ಆರಂಭವಾದ ಮೂರು ತಿಂಗಳಲ್ಲೇ ಅಂತ್ಯ ಕಾಣುತ್ತಿದೆಯೇ ಈ ಧಾರಾವಾಹಿ? ಏನಿದು ಸುದ್ದಿ?
ಹಲವು ಧಾರಾವಾಹಿಗಳು, ವರ್ಷಾನುಗಟ್ಟಲೆ ಯಶಸ್ವಿಯಾಗಿ ಓಡಿರುವ ಇತಿಹಾಸವಿದೆ. ಅಂತಹ ಕೆಲ ಧಾರಾವಾಹಿಗಳು ಬಹಳ ದೊಡ್ಡ ರೀತಿಯಲ್ಲಿ ಆರಂಭವಾದರೂ, ಕೆಲವೇ ದಿನಗಳಿಗೆ ಮುಕ್ತಾಯಗೊಳ್ಳುವುದನ್ನೂ ನಾವು ನೋಡಿದ್ದೇವೆ. ಇತ್ತೀಚೆಗೆ ಕಲರ್ಸ್ ಕನ್ನಡದಲ್ಲಿ ಆರಂಭವಾಗಿದ್ದ 'ಬೃಂದಾವನ' ಎಂಬ ಬಹು ದೊಡ್ಡ ತಾರಾಂಗಣ ಹೊಂದಿದ್ದ ಧಾರಾವಾಹಿ ಬಹಳ ಬೇಗ ಮುಕ್ತಾಯಗೊಂಡಿತು.
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಲಕ್ಷ್ಮಿ ಟಿಫನ್ ರೂಮ್' ಎಂಬ ಧಾರಾವಾಹಿ ಬೇಗ ಅಂತ್ಯವನ್ನು ಕಾಣುತ್ತಿದೆ ಎಂಬ ಊಹಾಪೋಹ ಬಹಳ ಗಟ್ಟಿಯಾಗಿ ಎಲ್ಲೆಡೆಯು ಹರಿದಾಡುತ್ತಿದೆ.

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಇತ್ತೀಚಿಗಷ್ಟೇ ಆರಂಭಗೊಂಡಿರುವ 'ಲಕ್ಷ್ಮಿ ಟಿಫನ್ ರೂಮ್' ಎಂಬ ಧಾರಾವಾಹಿ ವಿಭಿನ್ನ ಕಥಾ ಹಂದರವನ್ನು ಇಟ್ಟುಕೊಂಡು ಮುನ್ನುಗ್ಗುತ್ತಿತ್ತು. ಬಹಳ ವಿಶೇಷವಾದ ಕಥೆಯನ್ನು ಆಧರಿಸಿದ ಈ ಧಾರಾವಾಹಿಯಲ್ಲಿ ಹೊಸ ಮುಖಗಳ ಪರಿಚಯವೂ ಆಗಿತ್ತು.
ಬಹಳ ದಿಟ್ಟನೆ ಹಾಗೂ ನೇರ ನಡೆನುಡಿಯ ಹುಡುಗಿ ಲಕ್ಷ್ಮಿ ಐಎಎಸ್ ಮಾಡಬೇಕೆಂದು ಕನಸು ಕಾಣುತ್ತಿರುತ್ತಾಳೆ. ತನ್ನ ಕನಸನ್ನು ಸಾಕಾರಗೊಳಿಸಲು ಎಲ್ಲ ರೀತಿಯ ತಯಾರಿಗಳನ್ನು ನಡೆಸುತ್ತಿರುತ್ತಾಳೆ. ಅದೇನೋ ಕಾಲದ ಕೈ ಗೊಂಬೆ ಆಗುವ ಸಂದರ್ಭಕ್ಕೆ ಸಿಕ್ಕಿ ಬೇಗ ಮದುವೆಯಾಗುತ್ತಾಳೆ. ಇತ್ತ ಮದುವೆಯ ನಂತರ ಐಎಎಸ್ ಆಗುವ ಕನಸಿನತ್ತ ಮುನ್ನಡೆಯೋಣ ಎಂದರೆ ಆಕೆ ಬಹಳ ಸಂಪ್ರದಾಯಸ್ಥ ಮನೆಗೆ ಸೊಸೆಯಾಗಿರುತ್ತಾಳೆ.
ಹೆಣ್ಣು ಮಕ್ಕಳೆಂದರೆ ಬರೀ ಅಡುಗೆ ಮನೆಗೆ ಸೀಮಿತ ಎಂಬ ಮನೋಭಾವವಿರುವ ಆ ಮನೆಯವರಿಗೆ ಲಕ್ಷ್ಮಿ ಐಎಎಸ್ ಆಗುವುದಿರಲಿ ಮನೆಯಿಂದ ಹೊರ ಹೋಗುವುದು ಇಷ್ಟವಿರುವುದಿಲ್ಲ. ಇತ್ತ ತಾನು ಮದುವೆಯಾಗುವ ಗಂಡು ಕನಿಷ್ಠ ಪಕ್ಷ ಒಂದು ಡಿಗ್ರಿಯನ್ನಾದರೂ ಪಡೆದಿರಬೇಕೆಂಬ ಕನಸು ಕಾಣುವ ಲಕ್ಷ್ಮಿಗೆ ತನ್ನ ಗಂಡ ಸ್ಕಂದ ಬರೀ ಶಾಲಾ ಅಭ್ಯಾಸವನ್ನು ಮುಗಿಸಿದ್ದಾನೆ ಎಂದು ಕೇಳಿದಾಗ ಬಹಳ ದುಃಖ ಉಂಟಾಗುತ್ತದೆ. ಈ ರೀತಿಯ ಒಂದು ಸಂದರ್ಭದಲ್ಲಿ ಲಕ್ಷ್ಮಿ ಹೇಗೆಲ್ಲಾ ತನ್ನ ಜೀವನದ ಸಂಕೋಲೆಗಳನ್ನು ದಾಟಿ ಐಎಎಸ್ ಅಧಿಕಾರಿಯಾಗುತ್ತಾಳೆ ಎಂಬುದು ಕಥೆಯ ಹಂದರವಾಗಿತ್ತು.

