'ಬಿಗ್ ಬಾಸ್ ಕನ್ನಡ 7'ನಲ್ಲಿ ಕಾಮನ್ ಮ್ಯಾನ್ ಗಳಿಗೆ ಅವಕಾಶ ನೀಡಿಲ್ಲ, ಏಕೆ?
Recommended Video
ಕನ್ನಡ ಕಿರುತೆರೆಯಲ್ಲಿ ಮತ್ತೆ 'ಬಿಗ್ ಬಾಸ್' ಕಾರ್ಯಕ್ರಮ ಶುರು ಆಗುತ್ತಿದೆ. ಅಕ್ಟೋಬರ್ ಎರಡನೇ ವಾರದಿಂದ ಕಾರ್ಯಕ್ರಮ ಶುರು ಆಗುತ್ತಿದೆ. ಈ ಬಾರಿ ಪ್ರಮುಖವಾಗಿ ಒಂದಷ್ಟು ಬದಲಾವಣೆಗಳನ್ನು ಮಾಡಲಾಗಿದೆ. ಅಚ್ಚರಿ ಎಂದರೆ, ಸೀಸನ್ 7 ರಲ್ಲಿ ಕಾಮನ್ ಮ್ಯಾನ್ ಗಳಿಗೆ ಅವಕಾಶ ನೀಡಲಾಗಿಲ್ಲ.
ಮೊದಲು 'ಬಿಗ್ ಬಾಸ್', ಬರೀ ಸೆಲೆಬ್ರಿಟಿಗಳಿಗಾಗಿ ಇದ್ದ ಕಾರ್ಯಕ್ರಮ. ಆದರೆ, ಅದನ್ನು ಬ್ರೇಕ್ ಮಾಡಿ, ಸಾಮಾನ್ಯ ಜನರಿಗೂ, ದೊಡ್ಡ ಮನೆ ಪ್ರವೇಶಿಸುವ ಅವಕಾಶವನ್ನು ಕಲರ್ಸ್ ವಾಹಿನಿ ನೀಡಿತ್ತು. ಸೀಸನ್ 5 ಹಾಗೂ ಸೀಸನ್ 6 ರಲ್ಲಿ ಒಂದಷ್ಟು ಕಾಮನ್ ಮ್ಯಾನ್ ಗಳು ಬಂದು ಹೋದರು.
'ಬಿಗ್ ಬಾಸ್' ದೊಡ್ಡ ಜನಪ್ರಿಯತೆ ನೀಡುವ ಕಾರಣ, 'ನಾನು ಅಲ್ಲಿಗೆ ಹೋಗಬೇಕು' ಎನ್ನುವ ಆಸೆ ಅನೇಕರು ಹೋಗಿದ್ದಾರೆ. ಈ ಬಾರಿ ಕೂಡ ಅಂತಹ ಅವಕಾಶಕ್ಕಾಗಿ ಅನೇಕರು ಕಾಯುತ್ತಿದ್ದಾರೆ. ಆದರೆ, ಈ ಬಾರಿ ಅವರಿಗೆಲ್ಲ ದೊಡ್ಡ ನಿರಾಸೆ ಆಗಿದೆ.
ಕಾಮನ್ ಮ್ಯಾನ್ ಗಳಿಗೆ ಈ ಸಲ 'ಬಿಗ್ ಬಾಸ್' ಏಕೆ ಅವಕಾಶ ನೀಡಿಲ್ಲ? ಎನ್ನುವ ಬಗ್ಗೆ ವಾಹಿನಿ ಸ್ಪಷ್ಟನೆ ನೀಡಿಲ್ಲ. ಆದರೆ, ಈ ಕೆಳಗಿನ ಅಂಶಗಳು ಈ ಬಾರಿಯ ನಿರ್ಧಾರಕ್ಕೆ ಕಾರಣ ಆಗಿರಬಹುದು.

ಕಳೆದ ಸೀಸನ್ ಗಳಲ್ಲಿ ಟಿ ಆರ್ ಪಿ ಕಡಿಮೆ ಆಗಿದೆ
ಯಾವುದೇ ಕಿರುತೆರೆ ಕಾರ್ಯಕ್ರಮದ ಸ್ಥಾನ ನಿರ್ಧಾರ ಆಗುವುದು ಪ್ರತಿ ವಾರ ಬರುವ ಟಿ ಆರ್ ಪಿ ಯಿಂದ. ಕಳೆದ ಎರಡು ಸೀಸನ್ ಗಳಲ್ಲಿ 'ಬಿಗ್ ಬಾಸ್' ಕಾರ್ಯಕ್ರಮದ ಟಿ ಆರ್ ಪಿ ಕಡಿಮೆ ಆಗಿತ್ತು. ಎಷ್ಟೋ ಬಾರಿ ಧಾರಾವಾಹಿಗಳೇ ಬಿಗ್ ಬಾಸ್ ಶೋವನ್ನು ಓವರ್ ಟೆಕ್ ಮಾಡಿದ್ದವು. ಕಾರ್ಯಕ್ರಮದ ಟಿ ಆರ್ ಪಿ ಕಡಿಮೆಯಾಗಿರುವ ಕಾರಣಗಳಲ್ಲಿ ಕಾಮನ್ ಮ್ಯಾನ್ ಗೆ ನೀಡಿದ ಅವಕಾಶ ಕೂಡ ಒಂದಾಗಿರಬಹುದು.

