'ಲಕ್ಷ್ಮೀ ಬಾರಮ್ಮ' ಸೆಟ್‌ನಲ್ಲಿ ಕಿರಿಕ್ ಮಾಡ್ಕೊಂಡು ಸೀರಿಯಲ್ ಬಿಟ್ರಾ ಗಂಗಕ್ಕ?
'ಲಕ್ಷ್ಮೀ ಬಾರಮ್ಮ' ಧಾರಾವಾಹಿಯಲ್ಲಿ ವೈಷ್ಣವ್ ಹಾಗೂ ಲಕ್ಷ್ಮೀಗೆ ತುಂಬಾ ಸಪೋರ್ಟಿವ್ ಆಗಿರುವಂತ ಪಾತ್ರವದು. ಗಂಗಕ್ಕ ಮನೆ ಕೆಲಸದವಳೇ ಆದರೂ ಮನೆಯ ಸದಸ್ಯೆಯಂತೆಯೇ ಇದ್ದಾಳೆ. ಮನೆಯ ಸಮಸ್ಯೆಯ ಜೊತೆಗೆ ಚರ್ಚೆ ಮಾಡ್ತಾಳೆ, ಮನೆಯವರ ಜೊತೆಗೆ ಹಬ್ಬ ಮಾಡ್ತಾಳೆ. ಹೀಗೆ ಗಂಗಕ್ಕ ಎಂಬ ಪಾತ್ರ ಕೂಡ ಮನೆಯಲ್ಲಿ ಒಬ್ಬರು.
ಈ ಪಾತ್ರವನ್ನು ಇಷ್ಟು ದಿನ ನಿರ್ವಹಿಸಿದ್ದದ್ದು ಹರ್ಷಿತಾ. ಆದರೆ ಈಗ ಪಾತ್ರದ ಬದಲಾವಣೆಯಾಗಿದೆ. ಹರ್ಷಿತಾ ಪಾತ್ರಕ್ಕೆ ಮತ್ತೊಬ್ಬರು ಬಂದಿದ್ದಾರೆ. ಇದು ಸಾಕಷ್ಟು ಜನರಿಗೆ ಬೇಸರ ತರಿಸಿದೆ. ಹರ್ಷಿತಾ ಅವರ ಸೋಷಿಯಲ್ ಮೀಡಿಯಾಗೇನೆ ಕಮೆಂಟ್ ಗಳು ಬರ್ತಿವೆ. ಅದರಲ್ಲಿನೆಗೆಟಿವ್ ಕಮೆಂಟ್ ಸೇರಿಕೊಂಡಿವೆ.

ಗಲಾಟೆ ಮಾಡಿಕೊಂಡ್ರಾ ಹರ್ಷಿತಾ?
'ಪೋಸ್ಟ್ ನಲ್ಲಿ ಒಂದು ಮಾತ್ರ ನೆಗೆಟಿವ್ ಕಮೆಂಟ್ ಬಂದಿತ್ತು. ಸೆಟ್‌ನಲ್ಲಿ ಜಗಳ ಮಾಡಿಕೊಂಡು ಬಂದಿದ್ದಾರೆ ಅಂತ. ನೆಗೆಟಿವ್ ಕಮೆಂಟ್ ಯಾರು ಮಾಡಿದ್ರು ಅವರಿಗೆ ಈ ಉತ್ತರ. ಸೆಟ್‌ನಲ್ಲಿ ನಾನಾಯ್ತು, ನನ್ನ ಕೆಲಸ ಆಯ್ತು ಅಂತ ಇರುತ್ತಿದ್ದೆ. ಕೆಲವೊಮ್ಮೆ ರೀಲ್ಸ್ ಮಾಡ್ತಾ ಇದ್ದೆ ಅಷ್ಟೆ. ಇಲ್ಲಂದ್ರೆ ಸುಮ್ಮನೆ ಒಬ್ಬಳೇ ಕೂತುಕೊಳ್ಳುತ್ತಾ ಇದ್ದೆ. ವಿಷಯ ಗೊತ್ತಿಲ್ಲದೆ ನೆಗೆಟಿವ್ ಆಗಿ ಮಾತಾಡಬೇಡಿ. ಆ ಪಾತ್ರಕ್ಕೆ ನನ್ನನ್ನ ನಾನು ತೊಡಗಿಸಿಕೊಂಡಿದ್ದೆ. ಹರ್ಷಿತಾ ಆಗಿ ಇರುವುದೇ ಬೇರೆ. ಆದರೆ ಗಂಗಕ್ಕ ಆಗಿ ಸೆಟ್‌ಗೆ ಹೋದಾಗ ಅಲ್ಲಿ ಬದಲಾವಣೆಯೇ ಬೇರೆ ಆಗಿರ್ತಾ ಇತ್ತು. ಆ ಪಾತ್ರವನ್ನ ಜೀವಿಸ್ತಾ ಇದ್ದೆ. ದಯವಿಟ್ಟು ನೆಗೆಟಿವ್ ಕಮೆಂಟ್ ಮಾಡಬೇಡಿ. ಅಷ್ಟು ಬಿಡುವಿದ್ದರೆ ಒಂದು ಸ್ಕ್ರಿಪ್ಟ್ ಮಾಡಿಕೊಂಡು ವಿಡಿಯೋ ಮಾಡಿ' ಎಂದು ಲೈವ್‌ನಲ್ಲಿಯೇ ಉತ್ತರಿಸಿದ್ದಾರೆ.