ಇಂದು ಬರುತ್ತಿರುವ ಹಲವಾರು ಧಾರಾವಾಹಿಗಳಿಗಿಂತಲೂ ಬಹಳ ವಿಭಿನ್ನವಾದ ಕಥೆಯನ್ನು ಹೊಂದಿದ್ದ ಈ ಧಾರಾವಾಹಿ ಪ್ರೇಕ್ಷಕರಿಗೆ ಬಹಳ ಹಿಡಿಸಿತ್ತು. ಆದರೆ, ಅದೇಕೋ ಗೊತ್ತಿಲ್ಲ ಈ ಧಾರಾವಾಹಿ ಬಹಳ ಬೇಗ ಮುಕ್ತಾಯಗೊಳ್ಳುತ್ತಿದೆ ಎಂಬ ಸುದ್ದಿ ಹೊರ ಬಿದ್ದಿದೆ.
ಅಂದ ಹಾಗೆ ಇದೇ ಜೂನ್ 29ಕ್ಕೆ ಈ ಧಾರಾವಾಹಿ ಮುಕ್ತಾಯಗೊಳ್ಳಲಿದೆ ಎಂಬ ಸುದ್ದಿ ಎಲ್ಲೆಡೆಯು ಹರಿದಾಡುತ್ತಿದೆ. ಅಂತೂ ಮನೆಯ ಹಿರಿಯ ಜೀವ ಲಕ್ಷ್ಮಿ ಐಎಎಸ್ ಮಾಡಲು ಒಪ್ಪಿಗೆಯನ್ನು ಓದಲು ಕಳಿಸುವ ರೀತಿಯಲ್ಲಿ ಕಥೆ ಮುಕ್ತಾಯಗೊಳ್ಳಲಿದೆ ಎಂಬ ಊಹೆ ಧಾರಾವಾಹಿ ಪ್ರೇಕ್ಷಕರ ಮನದಲ್ಲಿ ಮೂಡಿದೆ. ಶುಭಾಂತ್ಯದಲ್ಲಿ ಬಹಳ ಬೇಗ ಧಾರಾವಾಹಿ ಕೊನೆಗೊಳ್ಳುತ್ತಿವೆ.
ಸುನೇತ್ರಾ ಪಂಡಿತ್, ಅನಂತವೇಲು, ಮಧುಮಿತಾ, ವಿಜಯಲತಾ, ವಚನ್, ಕಾವ್ಯ, ಭಗತ್, ಪ್ರೀತಮ್ ಮಕ್ಕಿಹಾಳಿ ಸೇರಿದಂತೆ ಬಹುದೊಡ್ಡ ತಾರಾಗಣವನ್ನು ಹೊಂದಿದ್ದ 'ಲಕ್ಷ್ಮೀ ಟಿಫನ್ ರೂಮ್' ಧಾರಾವಾಹಿ ಇದೆ ಮಾರ್ಚ್ ತಿಂಗಳಲ್ಲಿ ಆರಂಭಗೊಂಡಿತ್ತು. ಇದೀಗ ಇಷ್ಟು ಬೇಗ ಅಂತ್ಯ ಕಾಣುತ್ತಿರುವುದು ಧಾರಾವಾಹಿ ಪ್ರೇಕ್ಷಕರಿಗೆ ಬೇಸರ ತಂದಿದೆ.


Click it and Unblock the Notifications











