ರೀಲ್ಸ್ ಪೋಸ್ಟ್ ಮಾಡಿ ಕಮೆಂಟ್ ಸೆಕ್ಷನ್ ಆಫ್ ಮಾಡಿದ ನಿವೇದಿತಾ; ಕಾರಣ ಅದೇನಾ?

By ಎಸ್ ಸುಮಂತ್

ನಿವೇದಿತಾ ಗೌಡ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್. ಮೊದಲಿನಿಂದಾನೂ ಸಿನಿಮಾದಲ್ಲಿ ನಟಿಸಬೇಕು ಎಂಬ ಆಸೆಯನ್ನೇ ಹೊತ್ತು ಬಂದವರು. ಸದ್ಯ ಆಕೆ ನಟಿಸಿರುವ 'ಮುದ್ದು ರಾಕ್ಷಸಿ' ರಿಲೀಸ್‌ಗೆ ರೆಡಿಯಾಗಿದೆ. ಸಿನಿಮಾ ಪ್ರಮೋಷನ್ ಜೊತೆಗೆ ರೀಲ್ಸ್‌ ಮಾಡುತ್ತಾ ನಿವ್ವಿ ಖುಷಿಯಾಗಿ ಇದ್ದಾರೆ.

ಮೊದಲೆಲ್ಲಾ ನಿವೇದಿತಾ ಗೌಡರನ್ನ 'ಚಂದನ'ದ ಗೊಂಬೆ ಅಂತಾನೇ ಕರೆಯುತ್ತಿದ್ದರು. ಇತ್ತೀಚೆಗೆ ಅವರ ಫಾಲೋವರ್ಸ್ ಹಾಟ್ ಗೊಂಬೆ ಎನ್ನುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸ್ಯಾರಿಯಲ್ಲಿ, ಮಿನಿ ಡ್ರೆಸ್‌ನಲ್ಲಿ ಹಾಟ್ ಆಗಿ ಕಾಣಿಸುವ ಫೋಟೋಗಳನ್ನು ಹಂಚಿಕೊಳ್ಳುತ್ತಾ ಇರುತ್ತಾರೆ. ಹೀಗಾಗಿ ನಿವೇದಿತಾ ಹಾಟ್ ಫೋಟೋಗಳಿಗೆ ಫ್ಯಾನ್ಸ್ ಹಾರ್ಟ್ ನೀಡುತ್ತಾ ಇರುತ್ತಾರೆ.

Why Biggboss fame Niveditha Gowda Turns Off Instagram Comments section for latest post

ವಾಣಿ ಜೊತೆಗೆ ಹೆಚ್ಚು ರೀಲ್ಸ್

ನಿವೇದಿತಾ ಸದಾ ಸೋಷಿಯಲ್ ಮೀಡಿಯಾದಲ್ಲಿ ಫೋಟೋ, ವಿಡಿಯೋಗಳನ್ನು ಹಾಕುತ್ತಲೇ ಇರುತ್ತಾರೆ. ಹೀಗೆ ಜನಪ್ರಿಯತೆ ಗಳಿಸಿ ಬಿಗ್ ಬಾಸ್‌ಗೆ ಬಂದಿದ್ದು, ಅದೇ ಶೋನಿಂದ ಚಂದನ್ ಶೆಟ್ಟಿ ಮದುವೆಯಾಗಿದ್ದು, ಮನೆ ಮಾತಾಗಿದ್ದು. ಅಂದಿನಿಂದ ಇಂದಿನವರೆಗೂ ಫುಲ್ ಆಕ್ಟೀವ್ ಆಗಿಯೇ ಇದ್ದಾರೆ. ಈಗ ವಾಣಿ ಎಂಬ ಸ್ನೇಹಿತೆಯ ಜೊತೆಗೆ ರೀಲ್ಸ್ ಶೇರ್ ಮಾಡಿದ್ದಾರೆ. ನಿವೇದಿತಾ ಹೆಚ್ಚು ರೀಲ್ಸ್ ಮಾಡುವುದೇ ವಾಣಿ ಜೊತೆಗೆ.

