ಟಾಸ್ಕ್‌ಗಾಗಿ ತಲೆ ಬೋಳಿಸಿಕೊಂಡ ಕಾರ್ತಿಕ್ ಈಗ ತಾಳ್ಮೆ ಕಳೆದುಕೊಂಡ್ರಾ? ಡ್ರೋಣ್ ಪ್ರತಾಪ್ ಜೊತೆಗೆ ಜೋರು ಜಗಳ..!

By Shruthi Harishgowda

ಕಾರ್ತಿಕ್ ಮೊದಲಿನಿಂದಲೂ ಸಹ ತಾಳ್ಮೆಯಿಂದಲೇ ಆಟವನ್ನ ಆಡುತ್ತಾ ಬಂದಿದ್ದರು. ಆದರೆ ಈಗ ಯಾಕೋ ತಾಳ್ಮೆ ಕಳೆದುಕೊಳ್ಳುತ್ತಾ ಇದ್ದಾರೆ. ಸಣ್ಣ ಪುಟ್ಟ ವಿಚಾರಗಳಿಗೂ ಸಹ ದೊಡ್ಡದು ಮಾಡಿಕೊಂಡು ಜಗಳಕ್ಕೆ ನಿಂತುಕೊಂಡಿದ್ದಾರೆ. ಕ್ಯಾಪ್ಟನ್ ಆದ ಮೇಲೊಂದು ಕಾರ್ತಿಕ್‌ಗೆ ಏನಾಗಿದೆಯೋ ಏನೇ ಗೊತ್ತಿಲ್ಲ. ನಿನ್ನೆ ವಿನಯ್ ಜೊತೆ ಜಗಳ ಮಾಡಿದ್ದರು.; ಇಂದು ಪ್ರತಾಪ್ ಜೊತೆ ಜಗಳ ಮಾಡಿದ್ದಾರೆ. ಪ್ರತಾಪ್ ಮಾತ್ರ ಯಾರೇ ತಮ್ಮ ಮೇಲೆ ರೇಗಾಡಿದರು ಸಹ ತುಂಬಾ ಕೂಲಾಗಿಯೇ ಉತ್ತರವನ್ನ ಕೊಡುತ್ತಾರೆ. ಅದೇ ರೀತಿ ಕಾರ್ತಿಕ್ ಬಳಿಯೂ ಕೂಲಾಗಿಯೇ ಮಾತನಾಡಿದ್ದಾರೆ.

ಸಂಗೀತಾ, ವಿನಯ್ ಟೀಮ್‌ಗೆ ಹೋದ ಮೇಲೆ ಕಾರ್ತಿಕ್ ಕೋಪ ಮತ್ತಷ್ಟು ತಾರಕಕ್ಕೆ ಏರುತ್ತಿದೆ. ಯಾಕೆಂದರೆ ವಿನಯ್ ಕೂಡ ಕಾರ್ತಿಕ್ ಕೋಪ ಬರಿಸುವ ಕೆಲಸವನ್ನೇ ಮಾಡುತ್ತಾ ಇದ್ದಾರೆ. ನಿನ್ನೆ ಟಾಸ್ಕ್ ನಡೆಯುವ ವೇಳೆ ವಿನಯ್ ಮೇಲೆ ಕಾರ್ತಿಕ್ ಜೋರಾಗಿದ್ದರು. ಇಬ್ಬರು ಕೂಡ ಮುಖಾಮುಖಿಯಾಗಿ ಇನ್ನೇನು ಹೊಡೆದಾಡಿಕೊಳ್ಳಬೇಕು ಅಷ್ಟರಲ್ಲಿ ತನಿಷಾ ಬಂದು ಕಾರ್ತಿಕ್ ನನ್ನು ಎಳೆದುಕೊಂಡು ಹೋಗಿದ್ದರು. ನಂತರ ಸಂಗೀತಾ ಒಂದು ಟಾಸ್ಕ್‌ನಲ್ಲಿ ಗೆದ್ದ ವೇಳೆ ವಿನಯ್ ಸಂಗೀತಾನನ್ನ ಒತ್ತಿಕೊಂಡು ಬಂದು ಕಾರ್ತಿಕ್‌ಗೆ ಉರಿಸುವ ಕೆಲಸ ಮಾಡಿ ಖುಷಿಪಟ್ಟರು. ಈಗ ಕಾರ್ತಿಕ್ ಯಾಕೋ ಬಿಗ್ ಬಾಸ್ ಮನೆಯಲ್ಲಿ ಪದೇ ಪದೇ ಜಗಳ ಮಾಡಿಕೊಳ್ಳುತ್ತಲೇ ಇದ್ದಾರೆ.

