ಉತ್ತುಂಗದಲ್ಲಿದ್ದ ಪ್ರೇಮಾ ದಿಢೀರ್ ಅಂತ ನಟನೆ ನಿಲ್ಲಿಸಿದ್ದಕ್ಕೆ ಕಾರಣ ಇಲ್ಲಿದೆ

Recommended Video

Weekend With Ramesh Season 4: ದಶಕಗಳ ಕಾಲ ಟಾಪ್ ನಟಿಯಾಗಿ ಚಿತ್ರರಂಗವನ್ನು ಆಳಿದ ನಟಿ ಪ್ರೇಮ

ಕನ್ನಡ ಚಿತ್ರರಂಗ ಕಂಡ ಅದ್ಭುತ ನಟಿ ಪ್ರೇಮ. ದಶಕಗಳ ಕಾಲ ಟಾಪ್ ನಟಿಯಾಗಿ ಚಿತ್ರರಂಗವನ್ನು ಆಳಿದ ನಟಿ ಪ್ರೇಮ. ಸುಮಾರು ನೂರು ಚಿತ್ರಗಳಲ್ಲಿ ಅಭಿನಯಿಸಿರುವ ಪ್ರೇಮ ಸದ್ಯ ಬಣ್ಣದ ಲೋಕದಿಂದ ಸ್ವಲ್ಪ ದೂರ ಉಳಿದಿದ್ದಾರೆ. ಇತ್ತೀಚಿಗಷ್ಟೆ ಉಪೇಂದ್ರ ಅಭಿನಯದ 'ಉಪೇಂದ್ರ ಮತ್ತೆ ಹುಟ್ಟಿ ಬಾ' ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ ಪ್ರೇಮ ಆ ನಂತರ ಮತ್ತೆ ಬಣ್ಣ ಹಚ್ಚಲಿಲ್ಲ.

ಇತ್ತೀಚಿಗಷ್ಟೆ ಕನ್ನಡ ಕಿರುತೆರೆ ಲೋಕದ ಜನಪ್ರಿಯ ಕಾರ್ಯಕ್ರಮ ವೀಕೆಂಡ್ ವಿತ್ ರಮೇಶ್ ಸೀಸನ್ 4 ರಲ್ಲಿ ಅತಿಥಿಯಾಗಿ ಭಾಗಿಯಾಗಿದ್ದರು. ಸುಮಾರು 12 ವರ್ಷಗಳಿಂದ ಚಿತ್ರರಂಗದಿಂದ ಸಂಪೂರ್ಣವಾಗಿ ದೂರ ಉಳಿದ್ದ ಪ್ರೇಮ ಬದುಕಿನ ಸಿಹಿ-ಕಹಿ ಅನುಭವಗಳನ್ನು ಅಭಿಮಾನಿಗಳ ಮುಂದಿಟ್ಟಿದ್ದಾರೆ.

ಕೇವಲ ಕನ್ನಡ ಮಾತ್ರವಲ್ಲದೆ ಪರಭಾಷೆಯಲ್ಲೂ ಮಿಂಚುತ್ತಿದ್ದ ಪ್ರೇಮ ದಿಢೀರನೆ ಚಿತ್ರರಂಗದಿಂದ ದೂರ ಸರಿದರು. ಬಹುಬೇಡಿಯ ನಟಿಯಾಗಿದ್ದ ಪ್ರೇಮ ತನ್ನ ಸಿನಿ ಜೀವನದ ಉತ್ತುಂಗದ್ದಲ್ಲಿ ಇರುವಾಗಲೇ ಚಿತ್ರರಂಗ ತೊರೆದು ಅಭಿಮಾನಿಗಳಿಗೆ ಶಾಕ್ ನೀಡಿದ್ದರು. ಈ ಪ್ರೇಮ ಹೇಳಿದ್ದೇನು? ಮುಂದೆ ಓದಿ..