ಕಮೆಂಟ್ ಬಾಕ್ಸ್ ಆಫ್ ಮಾಡಿದ ನಿವೇದಿತಾ

ವಾಣಿ - ನಿವೇದಿತಾ ಬೆಸ್ಟ್ ಫ್ರೆಂಡ್ಸ್. ಅದನ್ನ ತಮ್ಮ ಕ್ಯಾಪ್ಶನ್‌ನಲ್ಲಿ ನಿವೇದಿತಾ ಅವರೇ ಹಾಕಿಕೊಂಡಿದ್ದಾರೆ. ಹೊರಗಡೆ ಸುತ್ತಾಡೋದು, ರೀಲ್ಸ್ ಮಾಡುವುದು ಹೆಚ್ಚಾಗಿ ಇದೇ ವಾಣಿ ಜೊತೆಗೇನೆ. ಹಿಂದಿ ಹಾಡಿಗೆ ಇಬ್ಬರು ಹೆಜ್ಜೆ ಹಾಕಿದ್ದು, ಕಮೆಂಟ್ ಬಾಕ್ಸ್ ಮಾತ್ರ ಆಫ್ ಮಾಡಲಾಗಿದೆ. ನಿವೇದಿತಾ ಈ ರೀಲ್ ಶೇರ್ ಮಾಡಿ ವಾಣಿಯನ್ನು ಟ್ಯಾಗ್ ಮಾಡಿದ್ದಾರೆ.

ನಿವೇದಿತಾ ನಡೆಗೆ ಕಾರಣ?

ನಿವೇದಿತಾ ಗೌಡ ಸೋಷಿಯಲ್ ಮೀಡಿಯಾದಲ್ಲಿ ಎಷ್ಟು ಆಕ್ಟೀವ್ ಆಗಿದ್ದಾರೆ ಎಂದರೆ ಅವರ ಫಾಲೋವರ್ಸ್ 1.8 ಮಿಲಿಯನ್ ಇದ್ದಾರೆ. ದಿನೇದಿನೇ ಹೆಚ್ಚಾಗುತ್ತಲೇ ಇದ್ದಾರೆ. ಅವರ ಇನ್‌ಸ್ಟಾಗ್ರಾಮ್ ಪೇಜ್‌ನಲ್ಲಿ ಸುಮಾರು 1,575 ಪೋಸ್ಟ್ ಹಂಚಿಕೊಂಡಿದ್ದಾರೆ. ಅದರಲ್ಲಿ ಆಲ್ಮೋಸ್ಟ್ ಯಾವುದಕ್ಕೂ ಕಮೆಂಟ್ ಬಾಕ್ಸ್ ಆಫ್ ಮಾಡಿಲ್ಲ. ಇದು ಅವರದ್ದೇ ಪೇಜ್. ಆದರೆ ಫ್ರೆಂಡ್‌ನ ಟ್ಯಾಗ್ ಮಾಡಿದಾಗ ಅವರಿಗೆ ನೋವಾಗಬಾರದು ಎನ್ನುವ ಕಾರಣಕ್ಕೆ ಕಮೆಂಟ್ ಬಾಕ್ಸ್ ಆಫ್ ಮಾಡಿರಬಹುದು ಎನ್ನುವುದು ಕೆಲವರ ವಾದ.

ಹಳೆಯ ಪೋಸ್ಟ್‌ಗಳಿಗೆ ಕೆಟ್ಟ ಕಮೆಂಟ್

ಮೊದಲಿನಿಂದಲೂ ನಿವೇದಿತಾ ಪೋಸ್ಟ್‌ಗಳಿಗೆ ಕೆಟ್ಟ ಕೆಟ್ಟ ಕಾಮೆಂಟ್ಸ್ ಬರ್ತಿತ್ತು. ಚಂದನ್‌ ಶೆಟ್ಟಿಯಿಂದ ದೂರಾದ ಬಳಿಕ ಟ್ರೋಲ್ ಹೆಚ್ಚಾಗಿದೆ. ಕೆಲವರು ತೀರಾ ಕೆಟ್ಟ ಕಮೆಂಟ್ ಹಾಕಿರುವುದು ಇದೆ. ನಿವೇದಿತಾ ಅವರನ್ನು ವೈಯಕ್ತಿಕವಾಗಿ ನಿಂದಿಸಿದ್ದಾರೆ. ಇಂತಹ ಕಮೆಂಟ್‌ಗಳಿಂದ ನಿವ್ವಿ ಕೂಡ ಸಹಜವಾಗಿಯೇ ಬೇಸರ ಮಾಡಿಕೊಂಡಿದ್ದಾರೆ. ಆದರೂ ಅದನ್ನೆಲ್ಲಾ ಪಕ್ಕಕ್ಕೇ ಸರಿಸಿ, ತಮಗೆ ಹೇಗೆ ಖುಷಿ ಅನ್ನಿಸುತ್ತೆ ಆ ರೀತಿ ಇದ್ದಾರೆ. ಈಗ ಬೆಸ್ಟ್ ಫ್ರೆಂಡ್‌ಗಾಗಿ ಕಮೆಂಟ್ ಆಫ್ ಮಾಡಿರಬಹುದು ಎನ್ನುವುದು ಹಲವರ ಊಹೆಯಾಗಿದೆ.

More from Filmibeat

English summary
Actress Niveditha Gowda Disables Instagram Comments for her latest reels;
Read more about: serial filmbeat original sumanth
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X