colors-kannada-bigg-boss-season-10

ಎರಡು ದಿನಗಳ ಹಿಂದೆ ಸ್ನೇಹಿತ್ ಹೆಚ್ಚಾಗಿ ಅನ್ನ ಬಡಿಸಿಕೊಂಡರು ಎಂಬ ಕಾರಣಕ್ಕೆ ಮನೆಯಲ್ಲಿ ಕಾರ್ತಿಕ್ ಕೂಗಾಡಿದ ಘಟನೆಯನ್ನು ಕೂಡ ಇಲ್ಲಿ ನೆನಪು ಮಾಡಿಕೊಳ್ಳಬೇಕಾಗಿದೆ. ಮನೆಯಲ್ಲಿರುವ ಸದಸ್ಯರನ್ನು ಗಮನದಲ್ಲಿಟ್ಟುಕೊಂಡು ಅನ್ನ ಹಾಕಿಕೊಳ್ಳಬೇಕಾಗಿತ್ತು ಎಂದು ಕಾರ್ತಿಕ್ ಸ್ನೇಹಿತ್ ಮೇಲೆ ಕೂಗಾಡಿದರು. ಆದರೆ ಅದು ಸಂಗೀತಾ ನನಗೆ ಎನ್ನುತ್ತಿದ್ದಾರೆ ಅಂದುಕೊಂಡು ಕಾರ್ತಿಕ್ ಹಾಗೂ ಸಂಗೀತ ನಡುವೆಯು ವಾಗ್ವಾದ ನಡೆದಿತ್ತು. ಕಾರ್ತಿಕ್ ಕ್ಯಾಪ್ಟನ್ ಆದ ಮೇಲೊಂದು ಪ್ರತಿಯೊಂದು ವಿಚಾರಕ್ಕೂ ಬೇಗನೆ ಸಿಟ್ಟಾಗುತ್ತಿದ್ದಾರೆ.

ಪ್ರತಾಪ್ ಜೊತೆ ಜಗಳ ಮಾಡಿಕೊಂಡ ಕ್ಯಾಪ್ಟನ್

ಈ ವಾರದ ಕ್ಯಾಪ್ಟನ್ ಆಗಿ ಕಾರ್ತಿಕ್ ಮನೆಯನ್ನು ಮುನ್ನಡೆಸುತ್ತಿದ್ದಾರೆ. ಟಾಸ್ಕ್ ಅಂದ ಮೇಲೆ ಗೆಲುವು ಸೋಲು ಇದ್ದಿದ್ದೆ ಆದರೆ ಕಾರ್ತಿಕ್ ಎಲ್ಲವನ್ನ ವೈಯಕ್ತಿಕವಾಗಿ ತೆಗೆದುಕೊಳ್ಳುತ್ತಾ ಇದ್ದಾರೆ ಅನಿಸುತ್ತಿದೆ. ಸಂಗೀತಾ ವಿನಯ್ ಟೀಮ್ ಸೇರಿಕೊಂಡಿದ್ದು ಕಾರ್ತಿಕ್‌ಗೆ ಮತ್ತಷ್ಟು ಕೋಪ ತರಿಸುತ್ತಿದೆ. ಇದಕ್ಕಾಗಿಯಾದರೂ ನಮ್ಮ ತಂಡ ಗೆಲುವು ಸಾಧಿಸಲೇಬೇಕು ಎಂಬ ಹಠ ಕಾರ್ತಿಕ್ ಮನಸಲ್ಲಿ ಬಂದಂತಿದೆ. ಇದಕ್ಕಾಗಿ ಆಟ ಆಡುವಾಗ ತಾಳ್ಮೆ ಕಳೆದುಕೊಂಡು ಪದೇ ಪದೇ ಜಗಳ ಮಾಡಿಕೊಳ್ಳುತ್ತಿದ್ದಾರೆ.