ಕಲರ್ಸ್ ಕನ್ನಡ ಬಗ್ಗೆ ಹೇಳಿದ್ದೇನು..?
'ಕಲರ್ಸ್ ಚಾನೆಲ್ ಕಡೆಯಿಂದ ಯಾವುದೇ ಬೇಜಾರಿಲ್ಲ. ಮಜಭಾರತದಿಂದ ಬಂದವಳು. ನಿಮ್ಮೆಲ್ಲರ ಪ್ರೀತಿಯ ಗಂಗಕ್ಕ ಪಾತ್ರದಿಂದ ವಾಪಾಸ್ ಬಂದಿದ್ದಕ್ಕೆ ನನಗೂ ಬೇಸರ ಇದೆ. ನನ್ನದಲ್ಲದ ತಪ್ಪಿನಿಂದ ಆ ಪಾತ್ರವನ್ನು ಬೇರೊಬ್ಬರಿಗೆ ಬಿಟ್ಟುಕೊಟ್ಟಿದ್ದೀನಿ. ಕಾರಣ ಏನು ಎಂಬುದನ್ನು ಕಲರ್ಸ್ ಕನ್ನಡ ಪೇಜ್ ನಲ್ಲಿಯೇ ಮೆನ್ಶನ್ ಮಾಡಿದ್ದೀನಿ. ಆದರೆ ಟೆಕ್ನಿಕಲ್ ಸಮಸ್ಯೆ ಇರಬಹುದು. ಹೀಗಾಗಿ ಅದು ಕಾಣಿಸ್ತಾ ಇಲ್ಲ' ಎಂದಿದ್ದಾರೆ.
ರಿಪ್ಲೇಸ್ ಮಾಡಲು ನಡೆದಿತ್ತು ತಯಾರಿ
'ನಾನು ಬೇರೆ ಪ್ರಾಜೆಕ್ಟ್ ಮಾಡ್ತಾ ಇದ್ದೆ. ಹೆಚ್ಚಿನ ಸಮಯವನ್ನು ಇಲ್ಲಿಯೇ ಕೊಟ್ಟೆ. ಆದರೂ ತಂಡದಲ್ಲಿಯೇ ರಿಪ್ಲೇಸ್ ಮಾಡುವುದಕ್ಕೆ ನೋಡಿದ್ರು. ಆದರೂ ಸಹಿಸಿಕೊಂಡೆ, ಮತ್ತೆ ಮತ್ತೆ ರಿಪ್ಲೇಸ್ ಹುಡುಕ್ತಾ ಇದ್ರು. ಅದನ್ನ ಕೇಳಿದಾಗ ನನಗೆ ಬೇಸರ ಆಗ್ತಾ ಇತ್ತು. ಶ್ರಾವಣಿ ಸುಬ್ರಮಣ್ಯ ಹಾಗೂ ರಾಧಿಕಾ ಧಾರಾವಾಹಿಯಲ್ಲಿ ಮಾಡ್ತಾ ಇದ್ರು, ಇಲ್ಲಿಗೆ ಸಮಯ ಹೆಚ್ಚು ಕೊಟ್ಟೆ. ಆದರೂ ರಿಪ್ಲೇಸ್ ಗೆ ಹುಡುಕುತ್ತಾ ಇದ್ದದ್ದು ಕೇಳಿದ್ದೆ. ನನ್ನಿಂದ ಅವರಿಗೂ ತೊಂದರೆ ಆಗುವುದು ಬೇಡ ಅಂತ ಹೇಳಿ ಪಾತ್ರದಿಂದ ಹೊರಗೆ ಬಂದೆ. ಒಂದು ಮಾತನ್ನಾದರೂ ನನಗೆ ತಲುಪಿಸಿ ರಿಪ್ಲೇಸ್ ಗೆ ಹುಡುಕಬಹುದಿತ್ತು. ಪರವಾಗಿಲ್ಲ ಆದರೂ ನನಗೆ ಪ್ರೊಡಕ್ಷನ್ ಮೇಲೆ ಬೇಸರ ಇಲ್ಲ. ಮಿಲನಾ ಪ್ರಕಾಶ್ ಸರ್ ಗೆ ಖಂಡಿತ ಈ ಸಮಯದಲ್ಲಿ ಧನ್ಯವಾದ ಹೇಳಲೇಬೇಕು' ಎಂದಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಫುಲ್ ಆಕ್ಟೀವ್
ಹರ್ಷಿತಾ ಮೂಲತಃ ತುಮಕೂರಿನ ಮಧುಗಿರಿಯವರು. ಆದರೆ ಅವರ ಪತಿ ಕೂಡ ಸೀರಿಯಲ್ ಗಳಿಗೆ ರೈಟರ್ ಆಗಿದ್ದು, ಬೆಂಗಳೂರಿನಲ್ಲಿಯೇ ಇಬ್ಬರ ವಾಸ. ಹರ್ಷಿತಾ ಅವರು ಸೀರಿಯಲ್ ನಟನೆಯ ಜೊತೆಗೆ ಸೋಷಿಯಲ್ ಮೀಡಿಯಾದಲ್ಲಿ ಫುಲ್ ಆಕ್ಟೀವ್. ಜೊತೆಗೆ ಅವರ ಅಭಿಮಾನಿಗಳು ಬ್ಯೂಟಿ ಎಂದು ಯಾವಾಗಲೂ ಹೊಗಳುತ್ತಾ ಇರುತ್ತಾರೆ.


Click it and Unblock the Notifications