ಬಹುಬೇಡಿಕೆ ಇರುವಾಗಲೆ ಚಿತ್ರರಂಗ ಬಿಟ್ಟ ಪ್ರೇಮ

ಬಹುಬೇಡಿಕೆ ಇರುವಾಗಲೆ ಚಿತ್ರರಂಗ ಬಿಟ್ಟ ಪ್ರೇಮ

ಸ್ಯಾಂಡಲ್ ವುಡ್ ನಲ್ಲಿ ಟಾಪ್ ನಟಿಯಾಗಿ ಮೆರೆಯುತ್ತಿದ್ದ ಪ್ರೇಮ ದಿಢೀರನೆ ಚಿತ್ರರಂಗ ತೊರೆದಿರುವುದು ಅಭಿಮಾನಿಗಳಿಗೆ ಶಾಕ್ ನೀಡಿತ್ತು. ಸೂಪರ್ ಹಿಟ್ ಸಿನಿಮಾಗಳನ್ನು ನೀಡುತ್ತಿದ್ದ ಪ್ರೇಮ 2006ರಿಂದ ಚಿತ್ರರಂಗದಿಂದ ಕಣ್ಮರೆಯಾಗಿದ್ದರು. ಚಿತ್ರರಂಗದಿಂದ ದೂರ ಸರಿಯುವ ಸಮಯದಲ್ಲಿ ಸಾಹಸಸಿಂಹ ವಿಷ್ಣುವರ್ಧನ್ ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದರು ಪ್ರೇಮ. ಆದ್ರೆ ದಿಢೀರನೆ ದೂರ ಸರಿದಿರುವುದು ಪ್ರೇಮ ಅವರನ್ನು ತೆರೆಮೇಲೆ ನೋಡಲು ಕುತೂಹಲದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ಭಾರಿ ನಿರಾಸೆ ಮೂಡಿಸಿತ್ತು. ಪ್ರೇಮ ಯಾಕೆ ಚಿತ್ರರಂಗದಿಂದ ದೂರ ಸರಿದರು, ಎಲ್ಲಿದ್ದಾರೆ ಎನ್ನುವ ಕುತೂಹಲ ಸುಮಾರು ವರ್ಷಗಳಿಂದ ಅಭಿಮಾನಿಗಳಲ್ಲಿ ಕಾಡಿತ್ತು.

ಮದುವೆ ಕಡೆ ಗಮನ ಹರಿಸಿದ್ದ ಪ್ರೇಮ

ಮದುವೆ ಕಡೆ ಗಮನ ಹರಿಸಿದ್ದ ಪ್ರೇಮ

ಸಾಲು ಸಾಲು ಸಿನಿಮಾಗಳನ್ನು ಮಾಡುತ್ತಾ ಅಭಿಮಾನಿಗಳನ್ನು ರಂಜಿಸುತ್ತಿದ್ದ ಪ್ರೇಮ ದಿಢೀರನೆ ಚಿತ್ರರಂಗದಿಂದ ಮಾಯವಾಗಲು ಕಾರಣ ಮದುವೆ. ಪ್ರೇಮ ಅವರಿಗೆ ಮದುವೆ ಮಾಡಬೇಕೆಂದು ಮನೆಯಲ್ಲಿ ಪೋಷಕರು ಹುಡುಗನನ್ನು ಹುಡುಕುತ್ತಿದ್ದರಂತೆ. ಅಲ್ಲದೆ ಪ್ರೇಮ ಅವರಿಗೆ ತಂಗಿ ಕೂಡ ಇದ್ದಾರೆ. ತಂಗಿ ಮದುವೆ ಮಾಡಬೇಕೆಂದರೆ ಮೊದಲು ಪ್ರೇಮ ಅವರಿಗೆ ಮದುವೆ ಆಗಬೇಕೆಂದು ಪ್ರೇಮ ಅವರಿಗೆ ಮನೆಯಲ್ಲಿ ಹುಡುಗನನ್ನು ಹುಡುಕಲು ಪ್ರಾರಂಭಿಸಿದ್ದರಂತೆ. ಹಾಗಾಗಿ ಮದುವೆ ಕಡೆ ಗಮನ ಹರಿಸಿದ್ದರಂತೆ ಪ್ರೇಮ.

ಬ್ರೇಕ್ ಪಡೆಯುವ ಉದ್ದೇಶ

ಬ್ರೇಕ್ ಪಡೆಯುವ ಉದ್ದೇಶ

ಪ್ರೇಮ ಕನ್ನಡ ಚಿತ್ರರಂಗದಲ್ಲಿ ದಶಕಗಳಿಗೂ ಹೆಚ್ಚು ಕಾಲ ಮಿಂಚಿದವರು. 1995ರಲ್ಲಿ ಸೌವ್ಯ ಸಾಚಿ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ಪ್ರೇಮ 2006ರವರೆಗು ನಿರಂತರ ಕಲಾಸೇವೆ ಮಾಡಿಕೊಂಡು ಬಂದಿದ್ದಾರೆ. ಸುಮಾರು ನೂರು ಚಿತ್ರಗಳಲ್ಲಿ ಅಭಿನಯಿಸಿರುವ ಪ್ರೇಮ ಕೊಂಚ ಬ್ರೇಕ್ ಪಡೆಯುವ ನಿರ್ಧಾರ ಮಾಡಿದ್ದರು. 11ವರ್ಷಗಳಿಂದ ಸಿನಿಮಾ ಸಿನಿಮಾ ಅಂತ ಬ್ಯುಸಿ ಇದ್ದ ಪ್ರೇಮ ಅವರ ಮನಸ್ಸು ಹೊಸತನ ಹುಡುಕುತ್ತಿತ್ತು. ಅದೆ ಸಮಯದಲ್ಲಿ ಮನೆಯಲ್ಲೂ ಮದುವೆ ವಿಚಾರ ಮಾತುಕತೆಯಾಗುತ್ತಿತ್ತು. ಅದೆ ಸರಿಯಾದ ಸಮಯವೆಂದು ನಿರ್ಧರಿಸಿ ಚಿತ್ರರಂಗದಿಂದ ದೂರ ಸರಿದಿದ್ದಾರೆ ಪ್ರೇಮ.

