»   »  ಟಿವಿ9 ರೆಹಮಾನ್ ಗೆ, ಕಿಚ್ಚ ಸುದೀಪ್ ಕೇಳಿದ್ದೇನು?

ಟಿವಿ9 ರೆಹಮಾನ್ ಗೆ, ಕಿಚ್ಚ ಸುದೀಪ್ ಕೇಳಿದ್ದೇನು?

Posted By:
Subscribe to Filmibeat Kannada

ವೀಕೆಂಡ್ ನಲ್ಲಿ ವಾರದ ಕಥೆ ಕಿಚ್ಚನ ಜೊತೆ ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್ ಅವರು ಟಿವಿ9 ರೆಹಮಾನ್ ಹಾಸನ್ ಅವರೊಂದಿಗೆ ವಾರದ ಬೆಳವಣಿಗೆ ಬಗ್ಗೆ ಕೆಲ ಹೊತ್ತು ಮಾತನಾಡಿದರು.

ಈ ಸಂದರ್ಭದಲ್ಲಿ ಕಿಚ್ಚ ಸುದೀಪ್ ಅವರು ರೆಹಮಾನ್ ಗೆ ಒಂದು ಪ್ರಶ್ನೆ ಹಾಕಿದರು. 'ನಿಮಗೆ ಗೊತ್ತಿಲ್ಲದ ಸಮೀನಾ ಇಲ್ಲಿ ಬಂದು ನಿಮ್ಮೆದುರು ನಿಂತು, ನಿಮ್ಮನ್ನು ನೋಡಿ ಕಣ್ಣೀರು ಹಾಕಿದರೆ ನೀವೇನು ಮಾಡುತ್ತೀರಿ' ಅಂತ ['ಫ್ಲರ್ಟ್' ಮಾಡೋದು ಹೇಗಂತ ಅಯ್ಯಪ್ಪ ಅವರನ್ನ ಕೇಳಿ!]

Why did TV 9 Rahman said Who is Sameena? Here is the answer

ಆವಾಗ ರೆಹಮಾನ್ ಅವರು ಅದಕ್ಕೆ ಪ್ರತ್ಯುತ್ತರ ನೀಡುತ್ತಾ, "ಸಮೀನಾ ಅವರಿಗೆ ನನ್ನ ಬಗ್ಗೆ ತುಂಬಾ ಚೆನ್ನಾಗಿ ಗೊತ್ತಿದೆ. ನಾನು ಇಲ್ಲಿ ಈ ಮನೆ ಒಳಗೆ ಬರೋಕೆ ಮುಂಚೆನೇ ಸಮೀನಾ ಅವರಿಗೆ ಹೇಳಿ ಬಂದಿದ್ದೇನೆ. ಇಲ್ಲಿ ಅಂತದ್ದೇನು ನಡೆಯುವುದಿಲ್ಲ, ನೀವೇನು ಯೋಚನೆ ಮಾಡಬೇಡಿ ಅಂತ.

'ಆಕ್ಚುವಲಿ ಅಯ್ಯಪ್ಪ ಅವರಿಗೆ ಯಾವುದೋ ವಿಷಯದಲ್ಲಿ ರೇಗಿಸುತ್ತಿದ್ದ ಸಂದರ್ಭದಲ್ಲಿ, ಮತ್ತು ಹೀಗೆ ಏನೋ ತಮಾಷೆಯಾಗಿ ಎಲ್ಲರೂ ಕೂತು ಮಾತನಾಡುತ್ತಿದ್ದ ಸಂದರ್ಭದಲ್ಲಿ ನೇಹಾ ಅವರು ಸಮೀನಾ ಅವರಿಗೆ ಹೇಳಬೇಕಾ? ಅಂದಾಗ ನಾನು ತಮಾಷೆಯಾಗಿ, ಹೌದ?, ಯಾರದು ಸಮೀನಾ ಅಂದಿದ್ದು, ಬಿಟ್ಟರೆ ಇನ್ನೇನು ಇಲ್ಲ, ಐ ಲವ್ ಮೈ ಸಮೀನಾ' ಅಂತ ರೆಹಮಾನ್ ಅವರು ಕಿಚ್ಚ ಅವರೊಂದಿಗೆ ತಿಳಿಸಿದ್ದಾರೆ.[ಬಿಗ್ ಬಾಸ್ ಮನೆಯಿಂದ ಹೊರಬಿದ್ದ ಜಯಶ್ರೀ: ಫೇಸ್ ಬುಕ್ಕಿನಲ್ಲಿ ಮಿಶ್ರ ರಂಗು!]

ಆವಾಗ ನೇಹಾ ಗೌಡ ಅವರು ರೆಹಮಾನ್ ಮಾತನಾಡುತ್ತಿದ್ದ ಸಂದರ್ಭದಲ್ಲಿ ಮಧ್ಯೆ ಬಾಯಿ ಹಾಕಿ ಸಮಜಾಯಿಶಿ ನೀಡಲು ಪ್ರಯತ್ನಿಸಿದಾಗ ಕಿಚ್ಚ ಸುದೀಪ್ ಅವರು 'ನೇಹಾ ಅವರೇ ನಾನು ರೆಹಮಾನ್ ಅವರ ಜೊತೆ ಮಾತನಾಡುತ್ತಿದ್ದೇನೆ' ಎಂದು ನೇಹಾ ಅವರ ಬಾಯಿ ಮುಚ್ಚಿಸಿದ್ದಾರೆ.

English summary
Why did TV 9 Rahman said Who is Sameena? Here is the answer. Rahman explained the whole conversation with Neha Gowda about his wife Sameena, Son Sameera in a reply to Kichcha Sudeep during the Weekend with Sudeep programme.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada