನಡೀತಾ ಇತ್ತು. ಮತ್ತೆ ಅದರಿಂದ ಬ್ರೇಕ್ ತೆಗೆದುಕೊಂಡೆ.
ಬಹಳ ಗ್ಯಾಪ್ ಆಗಿದ್ದೇಕೆ..?
ನಾನು ಏನನ್ನೋ ಬರೆಯುತ್ತಾ ಇದ್ದ ಕಥೆ ಪೂರ್ತಿ ಆಗಬೇಕಿತ್ತು. ಕರಿಯರ್ ಬಗ್ಗೆ ಅಷ್ಟೊಂದು ಫೋಕಸ್ ಮಾಡ್ತಾ ಇರಲಿಲ್ಲ ನಾನು. ಆದರೂ ಪ್ರಾಜಕ್ಟ್ಸ್ ಬರ್ತಾ ಇತ್ತು. ತುಂಬಾ ಜನ ಕೇಳ್ತಾರೆ ಯಾಕೆ ಇಷ್ಟು ಗ್ಯಾಪ್ ಆಯ್ತು. ಏನು ಆಫರ್ಸ್ ಗಳು ಇರಲಿಲ್ವ ಅಂತ. ಆದರೆ ನಂಗೆ ಆಫರ್ಸ್ ತುಂಬಾ ಇತ್ತು. ಇಂಡಸ್ಟ್ರಿಯಿಂದ ಪ್ರಾಬ್ಲಮ್ ಇರಲಿಲ್ಲ. ನನ್ನಿಂದ ಪ್ರಾಬ್ಲಮ್ ಇದ್ದದ್ದು. ನನ್ನ ಗುರಿ ಬೇರೆನೆ ಆಗಿತ್ತು. ಹೀಗಾಗಿ ಅದಕ್ಕೆ ಸಮಯ ಕೊಡುತ್ತಾ ಇದ್ದೆ. ನನ್ನ ಬರವಣಿಗೆಗೆ ಜೀವ ಕೊಡ್ತಾ ಇದ್ದೆ.
ಕರಣ್‌ಗೆ ಏನಿಷ್ಟ..?
ಪಾರ್ಥ ಅಲಿಯಾಸ್ ಕರಣ್‌ಗೆ ಟ್ರಾವೆಲ್ ಮಾಡೋದು, ಅಡ್ವೆಂಚರ್ ಎಂದರೆ ಬಹಳ ಇಷ್ಟ. ಬರೆಯೋದು ಅಂದ್ರೆ ಇನ್ನಿ ಇಷ್ಟ. ಸೀರಿಯಲ್ ಬಿಟ್ಟಾಗ ತಮ್ಮಿಷ್ಟದ ಕೆಲಸವನ್ನೇ ಮಾಡ್ತಾ ಇದ್ರಂತೆ. ಸದ್ಯ ಪಾರ್ಥನಾಗಿ ಎಲ್ಲರ ಮನಸ್ಸು ಗೆಲ್ಲುತ್ತಿದ್ದಾರೆ.


Click it and Unblock the Notifications