'ಕ್ಷಣ ಕ್ಷಣ' ನಂತರ ಮಾಯವಾದ ಪ್ರೇಮ

'ಕ್ಷಣ ಕ್ಷಣ' ನಂತರ ಮಾಯವಾದ ಪ್ರೇಮ

ಚಂದನವನದ ಚಂದ್ರಮುಖಿ ಪ್ರೇಮ ಚಿತ್ರರಂಗದಿಂದ ದೂರ ಸರಿಯುವ ಮುನ್ನ ಅಭಿನಯದ ಸಿನಿಮಾ ಕ್ಷಣ ಕ್ಷಣ. ಸಾಹಸಸಿಂಹ ವಿಷ್ಣುವರ್ಧನ್ ಜೊತೆ ಕೊನೆಯದಾಗಿ ಅಭಿನಯದ ಸಿನಿಮಾವಿದು. ಈ ಸಿನಿಮಾಗು ಮೊದಲು ವಿಷ್ಣುವರ್ಧನ್ ಜೊತೆಯೆ 'ಏಕದಂತ' ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಸ್ಯಾಂಡಲ್ ವುಡ್ ದಾದಾನ ಜೊತೆ ಕೊನೆಯದಾಗಿ ಎರಡು ಸಿನಿಮಾಗಳನ್ನು ಮಾಡಿ ಚಿತ್ರರಂಗಕ್ಕೆ ಗುಡ್ ಬೈ ಹೇಳಿ ಹೋಗಿದ್ದರು ಪ್ರೇಮ.

 ಶಿಶಿರ ಮೂಲಕ ಮತ್ತೆ ಬಂದ ಪ್ರೇಮ

ಶಿಶಿರ ಮೂಲಕ ಮತ್ತೆ ಬಂದ ಪ್ರೇಮ

ಪ್ರೇಮ ಅಭಿನಯದ ಸಿನಿಮಾಗಳಲ್ಲಿ ವಿಭಿನ್ನವಾದ ಸಿನಿಮಾ 'ಶಿಶಿರ'. ಸುಮಾರು ನಾಲ್ಕು ವರ್ಷದ ನಂತರ ಮತ್ತೆ ಪ್ರೇಮ ಬಣ್ಣ ಹಚ್ಚಿದ ಸಿನಿಮಾ. ಪ್ರೇಮ ಮತ್ತೆ ಚಿತ್ರರಂಗಕ್ಕೆ ಎಂಟ್ರಿ ಕೊಡ್ತಾರೆ ಅಂತ ಯಾರು ಅಂದು ಕೊಂಡಿರಲಿಲ್ಲ. ಅಷ್ಟರಲ್ಲೆ 'ಶಿಶರ' ಮೂಲಕ ಮತ್ತೆ ಅಭಿಮಾನಿಗಳ ಮುಂದೆ ಬಂದು ಅಚ್ಚರಿ ಮೂಡಿಸಿದರು. ತಲೆಕೂದಲಿಗೆ ಕತ್ತರಿ ಹಾಕಿ ವಿಭಿನ್ನ ಲುಕ್ ನಲ್ಲಿ ಕಾಣಿಸಿಕೊಂಡಿದ್ದರು ಚಿತ್ರಪ್ರಿಯರಿಗೆ ಶಾಕ್ ನೀಡಿದ್ದರು. ಶಿಶಿರ ನಂತರ ನಂತರ ಮತ್ತೆ ಬಣ್ಣದ ಲೋಕದಿಂದ ದೂರ ಉಳಿದ್ದ ಪ್ರೇಮ 2017ರಲ್ಲಿ ಉಪೇಂದ್ರ ಅಭಿನಯದ 'ಉಪೇಂದ್ರ ಮತ್ತೆ ಹುಟ್ಟಿ ಬಾ' ಸಿನಿಮಾ ಮೂಲಕ ಅಭಿಮಾನಿಗಳಿಗೆ ದರ್ಶನ ನೀಡಿದ್ದರು. ಇನ್ನು ಮುಂದೆಯು ಉತ್ತಮ ಸಿನಿಮಾಗಳು ಬಂದರೆ ಬಣ್ಣಹಚ್ಚಲು ಸಿದ್ಧರಾಗಿದ್ದಾರೆ ಪ್ರೇಮ.

More from Filmibeat

English summary
Kannada actress prema was participate in weekend with ramesh 4. Why actress prema stopped acting in 2006, now she is revealed the truth.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X