colors-kannada-bigg-boss-season-10

ಇಂದು ನಡೆಯುತ್ತಿರುವ ಟಾಸ್ಕ್‌ ನಲ್ಲೂ ಕೂಡ ಕಾರ್ತಿಕ್ ಡ್ರೋಣ್ ಪ್ರತಾಪ್ ಹೇಳಿದ ಮಾತಿಗೆ ತಾಳ್ಮೆ ಕಳೆದುಕೊಂಡು ಪ್ರತಾಪ್ ಮೇಲೆ ಮುಗಿಬಿದ್ದಿದ್ದಾರೆ. ಪ್ರತಾಪ್ ಆಟ ಆಡಿಸುವ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಇದೇ ವೇಳೆ ಆಟ ಆಡುವಾಗ ತನಿಷಾ ಒಂದು ಕಾಲನ್ನು ಕ್ರಾಸ್ ಮಾಡಿಲ್ಲ ಇದಕ್ಕೆ ಪ್ರತಾಪ್ ಮೊದಲಿನಿಂದ ಆಟವನ್ನು ಆಡಿ ಎಂದಿದ್ದಾರೆ. ಇದಕ್ಕೆ ಕಾರ್ತಿಕ್‌ಗೆ ಕೋಪ ಬಂದಿದ್ದು ಹೋಗೋಲೋ ಎಂಬ ಪದವನ್ನು ಬಳಸಿದ್ದಾರೆ. ಇದಕ್ಕೆ ಪ್ರತಾಪ್ ಹೋಗೋಲೋ ಎಂದು ಹೇಳಬೇಡಿ ಎಂದು ಸಮಾಧಾನದಿಂದಲೇ ಹೇಳಿದ್ದಾರೆ. ಆದರೆ ಕಾರ್ತಿಕ್ ಮಾತ್ರ ಸಮಾಧಾನಗೊಂಡಿಲ್ಲ ಅದರ ಬದಲು ಜೋರಾಗಿ ಕಿರುಚಾಟಡಿದ್ದಾರೆ.

ಎದುರಾಳಿ ತಂಡದ ಮೇಲೆ ಕೋಪವೇಕೆ?

ಕಾರ್ತಿಕ್ ಹಾಗೂ ವಿನಯ್ ಇಬ್ಬರು ಸ್ನೇಹಿತರು ಆದರೆ ಬಿಗ್ ಬಾಸ್ ಮನೆಗೆ ಬಂದ ಮೇಲೆ ಶತ್ರುಗಳಂತೆ ವರ್ತಿಸುತ್ತಾ ಇದ್ದಾರೆ. ಆದರೆ ಕೆಲವೊಮ್ಮೆ ಇಬ್ಬರೂ ಕೂಡ ಚೆನ್ನಾಗಿ ಇರುತ್ತಾರೆ ಟಾಸ್ಕ್ ವಿಷಯಕ್ಕೆ ಬಂದಾಗ ಇಬ್ಬರೂ ಜೋರಾಗಿ ಜಗಳ ಆಡಿಕೊಳ್ಳುತ್ತಾರೆ. ಇನ್ನು ಕಾರ್ತಿಕ್ ಮೇಲೆ ವಿನಯ್‌ಗೆ ಯಾಕಿಷ್ಟು ಕೋಪ ಎಂದು ವೀಕ್ಷಕರು ಕೇಳುತ್ತಾ ಇದ್ದಾರೆ. ಪದೇ ಪದೇ ಕಾರ್ತಿಕ್ ಹಾಗೂ ವಿನಯ್ ಜಗಳ ಮಾಡಿಕೊಳ್ಳುತ್ತಲೇ ಇರುತ್ತಾರೆ ಎಂದು ಹೇಳುತ್ತಿದ್ದಾರೆ. ಎದುರಾಳಿ ತಂಡದಲ್ಲಿರುವ ಎಲ್ಲರ ಮೇಲೂ ಕಾರ್ತಿಕ್ ಕೋಪವಿದ್ದಂತೆ ಕಾಣುತ್ತಿದೆ. ಅದು ಟಾಸ್ಕ್ ವೇಳೆಯಲ್ಲಿ ಆಗಾಗ ಪ್ರದರ್ಶನವಾಗುತ್ತದೆ.

More from Filmibeat

English summary
Colors kannada Bigg boss season 10 promo Update.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X