'ನನ್ನ ಮದುವೆ ಆಗಿ' ಅಂತ ಸುದೀಪ್ ಬಹಿರಂಗವಾಗಿ ಕೇಳಿದ್ದು ಯಾರಿಗೆ?
ಶೀರ್ಷಿಕೆ ಓದಿದ ತಕ್ಷಣ ಅಚ್ಚರಿ ಪಡುವ ಅವಶ್ಯಕತೆ ಇಲ್ಲ. ಸುದೀಪ್ ಅಭಿಮಾನಿಗಳು ಬಾಯಿ ಮೇಲೆ ಬೆರಳಿಡುವಂತದ್ದು ಏನೂ ಆಗಿಲ್ಲ. ನೀವು ಓದಿದ ಅರ್ಥದಲ್ಲಿ ಸುದೀಪ್ ಯಾರನ್ನೂ ಪ್ರಪೋಸ್ ಮಾಡಿಲ್ಲ.
ಆದರೂ, WHY DON'T YOU MARRY ME? ಅಂತ ಬಹಿರಂಗವಾಗಿ ಒಬ್ಬರನ್ನ ನಿಮ್ಮೆಲ್ಲರ ಪ್ರೀತಿಯ ಕಿಚ್ಚ ಸುದೀಪ್ ಕೇಳಿದರು. ಅದು ಎಲ್ಲಿ ಅಂದ್ರೆ, ನಿನ್ನೆ ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್ J.W.Marriot ನಲ್ಲಿ ನಡೆದ 'ಬಿಗ್ ಬಾಸ್-3' ಸುದ್ದಿಗೋಷ್ಠಿಯಲ್ಲಿ.

ಸದ್ಯದಲ್ಲೇ, ಕಲರ್ಸ್ ಕನ್ನಡ ವಾಹಿನಿಯಲ್ಲಿ 'ಬಿಗ್ ಬಾಸ್-3' ರಿಯಾಲಿಟಿ ಶೋ ಶುರುವಾಗುವುದರಿಂದ, ಕಾರ್ಯಕ್ರಮದ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಸುವ ಸಲುವಾಗಿ ಕಲರ್ಸ್ ಕನ್ನಡ ವಾಹಿನಿ ಸುದ್ದಿಗೋಷ್ಠಿ ಕರೆದಿತ್ತು. [ಅಕ್ಟೋಬರ್ 25 ರಿಂದ, 'ಬಿಗ್ ಬಾಸ್ 3' ನೋಡಿ ಸ್ವಾಮಿ]
ಆಗ, 'ಬಿಗ್ ಬಾಸ್-3'ಗಾಗಿ ಸುದೀಪ್ ಸಂಭಾವನೆ ಬಗ್ಗೆ ಪತ್ರಕರ್ತರು ಪ್ರಶ್ನೆ ಕೇಳಿದರು. ಅದಕ್ಕೆ ಸುದೀಪ್ ಕೊಟ್ಟ ಉತ್ತರದಿಂದ ಇಡೀ ಸಭಾಂಗಣ ನಗೆಗಡಲಲ್ಲಿ ತೇಲಿತು. ಪತ್ರಕರ್ತರು ಮತ್ತು ಸುದೀಪ್ ರವರ ಸಂಭಾಷಣೆ ಇಲ್ಲಿದೆ....ನೀವೂ ಓದಿ....ಒಮ್ಮೆ ನಕ್ಕು ಬಿಡಿ....
ಹಿರಿಯ ಪತ್ರಕರ್ತ - ಹಿಂದಿನ ಎರಡು ಸೀಸನ್ ಗಿಂತ ಈ ಸೀಸನ್ ನಲ್ಲಿ ನಿಮಗೆ ಹೆಚ್ಚು ಸಂಭಾವನೆ ಸಿಕ್ಕಿದ್ಯಾ?
ಸುದೀಪ್ - Why don't you marry me? I don't mind! You can know more details about me. Trust me.!
ಹಿರಿಯ ಪತ್ರಕರ್ತ - ಅಲ್ಲ, ಸಲ್ಮಾನ್ ಖಾನ್ ನಂತವರೇ ಹೇಳ್ತಾರೆ ತಮ್ಮ ಸಂಭಾವನೆ ಎಷ್ಟು ಅಂತ....
ಸುದೀಪ್ - ನಾನು ಸಲ್ಮಾನ್ ಖಾನ್ ಅಲ್ಲವೇ. ಕರೆಕ್ಟ್. ನಾನು ಸಲ್ಮಾನ್ ಖಾನ್ ಆಗಿದಿದ್ರೆ ನಾನು ಇಲ್ಲಿ ಇರ್ತಿರ್ಲಿಲ್ಲವೇ. ನಾನು ಹಿಂದಿಯಲ್ಲಿ ಮಾತನಾಡುತ್ತಿದ್ದೆ. ನಾನು ಕನ್ನಡದಲ್ಲಿದ್ದೇನೆ. ಕನ್ನಡದಲ್ಲಿ ನನಗೆ ಸಿಗುವ ಸಂಭಾವನೆಯಿಂದ ನಾನು ಆರಾಮಾಗಿ ಇದ್ದೇನೆ. ಇದಕ್ಕಿಂತ ಹೆಚ್ಚು ಏನಾದರೂ ತಿಳ್ಕೋಬೇಕಾದ್ರೆ, ಯೋಗೀಶ್ ದ್ವಾರಕೀಶ್ ಹತ್ತರ ಮಾತನಾಡಿ. [ಹೌದು ಸ್ವಾಮಿ 'ಬಿಗ್ ಬಾಸ್ 3'ನಲ್ಲಿ 'ಇವರೆಲ್ಲಾ'.. ಇರ್ತಾರೆ!]
ಸುದೀಪ್ - ನಾನು ಓಪನ್ ಆಗಿ ಹೇಳ್ತಾಯಿದ್ದೀನಿ. ಬಂದ್ಬಿಡಿ...ಕೂತ್ಕೊಂಡು ಮಾತಾಡೋಣ. So you will know more details on me.
ಇಂತಹ ಜಾಣ್ಮೆಯ ಉತ್ತರ ಕೊಟ್ಟ ಸುದೀಪ್ ಕಡೆಗೂ ತಮ್ಮ ಸಂಭಾವನೆ ಬಗ್ಗೆ ಗುಟ್ಟು ಬಿಟ್ಟುಕೊಡಲಿಲ್ಲ.


Click it and Unblock the Notifications