ಆಯ್ಕೆ ಪ್ರಕ್ರಿಯೆ ಕಷ್ಟ.. ಕಷ್ಟ..
'ನಾನು ಬಿಗ್ ಬಾಸ್ ಗೆ ಹೋಗಬೇಕು' ಎನ್ನುವ ಆಸೆ ಸಾಕಷ್ಟು ಜನರಿಗೆ ಹುಟ್ಟಿಕೊಂಡಿದೆ. ಕರ್ನಾಟಕದ ಸಾವಿರಾರೂ ಜನರು ಕಾರ್ಯಕ್ರಮಕ್ಕೆ ಪ್ರಯತ್ನ ಮಾಡುತ್ತಾರೆ. ಆ ದೊಡ್ಡ ಸಂಖ್ಯೆಯ ಜನರಲ್ಲಿ ಯಾರನ್ನು ಆಯ್ಕೆ ಮಾಡುವುದು?, ಅದರ ಮಾನದಂಡ ಏನು?..ಇವುಗಳನ್ನೆಲ್ಲ ನಿರ್ಧಾರ ಮಾಡುವುದು ತುಂಬ ಕಷ್ಟ ಆಗುತ್ತದೆ.

ಕಾರ್ಯಕ್ರಮದ ಫಾರ್ಮ್ಯಾಟ್ ಬದಲಾವಣೆ
'ಬಿಗ್ ಬಾಸ್' ಕಾರ್ಯಕ್ರಮದ ಸೀಸನ್ 5 ಹಾಗೂ ಸೀಸನ್ 6 ರಲ್ಲಿ ಕಾಮನ್ ಮ್ಯಾನ್ ಗಳಿಗೆ ಅವಕಾಶ ನೀಡಲಾಗಿತ್ತು. ಕಳೆದ ಎರಡು ಬಾರಿಯ ಹಾಗೆ, ಈ ಬಾರಿಯೂ ಸಾಮಾನ್ಯರಿಗೆ ಅವಕಾಶ ನೀಡಿದರೆ, ಕಾರ್ಯಕ್ರಮ ಅದೇ ರೀತಿ ಅನಿಸುತ್ತದೆ. ಹೀಗಾಗಿ, ಕಾರ್ಯಕ್ರಮ ಫಾರ್ಮ್ಯಾಟ್ ಬದಲಾವಣೆ ಮಾಡವ ಉದ್ದೇಶದಿಂದ ಈ ರೀತಿ ಮಾಡಿರಬಹುದು.

ವೀಕ್ಷಕರಿಗೂ ಆಸಕ್ತಿ ಕಡಿಮೆ
ಸಾಮಾನ್ಯವಾಗಿ ವೀಕ್ಷಕರಿಗೆ ಒಬ್ಬ ಸ್ಟಾರ್, ಸೆಲೆಬ್ರಿಟಿಗಳ ಹೆಚ್ಚು ಆಸಕ್ತಿ ಇರುತ್ತದೆ. ಆದರೆ, ತನ್ನ ರೀತಿಯಲ್ಲೇ ಇರುವ, ಇನ್ನೊಬ್ಬ ಕಾಮನ್ ಮ್ಯಾನ್ ಮೇಲೆ ಆಸಕ್ತಿ ಕಡಿಮೆ. ಹೀಗಾಗಿಯೇ, ಕಾರ್ಯಕ್ರಮ ವೀಕ್ಷಕ ಬಳಗ ಕೂಡ ಕಡಿಮೆ ಆಗಿರಬಹುದು. ಅಲ್ಲಿದೆ, ವೀಕ್ಷಕರ ಕಣ್ಣಿಗೆ ಸೆಲೆಬ್ರಿಟಿಗಳು ಸಾಮಾನ್ಯರಿಗಿಂತ ಹೆಚ್ಚು ಆಕರ್ಷಣೆಯಾಗಿ ಕಾಣುತ್ತಾರೆ.

ಸ್ಟಾರ್ ಗಳ ಫ್ಯಾನ್ಸ್ ಕಡೆಯಿಂದ ಪ್ರಚಾರ ಸಿಗುತ್ತದೆ
ಸೆಲೆಬ್ರಿಟಿಗಳಿಗೆ, ಸ್ಟಾರ್ ಗಳಿಗೆ ಅವರದ್ದೇ ಆದ ಅಭಿಮಾನಿ ಬಳಗ ಇರುತ್ತದೆ. 'ಬಿಗ್ ಬಾಸ್'ಗೆ ಬಂದ ಸೆಲೆಬ್ರಿಟಿಗಳಗೆ ಅವರ ಹಿಂಬಾಲಕರು ದೊಡ್ಡ ಬೆಂಬಲ ನೀಡುತ್ತಾರೆ. ಸ್ಪರ್ಧಿಗಳಿಗೆ ಇರುವ ಬೆಂಬಲ ಕಾರ್ಯಕ್ರಮದ ವೀಕ್ಷಕ ಬಳಗ ಹಾಗೂ ಪ್ರಚಾರವನ್ನು ಹೆಚ್ಚು ಮಾಡುತ್ತದೆ. ಈ ಎಲ್ಲ ಕಾರಣಗಳಿಂದ ಕಾಮನ್ ಮ್ಯಾನ್ ಗಳಿಗೆ ನೀಡಿದ್ದ ಅವಕಾಶ ತಡೆದಿರಬಹುದು.


Click it and Unblock the Notifications











