Sushma Rao: ಮಳೆಯಲ್ಲೂ ನಿಲ್ಲದ ಶೂಟಿಂಗ್; ಭಾಗ್ಯಾಳ ಆ ಸೀರೆ ಮೇಲೆ ಎಲ್ಲರ ಕಣ್ಣು!
'ಭಾಗ್ಯಲಕ್ಷ್ಮೀ' ಧಾರಾವಾಹಿಯಲ್ಲಿ ಮಹಿಳಾ ಮಣಿಗಳು ಮುಳುಗಿ ಹೋಗಿದ್ದಾರೆ. ಶ್ರೇಷ್ಠಾ ಆಟಕ್ಕೆ ಯಾವಾಗ ಬ್ರೇಕ್ ಬೀಳುತ್ತೆ..? ತಾಂಡವ್ ಯಾವಾಗ ತಗಲಾಕಿಕೊಳ್ಳುತ್ತಾನೆ..? ಭಾಗ್ಯಾ ಯಾವಾಗ ಗ್ರಹಚಾರ ಬಿಡಿಸುತ್ತಾಳೆ ಎಂಬೆಲ್ಲಾ ಕುತೂಹಲಗಳು ನೋಡುಗರಲ್ಲಿದೆ.
ಸದ್ಯ ಶ್ರೇಷ್ಠಾ ಮದುವೆ ಮಂಟಪದಲ್ಲಿದ್ದರೆ, ಭಾಗ್ಯಾ, ಕುಸುಮಾ ಕೂಡ ಬಂದಿದ್ದಾರೆ. ಅಷ್ಟೇ ಅಲ್ಲದೆ ತಾಂಡವ್ ಕೂಡ ಮದುವೆ ಮಂಟಪಕ್ಕೆ ಬಂದಾಗಿದೆ.ಕುಸುಮಾ, ಭಾಗ್ಯಾ ಮದುವೆ ಮಂಟಪದಲ್ಲಿಯೇ ಇರುವುದು ತಾಂಡವ್‌ಗೆ ತಿಳಿದಿರಲಿಲ್ಲ. ತಿಳಿದಿದ್ದರೆ ಖಂಡಿತ ಬರುತ್ತಾ ಇರಲಿಲ್ಲ. ಮದುಮಗನಂತೆ ಅಲಂಕಾರಗೊಂಡಿದ್ದಾನೆ.

ಕುಸುಮಾ ಮೊದಲೇ ಮಗನಿಗಾಗಿ ಕಾಯುತ್ತಿದ್ದಳು. ಈಗ ಹುಡುಗ ಬಂದಿದ್ದಾನಂತೆ ಅಂತ ಹುಡುಕುತ್ತಿದ್ದಾಳೆ. ಕೈಗೇನೋ ಸಿಕ್ಕಿದ್ದಾನೆ. ಆದರೆ ಅಮ್ಮ ನೋಡುವುದಕ್ಕೂ ಮುನ್ನವೇ ಎಸ್ಕೇಪ್ ಆಗುತ್ತಾನೆ. ಪ್ರೋಮೋ ನೋಡಿದ ವೀಕ್ಷಕರು ಅಂದಾಜಿಸಿದ್ದಾರೆ. ಆದರೆ ಎಲ್ಲರಿಗೂ ಭಾಗ್ಯಾ ಪಿಂಕ್ ಸೀರೆ ಮೇಲೆ ಬಿದ್ದಿದೆ ಕಣ್ಣು.
ಶ್ರೇಷ್ಠಾಳಿಗೆ ಶಾಸ್ತ್ರ ಮಾಡಿದ ಭಾಗ್ಯಾ
ಶ್ರೇಷ್ಠಾ ಅದೆಷ್ಟೇ ಬಾರಿ ನನ್ನ ಮದುವೆಗೆ ಬರಕೂಡದು ಎಂದು ಹೇಳಿದರು ಭಾಗ್ಯಾ ಮತ್ತೆ ಕುಸುಮಾ ಇನ್ನೊಂದು ಹೆಣ್ಣಿಗೆ ಅನ್ಯಾಯವಾಗುವುದಕ್ಕೆ ಬಿಡುವುದಿಲ್ಲ. ತನ್ನ ಸೊಸೆಗೆ ಆ ಅನ್ಯಾಯ ಆಗ್ತಾ ಇರೋದು ಅಂತ ಗೊತ್ತಾದ್ರೆ ಶ್ರೇಷ್ಠಾ ಕಥೆ ಬೇರೆನೆ ಆಗುತ್ತೆ. ಅದು ಬೇರೆ. ಆದ್ರೆ ಈಗ ಶ್ರೇಷ್ಠಾಳ ಮದುವೆ ನಿಲ್ಲಿಸಲು ಬಂದಿದ್ದಾರೆ. ಭಾಗ್ಯಾಳೆ ಮುಂದೆ ನಿಂತು ಹಲವು ಶಾಸ್ತ್ರಗಳನ್ನ ಮಾಡುತ್ತಿದ್ದಾಳೆ.
ಮಳೆ ಇದ್ದರು ಭಾಗ್ಯಲಕ್ಷ್ಮೀ ಶೂಟಿಂಗ್
ಭಾಗ್ಯಾ ಅಲಿಯಾಸ್ ಸುಷ್ಮಾ ಸಿಕ್ಕಾಪಟ್ಟೆ ಆಕ್ಟೀವ್ ಆಗಿರುತ್ತಾರೆ. ಸೀರಿಯಲ್‌ನಲ್ಲಿ ಮಾತ್ರ ಮುಗ್ದೆ, ಅಮಾಯಕಿ. ಆದರೆ ರಿಯಲ್ ಲೈಫ್‌ನಲ್ಲಿ ಯಾವಾಗಲೂ ಲಕ ಲಕ ಅಂತ ಹೊಳೀತಾ ಇರ್ತಾರೆ. ಸುತ್ತ ಮುತ್ತ ನಡೆಯುವುದನ್ನು ರೀಲ್ಸ್ ಮಾಡ್ತಾ ಇರ್ತಾರೆ. ಶ್ರೇಷ್ಠಾ ಮದುವೆಗೆಂದು ಎಲ್ಲರು ದೇವಸ್ಥಾನಕ್ಕೆ ಹೋಗಿದ್ದಾರೆ. ಆದರೆ ಶೂಟಿಂಗ್ ವೇಳೆ ಫುಲ್ ಮಳೆ ಬಂದಿದೆ. ಎಲ್ಲರೂ ಕೊಡೆಯ ಅಡಿಯಲ್ಲಿ ನಿಂತಿದ್ದಾರೆ. ಆದರೆ ಟೆಕ್ನಿಶಿಯನ್ ಕಷ್ಟಪಟ್ಟು ಕೆಲಸ ಮಾಡುತ್ತಿದ್ದಾರೆ. ಅವರ ಕಷ್ಟಗಳನ್ನೆಲ್ಲಾ ಭಾಗ್ಯಾ ವಿಡಿಯೋ ಮೂಲಕ ತೋರಿಸಿದ್ದಾರೆ.
ಟ್ರೆಂಡಿಂಗ್ ರೀಲ್ಸ್ ಮಾಡಿದ ಭಾಗ್ಯಾ
ತಾಂಡವ್ ಹಾಗೂ ಭಾಗ್ಯಾ ತೆರೆ ಮೇಲೆ ಬೇರೆ ರೀತಿಯಾಗಿಯೇ ಕಾಣಿಸಿಕೊಳ್ಳುತ್ತಾರೆ. ಭಾಗ್ಯಾಳಿಗೆ ಯಾವಾಗ ಡಿವೋರ್ಸ್ ಕೊಡ್ತಿನೋ ಅಂತ ತಾಂಡವ್ ಕಾಯುತ್ತಿದ್ದಾನೆ. ಶ್ರೇಷ್ಠಾಳನ್ನ ಮದುವೆ ಬೇರೆ ಆಗೋದಕ್ಕೆ ಹೊರಟಿದ್ದಾನೆ. ಆದರೆ ಸುಷ್ಮಾ ಹಾಗೂ ಸುದರ್ಶನ್ ಆಗಿ ರಿಯಲ್ ಲೈಫ್ ಇಬ್ಬರೂ ಒಂದೊಳ್ಳೆ ಬಾಂಡಿಂಗ್ ಬೆಳೆಸಿಕೊಂಡಿದ್ದಾರೆ. ಸಮಯ ಸಿಕ್ಕಾಗಲೆಲ್ಲಾ ಇಬ್ಬರು ರೀಲ್ಸ್ ಮಾಡುತ್ತಾ ಇರುತ್ತಾರೆ.
ಭಾಗ್ಯಾ ಪಿಂಕ್ ಸೀರೆ ಮೇಲೆ ಕಣ್ಣು
ಸುಷ್ಮಾ ಫಾಲೋವರ್ಸ್‌ಗೆ ಕಾಡುತ್ತಿರುವುದು ಆ ಪಿಂಕ್ ಕಲರ್ ಸೀರೆ. ಸುಷ್ಮಾ ಲೈಫ್‌ನಲ್ಲಿಯೇ ಅಷ್ಟೊಂದು ಸೀರೆ ಉಟ್ಟಿಲ್ಲ ಅನ್ಸುತ್ತೆ. ಸೀರಿಯಲ್‌ನಲ್ಲಿ ಮಾತ್ರ ಪ್ರತಿದಿನ ಬೇರೆ ಬೇರೆ ಸೀರೆಯನ್ನೇ ಹಾಕಬೇಕು. ಶ್ರೇಷ್ಠಾ ಒಮ್ಮೆ ಭಾಗ್ಯಾ ಬಗ್ಗೆ ಕಿತಾಪತಿ ಮಾಡಿದ್ದು ನೆನಪಿರಬಹುದು. ಬ್ಲಾಗರ್ ಕಡೆಯಿಂದ ಡಿವೋರ್ಸ್ ವಿಚಾರ ಹಬ್ಬಿಸಿದ್ದಳು. ಅಂದು ಭಾಗ್ಯಾ ಪಿಂಕ್ ಕಲರ್ ಸೀರೆ ಹಾಕಿದ್ದರು. ಇಂದು ಮದುವೆಗೂ ಅದೇ ಸೀರೆ, ತಾಂಡವ್ ಜೊತೆಗೆ ರೀಲ್ಸ್‌ನಲ್ಲೂ ಅದೇ ಸೀರೆ. ಇಷ್ಟೊಂದು ಬಾರಿ ಈ ಸೀರೆಯನ್ನು ರಿಪೀಟ್ ಮಾಡುತ್ತಿರುವುದಕ್ಕೆ ಎಲ್ಲರ ಚಿತ್ತ ಸೀರೆಯತ್ತ ನೆಟ್ಟಿದೆ.


Click it and Unblock the Notifications











